
ಕೊಲಂಬೊ (ಜು.17): ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ವಿಪಕ್ಷ ನಾಯಕ ಸಜಿತ್ ಪ್ರೇಮದಾಸ ಸೇರಿ 4 ಜನರು ಶ್ರೀಲಂಕಾದ ನೂತನ ಅಧ್ಯಕ್ಷರ ಆಯ್ಕೆ ರೇಸ್‌ನಲ್ಲಿದ್ದಾರೆ. ತೀವ್ರ ಆರ್ಥಿಕ, ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಗೊಟಬಯ ರಾಜೀನಾಮೆ ಘೋಷಿಸಿದ ಬಳಿಕ ತೆರವಾದ ಸ್ಥಾನಕ್ಕೆ ಹೊಸ ಅಧ್ಯಕ್ಷನನ್ನು ನೇಮಿಸಲು ಶನಿವಾರ ಸಂಸತ್ತು ವಿಶೇಷ ಅಧಿವೇಶನ ನಡೆಸಿತ್ತು. ಈವರೆಗೆ ವಿಕ್ರಮಸಿಂಘೆ, ಪ್ರೇಮದಾಸ, ಮಾಕ್ರ್ಸಿಸ್ಟ್ ಜೆವಿಪಿ ನಾಯಕ ಅನುರಾ ಕುಮಾರ ದಿಸ್ಸಾನಾಯಕೆ ಹಾಗೂ ದುಲ್ಲಾಸ್ ಅಲಹಪ್ಪೆರುಮ ಜು. 20 ರಂದು ನಡೆಯಲಿರುವ ರಾಷ್ಟ್ರಾಧ್ಯಕ್ಷರ ಚುನಾವಣೆಯಲ್ಲಿ ಪಾಲ್ಗೊಳ್ಳಲು ತಮ್ಮ ಉಮೇದುವಾರಿಕೆಯನ್ನು ಘೋಷಿಸಿದ್ದಾರೆ. ಆಯ್ಕೆಯಾದ ರಾಷ್ಟ್ರಾಧ್ಯಕ್ಷರು ನವೆಂಬರ್ 2024ರವರೆಗೆ ಅಧಿಕಾರ ನಡೆಸಲಿದ್ದಾರೆ.ರಾಜಪಕ್ಸೆ ರಾಜೀನಾಮೆಯ ನಂತರ ತೆರವಾದ ಅಧ್ಯಕ್ಷ ಸ್ಥಾನವನ್ನು ಘೋಷಿಸಲು ಸಂಸತ್ತು ಶನಿವಾರ ಸಂಕ್ಷಿಪ್ತ ವಿಶೇಷ ಅಧಿವೇಶನಕ್ಕಾಗಿ ಸಭೆ ಸೇರಿತು.
ಬುಧವಾರ ಮಾಲ್ಡೀವ್ಸ್‌ಗೆ ಪಲಾಯನ ಮಾಡಿ ನಂತರ ಗುರುವಾರ ಸಿಂಗಾಪುರಕ್ಕೆ ಬಂದಿಳಿದ ರಾಜಪಕ್ಸೆ ಶುಕ್ರವಾರ ಔಪಚಾರಿಕವಾಗಿ ರಾಜೀನಾಮೆ ನೀಡಿದರು, ಈ ಮೂಲಕ ಬಿಕ್ಕಟ್ಟು ಪೀಡಿತ ರಾಷ್ಟ್ರದಲ್ಲಿ 72 ಗಂಟೆಗಳ ಅಸ್ತವ್ಯಸ್ತತೆಯನ್ನು ಅಂತ್ಯಗೊಂಡಿತು, ಪ್ರತಿಭಟನಾಕಾರರು ಅಧ್ಯಕ್ಷ ಮತ್ತು ಪ್ರಧಾನಿ ನಿವಾಸಗಳು ಸೇರಿದಂತೆ ಅನೇಕ ಸಾಂಪ್ರದಾಯಿಕ ಕಟ್ಟಡಗಳಿಗೆ ಹಾನಿ ಮಾಡಿದ್ದಾರೆ.
13 ನಿಮಿಷಗಳ ವಿಶೇಷ ಅಧಿವೇಶನದಲ್ಲಿ, ಸಂಸತ್ತಿನ ಪ್ರಧಾನ ಕಾರ್ಯದರ್ಶಿ ಧಮ್ಮಿಕಾ ದಾಸನಾಯಕ ಅವರು ಅಧ್ಯಕ್ಷ ಸ್ಥಾನಕ್ಕೆ ತೆರವಾದ ಸ್ಥಾನವನ್ನು ಪ್ರಕಟಿಸಿದರು. ನೂತನ ಅಧ್ಯಕ್ಷರ ಆಯ್ಕೆಗೆ ಮಂಗಳವಾರ ನಾಮಪತ್ರ ಸಲ್ಲಿಕೆ ನಡೆಯಲಿದ್ದು, ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದಲ್ಲಿ ಬುಧವಾರ ಶಾಸಕರು ಮತ ಚಲಾಯಿಸಲಿದ್ದಾರೆ ಎಂದು ದಾಸನಾಯಕ ಹೇಳಿದ್ದಾರೆ.
ಮಾರ್ಕ್ಸ್‌ವಾದಿ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ನಾಯಕ 53 ವರ್ಷದ ಡಿಸ್ಸಾನಾಯಕ್ ಅವರು ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ಶನಿವಾರ ಅಧಿಕೃತವಾಗಿ ಘೋಷಿಸಿದರು. 225 ಸದಸ್ಯರ ಸಂಸತ್ತಿನಲ್ಲಿ ರಾಜಪಕ್ಸೆ ಅವರ ಆಡಳಿತಾರೂಢ ಶ್ರೀಲಂಕಾ ಪೊದುಜನ ಪೆರಮುನ (SLPP) ಪಕ್ಷ ಪ್ರಾಬಲ್ಯ ಹೊಂದಿದೆ.
ವಿಶೇಷವೆಂದರೆ 1978 ರಿಂದ ಅಧ್ಯಕ್ಷೀಯ ಇತಿಹಾಸದಲ್ಲಿ ಎಂದಿಗೂ, ಸಂಸತ್ತು ಅಧ್ಯಕ್ಷರನ್ನು ಆಯ್ಕೆ ಮಾಡಲು ಲಂಕನ್ನರು ಮತ ಚಲಾಯಿಸಿಲ್ಲ.1982, 1988, 1994, 1999, 2005, 2010, 2015 ಮತ್ತು 2019 ರ ಅಧ್ಯಕ್ಷೀಯ ಚುನಾವಣೆಗಳು ಜನಪ್ರಿಯ ನಾಯಕರ ಮತದಿಂದ ಆಯ್ಕೆ ಮಾಡಿತ್ತು.
ಲಂಕಾ ರಾಷ್ಟ್ರಪತಿ ಭವನದಲ್ಲಿ ಗದ್ದಲದ ನಡುವೆ ಯುವತಿಯ ಗ್ಲಾಮರಸ್ ಫೋಟೋಶೂಟ್, ಫೋಟೋಸ್ ವೈರಲ್!
ಮಾತೃಭೂಮಿಗೆ ನನ್ನಿಂದ ಸಾಧ್ಯವಾದಷ್ಟುಸೇವೆ ಸಲ್ಲಿಸಿದ್ದೇನೆ.ಮುಂದೆಯೂ ಸೇವೆ ಸಲ್ಲಿಸುತ್ತೇನೆ: ಗೊಟಬಯ ರಾಜಪಕ್ಸೆ
‘ನನ್ನಿಂದ ಸಾಧ್ಯವಾದಷ್ಟು ನಾನು ಮಾತೃಭೂಮಿಗೆ ಸೇವೆ ಸಲ್ಲಿಸಿದ್ದೇನೆ ಹಾಗೂ ಭವಿಷ್ಯದಲ್ಲಿಯೂ ಇದನ್ನು ಮುಂದುವರೆಸುತ್ತೇನೆ’ ಎಂದು ಶ್ರೀಲಂಕಾದ ಬಿಟ್ಟು ಪರಾರಿಯಾಗಿ ಸಿಂಗಾಪುರದಲ್ಲಿ ನೆಲೆಸಿರುವ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ಸ್ಪೀಕರ್‌ಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
ಜನರ ಭಾರೀ ಪ್ರತಿಭಟನೆಯ ಬೆನ್ನಲ್ಲೇ ಸಿಂಗಾಪುರಕ್ಕೆ ಪರಾರಿಗಾಗಿದ್ದ ರಾಜಪಕ್ಸೆ ಅಲ್ಲಿಂದಲೇ ಗುರುವಾರ ಸ್ಪೀಕರ್ ಮಹಿಂದಾ ಯಪಗೆ ಇ ಮೇಲ್ ಮೂಲಕ ರಾಜೀನಾಮೆ ಪತ್ರ ರವಾನಿಸಿದ್ದರು. ಶನಿವಾರ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಸಂಸತ್ತಿನ ಕಾರ್ಯದರ್ಶಿಯಾದ ಧಮ್ಮಿಕ ದಸ್ಸಾನಾಯಕೆ ಸುಮಾರು 13 ನಿಮಿಷಗಳ ಕಾಲ ಈ ಪತ್ರವನ್ನು ಓದಿದರು. ರಾಜೀನಾಮೆ ಪತ್ರದಲ್ಲಿ ಕೋವಿಡ್-19 ಅನ್ನು ಶ್ರೀಲಂಕಾದ ಭೀಕರ ಆರ್ಥಿಕ ಬಿಕ್ಕಟ್ಟಿಗೆ ಕಾರಣ ಎಂದು ದೂರಿದ್ದು, ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಜನರ ಪ್ರಾಣ ರಕ್ಷಿಸಲು ಸಾಂಕ್ರಾಮಿಕ ನಿಯಂತ್ರಣಕ್ಕೆ ತಾವು ಕ್ರಮ ಕೈಗೊಂಡಿದ್ದೇನೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ