ಲಂಕಾ ರಾಷ್ಟ್ರಪತಿ ಭವನದಲ್ಲಿ ಗದ್ದಲದ ನಡುವೆ ಯುವತಿಯ ಗ್ಲಾಮರಸ್ ಫೋಟೋಶೂಟ್, ಫೋಟೋಸ್‌ ವೈರಲ್!

Published : Jul 17, 2022, 09:34 AM IST
ಲಂಕಾ ರಾಷ್ಟ್ರಪತಿ ಭವನದಲ್ಲಿ ಗದ್ದಲದ ನಡುವೆ ಯುವತಿಯ ಗ್ಲಾಮರಸ್ ಫೋಟೋಶೂಟ್, ಫೋಟೋಸ್‌ ವೈರಲ್!

ಸಾರಾಂಶ

ಶ್ರೀಲಂಕಾದಲ್ಲಿ ಆರ್ಥಿಕ ಹೊಡೆತಕ್ಕೆ ಸಿಲುಕಿದ ನಾಗರಿಕರು ಭಾರೀ ಪ್ರತಿಭಟನೆ ಮತ್ತು ಹಿಂಸಾಚಾರ ನಡೆಸುತ್ತಿರುವ ವರದಿಗಳು ಸದ್ದು ಮಾಡುತ್ತಿವೆ. ಇದೆಲ್ಲದರ ನಡುವೆ, ಯುವತಿಯೊಬ್ಬಳ ಫೋಟೋಗಳು ವೈರಲ್ ಆಗುತ್ತಿದ್ದು, ಪ್ರತಿಭಟನೆಯ ನಡುವೆಯೇ ಫೋಟೋಶೂಟ್ ಮಾಡುತ್ತಿರುವುದು ಕಂಡುಬಂದಿದೆ. ಬಾಲಕಿಯೇ ತನ್ನ ಫೇಸ್ ಬುಕ್ ಖಾತೆಯಿಂದ ಫೋಟೋಗಳನ್ನು ಹಂಚಿಕೊಂಡಿದ್ದಾಳೆ. ಚಿತ್ರಗಳಲ್ಲಿ, ಅವರು ಕೊಲಂಬೊದ ರಾಷ್ಟ್ರಪತಿ ಭವನದಲ್ಲಿ ವಿಭಿನ್ನ ರೀತಿಯಲ್ಲಿ ಪೋಸ್ ನೀಡಿದ್ದಾರೆ.

ಕೊಲಂಬೋ(ಜು.17): ಶ್ರೀಲಂಕಾ ತನ್ನ 70 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಗಗನಕ್ಕೇರುತ್ತಿರುವ ಹಣದುಬ್ಬರದಿಂದಾಗಿ, ಲಕ್ಷಾಂತರ ಶ್ರೀಲಂಕಾದವರು ಆಹಾರ, ಔಷಧ, ಪೆಟ್ರೋಲ್ ಮತ್ತು ಡೀಸೆಲ್ ಮುಂತಾದ ಮೂಲಭೂತ ಅಗತ್ಯಗಳಿಗಾಗಿ ಹೆಣಗಾಡುತ್ತಿದ್ದಾರೆ. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಎಲ್ಲೆಡೆ ಪ್ರತಿಭಟನೆಗಳು ಮತ್ತು ಹಿಂಸಾಚಾರ ನಡೆಯುತ್ತಿದೆ. ಇದೆಲ್ಲದರ ನಡುವೆ, ಯುವತಿಯೊಬ್ಬಳ ಫೋಟೋಗಳು ಕೂಡಾ ವೈರಲ್ ಆಗುತ್ತಿದ್ದು, ಪ್ರತಿಭಟನೆಯ ನಡುವೆಯೇ ಫೋಟೋಶೂಟ್ ಮಾಡುತ್ತಿರುವುದು ಕಂಡುಬಂದಿದೆ.

ವಾಸ್ತವವಾಗಿ, ಕಳೆದ ಕೆಲವು ದಿನಗಳಿಂದ ಶ್ರೀಲಂಕಾದಲ್ಲಿ ಸರ್ಕಾರದ ವಿರುದ್ಧ ಜನರು ಬೀದಿಗಿಳಿದಿದ್ದಾರೆ. ಕೋಪಗೊಂಡ ಗುಂಪು ರಾಷ್ಟ್ರಪತಿ ಭವನವನ್ನು ಆಕ್ರಮಿಸಿಕೊಂಡಿದೆ. ರಾಷ್ಟ್ರಪತಿಯವರ ಅಧಿಕೃತ ನಿವಾಸದೊಳಗೆ ನೂರಾರು ಜನ ಜಮಾಯಿಸಿ ಅಲ್ಲಿ ಮೋಜು ಮಸ್ತಿ ಮಾಡಿದರು. ಕೆಲವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಸ್ನಾನ ಮಾಡುತ್ತಿದ್ದು, ಕೆಲವರು ಅಡುಗೆ ಕೋಣೆ-ಬೆಡ್‌ರೂಮ್‌ನಲ್ಲಿ ಆನಂದಿಸುತ್ತಿರುವುದು ಕಂಡುಬಂದಿತು. ಈ ಮಧ್ಯೆ, ರಾಷ್ಟ್ರಪತಿ ಭವನದಲ್ಲಿ ಡ್ರೆಸ್ ಮಾಡಿಕೊಂಡು ಫೋಟೋ ತೆಗೆಯುತ್ತಿರುವ ಹುಡುಗಿಯ ಚಿತ್ರವೊಂದು ಕಣ್ಣ ಮುಂದೆ ಬಂತು.

ಗದ್ದಲದ ನಡುವೆ ಹುಡುಗಿಯ ಫೋಟೋಶೂಟ್

ಗದ್ದಲದ ನಡುವೆ, ಶ್ರೀಲಂಕಾದ ಯುವತಿಯ ಫೋಟೋಶೂಟ್ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ. ಬಾಲಕಿಯೇ ತನ್ನ ಫೇಸ್ ಬುಕ್ ಖಾತೆಯಿಂದ ಚಿತ್ರಗಳನ್ನು ಹಂಚಿಕೊಂಡಿದ್ದಾಳೆ. ಚಿತ್ರಗಳಲ್ಲಿ, ಅವರು ಕೊಲಂಬೊದ ರಾಷ್ಟ್ರಪತಿ ಭವನದಲ್ಲಿ ವಿಭಿನ್ನ ರೀತಿಯಲ್ಲಿ ಪೋಸ್ ನೀಡುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿರುವ ಹುಡುಗಿಯ ಹೆಸರು ಮಧುಹಂಸಿ ಹಸಿಂತರಾ.

ಶ್ರೀಲಂಕಾದ ರಾಷ್ಟ್ರಪತಿ ಭವನದಲ್ಲಿ ಮಧುಹಂಸಿ 26 ಚಿತ್ರಗಳನ್ನು ಕ್ಲಿಕ್ಕಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಿತ್ರಗಳಲ್ಲಿ, ಅವರು ಅರಮನೆಯ ಸುತ್ತಲೂ ನಿಂತು ಪೋಸ್ ನೀಡಿದರು. ಕೆಲವೆಡೆ ಅವಳು ಸೋಫಾದಲ್ಲಿ ಮತ್ತು ಕೆಲವೊಮ್ಮೆ ಹಾಸಿಗೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಒಂದು ಚಿತ್ರದಲ್ಲಿ ಮಧುಹಂಸಿ ಲಾನ್‌ನಲ್ಲಿ ಮತ್ತು ಇನ್ನೊಂದು ಚಿತ್ರದಲ್ಲಿ ಐಷಾರಾಮಿ ಕಾರಿನ ಮುಂದೆ ನಿಂತಿದ್ದಾರೆ.

ಜುಲೈ 13 ರಂದು ಪೋಸ್ಟ್ ಮಾಡಲಾದ ಮಧುಹಂಸಿ ಅವರ ಚಿತ್ರಗಳಿಗೆ ಇದುವರೆಗೆ 20 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಅವರ ಪೋಸ್ಟ್ ಅನ್ನು 9 ಸಾವಿರ ಜನರು ಹಂಚಿಕೊಂಡಿದ್ದರೆ, ಒಂದೂವರೆ ಸಾವಿರಕ್ಕೂ ಹೆಚ್ಚು ಜನರು ಕಾಮೆಂಟ್ ಮಾಡಿದ್ದಾರೆ.

ಒಬ್ಬ ಬಳಕೆದಾರ ಇದಕ್ಕೆ ಕಾಮೆಂಟ್‌ ಮಾಡುತ್ತಾ - 'ಹುಡುಗಿ ಶ್ರೀಲಂಕಾದ ಹೊಸ ಅಧ್ಯಕ್ಷರಾಗಬಹುದು ಎಂದಿದ್ದಾರೆ. ಮತ್ತೊಬ್ಬರು ಗದ್ದಲದ ಮಧ್ಯೆ ಫೋಟೋಗಳನ್ನು ತೆಗೆದುಕೊಳ್ಳುವ ಬಯಕೆಯನ್ನು ಎಂದಿಗೂ ನೋಡಿಲ್ಲ ಎಂದಿದ್ದಾರೆ. ಅದೇ ಸಮಯದಲ್ಲಿ, ಕೆಲವು ಬಳಕೆದಾರರು ಹುಡುಗಿಯ ಚಿತ್ರಗಳನ್ನು ಹೊಗಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ
ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!