ತಾಲಿಬಾನ್‌ ನಾಯಕನ ಸಂದರ್ಶಿಸಿದ್ದ ಪತ್ರಕರ್ತೆ ದೇಶ ಬಿಟ್ಟು ಪಲಾಯನ!

Published : Aug 31, 2021, 08:16 AM IST
ತಾಲಿಬಾನ್‌ ನಾಯಕನ ಸಂದರ್ಶಿಸಿದ್ದ ಪತ್ರಕರ್ತೆ ದೇಶ ಬಿಟ್ಟು ಪಲಾಯನ!

ಸಾರಾಂಶ

* ಅಪ್ಘಾನಿಸ್ತಾನ ವಶಪಡಿಸಿಕೊಂಡ ತಾಲಿಬಾನ್ * * ತಾಲಿಬಾನ್‌ ನಾಯಕನ ಸಂದರ್ಶಿಸಿದ್ದ ಪತ್ರಕರ್ತೆ ದೇಶ ಬಿಟ್ಟು ಪಲಾಯನ * ಟೊಟೊ ನ್ಯೂಸ್‌ ಚಾನಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 24 ವರ್ಷದ ನಿರೂಪಕಿ 

ಕಾಬೂಲ್‌(ಆ.31): ಅಷ್ಘಾನಿಸ್ತಾನವನ್ನು ತಾಲಿಬಾನ್‌ ವಶಪಡಿಸಿಕೊಂಡ ನಂತರ, ತಾಲಿಬಾನ್‌ ನಾಯಕನನ್ನು ಟೀವಿ ನೇರ ಪ್ರಸಾರದಲ್ಲಿ ಸಂದರ್ಶನ ನಡೆಸಿ ಭಾರೀ ಸುದ್ದಿಯಾಗಿದ್ದ ಮಹಿಳಾ ಪತ್ರಕರ್ತೆ ತಾಲಿಬಾನ್‌ಗೆ ಹೆದರಿ ದೇಶಬಿಟ್ಟು ಪಲಾಯನ ಮಾಡಿದ್ದಾರೆ.

ಟೊಟೊ ನ್ಯೂಸ್‌ ಚಾನಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 24 ವರ್ಷದ ನಿರೂಪಕಿ ಬೆಹೆಸ್ತಾ ಅರ್ಗಂದ್‌ ಹಿರಿಯ ತಾಲಿಬಾನ್‌ ನಾಯಕನೊಬ್ಬನನ್ನು ಆ.17ರಂದು ಸಂದರ್ಶನ ಮಾಡಿದ್ದಳು. ತಾಲಿಬಾನ್‌ ಮುಖಂಡನನ್ನು ಸಂದರ್ಶನ ನಡೆಸಿದ ಮೊದಲ ಮಹಿಳಾ ಪತ್ರಕರ್ತೆ ಎನಿಸಿಕೊಂಡಿದ್ದರು.

ಆದರೆ, ಸಂದರ್ಶನ ಪ್ರಸಾರವಾದ ಕೆಲವೇ ದಿನಗಳಲ್ಲಿ ಬೆಹೆಸ್ತಾ ಅರ್ಗಂದ್‌ ದೇಶವನ್ನು ತೊರೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ದೇಶವನ್ನು ತೊರೆಯುತ್ತಿರುವ ಲಕ್ಷಾಂತರ ಜನರಂತೆ, ನಾನೂ ಕೂಡ ತಾಲಿಬಾನ್‌ ಭಯದಿಂದ ದೇಶವನ್ನು ತೊರೆದಿದ್ದೇನೆ. ಒಂದು ವೇಳೆ ತಾಲಿಬಾನಿಗಳು ತಾವು ಭರವಸೆ ನೀಡಿದಂತೆ ನಡೆದುಕೊಂಡರೆ ಮತ್ತು ದೇಶದಲ್ಲಿ ಪರಿಸ್ಥಿತಿ ಸುಧಾರಿಸಿದರೆ ಪುನಃ ದೇಶಕ್ಕೆ ಮರಳಲು ಬಯಸಿದ್ದೇನೆ’ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!