ಸಮಾಧಿಯಲ್ಲಿ ಪತ್ತೆಯಾಯ್ತು 5 ಸಾವಿರ ವರ್ಷಗಳಷ್ಟು ಹಳೆಯ ಸೀಲ್ಡ್‌ ವೈನ್‌ ಜಾರ್

By Anusha Kb  |  First Published Oct 17, 2023, 3:02 PM IST

ಈಜಿಪ್ಟ್‌ನ ಮೊದಲ ಮಹಿಳಾ ಫೇರೋ ಅಂದರೆ ರಾಣಿಯ  ಸಮಾಧಿಯ ಉತ್ಖನನದ ವೇಳೆ 5 ಸಾವಿರ ವರ್ಷಗಳಷ್ಟು ಹಳೆಯ ವೈನ್‌ ಜಾರುಗಳು ಪತ್ತೆಯಾಗಿದ್ದು ಅಚ್ಚರಿ ಮೂಡಿಸಿದೆ.  


ಹೊಸದಿಲ್ಲಿ: ಈಜಿಪ್ಟ್‌ನ ಮೊದಲ ಮಹಿಳಾ ಫೇರೋ ಅಂದರೆ ರಾಣಿಯ  ಸಮಾಧಿಯ ಉತ್ಖನನದ ವೇಳೆ 5 ಸಾವಿರ ವರ್ಷಗಳಷ್ಟು ಹಳೆಯ ವೈನ್‌ ಜಾರುಗಳು ಪತ್ತೆಯಾಗಿದ್ದು ಅಚ್ಚರಿ ಮೂಡಿಸಿದೆ.  ಈಜಿಪ್ಟ್‌ನ ಅಬಿಡೋಸ್‌ನಲ್ಲಿರುವ ಈಜಿಪ್ಟ್‌ನ ಮೊದಲ ರಾಣಿ ಮೆರೆಟ್-ನೀತ್ ಅವರ ಸಮಾಧಿಯ ಉತ್ಖನನ ಸಮಯದಲ್ಲಿ ಈ ಅಚ್ಚರಿಯ ಆವಿಷ್ಕಾರ ಬೆಳಕಿಗೆ ಬಂದಿದೆ. ವಿಯೆನ್ನಾ ವಿಶ್ವವಿದ್ಯಾಲಯದ ಪುರಾತತ್ವ ಶಾಸ್ತ್ರಜ್ಞೆ (archaeologist) ಕ್ರಿಸ್ಟಿಯಾನಾ ಕೊಹ್ಲರ್  ಅವರ ನೇತೃತ್ವದ ತಂಡದಿಂದ ರಾಣಿಯ ಸಮಾಧಿಯಲ್ಲಿ ಉತ್ಖನನ ಕಾರ್ಯ ನಡೆಯುತ್ತಿದ್ದಾಗ  5 ಸಾವಿರ ವರ್ಷಗಳಷ್ಟು ಹಳೆಯ ವೈನ್‌ನ ಜಾರುಗಳು ಪತ್ತೆಯಾಗಿವೆ.  ಇಷ್ಟು ದೊಡ್ಡ ಜಾರುಗಳಲ್ಲಿ ಕೆಲವು ತುಂಬಾ ಒಳ್ಳೆಯ ಸ್ಥಿತಿಯಲ್ಲಿದ್ದು, ಮೂಲ ಸ್ಥಿತಿಯಲ್ಲೇ ಇವೆ. 

ಇನ್ನು ಇದರಲ್ಲಿದ್ದ ವೈನ್‌ ದ್ರವರೂಪದಲ್ಲಿ ಇಲ್ಲ, ಬಹುಶಃ ಆರಿ ಹೋಗಿರಬಹುದು ಎಂದು ಅನುಮಾನಿಸಲಾಗಿದ್ದು, ಹೀಗಾಗಿ ವೈನ್‌ ರೆಡ್‌ ವೈನಾ ಅಥವಾ ವೈಟ್ ವೈನಾ ಎಂದು ಹೇಳಲಾಗದು ಎಂದು ಉತ್ಖನನ ತಂಡದ ನೇತೃತ್ವ ವಹಿಸಿರುವ ಪುರಾತತ್ವ ಶಾಸ್ತ್ರಜ್ಞೆ ಕ್ರಿಸ್ಟಿಯಾನಾ ಕೊಹ್ಲರ್ ಹೇಳಿದ್ದಾರೆ.  ಉತ್ಖನನದ ವೇಳೆ ನಮಗೆ ಬಹಳಷ್ಟು ಸಾವಯವ ಅವಶೇಷಗಳು, ದ್ರಾಕ್ಷಿ ಬೀಜಗಳು ಮತ್ತು ಹರಳುಗಳು ಸಿಕ್ಕಿವೆ. ಈ ಹರಳುಗಳು ಬಹುಶಃ ಟಾರ್ಟರ್‌ಗಳು ಆಗಿರಬಹುದು ( (ಟಾರ್ಟರ್‌ಗಳು ಎಂದರೆ ಕೊಳೆಯುವಿಕೆಗೆ ಸಹಕಾರಿಯಾಗುವ ವೈನ್ ಸಿದ್ಧಗೊಳ್ಳುವ ಸಮಯದಲ್ಲಿ ರೂಪುಗೊಂಡ ಅಶುದ್ಧ ಪೊಟ್ಯಾಸಿಯಮ್ ಹೈಡ್ರೋಜನ್‌ನ ಗಟ್ಟಿ) ಇವೆಲ್ಲವನ್ನೂ ಪ್ರಸ್ತುತ ವೈಜ್ಞಾನಿಕವಾಗಿ ವಿಶ್ಲೇಷಿಸಲಾಗುತ್ತಿದೆ. ಇದು ಬಹುಶಃ  ವೈನ್‌ ಹಲವು ಶತಮಾನಗಳ ಹಿಂದೆಯು ಇತ್ತು ಎಂಬುದಕ್ಕೆ ಸಿಕ್ಕಿದಂತಹ 2ನೇ ಅತ್ಯಂತ ಹಳೆಯ ಸಾಕ್ಷಿಯಾಗಿದೆ. ಇದಕ್ಕೂ ಮೊದಲು  ಅಬಿಡೋಸ್‌ನಲ್ಲಿ ಹಳೆಯ ವೈನ್‌ ಇತ್ತು ಎಂಬುದಕ್ಕೆ ಪುರಾವೆ ಸಿಕ್ಕಿತ್ತು ಎಂದು ಅವರು ಹೇಳಿದ್ದಾರೆ. 

Tap to resize

Latest Videos

ಇಸ್ರೇಲ್ ರಾಜತಾಂತ್ರಿಕನ ವಜಾ: ಗಾಜಾಪಟ್ಟಿ ಕ್ಲೀನ್ ಸ್ವಿಪ್‌ ಮಾಡುವ ಇಸ್ರೇಲ್‌ ಯತ್ನಕ್ಕೆ ಅಮೆರಿಕಾದಿಂದಲೂ ವಿರೋಧ

ಆದರೆ ಈ ಈಜಿಪ್ಟ್‌ ರಾಣಿ (Egyptian queen) ಮೆರೆಟ್ ನೀತ್‌ (Meret-Neith) ನಿಜವಾದ ಗುರುತು ಇಂದಿಗೂ ಒಗಟಾಗಿಯೇ ಉಳಿದಿದ್ದರೂ, ಆಕೆ  ಈಜಿಪ್ಟ್‌ನ ಅಬಿಡೋಸ್‌ನ ರಾಜ ಸಮಾಧಿ ಮೈದಾನದಲ್ಲಿ ಭವ್ಯವಾದ ಸಮಾಧಿ  ಹೊಂದಿದ್ದ ಏಕೈಕ ಮಹಿಳೆ ಆಗಿದ್ದಳು.  ಅಲ್ಲದೇ ಸಮಾಧಿಯೊಳಗೆ ಸಿಕ್ಕಿದ ಶಾಸನಗಳು ಆಕೆಯ ಈಜಿಪ್ಟ್ ಆಡಳಿತದಲ್ಲಿ ಖಜಾನೆ ಸೇರಿದಂತೆ  ಸರ್ಕಾರಿ ಇಲಾಖೆಗಳ ಮೇಲ್ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಳು ಎಂಬುದಕ್ಕೆ ಪುರಾವೆ ನೀಡುತ್ತವೆ.  ರಾಣಿ ಮೆರೆಟ್ ನೀತ್,  18 ನೇ ರಾಜವಂಶದ ರಾಣಿ ಹ್ಯಾಟ್ಶೆಪ್ಸುಟ್ಗೆ(Queen Hatshepsut) ಅವರಿಗಿಂತಲೂ ಮೊದಲು ರಾಣಿಯಾಗಿ ಸೇವೆ ಸಲ್ಲಿಸಿದ್ದರು.  ಈಗ ಮಾಡಲಾದ ಹೊಸ ಉತ್ಖನನದಲ್ಲಿ ಈ ಅದ್ಭುತ ಮಹಿಳೆ ಹಾಗೂ ಆಕೆಯ ಅವಧಿಯ ಕೆಲ ಅಚ್ಚರಿಯ ವಿಚಾರಗಳನ್ನು ಬೆಳಕಿಗೆ ತರುತ್ತವೆ ಎಂದು ಕೊಹ್ಲರ್ ಹೇಳಿದ್ದಾರೆ. 

ಇಸ್ರೇಲ್ ಪ್ಯಾಲೇಸ್ತೇನ್ ಯುದ್ಧ: ಹಮಾಸ್ ಉಗ್ರರಿಗೆ ಚೀನಾದಿಂದ ಶಸ್ತ್ರಾಸ್ತ್ರ ಪೂರೈಕೆ?

ಮರುಭೂಮಿಯಲ್ಲಿ ಇರುವ ಮೆರೆಟ್ ನೀತ್ ಅವರ ಸಮಾಧಿ (ಮಮ್ಮಿ) ಸಂಕೀರ್ಣದಲ್ಲಿ 41 ಪರಿಚಾರಕರು ಮತ್ತು ಸೇವಕರ ಪ್ರತಿಮೆಗಳೂ ಇದ್ದು, ಇದರ ಕೋಣೆಗಳನ್ನು ಬೇಯಿಸದ ಮಣ್ಣಿನ  ಇಟ್ಟಿಗೆಗಳು, ಜೇಡಿಮಣ್ಣು ಮತ್ತು ಮರವನ್ನು ಬಳಸಿ ನಿರ್ಮಿಸಲಾಗಿದೆ. ಈ ಸಮಾಧಿಯ ಹಲವು ಹಂತಗಳ ಧೀರ್ಘಾವಧಿಯಲ್ಲಿ ನಿರ್ಮಾಣವಾಗಿವೆ ಎಂಬುದನ್ನು ಉತ್ಖನನ ತಂಡ ಶೋಧಿಸಿದೆ.

ವಿಶ್ವ ಸುಂದರಿ ಸ್ಪರ್ಧಿಯನ್ನೂ ಬಿಡಲಿಲ್ಲ ಗರ್ಭಕಂಠದ ಕ್ಯಾನ್ಸರ್‌: 26ಕ್ಕೆ ಬದುಕಿಗೆ ಗುಡ್‌ಬೈ ಹೇಳಿದ ಶೇರಿಕಾ ಡಿ

click me!