ವಾಕಿಂಗ್ ಹೋಗುವ ತಾತನಿಗಾಗಿ ದಿನವೂ ಕಾಯುವ ಶ್ವಾನ: ಮುದ್ದಾದ ವಿಡಿಯೋ ವೈರಲ್

By Anusha KbFirst Published Sep 29, 2022, 5:30 PM IST
Highlights

ದಿನವೂ ತನಗೆ ಸಿಗುವ 90 ವರ್ಷದ ವೃದ್ಧನಿಗಾಗಿ ಶ್ವಾನವೊಂದು ಸದಾ ಕಾಯುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶ್ವಾನಗಳು ಮನುಷ್ಯನ ಅಚ್ಚುಮೆಚ್ಚಿನ ಸ್ನೇಹಿತರು. ಶ್ವಾನಗಳು ಹಾಗೂ ಮನುಷ್ಯರ ನಡುವಿನ ಮುದ್ದಾದ ಒಡನಾಟದ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ಕಡೆ ದಿನವೂ ತನಗೆ ಸಿಗುವ 90 ವರ್ಷದ ವೃದ್ಧನಿಗಾಗಿ ಶ್ವಾನವೊಂದು ಸದಾ ಕಾಯುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

11 ವರ್ಷದ ಮೈಸಿ (Maisy) ಹೆಸರಿನ ಶ್ವಾನವೊಂದು 90 ವರ್ಷದ ವೃದ್ಧ ರಿಚರ್ಡ್ (Richard) ಅವರಿಗಾಗಿ ಮುಂಜಾನೆಯ ವಾಯು ವಿಹಾರದ ಸಮಯದಲ್ಲಿ ದಿನವೂ ಕಾಯುತ್ತದೆ. ದೂರದಲ್ಲಿ ರಿಚರ್ಡ್ ಅವರು ಬರುತ್ತಿದ್ದಂತೆ ಶ್ವಾನವೂ ತನ್ನ ಬಾಲ ಅಲ್ಲಾಡಿಸುತ್ತಾ ಅವರ ಬಳಿ ಧಾವಿಸುತ್ತದೆ. ಈ ವೇಳೆ ರಿಚರ್ಡ್ ಅವರು ಶ್ವಾನದ ಮೈ ದಡವಿ, ಅದನ್ನು ಮುದ್ದು ಮಾಡುತ್ತಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) 2 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. 

ಡ್ರಗ್ ಪೆಡ್ಲರ್‌ಗಳ ಜೊತೆ ತಾನು ಪೊಲೀಸರಿಗೆ ಶರಣಾದ ಶ್ವಾನ..!

ಸದಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿ ಪಕ್ಷಿಗಳ ಇಂತಹ ಮುದ್ದಾದ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುವ  ಬ್ಯುಟೆಂಗೆಬೀಡೆನ್ (Buitengebieden) ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ. ಪ್ರತಿದಿನವೂ 11 ವರ್ಷದ ಶ್ವಾನ ಮೈಸಿ ತನ್ನ 90 ವರ್ಷದ ಸ್ನೇಹಿತ ರಿಚರ್ಡ್‌ಗಾಗಿ ಅವರು ವಾಕ್ ಬರುವುದನ್ನೇ ಕಾಯುತ್ತಾ ಕುಳಿತು ಭೇಟಿ ಆಗುತ್ತದೆ ಎಂದು ಅವರು ವಿಡಿಯೋ ಜೊತೆ ಬರೆದುಕೊಂಡಿದ್ದಾರೆ. ಆದರೆ ಈ ವಿಡಿಯೋ ಯಾವ ದೇಶದ್ದು ಎಂದು ಎಲ್ಲೂ ಉಲ್ಲೇಖ ಮಾಡಿಲ್ಲ. 

Every morning 11 year old dog Maisy is waiting for her 90 year old friend Richard during his daily walk.. 😊

🎥 TT: mspeelhmb pic.twitter.com/70KPSUIgnZ

— Buitengebieden (@buitengebieden)

 

ವಿಡಿಯೋದಲ್ಲಿ ರಿಚರ್ಡ್ ಅವರನ್ನು ದೂರದಿಂದ ನೋಡುತ್ತಲೇ ಮೈಸಿ ಬಾಲ (Tail) ಅಲ್ಲಾಡಿಸುವುದನ್ನು ಕಾಣಬಹುದು. ಈ ವಿಡಿಯೋಗೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಮನುಷ್ಯನ ಬೆಸ್ಟ್ ಫ್ರೆಂಡ್ ಆಗಿರುವ ಶ್ವಾನಗಳು ಮನುಷ್ಯರ ಒತ್ತಡಗಳನ್ನು ನಿವಾರಿಸುತ್ತವೆ. ಮನೆಯಲ್ಲೊಂದು ಶ್ವಾನವಿದ್ದರೆ ಧೈರ್ಯ ಬರುವುದು. ಜೊತೆಗೆ ಮನೆಯವರ ಒತ್ತಡ ನಿವಾರಣೆಯಾಗುವುದು, ಶ್ವಾನದೊಂದಿಗೆ ಸಮಯ ಕಳೆಯುವುದರಿಂದ ಮನುಷ್ಯನ ಒತ್ತಡ ನಿವಾರಣೆಯಾಗುತ್ತದೆ. ಇದು ಹಲವು ಸಂಶೋಧನೆಗಳಲ್ಲಿ ಸಾಬೀತಾಗಿದೆ.

ಸಿಪಿಆರ್ ಮಾಡಲು ಕಲಿತ ಶ್ವಾನ: ಹಸ್ಕಿ ನಾಯಿಯ ಮುದ್ದಾದ ವಿಡಿಯೋ ವೈರಲ್

ಹೀಗೆಯೇ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಎರಡು ಲ್ಯಾಬ್ರಾಡಾರ್ ತಳಿಯ (Labrodar breed) ಶ್ವಾನಗಳು ನಿದ್ದೆಗೆ ಜಾರಿರುವ ಮನುಷ್ಯನನ್ನು ಮೇಲೇಳಿಸುವ ವಿಡಿಯೋ ವೈರಲ್ ಆಗಿತ್ತು. ಶ್ವಾನ ಏಳುವವರೆಗೂ ಬಿಡದ ಈ ಶ್ವಾನಗಳು ಆತನ ಬೆಡ್ಶಿಟ್ ಎಳೆದು ಕಾಲುಗಳನ್ನು ನಿಧಾನಕ್ಕೆ ಕಚ್ಚುವ ಮೂಲಕ ಆತನಿಗೆ ಕಚಗುಳಿ ಇಡುತ್ತವೆ. ನಾಯಿ ಸಾಕದ ಸಾಮಾನ್ಯ ಮನುಷ್ಯರು ಹೇಗೆ ಏಳುತ್ತಾರೆ ಹಾಗೂ ನಾಯಿ ಸಾಕುವ ಶ್ವಾನಪ್ರಿಯರು ಬೆಳಗ್ಗೆ ಹೇಗೆ ಏಳುತ್ತಾರೆ ಎಂಬುದನ್ನು ತೋರಿಸುವ ವಿಡಿಯೋ ಇದಾಗಿದೆ. ವಿಡಿಯೋದಲ್ಲಿ ನಾಯಿ ಸಾಕದವರು ತಮ್ಮ ಮೊಬೈಲ್ ಫೋನ್‌ಗೆ (Mobile phone) ನಿದ್ದೆಗಣ್ಣಲ್ಲೇ ತಡಕಾಡುತ್ತಾ ಸಮಯ ನೋಡಿಕೊಂಡು ಮೇಲೇಳುತ್ತಾರೆ. ಆದರೆ ಶ್ವಾನ ಸಾಕಿದ ಮಾಲೀಕ ಮಾತ್ರ ಆತನಿಗೆ ಎಚ್ಚರವಾಗುವ ಮೊದಲೇ ಶ್ವಾನಗಳು ಆತನನ್ನು ಎಳಿಸುತ್ತವೆ. ಈ ವಿಡಿಯೋ ತುಂಬಾ ಮುದ್ದಾಗಿದ್ದು, ಈ ವಿಡಿಯೋ ನೋಡಿದ ಬಹುತೇಕ ಶ್ವಾನಪ್ರಿಯ ನೆಟ್ಟಿಗರು ಇದು ನಿಜ ಎಂದು ಹೇಳಿದ್ದಾರೆ. ladyandtheblues ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋ ಅಪ್ಲೋಡ್ ಆಗಿದ್ದು, 1.8 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

click me!