ಇದೊಂದು ಮಾರಕ ಕ್ರಮ, ಒಪ್ಪಿಕೊಳ್ಳೋಕೆ ಸಾಧ್ಯವೇ ಇಲ್ಲ: ಅಮೆರಿಕಕ್ಕೆ ಜೈಶಂಕರ್ ಎಚ್ಚರಿಕೆ

Published : Jun 13, 2026, 07:37 AM IST
Jai Shankar

ಸಾರಾಂಶ

ಒಮಾನ್ ಕೊಲ್ಲಿಯಲ್ಲಿ ಅಮೆರಿಕ ನೌಕಾಪಡೆಯ ದಾಳಿಯಿಂದ ಮೂವರು ಭಾರತೀಯ ನಾವಿಕರು ಮೃತಪಟ್ಟ ಘಟನೆಯನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ತೀವ್ರವಾಗಿ ಖಂಡಿಸಿದ್ದಾರೆ. ವಾಣಿಜ್ಯ ಹಡಗುಗಳ ಮೇಲಿನ ಇಂತಹ ಮಾರಕ ಕ್ರಮಗಳು ಸಮರ್ಥನೀಯವಲ್ಲ ಎಂದು ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರಿಗೆ ತಿಳಿಸಿದ್ದಾರೆ.

ವಾಷಿಂಗ್ಟನ್ ಡಿಸಿ: ಭಾರತದ ವಿದೇಶಾಂಗ ಸಚಿವರಾದ ಎಸ್.ಜೈಶಂಕರ್ ಶುಕ್ರವಾರ ಸಂಜೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರನ್ನು ಭೇಟಿಯಾಗಿ, ಭಾರತದ ಮೂವರು ನಾವಿಕರ ಮೇಲೆ ನಡೆದ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ವಾಣಿಜ್ಯ ಹಡಗುಗಳ ಮೇಲಿನ ಈ ಕ್ರಮ ಒಪ್ಪಿಕೊಳ್ಳುವಂತದಲ್ಲ ಎಂದು ಹೇಳಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಎಸ್‌.ಜೈಶಂಕರ್, ಒಮಾನ್ ಕರಾವಳಿಯಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಯ ವಿರುದ್ಧ ಚರ್ಚೆ ನಡೆಸಲು ಎರಡನೇ ಬಾರಿಗೆ ಅಮೆರಿಕದ ರಾಜತಾಂತ್ರಿಕರೊಂದಿಗೆ ಸಭೆ ನಡೆಸಿತ್ತು. ಈ ಸಭೆಯಲ್ಲಿ ಅಮೆರಿಕದ ಜೇಸನ್ ಮೀಕ್ಸ್ ಭಾಗಿಯಾಗಿದ್ದು, ವಾಣಿಜ್ಯ ಹಡಗುಗಳ ಮೇಲಿನ ದಾಳಿ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ.

ಇಂದು ಸಂಜೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ಮಾತನಾಡಿದೆ. ಕೊಲ್ಲಿಯಲ್ಲಿ ಮೂವರು ಭಾರತೀಯ ನಾವಿಕರನ್ನು ಕೊಂದ ಅಮೆರಿಕ ನೌಕಾಪಡೆಯ ದಾಳಿಯನ್ನು ಭಾರತದ ಪರವಾಗಿ ಖಂಡಿಸಲಾಯ್ತು. ವಾಣಿಜ್ಯ ಹಡಗು ಸಾಗಣೆಯ ವಿರುದ್ಧ ಇಂತಹ ಮಾರಕ ಕ್ರಮಗಳು ಸಮರ್ಥನೀಯವಲ್ಲ ಎಂದು ಜೈಶಂಕರ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಓಮನ್ ಕೊಲ್ಲಿಯಲ್ಲಿ ಭಾರತೀಯ ನಾವಿಕರು ಸಾಗಿಸುತ್ತಿದ್ದ ವಾಣಿಜ್ಯ ಹಡಗುಗಳ ಮೇಲೆ ಅಮೆರಿಕದ ನೌಕಾ ಪಡೆಗಳು ನಡೆಸುತ್ತಿರುವ ನಿರಂತರ ದಾಳಿಗಳ ಬಗ್ಗೆ ಅಮೆರಿಕದ ಸಿಡಿಎನಲ್ಲಿ ಖಂಡಿಸಲಾಗಿತ್ತು.

ಭಾರತೀಯ ನೌಕೆ ಮೇಲೆ ದಾಳಿ ಮಾಡಿದ್ದು ಇರಾನ್‌: ಟ್ರಂಪ್‌ ಕಿಡಿ

ವಾಷಿಂಗ್ಟನ್‌: ಇತ್ತೀಚೆಗೆ 3 ನಾವಿಕರನ್ನು ಬಲಿ ಪಡೆದ ಭಾರತೀಯ ಹಡಗಿನ ಮೇಲೆ ನಡೆದ ದಾಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಇರಾನ್‌ ಅನ್ನು ಹೊಣೆಯಾಗಿಸಿದ್ದಾರೆ. ಅತ್ತ ಇರಾನ್‌ ಈ ಕೃತ್ಯಕ್ಕೆ ಅಮೆರಿಕವೇ ಕಾರಣ ಎಂದು ಆಪಾದಿಸಿದ್ದು, ಜಾಗತಿಕ ಶಾಂತಿಗೆ ಅಮೆರಿಕ ಧಕ್ಕೆ ತರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಶುಕ್ರವಾರ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್, ‘ಹೋರ್ಮುಜ್ ಜಲಸಂಧಿಯನ್ನು ಬಿಡುತ್ತಿರುವ ಭಾರತೀಯ ಹಡಗುಗಳ ಮೇಲೆ ನಿನ್ನೆ ರಾತ್ರಿ ನಡೆದ ಡ್ರೋನ್ ದಾಳಿಯನ್ನು ಅವರು (ಇರಾನ್) ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಇದನ್ನು ಸ್ವೀಕಾರಾರ್ಹವಲ್ಲ’ ಎಂದು ಕಿಡಿ ಕಾರಿದ್ದಾರೆ.

ಅತ್ತ ಟ್ವೀಟ್‌ ಮಾಡಿರುವ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್‌ ಬಖೈ, ‘ಭಾರತೀಯ ಹಡಗಿನ ಮೇಲಿನ ದಾಳಿಗೆ ಅಮೆರಿಕವೇ ಹೊಣೆ. ಅದು ಜಾಗತಿಕ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯನ್ನುಂಟುಮಾಡುತ್ತಲೇ ಇದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಾರದಲ್ಲಿ 3 ಭಾರತೀಯ ಹಡಗುಗಳ ಮೇಲೆ ದಾಳಿ ನಡೆದಿದ್ದು, ಮೂವರು ನಾವಿಕರು ಬಲಿಯಾಗಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಳಚಿತು ರಾಜಮನೆತನದ ಕೊಂಡಿ: ಮೂರು ವರ್ಷಗಳಿಂದ ಕೋಮಾದಲ್ಲಿದ್ದ ರಾಜಕುಮಾರಿ ಇನ್ನಿಲ್ಲ
Baby Elephant: ಹುಟ್ಟಿದ ಎರಡೇ ದಿನಕ್ಕೆ ಫುಟ್ಬಾಲ್ ಆಟ: 2026ರ ವರ್ಲ್ಡ್‌ಕಪ್‌ಗೆ ಈ ಆನೆಮರಿ ರೆಡಿ!