* ತಾಲಿಬಾನ್ ಆಡಳಿತದಲ್ಲಿ ನಡೆದ ಅತಿದೊಡ್ಡ ದಾಳಿ
* ಆಫ್ಘನ್ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ: 46 ಜನರು ಸಾವು
* ಹೊಣೆ ಹೊತ್ತ ಐಸಿಸ್
* ಉಯಿಗುರ್ ಮುಸ್ಲಿಂ ಬಳಸಿ ಸ್ಫೋಟ
* ತಾಲಿಬಾನ್, ಶಿಯಾ ಜನರೇ ಗುರಿ, ಶಿಯಾ ಟಾರ್ಗೆಟ್
0ಕಾಬೂಲ್(ಅ.09): ಶಿಯಾ ಮುಸ್ಲಿಮರನ್ನು(Shia Muslim worshippers) ಗುರಿಯಾಗಿಸಿ ಅಷ್ಘಾನಿಸ್ತಾನದ ಕುಂದುಜ್ ನಗರದ(Kunduz province) ಮಸೀದಿಯೊಂದರ ಮೇಲೆ ಶುಕ್ರವಾರ ಭೀಕರ ಆತ್ಮಾಹುತಿ ದಾಳಿ(Afghanistan attack) ನಡೆಸಲಾಗಿದೆ. ದಾಳಿಯಲ್ಲಿ ಕನಿಷ್ಠ 45 ಜನರು ಸಾವನ್ನಪ್ಪಿದ್ದು, 143 ಜನರು ಗಾಯಗೊಂಡಿದ್ದಾರೆ. ಘಟನೆಯ ಹೊಣೆಯನ್ನು ಐಸಿಸ್ ಉಗ್ರಗಾಮಿ(Islamic State) ಸಂಘಟನೆ ಹೊತ್ತುಕೊಂಡಿದ್ದು, ಉಯಿಗುರ್ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ಬಳಸಿ ಈ ದಾಳಿಯನ್ನು ನಡೆಸಿರುವುದಾಗಿ ಹೇಳಿಕೊಂಡಿದೆ.
ಸಿಖ್ ಗುರುದ್ವಾರದ ಮೇಲೆ ತಾಲಿಬಾನ್ ದಾಳಿ, ಜನರು ವಶಕ್ಕೆ, ದೇಗುಲ ಧ್ವಂಸ!
ಚೀನಾದ ಬೇಡಿಕೆಗೆ ಅನುಗುಣವಾಗಿ ಉಯಿಗುರ್ ಮುಸ್ಲಿಮರನ್ನು ಅಷ್ಘಾನಿಸ್ತಾನದಿಂದ ಹೊರದಬ್ಬಲು ತಾಲಿಬಾನ್ ಒಲವು ತೋರಿದ ಕಾರಣಕ್ಕೆ ಹಾಗೂ ಶಿಯಾ ಮುಸ್ಲಿಮರ ವಿರುದ್ಧ ಈ ದಾಳಿ ಮಾಡಲಾಗಿದೆ ಎಂದು ತಾಲಿಬಾನ್(Taliban) ಹೇಳಿದೆ.
Islamic State group claims Afghanistan mosque attack: statement pic.twitter.com/FFx1wQ7vIr
— AFP News Agency (@AFP)ಕುಂದುಜ್ ನಗರದ ಗೋಝಾರ್ ಎ ಸಯ್ಯದ್ ಅಬದಾ ಮಸೀದಿಯಲ್ಲಿ(Dost Mohammad Obaida) ಜನರು ಶುಕ್ರವಾರದ ಪ್ರಾರ್ಥನೆಗೆ ಸೇರಿದ್ದಾಗ ಈ ಭೀಕರ ದಾಳಿ ನಡೆಸಲಾಗಿದೆ. ಪ್ರಾರ್ಥನೆ ಸಲ್ಲಿಸುತ್ತಿದ್ದವರ ಜೊತೆಯೇ ಇದ್ದ ಆತ್ಮಾಹುತಿ ದಾಳಿಕೋರನೇ ಈ ಕೃತ್ಯ ಎಸಗಿರಬಹುದು. ಈ ದುರಂತದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಬಹುತೇಕರು ಸಾವಿಗೀಡಾಗಿದ್ದಾರೆ. ಇದರಿಂದ ಮಸೀದಿಯಲ್ಲಿ ರಕ್ತದ ಕೋಡಿಯೇ ಹರಿದಿದೆ ಎಂದು ಕುಂದುಜ್ ಪ್ರಾಂತ್ಯದ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ತಜಕಿಸ್ತಾನ್ ಗಡಿಗೆ ತಾಲಿಬಾನ್ ಆತ್ಮಾಹುತಿ ಪಡೆ ನಿಯೋಜನೆ!
ದಾಳಿಯ ಹೊಣೆಯನ್ನು ಐಸಿಸ್ ಉಗ್ರರು(Islamic State) ಹೊತ್ತುಕೊಂಡಿದ್ದಾರೆ. ಅಷ್ಘಾನಿಸ್ತಾನದ ಶಿಯಾ ಮುಸ್ಲಿಮರನ್ನು ಲಾಗಾಯ್ತಿನಿಂದಲೂ ಐಸಿಸ್ ಉಗ್ರರು ಗುರಿಯಾಗಿಸಿಕೊಂಡು ಬಂದಿದ್ದಾರೆ. ಶುಕ್ರವಾರದ ದಾಳಿ ಕೂಡ ಶಿಯಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡೇ ನಡೆಸಲಾಗಿದೆ.
ಅಷ್ಘಾನಿಸ್ತಾನವನ್ನು(Afghanistan) ತಾಲಿಬಾನಿ ಉಗ್ರರು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ, ಐಸಿಸ್ ಉಗ್ರರು ಹಲವು ಆತ್ಮಾಹುತಿ ದಾಳಿ(Suicide Bomb) ನಡೆಸಿದ್ದರಾದರೂ, ಇಷ್ಟೊಂದು ಜನರು ಸಾವನ್ನಪ್ಪಿದ ಮೊದಲ ಘಟನೆ ಇದು. ಹೀಗಾಗಿ ಈ ದಾಳಿ, ದೇಶದಲ್ಲಿ ತಾಲಿಬಾನ್ ಮತ್ತು ಐಸಿಸ್ ಉಗ್ರರ ನಡುವೆ ಮತ್ತೊಂದು ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.
ಕಾಬೂಲ್ ಮಸೀದಿ ಬಳಿ ಬಾಂಬ್ ಸ್ಫೋಟ, ಉಗ್ರರ ಆಡಳಿತದಲ್ಲಿ ಇನ್ನೇನು ನಿರೀಕ್ಷಿಸಲು ಸಾಧ್ಯ?
ಶಿಯಾ ಟಾರ್ಗೆಟ್
- ಕುಂದುಜ್ ನಗರದ ಮಸೀದಿಯಲ್ಲಿ ಶಿಯಾ ಸಮುದಾಯದಿಂದ ಪ್ರಾರ್ಥನೆ
- ಈ ವೇಳೆ ಆತ್ಮಾಹುತಿ ಬಾಂಬ್ ಸ್ಫೋಟ. ಸ್ಥಳದಲ್ಲಿದ್ದ ಬಹುತೇಕರ ಸಾವು
- ಮಸೀದಿಯಲ್ಲಿ ನೆತ್ತರ ಕೋಡಿಯೇ ಹರಿದಿದೆ ಎಂದು ಪೊಲೀಸರ ಮಾಹಿತಿ
- ಭೀಕರ ಆತ್ಮಾಹುತಿ ಘಟನೆಯ ಹೊಣೆ ಹೊತ್ತ ಐಸಿಸ್ ಉಗ್ರ ಸಂಘಟನೆ
- ಸತತವಾಗಿ ಶಿಯಾ ಮುಸ್ಲಿಮರ ಮೇಲೆ ದಾಳಿ ನಡೆಸುತ್ತಿರುವ ಐಸಿಸ್