ಸಿಬ್ಬಂದಿ ಯಡವಟ್ಟು: ಒಬ್ಬನಿಗೇ 5 ಡೋಸ್‌ ಲಸಿಕೆ ಕೊಟ್ಟು ಬಿಟ್ರು!

By Kannadaprabha NewsFirst Published Feb 8, 2021, 11:31 AM IST
Highlights

ಒಂದು ಡೋಸ್ ಕೊರೋನಾ ಲಸಿಕೆ ಪಡೆಯಲು ಹಿಂದೇಟು| ಸಿಬ್ಬಂದಿ ಯಡವಟ್ಟು: ಒಬ್ಬನಿಗೇ 5 ಡೋಸ್‌ ಲಸಿಕೆ ಕೊಟ್ಟು ಬಿಟ್ರು!

ಸಿಂಗಾಪುರ(ಫೆ.08): ಕೆಲವೆಡೆ ಆರೋಗ್ಯ ಸಿಬ್ಬಂದಿ, 1 ಡೋಸ್‌ ಕೊರೋನಾ ಲಸಿಕೆ ಪಡೆಯಲು ಹಿಂದು-ಮುಂದು ನೋಡುತ್ತಿದ್ದರೆ, ಇಲ್ಲಿನ ಆರೋಗ್ಯ ಸಿಬ್ಬಂದಿಯೊಬ್ಬರಿಗೆ ಭರ್ಜರಿ 5 ಡೋಸ್‌ ಲಸಿಕೆ ನೀಡಲಾಗಿದೆ.

ಫೆ.6ರಂದು ಆರೋಗ್ಯ ಸಿಬ್ಬಂದಿಯೊಬ್ಬರು ಲಸಿಕೆ ಪಡೆಯಲು ಆಗಮಿಸಿದ್ದರು. ಇನ್ನೇನು ಲಸಿಕೆ ನೀಡಬೇಕು ಅನ್ನುವಷ್ಟರಲ್ಲಿ, ನೀಡಬೇಕಿದ್ದ ವ್ಯಕ್ತಿ ಬೇರೆಡೆಗೆ ತೆರಳಿದ್ದಾನೆ. ಈ ವೇಳೆ ಆತ ಫೈಝರ್‌ ಲಸಿಕೆ ದುರ್ಬಲಗೊಳಿಸಿರಲಿಲ್ಲ. ಇದನ್ನು ಅರಿಯದ ಬೇರೊಬ್ಬ ಸಿಬ್ಬಂದಿ, ಬಾಟಲ್‌ನಲ್ಲಿದ್ದ 5 ಡೋಸ್‌ಗೆ ಸಮನಾದ ಪ್ರಮಾಣದ ಲಸಿಕೆ ನೀಡಿದ್ದಾನೆ.

ಬಳಿಕ ಸಿಬ್ಬಂದಿ ಎಡವಟ್ಟು ಬೆಳಕಿಗೆ ಬಂದಿದೆ. ಇಷ್ಟಾದರೂ ಲಸಿಕೆ ಪಡೆದಾತ ಆರೋಗ್ಯವಾಗಿದ್ದಾನಂತೆ.

ಅತಿಹೆಚ್ಚು ಮಂದಿಗೆ ಲಸಿಕೆ: ವಿಶ್ವದಲ್ಲೇ ಭಾರತ ನಂ.3

ಕೊರೋನಾ ಮಹಾಮಾರಿಯಿಂದ ದೇಶದ ಜನರ ರಕ್ಷಣೆಗಾಗಿ ಅತಿಹೆಚ್ಚು ಮಂದಿಗೆ ಲಸಿಕೆ ನೀಡಿದ ವಿಶ್ವದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ತಿಳಿಸಿದ್ದಾರೆ. ಮೊದಲೆರಡು ಸ್ಥಾನಗಳಲ್ಲಿ ಕ್ರಮವಾಗಿ ಅಮೆರಿಕ ಮತ್ತು ಬ್ರಿಟನ್‌ ರಾಷ್ಟ್ರಗಳಿವೆ.

ಈ ಬಗ್ಗೆ ಭಾನುವಾರ ಮಾತನಾಡಿದ ಅವರು, ‘ದೇಶದ 12 ರಾಜ್ಯಗಳು 2 ಲಕ್ಷಕ್ಕಿಂತ ಹೆಚ್ಚು ಮಂದಿಗೆ ಕೊರೋನಾ ಲಸಿಕೆಯನ್ನು ನೀಡಿವೆ. ತನ್ಮೂಲಕ ಭಾನುವಾರ ಬೆಳಗ್ಗೆ 8 ಗಂಟೆವರೆಗೆ ಒಟ್ಟಾರೆ 57.75 ಲಕ್ಷಕ್ಕಿಂತ ಹೆಚ್ಚು ಮಂದಿಗೆ ಲಸಿಕೆ ವಿತರಣೆ ಮಾಡಲಾಗಿದೆ. ಈ ಪೈಕಿ ಉತ್ತರ ಪ್ರದೇಶವೊಂದೇ 6.73 ಲಕ್ಷ ಮಂದಿಗೆ ಲಸಿಕೆ ಪೂರೈಸುವ ಮೂಲಕ, ಲಸಿಕೆಗೆ ಅರ್ಹವಿರುವ ಎಲ್ಲರಿಗೂ ಲಸಿಕೆಯನ್ನು ಪೂರೈಸಿದ ಏಕೈಕ ರಾಜ್ಯವಾಗಿದೆ’ ಎಂದಿದ್ದಾರೆ.

click me!