ಸುಂದರಿ ಕೈಲಿ ಮಸಾಜ್‌ ಮಾಡಿಸಿಕೊಳ್ತಾ ಸಭೆಯಲ್ಲಿ ಭಾಗಿಯಾದ ಏರ್‌ ಏಷಿಯಾ ಸಿಇಒ: ನೆಟ್ಟಿಗರೇನಂದ್ರು ನೋಡಿ

By Suvarna News  |  First Published Oct 17, 2023, 4:01 PM IST

ಪ್ರತಿಷ್ಠಿತ ಇಂಡೋನೇಷಿಯಾ ಏರ್‌ಲೈನ್‌ ಸಂಸ್ಥೆ ಏರ್ ಏಷಿಯಾದ (Air Asia) ಸಿಇಒ ಒಬ್ಬರು ಆಡಳಿತ ಮಂಡಳಿ ಕರೆದ ಸಭೆಯಲ್ಲಿ ಸುಂದರಿಯೋರ್ವಳ ಕೈನಿಂದ ಮಸಾಜ್ ಮಾಡಿಸಿಕೊಳ್ತಾನೇ ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ಪೋಸ್ಟ್ ಅಷ್ಟೇ ಬೇಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 


ಆನ್‌ಲೈನ್ ಇರಲಿ ಆಫ್‌ಲೈನ್‌ ಇರಲಿ ಕಂಪನಿಗೆ ಸಂಬಂಧಿಸಿದ ಮೀಟಿಂಗ್‌ನಲ್ಲಿ ಭಾಗವಹಿಸುವಾಗ (ಕ್ಯಾಮರಾ ಆನ್ ಇದ್ದರೆ)  ಬಹುತೇಕರು ಶಿಸ್ತು ಪಾಲನೆ ಮಾಡುತ್ತಾರೆ. ಆದರೆ ಪ್ರತಿಷ್ಠಿತ ಇಂಡೋನೇಷಿಯಾ ಏರ್‌ಲೈನ್‌ ಸಂಸ್ಥೆ ಏರ್ ಏಷಿಯಾದ (Air Asia) ಸಿಇಒ ಒಬ್ಬರು ಆಡಳಿತ ಮಂಡಳಿ ಕರೆದ ಸಭೆಯಲ್ಲಿ ಸುಂದರಿಯೋರ್ವಳ ಕೈನಿಂದ ಮಸಾಜ್ ಮಾಡಿಸಿಕೊಳ್ತಾನೇ ಸಭೆಯಲ್ಲಿ ಭಾಗಿಯಾಗಿದ್ದಾರೆ.  ಆದರೆ ಇದಕ್ಕಿಂತ ವಿಚಿತ್ರ ವಿಚಾರ ಎಂದರೆ ಇದನ್ನು ಫೋಟೋ ಸಮೇತ ಅವರು ಲಿಂಕ್ಡಿನ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ತಮ್ಮ ಸಂಸ್ಥೆಯ ಕೆಲಸದ ವಾತಾವರಣ ಎಷ್ಟು ಸುಂದರವಾಗಿದೆ ನೋಡಿ ಎಂದು ಹೊಗಳಿಕೊಂಡಿದ್ದಾರೆ. ಆದರೆ ನೆಟ್ಟಿಗರು ಮಾತ್ರ ಇದನ್ನು ಇವರಷ್ಟೇ ಸಹಜವಾಗಿ ತೆಗೆದುಕೊಂಡಿಲ್ಲ, ಸುಂದರಿ ಜೊತೆ ಮಸಾಜ್‌ ಮಾಡಿಸಿಕೊಳ್ತಾ ಮೀಟಿಂಗ್‌ನಲ್ಲಿ ಭಾಗಿಯಾದ ಏರ್‌ ಏಷ್ಯಾದ ಸಿಇಒ ಕ್ರಮವನ್ನು ಅನೇಕರು ಟೀಕಿಸಿದ್ದು, ಈ ಪೋಸ್ಟ್ ಅಷ್ಟೇ ಬೇಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಲಿಂಕ್ಡಿನ್‌ನಲ್ಲಿ ಏರ್ ಏಷ್ಯಾದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಟೋನಿ ಫರ್ನಾಂಡಿಸ್‌ (Tony Fernandes) ಅವರು ತಮ್ಮ ಸಂಸ್ಥೆಯ ಕೆಲಸದ ಸಂಸ್ಕೃತಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ತಮ್ಮ 'ಮೀಟಿಂಗ್ ಟೈಮ್‌ ಮಸಾಜ್ ' ಫೋಟೋವನ್ನು ಹರಿ ಬಿಟ್ಟಿದ್ದಾರೆ. 'ಇದೊಂದು ಒತ್ತಡದ ವಾರವಾಗಿತ್ತು, ಮತ್ತು ವೆರಾನಿಟಾ ಯೋಸೆಫಿನ್ ಮಸಾಜ್  ಮಾಡಿಸಿಕೊಳ್ಳಲು ಸಲಹೆ ನೀಡಿದರು. ಇಂಡೋನೇಷ್ಯಾ ಮತ್ತು ಏರ್ ಏಷ್ಯಾ ಸಂಸ್ಕೃತಿಯೂ ನನಗೆ ಕೆಲಸದ ಜೊತೆಗೆ (ಮ್ಯಾನೇಜ್ಮೆಂಟ್‌ ಸಭೆಯಲ್ಲಿ) ಮಸಾಜ್‌ ಮಾಡಿಸಿಕೊಳ್ಳಲು ಅವಕಾಶ ನೀಡುತ್ತದೆ . ನಾವು ದೊಡ್ಡ ಪ್ರಗತಿಯನ್ನು ಸಾಧಿಸುತ್ತಿದ್ದೇವೆ ಮತ್ತು ನಾನು ಈಗ ಕ್ಯಾಪಿಟಲ್ ಎ ರಚನೆಯನ್ನು ಅಂತಿಮಗೊಳಿಸಿದ್ದೇನೆ. ಮುಂದಿನ ದಿನಗಳು ರೋಮಾಂಚನಕಾರಿಯಾಗಿರಲಿದೆ. ನಾವು ಏನು ನಿರ್ಮಿಸಿದ್ದೆವೋ ಅದರ ಬಗ್ಗೆ ಹೆಮ್ಮೆ ಇದೆ ಹಾಗೂ ನಾವು ಅಂತಿಮ ದೃಷ್ಟಿಯನ್ನು ಎಂದಿಗೂ ಕಳೆದುಕೊಂಡಿಲ್ಲ' ಎಂದು ಅವರು ಬರೆದುಕೊಂಡಿದ್ದಾರೆ. 

ಸಮಾಧಿಯಲ್ಲಿ ಪತ್ತೆಯಾಯ್ತು 5 ಸಾವಿರ ವರ್ಷಗಳಷ್ಟು ಹಳೆಯ ಸೀಲ್ಡ್‌ ವೈನ್‌ ...

Tap to resize

Latest Videos

ಆದರೆ ನೆಟ್ಟಿಗರು ಮಾತ್ರ ಇವರು ಶರ್ಟ್‌ಲೆಸ್ (Shirtless) ಆಗಿ ಅದೂ ಮಸಾಜ್ ಮಾಡಿಸಿಕೊಳ್ಳುತ್ತಾ ಮೀಟಿಂಗ್‌ನಲ್ಲಿ ಭಾಗಿಯಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಕೂಡಲೇ ಅವರನ್ನು ಕೆಲಸದಿಂದ ತೆಗೆದು ಹಾಕುವಂತೆ ಮನವಿ ಮಾಡಿದ್ದಾರೆ. ಸಾರ್ವಜನಿಕ ಸಹಭಾಗಿತ್ವದ ಸಂಸ್ಥೆಯೊಂದರ ಮುಖ್ಯ ಅಧಿಕಾರಿಯೋರ್ವ ಹೀಗೆ ಶರ್ಟ್‌ ಇಲ್ಲದೇ ಅದೂ ಮಸಾಜ್ ಮಾಡಿಸಿಕೊಳ್ಳುತ್ತಾ ಸಭೆಯಲ್ಲಿ ಭಾಗವಹಿಸಿರುವುದು ಸರಿಯಲ್ಲ ಎಂದು ನೋಡುಗರೊಬ್ಬರು ಹೇಳಿದ್ದಾರೆ.   ಏರ್‌ಏಷ್ಯಾದಲ್ಲಿ ಕೆಲಸ ಮಾಡಿ, ಅಲ್ಲಿನ ಆಡಳಿತ ಮಂಡಳಿ ಸಭೆಗಳು ವಿಮಾನ ಪ್ರಯಾಣಿಕರು ಹೊಂದುವ ಅನುಭವದಂತೆಯೇ ಇರುತ್ತದೆ. ಅಲ್ಲಿನ ಅನುಚಿತ ವರ್ತನೆಯಿಂದ ಹಿಡಿದು  ಸಿ ಸೂಟ್ ಟೋನ್ ಕಿವುಡುತನದವರೆಗೆ ಎಲ್ಲವನ್ನೂ ಒಂದೇ ಚಿತ್ರದಲ್ಲಿ ಸೆರೆ ಹಿಡಿಯಲು  ಯಶಸ್ವಿಯಾಗಿದ್ದೀರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಆದರೆ ಮತ್ತೊಬ್ಬರು ಯಾರೋ ಇವರ ಲಿಂಕ್ಡಿನ್ ಖಾತೆಯನ್ನು ಹ್ಯಾಕ್ ಮಾಡಿ ಈ ರೀತಿ ಬರೆದಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದು ಕೆಲಸದ ಸಂಸ್ಕೃತಿಯನ್ನು ತೋರಿಸಿಕೊಳ್ಳುವ ಸರಿಯಾದ ವಿಧಾನ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೋನಿ ನೀನು ಏರ್‌ ಏಷ್ಯಾದಲ್ಲಿ ತೆರೆದುಕೊಳ್ಳುವಂತಹ ಸಂಸ್ಕೃತಿ ಇದೆ ಎಂದು ಹೇಳಿದಾಗ ನಾನು ಇಷ್ಟೊಂದು ತೆರೆದುಕೊಳ್ಳಲು ಸಾಧ್ಯ ಎಂದು ನಿರೀಕ್ಷಿಸಿರಲಿಲ್ಲ ಎಂದು ಮತ್ತೊಬ್ಬರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ. 

ಮಕ್ಕಳ ಸಮಸ್ತ ಮಾಹಿತಿ ಒಂದೆಡೆ ಪಡೆಯಲು UAN ಹೋಲುವ ಅಪಾರ್‌ ಐಡಿ ಜಾರಿಗೆ ...

click me!