ಚೀನಾದಲ್ಲಿ 40 ದಿನ ರಜೆ: ಜನ ಸಂಚಾರದಿಂದ ಕೋವಿಡ್ ಮತ್ತಷ್ಟು ತೀವ್ರವಾಗುವ ಸಾಧ್ಯತೆ

By Kannadaprabha NewsFirst Published Jan 8, 2023, 7:52 AM IST
Highlights

ಈಗಾಗಲೇ ಕೋವಿಡ್‌ನಿಂದ ಬಸವಳಿದಿರುವ ಚೀನಾದಲ್ಲಿ ಮತ್ತೊಂದು ಕೋವಿಡ್‌ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಜ.21ರಿಂದ 40 ದಿನ ಚೀನಾದಲ್ಲಿ ಚಾಂದ್ರಮಾನ ಹೊಸ ವರ್ಷಾಚರಣೆ ರಜೆ ಇರುವುದರಿಂದ ಸುಮಾರು 200 ಕೋಟಿಗೂ ಹೆಚ್ಚು ಜನರು ಪ್ರಯಾಣ ಕೈಗೊಳ್ಳಲಿದ್ದಾರೆ. ಹಾಗಾಗಿ ಮತ್ತೊಮ್ಮೆ ಕೋವಿಡ್‌ ಸೋಂಕು ಹೆಚ್ಚಾಗುವ ಸಾಧ್ಯತೆಗಳಿವೆ.

ಶಾಂಘೈ: ಈಗಾಗಲೇ ಕೋವಿಡ್‌ನಿಂದ ಬಸವಳಿದಿರುವ ಚೀನಾದಲ್ಲಿ ಮತ್ತೊಂದು ಕೋವಿಡ್‌ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಜ.21ರಿಂದ 40 ದಿನ ಚೀನಾದಲ್ಲಿ ಚಾಂದ್ರಮಾನ ಹೊಸ ವರ್ಷಾಚರಣೆ ರಜೆ ಇರುವುದರಿಂದ ಸುಮಾರು 200 ಕೋಟಿಗೂ ಹೆಚ್ಚು ಜನರು ಪ್ರಯಾಣ ಕೈಗೊಳ್ಳಲಿದ್ದಾರೆ. ಹಾಗಾಗಿ ಮತ್ತೊಮ್ಮೆ ಕೋವಿಡ್‌ ಸೋಂಕು ಹೆಚ್ಚಾಗುವ ಸಾಧ್ಯತೆಗಳಿವೆ.

ಕೋವಿಡ್‌ ಸಾಂಕ್ರಾಮಿಕದ (Covid pandemic) ಕಾರಣದಿಂದಾಗಿ 2 ವರ್ಷಗಳ ಕಾಲ ಚೀನಾದಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಆದರೆ ಈ ಬಾರಿ ದೇಶೀಯ ಪ್ರಯಾಣದೊಳಗಿನ (domestic travel)ಎಲ್ಲಾ ನಿರ್ಬಂಧಗಳನ್ನು ತೆರವು ಮಾಡಲಾಗಿದೆ. ಅಲ್ಲದೇ ಜ.21ರಿಂದ ಚೀನಾದಲ್ಲಿ ಚಾಂದ್ರಮಾನ ಹೊಸ ವರ್ಷಾಚರಣೆ ಆರಂಭವಾಗುತ್ತಿರುವುದರಿಂದ 40 ದಿನಗಳ ಸುದೀರ್ಘ ರಜೆಯನ್ನು ನೀಡಲಾಗಿದೆ. ಈ ವೇಳೆ ಅತಿ ಹೆಚ್ಚು ಜನರು ತಮ್ಮ ಊರುಗಳಿಗೆ ಅಥವಾ ಪ್ರವಾಸಿ ತಾಣಗಳಿಗೆ ಪ್ರಯಾಣಿಸಲಿದ್ದಾರೆ. 2 ವರ್ಷಗಳ ಕಾಲ ನಿರ್ಬಂಧ ಇದ್ದ ಕಾರಣ ಈ ವರ್ಷ ಪ್ರಯಾಣಿಕರ ಸಂಖ್ಯೆ 2019ಕ್ಕೆ ಹೋಲಿಸಿದರೆ ಶೇ.99.5ರಷ್ಟುಏರಿಕೆಯಾಗಬಹುದು ಎಂದು ಸಾರಿಗೆ ಸಚಿವಾಲಯ ಹೇಳಿದೆ. ಇದರಿಂದಾಗಿ ಸೋಂಕು ಅತ್ಯಂತ ವೇಗವಾಗಿ ದೇಶಾದ್ಯಂತ ಹಬ್ಬಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೊದಲ ಬಾರಿಗೆ ಚೀನಾ ಕೋವಿಡ್ ಅಸಲಿ ಸಂಖ್ಯೆ ಬಹಿರಂಗ, ಭಾರತ ಸೇರಿ ವಿಶ್ವಕ್ಕೇ ಆತಂಕ!

ಚೀನಾದಲ್ಲಿ ಮುಂದಿನ 3 ತಿಂಗಳಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡಲಿದೆ. ಈ ವೇಳೆ ದೇಶದಲ್ಲಿ 3ರಿಂದ 4 ಅಲೆ ಕಾಣಿಸಿಕೊಳ್ಳಬಹುದು ಎಂದು ಎಂದು ತಜ್ಞರು ಎಚ್ಚರಿಕೆ ನೀಡಿದ್ದರು. ಈಗಾಗಲೇ ಚೀನಾದಲ್ಲಿ(China) ಸೋಂಕು ಕಾಣಿಸಿಕೊಂಡು ಜನ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೇ ಪರದಾಡುತ್ತಿದ್ದಾರೆ. ಹೊಸ ವರ್ಷದ ಸಮಯದಲ್ಲಿ ಹೆಚ್ಚು ಜನರು ಪ್ರಯಾಣ ಕೈಗೊಳ್ಳುವುದರಿಂದ ದೇಶದಲ್ಲಿ ಮತ್ತೊಂದು ಅಲೆ ಕಾಣಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.

ಚೀನಾ ಕೋವಿಡ್‌ ನೀತಿ ಟೀಕಿಸಿದ 1000 ಟೀಕಾಕಾರರ ಟ್ವೀಟರ್‌ ಖಾತೆ ಅಮಾನತು

 ಕೋವಿಡ್‌ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚೀನಾ ವಿಧಿಸಿದ್ದ ನಿಯಮಗಳನ್ನು ವಿರೋಧಿಸುತ್ತಿದ್ದ ಹಾಗೂ ಟೀಕಿಸುತ್ತಿದ್ದ ಸುಮಾರು 1,000 ಜನರ ಸಾಮಾಜಿಕ ಜಾಲತಾಣ (social media) ಖಾತೆಗಳನ್ನು ಚೀನಾ ಸರ್ಕಾರ ಅಮಾನತುಗೊಳಿಸಿದೆ. ಖ್ಯಾತ ಸಾಮಾಜಿಕ ಜಾಲತಾಣ ಖಾತೆಗಳು ಕೋವಿಡ್‌ ನಿಯಮ ಉಲ್ಲಂಘನೆ, ತಜ್ಞರು ಸೇರಿದಂತೆ ಸಾಮಾಜಿಕ ಕಾರ್ಯಕರ್ತರ ಮೇಲೆ ದಾಳಿಯಂತಹ ಘಟನೆಗಳನ್ನು ಪೋಸ್ಟ್‌ ಮಾಡಿದ್ದವು. ಪ್ರಯಾಣದ ಮೇಲಿನ ನಿರ್ಬಂಧಗಳು ಹಾಗೂ ಕೋವಿಡ್‌ ಶೂನ್ಯ ಸಹಿಷ್ಣು ನೀತಿ ಹಿನ್ನೆಲೆಯಲ್ಲಿ ವಿಧಿಸಿದ್ದ ಕಠಿಣ ಲಾಕ್ಡೌನ್‌ ನಿಯಮಗಳು, ಈ ವೇಳೆ ಜನರು ತಮ್ಮ ಮನೆಯಲ್ಲಿ ಬಂಧಿಯಾಗಿ ಆಹಾರ (Food), ಔಷಧಗಳಿಲ್ಲದೇ ಪರದಾಡಿರುವ ಸಂಗತಿಗಳನ್ನೂ ಪೋಸ್ಟ್‌ ಮಾಡಲಾಗಿತ್ತು.

ತನ್ನ ವಿರುದ್ಧ ಕೋವಿಡ್‌ ನಿರ್ಬಂಧಕ್ಕೆ ಚೀನಾ ಗರಂ: ಪ್ರತಿಕಾರದ ಬೆದರಿಕೆ

ಈ ಹಿನ್ನೆಲೆಯಲ್ಲಿ ಇವುಗಳು ಸಾಮಾಜಿಕ ಮಾಧ್ಯಮ ಮುಖಾಂತರ ಹೊರಗಿನ ಜಗತ್ತಿಗೆ ಗೊತ್ತಾಗದಿರಲಿ ಎಂದು ಅವುಗಳನ್ನು ಅಮಾನತುಗೊಳಿಸಲಾಗಿದೆ. ಕೋವಿಡ್‌ ಉಲ್ಬಣಗೊಳ್ಳುತ್ತಿದ್ದರೂ ಕಳೆದ ಹಲವು ದಿನಗಳಿಂದ ಚೀನಾ ದಿನನಿತ್ಯ ಪ್ರಕರಣದ ವರದಿಗಳನ್ನು ನೀಡುತ್ತಿಲ್ಲ.

click me!