ಜಿಮ್‌ನಲ್ಲಿ ಬೇರ್‌ಬೆಲ್‌ ಕುಸಿದು ಮಗಳ ಮುಂದೆಯೇ ಮಹಿಳೆ ಸಾವು

Suvarna News   | Asianet News
Published : Feb 24, 2022, 09:46 AM ISTUpdated : Feb 24, 2022, 10:13 AM IST
ಜಿಮ್‌ನಲ್ಲಿ ಬೇರ್‌ಬೆಲ್‌ ಕುಸಿದು ಮಗಳ ಮುಂದೆಯೇ ಮಹಿಳೆ ಸಾವು

ಸಾರಾಂಶ

ಜಿಮ್‌ನಲ್ಲಿ ಭಾರ ಎತ್ತಲು ಹೋಗಿ ಮೆಕ್ಸಿಕನ್‌ ಮಹಿಳೆ ಸಾವು 180 ಕೆಜಿ ತೂಕ ಎತ್ತುವ ವೇಳೆ ಮಹಿಳೆಯ ಮೇಲೆಯೇ ಕುಸಿದ ಬೇರ್‌ಬೆಲ್‌ ಮೆಕ್ಸಿಕೋ ನಗರದ ಜಿಮ್‌ ಒಂದರಲ್ಲಿ ದುರಂತ

ಮೆಕ್ಸಿಕೋ(ಫೆ.24): ಜಿಮ್‌ನಲ್ಲಿ ಬೇರ್‌ಬೆಲ್‌ ಕುಸಿದು ಮಗಳ ಮುಂದೆಯೇ ಮಹಿಳೆ ಸಾವಿಗೀಡಾದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. 180 ಕೆಜಿ ಭಾರದ ತೂಕ ಎತ್ತುವ ವೇಳೆ ಅದು ಮಹಿಳೆಯ ಕುತ್ತಿಗೆ ಮೇಲೆಯೇ ಬಿದ್ದು ಈ ಅನಾಹುತ ಸಂಭವಿಸಿದೆ. ಈ ವೇಳೆ ಸ್ಥಳದಲ್ಲೇ ಮಹಿಳೆಯ ಪುಟ್ಟ ಮಗಳು ಇದ್ದಳು. ಈ ದುರಂತದ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಮೃತಪಟ್ಟವರು ಮೆಕ್ಸಿಕನ್‌ ಮಹಿಳೆಯಾಗಿದ್ದು, ಅವರ ಹೆಸರು ತಿಳಿದು ಬಂದಿಲ್ಲ. ತಮ್ಮ ಪುತ್ರಿಯೊಂದಿಗೆ ಜಿಮ್‌ಗೆ ಬಂದು ವ್ಯಾಯಾಮ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಈ ದುರಂತ ಸಂಭವಿಸುತ್ತಿದ್ದಂತೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ಇತರರೆಲ್ಲರೂ ಸ್ಥಳಕ್ಕೆ ಓಡಿ ಬಂದು ಮಹಿಳೆಯ ರಕ್ಷಣೆಗೆ ಯತ್ನಿಸುತ್ತಾರೆ. ಆದರೆ ಅಷ್ಟರಲ್ಲಾಗಲ್ಲೇ ಅತೀಯಾದ ಭಾರ ಆಕೆಯ ಕುತ್ತಿಗೆಯ ಮೇಲೆ ಬಿದ್ದು ಆಕೆ ಸಾವನ್ನಪ್ಪಿದ್ದರಿಂದ ಯಾರೂ ಏನೂ ಮಾಡಲಾಗಲಿಲ್ಲ. ಎಲ್ಲರೂ ಶಾಕ್‌fಗೆ ಒಳಗಾಗಿದ್ದರೆ ಓರ್ವ ವ್ಯಕ್ತಿ ಆಕೆಯನ್ನು ಎಳೆಯಲೂ ಪ್ರಯತ್ನಿಸುವುದನ್ನು ನೋಡಬಹುದು.

 

ಫೆಬ್ರವರಿ 21ರಂದು ಮೆಕ್ಸಿಕೋ ನಗರದಲ್ಲಿರುವ (Mexico City)  ಜಿಮ್‌ ಫಿಟ್‌ನೆಸ್‌ ಸ್ಪೋರ್ಟ್ಸ್‌ ಜಿಮ್‌ನಲ್ಲಿ ಈ ಘಟನೆ ನಡೆದಿದೆ. ದುರಂತದಲ್ಲಿ ಮೃತಪಟ್ಟ ಮಹಿಳೆಯನ್ನು ಅಂದಾಜು 35 ರಿಂದ 40  ವರ್ಷದ ಮಹಿಳೆ  ಎಂದು ಅಂದಾಜಿಸಲಾಗಿದೆ.ಆಕೆ ಸಾವಿಗೀಡಾಗುವ ಮೊದಲು 180 ಕೆಜಿ ತೂಕ ಎತ್ತಲು ಆಕೆ ಮುಂದಾಗಿದ್ದು, ಇದಕ್ಕೂ ಮೊದಲು ಧಡೂತಿ ದೇಹದ ವ್ಯಕ್ತಿಯೊರ್ವ ಬೇರ್‌ಬೆಲ್‌ನ ತೂಕವನ್ನು ಸರಿ ಹೊಂದಿಸುತ್ತಿರುವುದು ವಿಡಿಯೋದಲ್ಲಿದೆ. ಆದರೆ ಮಹಿಳೆ ಭಾರ ಎತ್ತಲು ತನ್ನ ಕುತ್ತಿಗೆಯನ್ನು ಬೇರ್‌ಬೆಲ್‌ ಕೆಳಭಾಗದಲ್ಲಿ ನುಗ್ಗಿಸಿದ ಕೆಲ ಕ್ಷಣದಲ್ಲೇ ಅದು ಆಕೆಯ ಮೇಲೆ ಬೀಳುತ್ತದೆ. 

2024 ಅಲ್ಲ 2029ಕ್ಕೂ ಫಿಟ್‌ & ಫೈನ್‌.... ಪ್ರಧಾನಿ ಮೋದಿ ಜಿಮ್‌ ಮಾಡುತ್ತಿರುವ ವಿಡಿಯೋ ವೈರಲ್‌

ಈ ವೇಳೆ ವ್ಯಕ್ತಿ ಹಾಗೂ ಬಾಲಕಿ ಆಕೆಯ ಮೇಲೆ ಬಿದ್ದ ಬೇರ್‌ಬೆಲ್‌ ಅನ್ನು ಮೇಲೆ ಎತ್ತಲು ಪ್ರಯತ್ನಿಸುತ್ತಾರೆ. ಆದರೆ ಮೇಲೆತ್ತಲು ಅವರಿಗೆ ಸಾಧ್ಯವಾಗಿಲ್ಲ. ಘಟನೆಯ ಬಳಿಕ ಮಹಿಳೆಯ ಮಗಳು ಶಾಕ್‌ಗೆ ಒಳಗಾಗಿದ್ದು, ಆಕೆಗೆ ಮಾನಸಿಕ ಧೈರ್ಯ ತುಂಬಲಾಗುತ್ತಿದೆ ಎಂದು ತಿಳಿದು ಬಂದಿದೆ. ಮಹಿಳೆಯ ಸಾವು ಎಲ್ಲರಲ್ಲಿ ಧಿಗ್ಭ್ರಮೆ ಮೂಡಿಸಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಲು ರಾಜ್ಯ ನ್ಯಾಯಾಂಗ ಇಲಾಖೆ ಸಮಿತಿ ರಚನೆಗೆ ಮುಂದಾಗಿದೆ. ಘಟನೆಯ ಬಳಿಕ ಜಿಮ್‌ನ ಮಾಲೀಕನನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ. 

Stay Fit: ಜಿಮ್‌ಗೆ ಹೋಗದೆಯೂ ಫಿಟ್ ಆಗಿರ್ಬೋದಾ ? ಏನು ಹೇಳ್ತಾರೆ ಎಕ್ಸ್‌ಪರ್ಟ್ಸ್‌

ಕಳೆದ ವರ್ಷ ಮೇ ತಿಂಗಳಲ್ಲಿ ಕ್ವಿನ್ಸ್‌ ಲ್ಯಾಂಡ್‌ (Queensland) ಮೂಲದ ವ್ಯಕ್ತಿಯೊಬ್ಬರು ಜಿಮ್‌ನಲ್ಲಿ ಇದೇ ರೀತಿ ಭಾರ ಎತ್ತಲು ಹೋಗಿ ಸಾವಿನ ಬಾಗಿಲಿನವರೆಗೆ ಹೋಗಿ ವಾಪಸ್ ಬಂದಿದ್ದರು. ಜೇಸನ್ ಲೇಟ್ (Jason Layt) ಎಂಬುವರು 120kg ತೂಕದ ಬೇರ್‌ಬೆಲ್ ಎತ್ತುವ ವೇಳೆ ಅದು ಕುಸಿದು ಇವರ ಮೇಲೆ ಬಿದ್ದಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿ ಬಂದ ಜಿಮ್‌ನಲ್ಲಿದ್ದ ಇತರರು ಬೇರ್‌ಬೆಲ್‌ ಅನ್ನು ಮೇಲೆತ್ತಿ ಜೇಸನ್ ಲೇಟ್  ಅವರನ್ನು ಅನಾಹುತದಿಂದ ಪಾರು ಮಾಡಿದ್ದರು. ನಂತರ ಈ ಬಗ್ಗೆ ಸ್ಥಳೀಯ ಮಾಧ್ಯಮ ಕೊರಿಯರ್ ಮೈಲ್‌ಗೆ (Courier Mail) ಮಾತನಾಡಿದ ಜೇಸನ್ ಲೇಟ್ ಘಟನೆಯ ಬಳಿಕ ತಾನು ಐದು ಗಂಟೆಗಳ ಕಾಲ ಆಸ್ಪತ್ರೆಯಲ್ಲಿದೆ. ಯಾರೇ ಆದರೂ ತಮ್ಮ ದೇಹದ ಭಾರಕ್ಕಿಂತ ಹೆಚ್ಚಿನ ತೂಕವನ್ನು ಎತ್ತಲು ಪ್ರಯತ್ನಿಸುವಾಗ ಭಾರೀ ಜಾಗರೂಕರಾಗಿರಬೇಕು ಎಂದು ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ