ಯಾವುದೇ ಅಪರಾಧ ಪ್ರಕರಣದ ತನಿಖೆ ನ್ಯಾಯವಾಗಿ ನಡೆಯಬೇಕು. ಇಲ್ಲ ಅಂದ್ರೆ ನಿರಪರಾಧಿಗಳಿಗೆ ಶಿಕ್ಷೆ ಆಗುತ್ತದೆ. ಅಮೆರಿಕಾದ ವ್ಯಕ್ತಿಯೊಬ್ಬ ಮಾಡದ ತಪ್ಪಿಗೆ ನರಕ ಅನುಭವಿಸಿ ಬಂದಿದ್ದಾನೆ. ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.
ನಾಲ್ಕು ಗೋಡೆಯ ಮಧ್ಯೆ ಅಮೂಲ್ಯ ದಿನಗಳು ಕಳೆದು ಹೋದ್ರೆ ಬದುಕಿದ್ದು ಸತ್ತಂತೆ. ಹಣ ಎಷ್ಟೇ ನೀಡಿದ್ರೂ ಸಮಯ ಮತ್ತೆ ಸಿಗೋಕೆ ಸಾಧ್ಯವಿಲ್ಲ. ಹದಿನೆಂಟರ ಹರೆಯದಲ್ಲಿ ರಕ್ತ ಬಿಸಿ ಇರುತ್ತೆ. ಉಜ್ವಲ ಭವಿಷ್ಯದ ಕನಸು ಕಾಣುವ ವಯಸ್ಸು ಅದು. ಆ ಸಂದರ್ಭದಲ್ಲಿ ನಿಮ್ಮನ್ನು ಮಾಡದ ತಪ್ಪಿಗೆ ಜೈಲಿಗೆ ಹಾಕಿದ್ರೆ ಏನಾಗಬೇಡ. ಒಂದೋ ಎರಡೂ ವರ್ಷವಲ್ಲ ನಿರಪರಾಧಿಯಾದ್ರೂ ನೀವು ಜೀವನದ ಅಗತ್ಯ ದಿನಗಳಾದ 37 ವರ್ಷಗಳನ್ನು ಜೈಲಿನಲ್ಲಿ ಕಳೆಯುವ ಸ್ಥಿತಿ ಬಂದ್ರೆ ಅದರ ನೋವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ತನ್ನದಲ್ಲದ ತಪ್ಪಿಗೆ ಸತ್ತಾಗ, ಆತನ ಸಾವಿಗೆ ಪರಿಹಾರ ಎನ್ನುವಂತೆ ಒಂದಿಷ್ಟು ಹಣ ನೀಡಿದ್ರೆ ಹೇಗೆ ಸತ್ತ ವ್ಯಕ್ತಿ ಬರಲು ಸಾಧ್ಯವಿಲ್ಲವೋ ಅದೇ ರೀತಿ ನಿರಪರಾಧಿಯಾಗಿ ಜೈಲಿನಲ್ಲಿ ಕಳೆದ ಸಮಯಕ್ಕೆ ಹಣ ನೀಡಿದ್ರೆ ಪ್ರಯೋಜನ ಶೂನ್ಯ. ಈಗ ನಾವು ಹೇಳ ಹೊರಟಿರುವ ವ್ಯಕ್ತಿ ಕೂಡ ಇಂಥ ಶಿಕ್ಷೆ ಅನುಭವಿಸಿದ್ದಾನೆ. 37 ವರ್ಷ ಆತನನ್ನು ಜೈಲಿನಲ್ಲಿ ಕೂಡಿ ಹಾಕಿ, ಈಗ ನಿರಪರಾಧಿ ಎನ್ನುತ್ತ ಅವನನ್ನು ಬಿಡುಗಡೆ ಮಾಡಿದ ಕೋರ್ಟ್, ಹಣವನ್ನು ನೀಡಿದೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿ ಕೊನೆಗೂ ಹೊರಗೆ ಬಂದನಲ್ಲ ಎನ್ನುವ ಖುಷಿಯಲ್ಲಿದ್ದಾನೆ.
ಘಟನೆ ಅಮೆರಿಕ (America) ದ ಫ್ಲೋರಿಡಾದಲ್ಲಿ ನಡೆದಿದೆ. 1983 ರಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ರಾಬರ್ಟ್ (Robert) ಡುಬೊಯಿಸ್ ಗೆ ಶಿಕ್ಷೆಯಾಗಿತ್ತು. 18 ನೇ ವಯಸ್ಸಿನಲ್ಲಿ ರಾಬರ್ಟ್ ಡುಬೊಯಿಸ್ ಗೆ ಮರಣದಂಡನೆ (Deathsentence) ಶಿಕ್ಷೆ ವಿಧಿಸಲಾಗಿತ್ತು. 19 ವರ್ಷದ ಬಾರ್ಬರಾ ಗ್ರಾಂಸ್ ಅವರ ಕೊಲೆ ಆರೋಪದ ಮೇಲೆ ಈ ಶಿಕ್ಷೆ ವಿಧಿಸಲಾಗಿತ್ತು. ನಂತ್ರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಬದಲಿಸಲಾಗಿತ್ತು. ತನ್ನ ಹದಿನೆಂಟನೇ ವಯಸ್ಸಿನಲ್ಲಿ ಜೈಲು ಸೇರಿದ್ದ ರಾಬರ್ಟ್ ಗೆ ಈಗ 59 ವರ್ಷ.
ಅಂಬರೀಷ್‌ಗಾಗಿ ಮನೆಯಲ್ಲಿ ಬಾರ್ ಓಪನ್ ಮಾಡಿದ್ರು ವಿಷ್ಣುವರ್ಧನ್; ದಿಗ್ಗಜರ ದರ್ಬಾರ್ ಹೇಗಿತ್ತು ನೋಡ್ರಿ!
ವಾಸ್ತವವಾಗಿ ರಾಬರ್ಟ್ ಯಾವುದೇ ತಪ್ಪು ಮಾಡಿರಲಿಲ್ಲ. ಬೇರೆ ಇಬ್ಬರು ಅಪರಾಧ ಮಾಡಿದ್ದಾರೆ ಎಂಬುದು ಸಾಭೀತಾಗಿತ್ತು. ಈ ವಿಷ್ಯ ಬಹಿರಂಗವಾದ್ಮೇಲೆ 2020ರಲ್ಲಿ ರಾಬರ್ಟ್ ನನ್ನು ಬಿಡಲಾಗಿತ್ತು. ಇದರ ನಂತರ, ರಾಬರ್ಟ್ ತನಿಖಾಧಿಕಾರಿಗಳು ಮತ್ತು ಪ್ರಕರಣವನ್ನು ತನಿಖೆ ಮಾಡಿದ ಫೋರೆನ್ಸಿಕ್ ದಂತವೈದ್ಯರ ವಿರುದ್ಧ ಮೊಕದ್ದಮೆ ಹೂಡಿದ್ದ. ಬಲಿಪಶುವಿನ ದೇಹದಲ್ಲಿ ಕಂಡುಬಂದ ಕಚ್ಚಿದ ಗುರುತುಗಳು ರಾಬರ್ಟ್‌ನ ಕಚ್ಚುವಿಕೆಯ ಗುರುತುಗಳಿಗೆ ಹೊಂದಿಕೆಯಾಗುತ್ತವೆ ಎಂದು ವಿಧಿವಿಜ್ಞಾನ ದಂತವೈದ್ಯರು ಹೇಳಿದ್ದರು.
1980 ರ ದಶಕದಲ್ಲಿ ಡಿಎನ್ಎ ಪರೀಕ್ಷೆ ಲಭ್ಯವಿರಲಿಲ್ಲ. ಆಗಸ್ಟ್ 1983 ರಲ್ಲಿ, ಬಾರ್ಬರಾ ಗ್ರಾಂಸ್ ಎಂಬ ಹುಡುಗಿಯ ಮೇಲೆ ಅತ್ಯಾಚಾರ ನಡೆದಿತ್ತು. ನಂತ್ರ ಆಕೆಯನ್ನು ಹೊಡೆದು ಹತ್ಯೆ ಮಾಡಲಾಗಿತ್ತು. ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡ್ತಿದ್ದ ಆಕೆ ಮನೆಗೆ ವಾಪಸ್ ಹೋಗುವ ಸಮಯದಲ್ಲಿ ಈ ಘಟನೆ ನಡೆದಿತ್ತು. ಆಕೆ ದೇಹದ ಮೇಲೆ ಕಚ್ಚಿದ ಗುರುತಿತ್ತು. ಪರೀಕ್ಷೆಗೆ ಅನೇಕ ಪುರುಷರ ಕಚ್ಚಿದ ಗುರುತನ್ನು ಪಡೆಯಲಾಗಿತ್ತು. ರಾಬರ್ಟ್ ಗೆ ಗ್ರಾಂಸ್ ಗೊತ್ತಿರಲಿಲ್ಲ. ಆತ ಈ ದಾರಿಯಲ್ಲಿ ಓಡಾಟ ನಡೆಸುತ್ತಿದ್ದ. ಆದ್ರೆ ಆತನ ಕಚ್ಚಿದ ಗುರುತು ಹೊಂದಿಕೆಯಾಗುತ್ತದೆ ಎಂದು ದಂತವೈದ್ಯರು ವರದಿ ನೀಡಿದ್ದರು.
ರೇಷ್ಮೆ ಸೀರೆಯುಟ್ಟು ಮಲ್ಲಿಗೆ ಮುಡಿದು 'ನಾನು ಕುಡ್ಲದ ಪೊಣ್ಣು' ಎಂದ ಪೂಜಾ ಹೆಗ್ಡೆ, ಕರಾವಳಿ ಬೆಡಗಿ ಲುಕ್‌ಗೆ ಫ್ಯಾನ್ಸ್ ಫಿದಾ
ಈಗ ದಂತವೈದ್ಯರ ತಪ್ಪು ಹೊರಬಿದ್ದಿದೆ. ಕೋರ್ಟ್ ಪ್ರಕರಣವನ್ನು ಇತ್ಯರ್ಥಗೊಳಿಸಿ, ಪರಿಹಾರ ರೂಪದಲ್ಲಿ ಹಣ ನೀಡುವ ಸೂಚನೆ ನೀಡಿದೆ. ರಾಬರ್ಟ್ ಗೆ 14 ಮಿಲಿಯನ್ ಡಾಲರ್ ಸುಮಾರು 116 ಕೋಟಿ ರೂಪಾಯಿ ಪರಿಹಾರ ಸಿಗಲಿದೆ. ಈ ಹಣ ರಾಬರ್ಟ್ ನಿವೃತ್ತಿ ಜೀವನಕ್ಕೆ ನೆರವಾಗಬಹುದು. ಆದ್ರೆ ವಯಸ್ಸು ಮಾತ್ರ ಮರಳಿ ಬರೋದಿಲ್ಲ.