
ಸೂಡಾನ್(ಜ.09): ಭಾರತದಲ್ಲಿ ಕಳೆದ ಕೆಲ ದಿನಗಳಿಂದ ಮೂತ್ರ ವಿಸರ್ಜನೆ ಭಾರಿ ಸದ್ದು ಮಾಡುತ್ತಿದೆ. ಇದೀಗ ಸೌತ್ ಸೂಡಾನ್‌ನಲ್ಲೂ ಇದೇ ಮೂತ್ರ ಸದ್ದು ಮಾಡುತ್ತಿದೆ. ಆದರೆ ದಕ್ಷಿಣ ಸೂಡಾನ್‌ನಲ್ಲಿ ಘಟನೆ ಬೇರೆ. ಅಧ್ಯಕ್ಷ ಸಾಲ್ವಾ ಕೀರ್ ಮಯಾರ್ದಿಟ್ ಅವರ ಸರ್ಕಾರಿ ಅಧಿಕೃತ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಕಾರ್ಯಕ್ರಮದ ಆರಂಭದಲ್ಲಿ ರಾಷ್ಟ್ರಗೀತೆ ನುಡಿಸಲಾಗಿದೆ. ಈ ವೇಳೆ ಸೆಲ್ಯೂಟ್ ಹೊಡೆದು ನಿಂತಿದ್ದ ಅಧ್ಯಕ್ಷರ ಪ್ಯಾಂಟ್ ನಿಧಾನವಾಗಿ ಒದ್ದೆಯಾಗಿದೆ. ಆದರೆ ನೇರ ಪ್ರಸಾರದಲ್ಲಿ ಮೂತ್ರ ವಿಸರ್ಜನೆ ಮಾಡಿರುವುದನ್ನು ತೋರಿಸಿಲ್ಲ. ಆದರೆ ಇದನ್ನು ಸೆರೆ ಹಿಡಿದ ಪತ್ರಕರ್ತರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರ ಪರಿಣಾಮ ಕ್ಯಾಮರಾಮ್ಯಾನ್ ಸೇರಿದಂತೆ 6 ಪತ್ರಕರ್ತರನ್ನು ಬಂಧಿಸಲಾಗಿದೆ.
71 ವರ್ಷದ ಅಧ್ಯಕ್ಷ ಸಾಲ್ವಾ ಕೀರ್ ಮಯಾರ್ದಿಟ್ ರಾಷ್ಟ್ರಗೀತಿ ವೇಳೆ ಗಾಂಭೀರ್ಯದಿಂದ ನಿಂತಿದ್ದರು. ಆದರೆ ಅವರ ಪ್ಯಾಂಟ್ ನಿಧಾನವಾಗಿ ಒದ್ದೆಯಾಗಿದೆ. ಇದು ಕ್ಯಾಮರದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಪ್ಯಾಂಟ್ ಬಹುತೇಕ ಒದ್ದೆಯಾಗುತ್ತಿದ್ದಂತೆ ಅಧ್ಯಕ್ಷರ ಗಮನಕ್ಕೆ ಬಂದಿದೆ. ಈ ವೇಳೆ ಕೆಳಗೆ ಕಣ್ಣು ಹಾಯಿಸಿದ ಅಧ್ಯಕ್ಷರು ಯಾರಿಗೂ ತಿಳಿಯದಂತೆ ಹಾಗೇ ನಿಂತುಕೊಂಡಿದ್ದಾರೆ. ಈ ವೇಳೆ ಕ್ಯಾಮರಾ ಬೇರೆಡೆಗೆ ತಿರುಗಿಸಲಾಗಿದೆ.
ವಿಮಾನ ಹಾರಾಟದ ವೇಳೆ 25 ನಿಮಿಷ ಪೈಲಟ್‌ಗಳ ಜೋರು ನಿದ್ರೆ, ನಿಗದಿಯಾಗಿದ್ದ ಲ್ಯಾಂಡಿಂಗ್ ಕೂಡ ಮಿಸ್!
ಈ ವಿಡಿಯೋ ಸೂಡಾನ್ ಸರ್ಕಾರಿ ಟಿವಿ ಹಾಗೂ ಖಾಸಗಿ ಸುದ್ದಿವಾಹಿನಿಗಳಲ್ಲಿ ಪ್ರಸಾರ ಮಾಡಿಲ್ಲ. ಆದರೆ ಈ ಕಾರ್ಯಕ್ರಮಕ್ಕೆ ತೆರಳಿದ್ದ 6 ಪತ್ರಕರ್ತರು ಇದೇ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಮರು ಕ್ಷಣದಲ್ಲೇ ಈ ವಿಡಿಯೋ ವೈರಲ್ ಆಗಿದೆ. ದಕ್ಷಿಣ ಸೂಡಾನ್‌ನಲ್ಲಿ ಭಾರಿ ಗದ್ದಲ ಸೃಷ್ಟಿಸಿದೆ.
ಇತ್ತ ಅಧ್ಯಕ್ಷರ ಕಚೇರಿಯಿಂದ ಸೂಡಾನ್ ಪತ್ರಕರ್ತರ ಸಂಘದ ಅಧ್ಯಕ್ಷರಿಗೆ ಬುಲಾವ್ ನೀಡಲಾಗಿದೆ. ಈ ಪತ್ರಕರ್ತರನ್ನು ಗುರುತಿಸಿ ಮಾಹಿತಿ ಪಡೆದಿದ್ದಾರೆ. ಇಷ್ಟೇ ಅಲ್ಲ ಸೂಡಾನ್ ಪೊಲೀಸರು ಮರುಕ್ಷಣದಲ್ಲೇ ಕ್ಯಾಮಾರಮ್ಯಾನ್ ಸೇರಿ 6 ಪತ್ರಕರ್ತರ ಬಂಧಿಸಿದ್ದಾರೆ. ಇದೀಗ ಈ ಪತ್ರಕರ್ತರು ಕಾನೂನಿನ ಪರಿಮಿತಿಗಿಂತ ಮೀರಿ ಕಠಿಣ ಶಿಕ್ಷೆ ಅನುಭವಿಸುವ ಸಾಧ್ಯತೆ ಹೆಚ್ಚಿದೆ.
ಪತ್ರಕರ್ತರ ಬಂಧನ ವಿರುದ್ದ ಆಕ್ರೋಶಗಳು ಕೇಳಿಬರುತ್ತಿದೆ. ಕಾರ್ಯನಿರತ ಪತ್ರಕರ್ತರ ಸುರಕ್ಷತಾ ವಿಭಾಗ ಮುಖ್ಯಸ್ಥ ಮುತೋಕಿ ಮಮು, ಎಲ್ಲರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಯಾವುದೇ ಷರತ್ತು ವಿಧಿಸದೆ, ಮುಂದಿನ ದಿನಗಳಲ್ಲಿ ಈ ಪತ್ರಕರ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಭರವಸೆ ನೀಡಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
Bir Tawil : ಈ ದೇಶದ ಜಾಗ ಯಾರಿಗೂ ಬೇಡ ? ಯಾಕೆ ಗೊತ್ತಾ?
ಇತ್ತ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಅಧ್ಯಕ್ಷರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಅನ್ನೋ ವರದಿಯನ್ನು ಸೂಡಾನ್ ಸರ್ಕಾರ ತಳ್ಳಿ ಹಾಕಿದೆ. ಆದರೆ ಸೂಡಾನ್ ಮಾಧ್ಯಮಗಳ ವರದಿ ಪ್ರಕಾರ, ಸೂಡಾನ್ ಅಧ್ಯಕ್ಷರು ಮೂತ್ರ ಸಂಬಂಧಿ ಕಾಯಿಯಿಲೆಯಿಂದ ಬಳಲುತ್ತಿದ್ದಾರೆ. ಇವರಿಗೆ ಮೂತ್ರವಿಸರ್ಜನೆಯಾಗುವುದು ತಿಳಿಯುವುದಿಲ್ಲ. ಹೀಗಾಗಿ ಅಧ್ಯಕ್ಷರ ಪ್ಯಾಂಟ್ ಒದ್ದೆಯಾಗಿದೆ ಎಂದಿದೆ.
2011ರಲ್ಲಿ ಸೌತ್ ಸೂಡಾನ್ ಸ್ವತಂತ್ರಗೊಡಿತು. ಅಲ್ಲಿಂದ ಇಲ್ಲೀವರೆಗೆ ಸಾಲ್ವಾ ಕೀರ್ ಮಯಾರ್ದಿಟ್ ದಕ್ಷಿಣ ಸೂಡಾನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಲ್ವಾ ಕಿರ್ ಅವರು ಡಿಸೆಂಬರ್‌ನಲ್ಲಿ ರಸ್ತೆ ಉದ್ಘಾಟನೆ ಕಾರ‍್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ರಾಷ್ಟ್ರಗೀತೆ ಗಾಯನದ ವೇಳೆ ಅವರ ಪ್ಯಾಂಟ್ ಒದ್ದೆ ಆಗುತ್ತಿರುವ ದೃಶ್ಯ ವೈರಲ್ ಆಗಿದೆ. ಒದ್ದೆ ಆಗುತ್ತಿರುವ ಪ್ಯಾಂಟನ್ನು ಸ್ವತಃ ಕಿರ್ ತಲೆಬಗ್ಗಿಸಿ ನೋಡುತ್ತಾರೆ. ಅಕ್ಕಪಕ್ಕದವರೂ ನೋಡುತ್ತಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಇದು ಅನೈತಿಕ ಎಂದು ಆರೋಪಿಸಿ, ವಿಡಿಯೋ ಬಿಟುಗಡೆ ಮಾಡಿದ್ದರು ಎನ್ನಲಾದ 6 ಪತ್ರಕರ್ತರನ್ನು ಬಂಧಿಸಲಾಗಿದೆ. ಪತ್ರಕರ್ತರ ಬಿಡುಗಡೆಗೆ ಮಾಧ್ಯಮ ಸಂಘಟನೆಗಳು ಒತ್ತಾಯಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ