
ಲಂಡನ್(ಏ11): ಎರಡನೇ ಜಾಗತಿಕ ಮಹಾಯುದ್ಧದಲ್ಲಿ ಹೋರಾಡಿದ್ದ 99 ವರ್ಷದ ವೃದ್ಧ ಕೊರೋನಾ ವೈರಸ್ ವಿರುದ್ಧ ಹೋರಾಡಿ ಗೆದ್ದಿರುವ ಘಟನೆ ಲಂಡನ್‌ನಲ್ಲಿ ನಡೆದಿದೆ. ಕೊರೋನಾ ಸೋಂಕಿತರಾಗಿದ್ದ 99 ವರ್ಷದ ವೃದ್ಧ ಆರೋಗ್ಯವಾಗಿ ಮನೆಗೆ ಮರಳಿದ್ದಾರೆ.
ಜುಲೈನಲ್ಲಿ ತಮ್ಮ 100ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳಲಿರುವ ಆಲ್ಬರ್ಟ್ ಚೇಂಬರ್ಸ್ ಮೂರು ವಾರಗಳ ಹಿಂದೆ ಸೌತ್ ಯಾಕ್‌ಶೈರ್‌ನ ಡಾನ್‌ಕಾಸ್ಟರ್‌ನಲ್ಲಿರುವ ಟಖಿಲ್ ರೋಡ್ ಆಸ್ಪತ್ರೆಗೆ ದಾಖಲಾಗಿದ್ದರು. ಬಿದ್ದು ಮಣಿಕಟ್ಟಿಗೆ ಗಾಯವಾಗಿ ಆಲ್ಬರ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಆಸ್ಪತ್ರೆಯಲ್ಲಿ ಕೊರೋನಾ ಲಕ್ಷಣಗಳು ಕಾಣಿಕೊಂಡಿತ್ತು. ಪರೀಕ್ಷೆಯ ನಂತರ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು.
ಚಿಕ್ಕಬಳ್ಳಾಪುರದಲ್ಲೂ ಸೀಲ್‌ಡೌನ್: ಸಾರ್ವಜನಿಕರಿಂದ ಉತ್ತಮ ಸ್ಪಂದನೆ
ಏ.10 ಶುಕ್ರವಾರದಂದು ಆಲ್ಬರ್ಟ್ ಸಂಪೂರ್ಣ ಗುಣಮುಖರಾಗಿದ್ದಾರೆ.ಯಾಕ್‌ಶೈರ್‌ನ ಹೆಲ್ತ್ ಟ್ರಸ್ಟ್ ಈ ಬಗ್ಗೆ ಒಂದು ವಿಡಿಯೋ ಬಿಡುಗಡೆ ಮಾಡಿದೆ. ಆಸ್ಪತ್ರೆಯ ನರ್ಸ್‌ಗಳು ಜಾಗತಿಕ ಮಹಾಯುದ್ಧದಲ್ಲಿ ಹೋರಾಡಿ ಗಾಯಗೊಂಡ, ಮುರು ವರ್ಷ ಜರ್ಮನಿಯ ಕಾರಾಗೃಹದಲ್ಲಿ ಬಂಧಿತರಾಗಿದ್ದ ಆಲ್ಬರ್ಟ್‌ಗೆ ಗೌರವ ಸಲ್ಲಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಲಾಕ್‌ಡೌನ್‌ಗಿಂತ ಸೀಲ್‌ಡೌನ್ ಫುಲ್ ಸ್ಟ್ರಿಕ್ಟ್: ಜನ ಹೊರಗಡೆ ಬರೋದೆ ಕಷ್ಟ ಕಷ್ಟ!
ಡಾನ್‌ಕಾಸ್ಟರ್‌ನಿಂದ ಇಂದು ಸಂಜೆ ಒಂದು ಸಿಹಿ ಸುದ್ದಿ ಸಿಗಲಿದೆ. ಎರಡನೇ ಜಾಗತಿಕ ಮಹಾಯುದ್ಧದಲ್ಲಿ ಭಾಗವಹಿಸಿದ ಹಾಗೂ ಜುಲೈನಲ್ಲಿ 100 ವರ್ಷದ ಪೂರ್ತಿಗೊಳಿಸಲಿರುವ ಹಿರಿಯ ಆಲ್ಬರ್ಟ್ ಚೇಂಬರ್ ಅವರು ಕೊರೋನಾ ವೈರಸ್ ವಿರುದ್ಧ ಹೋರಾಡಿ ಗೆದ್ದಿದ್ದಾರೆ.
ಅವರನ್ನು ಆಸ್ಪತ್ರೆಯ ಸಿಬ್ಬಂದಿ ಗೌರವಿಸಿದ್ದಾರೆ ಎಂದು ಟ್ವೀಟ್ ಮಾಡಲಾಗಿದೆ. ನನ್ನ ಅಜ್ಜ ಅದ್ಭುತ. ಅವರು ಯುದ್ಧದಲ್ಲಿ ಮಾತ್ರ ಹೋರಾಡಿದ್ದಲ್ಲ, ಕೊರೋನಾ ವಿರುದ್ಧವೂ ಹೋರಾಡಿ ಗೆದ್ದರು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ