ತುಂಡು ಬಟ್ಟೆಯನ್ನು ಧರಿಸದೇ ಸಂಪೂರ್ಣ ಬೆತ್ತಲಾಗಿ ಮನೆ ಕಳ್ಳತನಕ್ಕೆ ಇಳಿದ 2 ಮಕ್ಕಳ ತಾಯಿ

By Suvarna NewsFirst Published May 10, 2024, 4:18 PM IST
Highlights

ಅಮೆರಿಕಾದ ಫ್ಲೋರಿಡಾದಲ್ಲಿ,  ಪಕ್ಕದ ಮನೆಗೆ ಬೆತ್ತಲಾಗಿ ಹೋಗಿ ಕನ್ನ ಹಾಕಿದ ಕಾರಣಕ್ಕೆ ಈಗ ಪೊಲೀಸರು 24 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಹ್ಯಾಲೇ ಬ್ಲಂಟ್ ಎಂದು ಗುರುತಿಸಲಾಗಿದೆ.

ಅಮೆರಿಕಾ: ಸಾಮಾನ್ಯವಾಗಿ ಕಳ್ಳರು ಕಳ್ಳತನಕ್ಕೆ ಹೋಗುವಾಗ ಹೇಗೆ ಸುಲಭವಾಗಿ ತಪ್ಪಿಸಿಕೊಂಡು ಓಡಿ ಹೋಗಬಹುದು ಎಂದು ಯೋಚನೆ ಮಾಡುತ್ತಾರೆ. ಮತ್ತೆ ಕೆಲವರು ಸಿಕ್ಕಿಬಿದ್ದರೂ ತಪ್ಪಿಸಿಕೊಂಡು ಓಡುವುದಕ್ಕೆ ಸಹಾಯವಾಗುವಂತೆ ಮೈಗೆ ಎಣ್ಣೆ ಉಜ್ಜಿಕೊಂಡು ಹೋಗಿರುತ್ತಾರೆ. ಆದರೆ ಇಲ್ಲೊಂದು ಕಡೆ ಮಹಿಳೆ ಸಂಪೂರ್ಣ ಬೆತ್ತಲಾಗಿ ಕಳ್ಳತನಕ್ಕೆ ಹೋಗಿದ್ದು, ಬರೀ ಇಷ್ಟೇ ಅಲ್ಲ, ಅಲ್ಲಿ ಪೊಲೀಸರಿಗೆ ಬೆತ್ತಲಾಗೇ ಸಿಕ್ಕಿಬಿದ್ದಿದ್ದಾಳೆ. 

ಅಂದಹಾಗೆ ಈ ವಿಚಿತ್ರ ಘಟನೆ ನಡೆದಿರುವುದ ಅಮೆರಿಕಾದ ಫ್ಲೋರಿಡಾದಲ್ಲಿ,  ಪಕ್ಕದ ಮನೆಗೆ ಬೆತ್ತಲಾಗಿ ಹೋಗಿ ಕನ್ನ ಹಾಕಿದ ಕಾರಣಕ್ಕೆ ಈಗ ಪೊಲೀಸರು 24 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಹ್ಯಾಲೇ ಬ್ಲಂಟ್ ಎಂದು ಗುರುತಿಸಲಾಗಿದೆ. ನಾರ್ತ್‌ವೆಸ್ಟ್ ಹಂಟ್ಸ್ಬೊರ್ ಪ್ರದೇಶದ ಲೇಕ್ ಸಿಟಿ ಹೋಮ್‌ನಲ್ಲಿ ಮೇ.1 ರಾತ್ರಿ 12 ಗಂಟೆ ಸುಮಾರಿಗೆ ಈ ಕಳ್ಳತನ ನಡೆದಿದೆ. ಮನೆಗೆ ಕಳ್ಳ ಬಂಧಿರುವ ಬಗ್ಗೆ ಮನೆ ಮಾಲೀಕ 911 ತುರ್ತು ಸಂಖ್ಯೆಗೆ ಕರೆ ಮಾಡಿ ತಿಳಿಸಿದ್ದಾನೆ. ಮನೆ ಬಾಗಿಲನ್ನು ಯಾರೋ ಬಡಿದಂತಾದ ಹಿನ್ನೆಲೆ ಬಾಗಿಲ ಬಳಿ ಹೋದಾಗ ಅಲ್ಲಿ ನಮಗೆ ಏನೂ ಕೇಳಿಸಿಲ್ಲ ಎಂದು ಮನೆ ಮಾಲೀಕ ಪೊಲೀಸರಿಗೆ ತಿಳಿಸಿದ್ದಾನೆ. ನಂತರ ಹೀಗೆ ಮನೆ ಬಾಗಿಲು ಬಿಡಿದಿದ್ದು, ಕಳ್ಳ ಅಲ್ಲ ಕಳ್ಳಿ ಎಂಬುದನ್ನು ಪತ್ತೆ ಮಾಡಿದ್ದಾರೆ. 

ಮಾಜಿ ಮೇಯರ್ ಮನೆಯಲ್ಲಿ ಕೆಜಿಗೂ ಹೆಚ್ಚು ಚಿನ್ನಾಭರಣ, ನಗದು ದೋಚಿ ಸೆಕ್ಯೂರಿಟಿ ಗಾರ್ಡ್ ಎಸ್ಕೇಪ್

ಮನೆಯೊಂದಕ್ಕೆ ಬೆತ್ತಲಾಗಿ ಹೋದ ಬ್ಯಾಲೆ ಬ್ಲಂಟ್ ಅಲ್ಲಿ ಸ್ಲೈಡ್‌ಗಳ ಗಾಜಿನ ಬಾಗಿಲುಗಳಿಗೆ ಬಡಿದ್ದು ನಾಕ್ ಮಾಡಿದ್ದಾಳೆ. ಆದರೆ ಮನೆ ಮಾಲೀಕ ಯಾರು ಎಂದು ಕೇಳಿದರೆ ಆ ಕಡೆಯಿಂದ ಉತ್ತರ ಬಂದಿಲ್ಲ. ಬಳಿಕ ಮನೆ ಮಾಲೀಕ ಸುಮ್ಮನಾಗಿದ್ದರೆ, ಇತ್ತ ಮಹಿಳೆ ಕಿಟಕಿ ಒಡೆದು ಮನೆ ನುಗ್ಗಿದ್ದಾಳೆ. ಇತ್ತ ಹೆದರಿದ ಮನೆ ಮಂದಿ ಮನೆ  ಮುಂದಿನ ಯಾರ್ಡ್ ಮೂಲಕ ಹೊರ ಹೋಗಲು ಮುಂದಾಗಿದ್ದರೆ ಇತ್ತ ಅದೇ ವೇಳೆ ಕಳ್ಳತನದ ವಿಚಾರ ತಿಳಿದು ಪೊಲೀಸರು ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಕಳ್ಳಿ ಸಂಪೂರ್ಣ ಬೆತ್ತಲೆ ಸ್ಥಿತಿಯಲ್ಲಿ ರಕ್ತ ಸೋರುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕಿಟಕಿ ಗಾಜು ಒಡೆದು ಒಳ ಹೋಗಲು ಪ್ರಯತ್ನಿಸಿದ್ದರಿಂದ ಆಕೆ ಗಾಯಗೊಂಡಿದ್ದಳು. 

ನಂತರ ಆಕೆಯನ್ನು ಬಂಧಿಸಿ ಕರೆದುಕೊಂಡು ಬಂದ ಪೊಲೀಸರು ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಆಕೆಯ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಿದ್ದಾರೆ. ಬಳಿಕ ಆಕೆಯನ್ನು ಕೊಲಂಬಿಯಾದ ಕಂಟ್ರಿ ಜೈಲಿಗೆ ಕಳುಹಿಸಿದ್ದಾರೆ. ವಿಚಾರಣೆ ವೇಳೆ ಈಕೆಗೆ ಇಬ್ಬರು ಮಕ್ಕಳಿದ್ದು, ಮಕ್ಕಳಿಬ್ಬರನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು ಈಕೆ ಕಳ್ಳತನದ ಕೆಲಸಕ್ಕೆ ಇಳಿದಿದ್ದಳು ಎಂದು ತಿಳಿದು ಬಂದಿದೆ. ಬಳಿಕ ಪೊಲೀಸರು ಆಕೆಯ ಮನೆಗೆ ಹೋಗಿ ನೋಡಿದಾಗ ಮಕ್ಕಳು ಸುರಕ್ಷಿತವಾಗಿರುವುದು ತಿಳಿದು ಬಂದಿದೆ. ಹೀಗಾಗಿ ಈಕೆಯ ವಿರುದ್ಧ ಕಳ್ಳತನದ ಜೊತೆ ಮಕ್ಕಳ ನಿರ್ಲಕ್ಷ್ಯ ಮಾಡಿದ ಪ್ರಕರಣವೂ ದಾಖಲಾಗಿದೆ.

ಬೆಂಗಳೂರು: ಬಸ್ಸಲ್ಲಿ ಮೊಬೈಲ್‌ ಕದಿಯುತ್ತಿದ್ದ ಗೋಕವರಂ ಗ್ಯಾಂಗ್‌ ಬಲೆಗೆ

click me!