ಎಂಥಾ ಸೋಜಿಗವಿದು... ಹಾವಿನ ಮೇಲೆ ಕಪ್ಪೆಯ ಜಾರುಬಂಡಿ ಆಟ: ವೈರಲ್ ವಿಡಿಯೋ

By Anusha KbFirst Published Nov 29, 2022, 10:17 PM IST
Highlights

ಹಾವು ಎಂದ ಕೂಡಲೇ ಹೌಹಾರಿ ಓಡುವುದೇ ಜಾಸ್ತಿ. ಪುಟ್ಟ ಕಪ್ಪೆಯಾದರೂ ಸರಿ ನಾವು ಮನುಷ್ಯರಾದರೂ ಸರಿ ಹಾವಿನ ಮುಂದೆ ನಿಲ್ಲುವ ಧೈರ್ಯ ಯಾರಿಗಿಲ್ಲ. ಆದರೆ ಇಲ್ಲೊಂದು ಪುಟ್ಟ ಕಪ್ಪೆ ದೈತ್ಯ ಹಾವೊಂದರ ಮೇಲೆ ಸುಂಯ್ಯನೇ ಜಾರುತ್ತಾ ಜಾರುಬಂಡಿ ಆಟವಾಡುತ್ತಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪುಟ್ಟ ಮಂಡೂಕದ ಧೈರ್ಯಕ್ಕೆ ನೋಡುಗರು ಬೆರಗಾಗಿದ್ದಾರೆ.

ಹಾವು ಎಂದ ಕೂಡಲೇ ಹೌಹಾರಿ ಓಡುವುದೇ ಜಾಸ್ತಿ. ಪುಟ್ಟ ಕಪ್ಪೆಯಾದರೂ ಸರಿ ನಾವು ಮನುಷ್ಯರಾದರೂ ಸರಿ ಹಾವಿನ ಮುಂದೆ ನಿಲ್ಲುವ ಧೈರ್ಯ ಯಾರಿಗಿಲ್ಲ. ಆದರೆ ಇಲ್ಲೊಂದು ಪುಟ್ಟ ಕಪ್ಪೆ ದೈತ್ಯ ಹಾವೊಂದರ ಮೇಲೆ ಸುಂಯ್ಯನೇ ಜಾರುತ್ತಾ ಜಾರುಬಂಡಿ ಆಟವಾಡುತ್ತಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪುಟ್ಟ ಮಂಡೂಕದ ಧೈರ್ಯಕ್ಕೆ ನೋಡುಗರು ಬೆರಗಾಗಿದ್ದಾರೆ.

ನೀವು ಮೊಸಳೆ ಹಾಗೂ ಕೊಕ್ಕರೆಯನ್ನು (Little egret) ನೋಡಿರಬಹುದು, ಹೊಳೆಯಲ್ಲಿ ನದಿಗಳಲ್ಲಿ ಬೃಹತ್ ಗಾತ್ರದ ದೈತ್ಯ ಮೊಸಳೆಯ ಮೇಲೆ ಕೊಕ್ಕರೆಗಳು ಒಂಟಿ ಕಾಲಿನಲ್ಲೋ ಎರಡು ಕಾಲಿನಲ್ಲೂ ನಿಂತುಕೊಂಡು ಸ್ವಚ್ಛಂದವಾಗಿ ವಿಹರಿಸುವುದನ್ನು ನೀವು ನೋಡಿರಬಹುದು. ಮೊಸಳೆ (crocodile) ಮಾಂಸಹಾರಿಯಾದರೂ (carnivorous) ತನ್ನ ಬೆನ್ನ ಮೇಲೆ ನಿಂತ ಕೊಕ್ಕರೆಯನ್ನು ಮೊಸಳೆಗೆ ಹಿಡಿಯಲಾಗದು. ಇದು ಕೊಕ್ಕರೆಗೂ ತಿಳಿದಿದೆ. ಹೀಗಾಗಿ ಕೊಕ್ಕರೆ ಅಪಾಯಕಾರಿ ಮೊಸಳೆಯ ಮೇಲೆ ನಿರಾತಂಕವಾಗಿ ವಿಹರಿಸುತ್ತಿರುತ್ತದೆ. ಅದೇ ರೀತಿ ಇಲ್ಲಿ ಪುಟಾಣಿ ಕಪ್ಪೆಯೊಂದು ಹಾವಿನ ಮೇಲೆ ಸುಂಯ್ಯನೇ ಜಾರುತ್ತಿದೆ. 

साहस का मतलब भय की अनुपस्थिति नहीं बल्कि भय सामने होते हुए भी दृढ़ता से सामना करना ही साहस है..! pic.twitter.com/2Xz6dEJKhG

— Sanjay Kumar, Dy. Collector (@dc_sanjay_jas)

ಈ ವಿಡಿಯೋವನ್ನು ಭಾರತೀಯ ಆಡಳಿತ ಸೇವೆಯ ಅಧಿಕಾರಿ ಸಂಜಯ್‌ ಕುಮಾರ್ (Sanjay kumar) ಎಂಬುವವರು, ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಧೈರ್ಯ ಎಂದರೆ ಭಯ ಇಲ್ಲದಿರುವುದಲ್ಲ, ಆದರೆ ನಿಮ್ಮ ಮುಂದೆ ಇರುವ ಭಯವನ್ನು ಎದುರಿಸುವ ಸಾಮರ್ಥ್ಯವೇ ಧೈರ್ಯ ಎಂದು ಬರೆದು ಅವರು ಈ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ಭಾರಿ ಗಾತ್ರದ ಹಾವಿನ ಮೇಲೆ ಕಪ್ಪೆ ಜಗದ ಚಿಂತೆ ಇಲ್ಲದೇ ಜಾರುತ್ತಾ ಸಾಗುತ್ತಿದೆ. 10 ಸೆಕೆಂಡ್‌ಗಳ ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಲೆನಾಡಲ್ಲಿ ಮಳೆಗಾಲದಲ್ಲಿ ಮನೆಗೆ ಕಪ್ಪೆ ಬರೋದು ಕಾಮನ್, ಇದು ತರುತ್ತಾ ಲಕ್?

ಕೆಲವೊಮ್ಮೆ ಸಾಹಸ ಕ್ರೀಡೆಗಳನ್ನು ಆಡುವುದು ಒಳ್ಳೆಯದು ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು ಕಪ್ಪೆ ಫುಲ್ ಆತ್ಮವಿಶ್ವಾಸದಿಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಮಜಾ ನೀಡುತ್ತಿದ್ದು, ಸಾಹಸ ಕ್ರೀಡೆಗಳನ್ನು ಮನುಷ್ಯರು ಮಾತ್ರ ಆಡಲ್ಲ. ಕಪ್ಪೆಗಳಿಗೂ ಹೀಗೆ ಸಾಹಸಿ ಕ್ರೀಡೆಯಾಡುವ ಮನಸ್ಸಾಗಬಹುದು ಎಂದೆನಿಸುತ್ತಿದೆ. 

ಡೇಲಿಯಾಗೆ ಮನಸೋತ ಕಪ್ಪೆ

ಕೆಲ ದಿನಗಳ ಹಿಂದೆ ಸುಂದರವಾದ ಡೇಲಿಯಾ ಹೂಗಳ (Dahlia flowers) ಮಧ್ಯೆ ಪುಟಾಣಿ ಕಪ್ಪೆಗಳು ಅಡಗಿ ಕುಳಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಹಲವು ಪಕಳೆಗಳನ್ನು ಹೊಂದಿರುವ ಡೇಲಿಯಾ ಹೂವು ನೋಡಲು ಭಾರೀ ಸೊಗಸು. ಕೆಂಪು, ಕಡುಗೆಂಪು, ನೀಲಿ, ನೆರಳೆ, ಹಳದಿ ಕೇಸರಿ, ಹಳದಿ ಹೀಗೆ ಹಲವು ಬಣ್ಣಗಳಲ್ಲಿ ಲಭ್ಯವಿರುವ ಈ ಡೇಲಿಯಾ ಹೂವನ್ನು ಇಷ್ಟಪಡದವರಿಲ್ಲ. ಹಲವು ಬಣ್ಣಗಳಲ್ಲಿ ಕಾಣಸಿಗುವ ಈ ಡೇಲಿಯಾ ಹೂವುಗಳು ಇಡೀ ಹೂದೋಟವನ್ನು ಕಲರ್‌ಫುಲ್ ಆಗಿಸುವುದು. ಹಾಗೆಯೇ ಇಲ್ಲೊಂದು ಕಡೆ ಪುಟಾಣಿ ಕಪ್ಪೆಗಳು ಕೂಡ ಈ ಹೂವಿಗೆ ಮನಸೋತು ಅಲ್ಲೇ ವಾಸಸ್ಥಾನ ಮಾಡಿಕೊಂಡಿದ್ದವು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಕಾಸು ಕೈಯಲ್ಲಿ ನಿಲ್ಲುತ್ತಿಲ್ಲವೇ? ಮನೆಯಲ್ಲಿ ಚೈನೀಸ್‌ ಕಪ್ಪೆ ತಂದಿಟ್ಟುಕೊಳ್ಳಿ!

snohomishlavenderfarm ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋ ಅಪ್‌ಲೋಡ್ ಮಾಡಲಾಗಿದ್ದು, ಏಳು ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದರು. ಹೂತೋಟವೊಂದರ ದೃಶ್ಯ ಇದಾಗಿದ್ದು, ಬಣ್ಣ ಬಣ್ಣದ ಹಲವು ಹೂವುಗಳು ಈ ತೋಟದಲ್ಲಿ ಕಾಣಿಸುತ್ತಿವೆ. ಇಲ್ಲಿರುವ ಗುಲಾಬಿ ಬಣ್ಣದ ಡೇಲಿಯಾ ಹೂಗಳ ಒಳಗೆ ಎಸಳುಗಳ ಮಧ್ಯದಲ್ಲಿ ಪುಟಾಣಿ ಕಪ್ಪೆಗಳು ಆಶ್ರಯ ಪಡೆದಿದ್ದು, ಗಾಳಿಗೆ ಹೂಗಳು ಅತ್ತಿತ್ತ ತೊಯ್ದಾಡುತ್ತಿದ್ದರೆ, ಇವುಗಳ ಒಳಗಿರುವ ಕಪ್ಪೆಗಳು ಹೂವಿನ (flower) ತೂಗುಯ್ಯಾಲೆಯಲ್ಲಿ ಸುಖವಾಗಿ ತೇಲಾಡುತ್ತಿವೆ. 

click me!