ಬ್ರಿಟೀಷ್ ಇತಿಹಾಸದಲ್ಲಿ 950 ವರ್ಷದ ಹಿಂದಿನ ಅತಿದೊಡ್ಡ ನಿಧಿ ಪತ್ತೆ!

By Sathish Kumar KH  |  First Published Nov 13, 2024, 6:12 PM IST

ಬ್ರಿಟಿಷ್ ಇತಿಹಾಸದಲ್ಲಿ 950 ವರ್ಷ ಹಳೆಯ ಹಾಗೂ ಅತೀದೊಡ್ಡ ನಿಧಿ ಲಭ್ಯವಾಗಿದ್ದು, ಇವು ಅಪರೂಪದ ನಾಣ್ಯಗಳಾಗಿವೆ ಎಂದು ಯುಕೆ ತಿಳಿಸಿದೆ. ಇದೇ ನವೆಂಬರ್‌ನಿಂದ ಸಾರ್ವಜನಿಕ ಪ್ರದರ್ಶನಕ್ಕೆ ಈ ನಾಣ್ಯಗಳು ಲಭ್ಯವಾಗಲಿವೆ.


ಬ್ರಿಟಿಷ್ ಇತಿಹಾಸದಲ್ಲಿ ಸಿಕ್ಕ ಅತಿದೊಡ್ಡ ನಿಧಿಯಲ್ಲಿ 2,584 ಬೆಳ್ಳಿ ನಾಣ್ಯಗಳಿವೆ. ಅದೂ 950 ವರ್ಷ ಹಳೆಯ ಅಪರೂಪದ ನಾಣ್ಯಗಳು. ಇಂಗ್ಲೆಂಡ್‌ನ ಸೋಮರ್‌ಸೆಟ್‌ನ ಚ್ಯೂ ಕಣಿವೆಯಲ್ಲಿ ನಿಧಿ ಶೋಧಕರು ಮೆಟಲ್ ಡಿಟೆಕ್ಟರ್ ಹಿಡಿದು ನಡೆಯುವಾಗ ಈ ನಿಧಿಯನ್ನು ಪತ್ತೆ ಹಚ್ಚಿದ್ದಾರೆ.

ಈ ನಿಧಿಯನ್ನು ಸೌತ್ ವೆಸ್ಟ್ ಹೆರಿಟೇಜ್ ನಾಲ್ವತ್ತಾರು ಕೋಟಿ ಇಪ್ಪತ್ನಾಲ್ಕು ಲಕ್ಷ ರೂಪಾಯಿಗೆ (46.24 ಕೋಟಿ ರೂ.)  ಖರೀದಿಸಿದೆ. ಇಂಗ್ಲೆಂಡ್‌ನ ನಾರ್ಮನ್ ಆಕ್ರಮಣ ಕಾಲದ ನಾಣ್ಯಗಳಿವು. ಹೇಸ್ಟಿಂಗ್ಸ್ ಯುದ್ಧದಲ್ಲಿ ಗೆದ್ದು ಇಂಗ್ಲೆಂಡ್‌ನಲ್ಲಿ ನಾರ್ಮನ್ ಆಳ್ವಿಕೆ ಸ್ಥಾಪಿಸಿದ ಇಂಗ್ಲೆಂಡ್‌ನ ಕೊನೆಯ ರಾಜ ಹರೋಲ್ಡ್ II ಮತ್ತು ವಿಲಿಯಂ Iರ ಚಿತ್ರಗಳನ್ನು ಹೊಂದಿರುವ ನಾಣ್ಯಗಳೂ ಇವೆ. ಇಂಗ್ಲಿಷ್ ಇತಿಹಾಸದ ಮಹತ್ವದ ಈ ನಾಣ್ಯಗಳು ಇದೇ ನವೆಂಬರ್‌ನಿಂದ ಯುಕೆಯಾದ್ಯಂತ ವಸ್ತುಸಂಗ್ರಹಾಲಯಗಳಲ್ಲಿ ಪ್ರದರ್ಶನಗೊಳ್ಳಲಿವೆ. 

Latest Videos

undefined

ಈ ನಾಣ್ಯಗಳನ್ನು ಭೂಮಿಯಲ್ಲಿ ಕ್ರಿ.ಶ. 1022 ಮತ್ತು 1068ರ ನಡುವೆ ಹೂಳಲಾಗಿದೆಯೆಂದು ಅಂದಾಜಿಸಲಾಗಿದೆ. ಈ ನಾಣ್ಯಗಳು ವಿಲಿಯಂ ದಿ ಕಾಂಕರರ್ ನೇತೃತ್ವದ ಆಕ್ರಮಣದ ನಂತರ ಸ್ಯಾಕ್ಸನ್ ಆಳ್ವಿಕೆಯಿಂದ ನಾರ್ಮನ್ ಆಳ್ವಿಕೆಗೆ ಬ್ರಿಟನ್‌ನ ಪರಿವರ್ತನೆಯ ಆರಂಭಿಕ ಪುರಾವೆಗಳಾಗಿವೆ. ಈ ಸಮಯದಲ್ಲಿ ನಡೆದ ದಂಗೆಯ ಸಮಯದಲ್ಲಿ ಸುರಕ್ಷತೆಗಾಗಿ ಈ ನಾಣ್ಯಗಳನ್ನು ಹೂಳಿರಬಹುದೆಂದು ಊಹಿಸಲಾಗಿದೆ. ಯುಕೆ 7 ಹವ್ಯಾಸಿ ನಿಧಿ ಶೋಧಕರು ಈ ಅಮೂಲ್ಯ ನಿಧಿಯನ್ನು ಪತ್ತೆ ಹಚ್ಚಿದ್ದಾರೆ. ಯುರೋಪ್ ಮತ್ತು ಇಂಗ್ಲೆಂಡ್‌ನಲ್ಲಿ ಆಧುನಿಕ ಲೋಹ ಪತ್ತೆ ತಂತ್ರಜ್ಞಾನವನ್ನು ಬಳಸುವ ಹವ್ಯಾಸಿ ನಿಧಿ ಬೇಟೆಗಾರರ ಸಂಖ್ಯೆ ಹೆಚ್ಚುತ್ತಿದೆ.

ಇದನ್ನೂ ಓದಿ: ನಿಧಿ ಶೋಧಕರಿಗೆ ಬೆಟ್ಟದಲ್ಲಿ 1000 ವರ್ಷ ಹಳೆಯ ಚಿನ್ನದ ನಾಣ್ಯ ಸಿಕ್ಕಿದೆ!

950-year-old coins unearthed by treasure hunters are U.K.’s highest-value find

The coins, which date from 1066 to 1068, were found in the Chew Valley in England. They were purchased by the South West Heritage Trust for £4.3 million ($5.6 million). https://t.co/3Q7MJEtPig

— The Washington Post (@washingtonpost)

2019ರಲ್ಲಿ ಈ ನಿಧಿ ಪತ್ತೆಯಾಗಿದ್ದರೂ, ಈಗ ಮಾರಾಟ ಸಾಧ್ಯವಾಯಿತು ಎಂದು ವರದಿಗಳು ಹೇಳುತ್ತವೆ. ರಾಷ್ಟ್ರೀಯ ಲಾಟರಿ ಹೆರಿಟೇಜ್ ನಿಧಿ ಸೇರಿದಂತೆ ಹಲವು ಸಂಸ್ಥೆಗಳಿಂದ ಹಣ ಸಂಗ್ರಹಿಸಿ ಸೌತ್ ವೆಸ್ಟ್ ಹೆರಿಟೇಜ್ ಈ ಅಪರೂಪದ ನಿಧಿಯನ್ನು ಖರೀದಿಸಿದೆ. 2022ರಲ್ಲಿ ಇಂಗ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್‌ಗಳಲ್ಲಿ ಟ್ರೆಷರ್ ಆಕ್ಟ್ ಪ್ರಕಾರ 1,378 ನಿಧಿಗಳು ಪತ್ತೆಯಾಗಿವೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಇಷ್ಟು ಹಳೆಯದಾದ ಇಷ್ಟೊಂದು ನಾಣ್ಯಗಳು ಪತ್ತೆಯಾಗುತ್ತಿರುವುದು ಇದೇ ಮೊದಲು ಎಂದು ವರದಿಗಳು ಹೇಳುತ್ತವೆ. ಹರೋಲ್ಡ್ IIರ ಆಳ್ವಿಕೆಯ ಈ ನಾಣ್ಯಗಳು ಬಹಳ ಅಪರೂಪ ಎನ್ನಲಾಗಿದೆ.

ಇದನ್ನೂ ಓದಿ: ಮಿಸ್‌ ಆಗಿ ಪ್ರಿಂಟ್‌ ಆಗಿದ್ದ ನಾಣ್ಯ ಹರಾಜಿನಲ್ಲಿ 4.25 ಕೋಟಿಗೆ ಮಾರಾಟ, ಇದರ ವಿಶೇಷತೆ ಏನು?

click me!