Latest Videos

ಬೇರ‍್ಯಾವ ದಾರಿಯೂ ಇರಲಿಲ್ಲ, ಜೀವ ಉಳಿಬೇಕಿತ್ತು, 20 ಅಡಿಯಿಂದ ಜಿಗಿದ 8 ತಿಂಗಳ ಗರ್ಭಿಣಿ; ಆಮೇಲೆ ಏನಾಯ್ತು?

By Mahmad RafikFirst Published May 25, 2024, 2:33 PM IST
Highlights

26 ವರ್ಷದ ರಚೆಲ್ ಸ್ಟಾಂಡ್ಫೆಸ್ಟ್ ಎಂಬ ಮಹಿಳೆ ತನ್ನ ಮಗು ಬ್ರಿನ್ಲೀ ಜನ್ಮದಿನದಂದು ತಮ್ಮ ಜೀವನದಲ್ಲಾದ ಘಟನೆಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೆಚ್ಚು ಓಡಾಡಬೇಡಿ. ನಿಧಾನಕ್ಕೆ ಹೆಜ್ಜೆ ಇರಿಸಬೇಕು ಎಂದು ವೈದ್ಯರು ಗರ್ಭಿಣಿಯರಿಗೆ ಸಲಹೆ ನೀಡುತ್ತಾರೆ. ಇದರ ಜೊತೆಯಲ್ಲಿ ಹೊಟ್ಟೆಯಲ್ಲಿರುವ ಮಗುವಿಗೆ ತೊಂದರೆ ಆಗದಂತೆ ಹೇಗೆ ಕುಳಿತುಕೊಳ್ಳಬೇಕು ಮತ್ತು ಮಲಗಬೇಕು ಎಂಬುದರ ಗರ್ಭಿಣಿಯರಿಗೆ ಮನೆಯಲ್ಲಿರೋರು ಸಲಹೆಗಳನ್ನು ನೀಡುತ್ತಿರುತ್ತಾರೆ. ಗರ್ಭಿಣಿಯರ ಆ ದಿನಗಳು ತುಂಬಾ  ಸೂಕ್ಷ್ಮವಾಗಿರುತ್ತವೆ. ಆದ್ರೆ ಇಲ್ಲಿಯ ಮಹಿಳೆ ತಾವು ಎಂಟು ತಿಂಗಳು ಗರ್ಭಿಣಿ ಆಗಿರುವಾಗಲೇ 20 ಅಡಿ ಎತ್ತರದಿಂದ ಜಿಗಿದಿದ್ದಾರೆ. ಇದು ಅಚ್ಚರಿಯಾದರೂ ನೀವು ನಂಬಲೇಬೇಕು. 

26 ವರ್ಷದ ರಚೆಲ್ ಸ್ಟಾಂಡ್ಫೆಸ್ಟ್ ಎಂಬ ಮಹಿಳೆ ತನ್ನ ಮಗು ಬ್ರಿನ್ಲೀ ಜನ್ಮದಿನದಂದು ತಮ್ಮ ಜೀವನದಲ್ಲಾದ ಘಟನೆಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವೈರಲ್ ಪೋಸ್ಟ್‌ನಲ್ಲಿ ಏನಿದೆ? 

ನಾನು 36 ವಾರದ ಅಂದ್ರೆ 8 ತಿಂಗಳ ಗರ್ಭಿಣಿಯಾಗಿದ್ದ ದಿನದಂದು ಮಧ್ಯರಾತ್ರಿ ಇದ್ದಕ್ಕಿದಂತೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಅಂದು ರಾತ್ರಿ ನಾನು ಎರಡನೇ ಮಹಡಿಯಲ್ಲಿದ್ದೆ. ಮೆಟ್ಟಿಲು ಬಳಿ ನೋಡಿದಾಗ ಅಲ್ಲಿ ದಟ್ಟವಾದ ಹೊಗೆ ಆವರಿಸಿತ್ತು. ನಾನು ಕೂಡಲೇ ಪತಿ ಟ್ರೆವಿಸ್‌ನನ್ನು ಎಚ್ಚರಗೊಳಿಸಿ ತಾಯಿಗೆ ಫೋನ್ ಮಾಡಿದೆ. ಆಮೇಲೆ ಟ್ರೆವಿಸ್ ಕಿಟಕಿ ಗಾಜುಗಳನ್ನು ಒಂದೆಡೆ  ಸರಿಸಿ ಹೊರಗಡೆ ಇಳಿಸಿಕೊಳ್ಳುತ್ತಿದ್ದನು. ಅತ್ತ ಹೊರಗಿನಿಂದ ಅಮ್ಮ ಸಹಾಯ ಮಾಡುತ್ತಿದ್ದರು. ಇಷ್ಟೇ ಅಂದು ನನಗೆ ನೆನಪಿರುವ ಘಟನೆ. ಮರುದಿನ ಎಚ್ಚರವಾದಾಗ ಮುದ್ದಾದ ಮಗುವಿಗೆ ಜನ್ಮ ನೀಡಿದ್ದೆ ಎಂದು ರಚೆಲ್ ಹೇಳಿಕೊಂಡಿದ್ದಾರೆ. 

ಅಂದು ಟ್ರೆವಿಸ್ ನನ್ನನ್ನು ಕಿಟಕಿ ಮುಖಾಂತರ ಮನೆಯ ಹೊರಗೆ ತರಲು ಪ್ರಯತ್ನಿಸುತ್ತಿದ್ದನು. ನಾವು ಎರಡನೇ ಮಹಡಿಯಲ್ಲಿರೋ ಕಾರಣ 20 ಅಡಿ ಕೆಳಗೆ ಇಳಿಯಬೇಕಿತ್ತು. ಇದು ಸಾವು-ಬದುಕಿನ ಹೋರಾಟ ಆಗಿತ್ತು. ಜೀವ ಉಳಿಯಬೇಕಾದ್ರೆ ಇಲ್ಲಿಂದ ಜಿಗಿಯಬೇಕು ಅನ್ನೋದು ಮಾತ್ರ  ನನ್ನ ತಲೆಗೆ ಬಂತು. ಬೆಂಕಿ ತೀವ್ರತೆ ಹೆಚ್ಚಾಗುತ್ತಿರುವ ಕಾರಣ ನಾನು 20 ಅಡಿ ಎತ್ತರದಿಂದ ಕೆಳಗೆ ಜಿಗಿಯಬೇಕಾಯ್ತು ಎಂದು ರಚೆಲ್ ಹೇಳುತ್ತಾರೆ.

ಟ್ರೆವಿಸ್ ಬೆಂಕಿಯ ನಡುವೆಯೇ ಹೊರಗೆ ಬಂದನು. ಈ ಬೆಂಕಿ ಅವಘಡದಲ್ಲಿ ಪತಿ ಮತ್ತು ನನಗೆ ಸಣ್ಣ ಸುಟ್ಟ ಗಾಯಗಳಾದವು. ಎತ್ತರದಿಂದ ಜಿಗಿದ ಕಾರಣ ನನ್ನ ತಲೆ ಭಾಗಕ್ಕೂ ಗಾಯಯಾಗಿತ್ತು ಎಂದು ರಚೆಲ್ ಮಾಹಿತಿ ನೀಡಿದ್ದಾರೆ.

ಇದೆಂಥಾ ಸೆಲೆಬ್ರೇಷನ್? ಬ್ಯಾಟ್‌ನಿಂದ ಹಿಂಭಾಗಕ್ಕೆ ಹೊಡೆಸಿಕೊಂಡ ಯುವತಿ

ಮಗುವಿನ ಜೀವ ಉಳಿಸಲು ವೈದ್ಯರಿಂದ ಶಸ್ತ್ರಚಿಕಿತ್ಸೆ

ಕೂಡಲೇ ನಮ್ಮಿಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಯ್ತು. ಆಸ್ಪತ್ರೆಗೆ ಬಂದ 15 ರಿಂದ 20 ಸೆಕೆಂಡ್‌ನಲ್ಲಿ ನನಗೆ ಹೆರಿಗೆ ಆಯ್ತು, ಸುಟ್ಟ ಗಾಯಗಳಾಗಿದ್ದರೂ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ನನ್ನ ಮಗುವನ್ನು ಉಳಿಸಿದರು. ಈ ವೇಳೆ ನಮ್ಮಿಬ್ಬರ ಸ್ಥಿತಿ ತುಂಬಾ ಗಂಭೀರವಾಗಿತ್ತು ಎಂದು ರಚೆಲ್ ಹೇಳಿದ್ದಾರೆ. 

ನಾನು 20 ಅಡಿಯಿಂದ ಜಿಗಿದರೂ ಮಗಳು ಪವಾಡ ಎಂಬಂತೆ ಬದುಕುಳಿದಿದ್ದಾಳೆ. ನಾವು ಮೊದಲೇ ಮಗುವಿನ ಹೆಸರು ಏನು ಎಂದು ತೀರ್ಮಾನ ಮಾಡಿದ್ದೇವು. ಈ ಎಲ್ಲಾ ಘಟನೆಗಳ ಬಳಿಕ ಮಗುವಿಗೆ ಬ್ರಿನ್ಲಿ ಎಂದು ಹೆಸರಿಡಲಾಯ್ತು. ಬ್ರಿನ್ಲಿ ಅಂದ್ರೆ ಬೆಂಕಿಯಲ್ಲಿ ಸುಟ್ಟ ವಸ್ತು ಎಂದರ್ಥ. 

ಹನಿಟ್ರ್ಯಾಪ್‌ಗೆ ಬಲಿಯಾದ್ರಾ ಭಾರತದಲ್ಲಿ ಹತ್ಯೆಯಾದ ಬಾಂಗ್ಲಾದೇಶದ ಸಂಸದ

ಮಗಳ ಬರ್ತ್ ಡೇ ಆಚರಣೆ

ರಚೆಲ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಒಂದು ತಿಂಗಳ ಸಮಯ ಬೇಕಾಯ್ತು, ಟ್ರೆವಿಸ್ ಒಂದು ವಾರದಲ್ಲಿಯೇ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದು ತಿಂಗಳ ಹಿಂದೆಯಷ್ಟೇ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಹುಟ್ಟಹಬ್ಬದ ಹಿನ್ನೆಲೆ ಈ ಎಲ್ಲಾ ಘಟನೆಯನ್ನು ರಚೆಲ್ ಶೇರ್ ಮಾಡಿಕೊಂಡಿದ್ದಾರೆ.

click me!