* 2.3 ಕೋಟಿ ಜನರಿಗೆ ತೀವ್ರ ಆಹಾರ ಸಮಸ್ಯೆ
* ಹೊಟ್ಟೆ ತುಂಬಿಸಲಾಗದ್ದಕ್ಕೆ ಮಕ್ಕಳ ಮಾರಾಟ
* ಅಂತಾರಾಷ್ಟ್ರೀಯ ಸಮುದಾಯದ ಆಹಾರ ಪೂರೈಕೆ ಸಾಲುತ್ತಿಲ್ಲ
ಬರ್ಲಿನ್(ಜ.30): 20 ವರ್ಷಗಳ ಆಂತರಿಕ ಸಂಘರ್ಷ ಮತ್ತು ಕಳೆದ 6 ತಿಂಗಳ ತಾಲಿಬಾನ್(Taliban) ಆಡಳಿತದಲ್ಲಿ ಅಷ್ಘಾನಿಸ್ತಾನ(Afghanistan) ಅತ್ಯಂತ ಭೀಕರ ಸ್ಥಿತಿಗೆ ತಲುಪಿದ್ದು, ಬದುಕುಳಿಯುವ ಸಲುವಾಗಿ ಜನರು ತಮ್ಮ ಮಕ್ಕಳನ್ನೇ ಮಾರಾಟ ಮಾಡುವ, ತಮ್ಮ ಕಿಡ್ನಿಯನ್ನೇ(Kidney) ಮಾರಿ ಜೀವನ ಮಾಡುವ ಸ್ಥಿತಿಗೆ ತಲುಪಿದ್ದಾರೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ತಕ್ಷಣವೇ ಅಂತಾರಾಷ್ಟ್ರೀಯ ಸಮುದಾಯ ವಿಶ್ವದ ಈ ಬಡ ದೇಶದ ನೆರವಿಗೆ ಧಾವಿಸದೆ ಹೋದಲ್ಲಿ ದೇಶದ ಶೇ.97ರಷ್ಟು ಜನ ಬಡತನ(Poor) ರೇಖೆಗಿಂತ ಕೆಳಗೆ ಇಳಿಯಲಿದ್ದಾರೆ ಎಂದು ವಿಶ್ವಸಂಸ್ಥೆಯ(United Nations) ಅಂಗಸಂಸ್ಥೆಯಾದ ವಿಶ್ವ ಆಹಾರ ಯೋಜನೆ ಎಚ್ಚರಿಕೆ ನೀಡಿದೆ.
ಈ ಕುರಿತು ಮಾಹಿತಿ ನೀಡಿರುವ ವಿಶ್ವ ಆಹಾರ ಯೋಜನೆ ಮುಖ್ಯಸ್ಥ ಡೇವಿಡ್ ಬಾಸ್ಲಿ ‘ಸತತ ಬರಗಾಲ, ಕೋವಿಡ್(Covid19) ಸಾಂಕ್ರಾಮಿಕ, ಆರ್ಥಿಕ ಕುಸಿತ, ಆಂತರಿಕ ಸಂಘರ್ಷದ ಪರಿಣಾಮ ಅಷ್ಘಾನಿಸ್ತಾನದ ಸ್ಥಿತಿ ಅತ್ಯಂತ ಗಂಭೀರವಾಗಿದೆ. ದೇಶದ 4 ಕೋಟಿ ಜನರ ಪೈಕಿ ಕನಿಷ್ಠ 2.3 ಕೋಟಿ ಜನರು ಹಸಿವಿನಿಂದ(Hunger) ಬಳಲುತ್ತಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯ ಆಹಾರ ಮತ್ತು ಔಷಧಗಳ ನೆರವು ರವಾನಿಸುತ್ತಿದೆಯಾದರೂ ಅದು ದೇಶದ ಅಗತ್ಯವನ್ನು ಪೂರೈಸುತ್ತಿಲ್ಲ’ ಎಂದು ಹೇಳಿದ್ದಾರೆ.
Taliban In Afghanistan: ತಾಲಿಬಾನ್ ಸೇನೆಗೆ ಆತ್ಮಾಹುತಿ ಬಾಂಬರ್ ನೇಮಕ!
‘ಹಸಿವಿನಿಂದ ಕಂಗೆಟ್ಟಿರುವ ಬಡ ಜನರು ತಮ್ಮ ಮಕ್ಕಳು(Children) ಬೇರೆಡೆಯಾದರೂ ಸುಖವಾಗಿ ಬಾಳಲಿ ಎಂದು ಅವರನ್ನು ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇನ್ನೊಂದೆಡೆ ದೊಡ್ಡ ದೊಡ್ಡ ಕುಟುಂಬಗಳನ್ನು ನಿರ್ವಹಿಸಲಾಗದೆ ಮನೆಯ ಹಿರಿಯರು ತಮ್ಮ ಕಿಡ್ನಿಯನ್ನೇ ಮಾರಾಟ ಮಾಡಿ ಹಣ ಸಂಗ್ರಹಿಸಿ ಆಹಾರ ಸಾಮಗ್ರಿ ಖರೀದಿಸುತ್ತಿರುವ ಘಟನೆಗಳು ಹಲವೆಡೆ ವರದಿಯಾಗಿದೆ. ಹೀಗಾಗಿ ಅಂತಾರಾಷ್ಟ್ರೀಯ ಸಮುದಾಯ ಶೀಘ್ರವೇ ಹೆಚ್ಚಿನ ನೆರವು ರವಾನಿಸದೆ ಹೋದಲ್ಲಿ ದೇಶದ ಇನ್ನಷ್ಟುಜನರು ಹಸಿವಿನ ಸಮಸ್ಯೆಗೆ ಸಿಕ್ಕಿ ಬೀಳಲಿದ್ದಾರೆ. ದೇಶದ ಶೇ.97ರಷ್ಟು ಜನರು ವರ್ಷಾಂತ್ಯದ ವೇಳೆಗೆ ಬಡತನ ರೇಖೆಗಿಂತ ಕೆಳಗೆ ಇಳಿಯಲಿದ್ದಾರೆ’ ಎಂದು ಬಾಸ್ಲಿ ಎಚ್ಚರಿಸಿದ್ದಾರೆ.
ಏನಾಗಿದೆ?
- ತಾಲಿಬಾನ್ ಆಡಳಿತದಿಂದ ಅಷ್ಘಾನಿಸ್ತಾನದಲ್ಲಿ ಭೀಕರ ಸ್ಥಿತಿ
- 4 ಕೋಟಿ ಜನರ ಪೈಕಿ 2.3 ಕೋಟಿ ಜನಕ್ಕೆ ಆಹಾರ ಸಮಸ್ಯೆ
- ಅಂತಾರಾಷ್ಟ್ರೀಯ ಸಮುದಾಯದ ಆಹಾರ ಪೂರೈಕೆ ಸಾಲುತ್ತಿಲ್ಲ
- ವಿಶ್ವಸಂಸ್ಥೆಯ ಅಂಗಸಂಸ್ಥೆ ವಿಶ್ವ ಆಹಾರ ಯೋಜನೆಯ ಮಾಹಿತಿ
Women in Afghanistan: ಪುರುಷ ಜೊತೆಗಿದ್ದರಷ್ಟೇ ಅಫ್ಘನ್ ಸ್ತ್ರೀಯರಿಗೆ ದೂರ ಪ್ರಯಾಣ ಚಾನ್ಸ್!
ಅಫ್ಘಾನಿಸ್ತಾನದಲ್ಲಿ ಏರ್‌ಲಿಫ್ಟ್ ವೇಳೆ ಬೇರ್ಪಟ್ಟ ಹಾಲುಗಲ್ಲದ ಕಂದ ಮತ್ತೆ ಪೋಷಕರ ಮಡಿಲಿಗೆ\
ಕಾಬೂಲ್: ಅಪ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕಿ ತಾಲಿಬಾನಿಗಳು ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಅಪ್ಘಾನಿಸ್ತಾನದಾದ್ಯಂತ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಅಮೆರಿಕಾದ ಯುದ್ಧ ವಿಮಾನವೊಂದು ಅಲ್ಲಿನ ಪ್ರಜೆಗಳನ್ನು ಏರ್‌ಲಿಫ್ಟ್ ಮಾಡಿತ್ತು. ಈ ವೇಳೆ ವಿಮಾನ ಹತ್ತಲಾಗದ ವ್ಯಕ್ತಿಯೊಬ್ಬರು ಹಾಲುಗಲ್ಲದ ಮಗುವನ್ನು ಅಮೆರಿಕಾ ಸೈನಿಕನ ಕೈಗಿತ್ತಿದ್ದರು. ಈ ದೃಶ್ಯ ಹಾಗೂ ಫೋಟೋಗಳು ಜಾಗತಿಕ ಮಟ್ಟದಲ್ಲಿ ಅಫ್ಘಾನಿಸ್ತಾನದ ದುಸ್ಥಿತಿಯನ್ನು ಎತ್ತಿ ಹಿಡಿದಿತ್ತಲ್ಲದೇ ಮಗು ಹಾಗೂ ತಾಯಿಯ ಬೇರ್ಪಡುವಿಕೆಗೆ ಅನೇಕರು ಮರುಗಿದ್ದರು. ಆದರೆ ಈಗ ಖುಷಿಯ ವಿಚಾರ ಎಂದರೆ ಆ ಮಗು ಮತ್ತೆ ತನ್ನ ಪೋಷಕರ ಮಡಿಲು ಸೇರಿದೆ.
ಸೊಹೈಲ್ ಅಹ್ಮದ್ (Sohail Ahmadi) ಹೆಸರಿನ ಈ ಮಗು ಅಮೆರಿಕಾ ಸೈನಿಕರ ಪಾಲಾಗುವ ವೇಳೆ ಅದಕ್ಕೆ ಕೇವಲ 2 ತಿಂಗಳಾಗಿತ್ತಷ್ಟೇ 2021ರ ಆಗಸ್ಟ್ 19 ರಂದು ಈ ಘಟನೆ ನಡೆದಿತ್ತು. ತಾಲಿಬಾನ್ ಅಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಸಾವಿರಕ್ಕೂ ಹೆಚ್ಚು ಅಫ್ಘಾನಿಸ್ತಾನ ಜನ ದೇಶ ತೊರೆಯಲು ಸಿದ್ಧರಾಗಿ ಅಮೆರಿಕಾ ವಿಮಾನದೆಡೆಗೆ ಧಾವಿಸಿ ಬಂದಿದ್ದರು. ಬಳಿಕ ವಿಮಾನ ಹತ್ತುವ ವೇಳೆ ಮಗು ಎಲ್ಲಿದೆ ಎನ್ನುವುದು ಪೋಷಕರಿಗೂ ತಿಳಿದಿರಲಿಲ್ಲ. ಮಗು ಸಿಗದ ಕಾರಣ ಕುಟುಂಬ ಉಳಿದ ನಾಲ್ಕು ಮಕ್ಕಳೊಂದಿಗೆ ಯುಎಸ್ಗೆ ಸ್ಥಳಾಂತರಗೊಂಡಿದ್ದರು. ನಂತರ ವಿಮಾನ ನಿಲ್ದಾಣದಲ್ಲಿದ್ದ ಮಗುವನ್ನು ಕಾಬೂಲ್ ಟ್ಯಾಕ್ಸಿ ಡ್ರೈವರ್ ಹಮೀದ್ ಸಫಿ ಎನ್ನುವವರು ಕರೆದೊಯ್ದು ರಕ್ಷಣೆ ಮಾಡಿದ್ದರು.