
ಕಾಬೂಲ್: ಜಿಮ್ ಮತ್ತು ಪಾರ್ಕ್‌ಗಳಿಂದ ಮಹಿಳೆಯರನ್ನು ನಿಷೇಧಿಸಲು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ನಿರ್ಧರಿಸಿದೆ. ಕಡ್ಡಾಯವಾಗಿ ಹಿಜಾಬ್ ಧರಿಸಬೇಕೆಂಬ ಆದೇಶ ಪಾಲಿಸದ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಗುರುವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೇ ‘ಈ ನಿಯಮವನ್ನು ಜಾರಿಗೊಳಿಸಂತೆ ತಡೆಯಲು ನಾವು ಯತ್ನಿಸಿದೆವು ಹಾಗೂ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ದಿನಗಳನ್ನು ನಿಗದಿ ಮಾಡಲು ಸಾಕಷ್ಟು ಪ್ರಯತ್ನಿಸಿದೆವು. ಆದರೂ ಫಲಕಾರಿಯಾಗಲಿಲ್ಲ’ ಎಂದು ತಾಲಿಬಾನ್ ವಕ್ತಾರ ಮೊಹಮ್ಮದ್ ಅಕೆಫ್ ಮೊಹಜರ್ (Mohammad Akef Mohajer) ಹೇಳಿದ್ದಾನೆ.
ಈಗಾಗಲೇ ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳಿಂದ ಬಾಲಕಿಯರನ್ನು ನಿಷೇಧಿಸಲಾಗಿದ್ದು ಹೆಚ್ಚಿನ ಉದ್ಯೋಗ (employment) ಕ್ಷೇತ್ರಗಳಿಗೂ ನಿರ್ಬಂಧ ಹೇರಲಾಗಿದೆ. 2021ರಲ್ಲಿ ಅಫ್ಘಾನ್‌ನಲ್ಲಿ ಅಧಿಕಾರ ವಶಪಡಿಸಿಕೊಂಡ ತಾಲಿಬಾನ್, ಆಗಿನಿಂದಲೂ ಲಿಂಗಬೇಧ ನೀತಿಗಳನ್ನು ಅನುಸರಿಸಿಕೊಂಡೇ ಬಂದಿದ್ದು ಮಹಿಳೆಯರ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ಮೂಲೆಗುಂಪು ಮಾಡುತ್ತಿದೆ.
ತಾಲಿಬಾನ್ ಉಗ್ರರು ಕಲ್ಲೆಸೆದು ಕೊಲ್ಲೋ ಮೊದಲು ಸಾವಿಗೆ ಶರಣಾದ ಮಹಿಳೆ
ತಾಲಿಬಾನ್ ಜೊತೆ ಡೀಲ್, ಭಾರತಕ್ಕೆ ತಲೆನೋವು ತಂದಿದ್ದ ಹಾಜಿ ಬಷೀರ್ 17 ವರ್ಷದ ಬಳಿಕ ಬಿಡುಗಡೆ!
ಭೂತದ ಬಾಯಲ್ಲಿ ಭಗವದ್ಗೀತೆ! PUBG-TikTokನಿಂದ ಯುವಸಮೂಹ ಹಾಳು, ಬ್ಯಾನ್ ಮಾಡಿದ ಅಫ್ಘಾನಿಸ್ತಾನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ