ನಟ ದಿಲೀಪ್‌ರ ಪಾಕ್‌ ನಿವಾಸಕ್ಕೆ 25 ಕೋಟಿ ಬೇಡಿಕೆಯಿಟ್ಟ ಮಾಲೀಕ!

Published : Feb 07, 2021, 02:11 PM IST
ನಟ ದಿಲೀಪ್‌ರ ಪಾಕ್‌ ನಿವಾಸಕ್ಕೆ 25 ಕೋಟಿ ಬೇಡಿಕೆಯಿಟ್ಟ ಮಾಲೀಕ!

ಸಾರಾಂಶ

ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಭಾರತದ ಪ್ರಖ್ಯಾತ ನಟ ದಿಲಿಪ್‌ ಕುಮಾರ್‌ ಅವರ ಪೂರ್ವಜರಿಗೆ ಸೇರಿದ ಮನೆ| ನಟ ದಿಲೀಪ್‌ರ ಪಾಕ್‌ ನಿವಾಸಕ್ಕೆ 25 ಕೋಟಿ ಬೇಡಿಕೆಯಿಟ್ಟ ಮಾಲೀಕ!

ಪೇಶಾವರ(ಫೆ.07): ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಭಾರತದ ಪ್ರಖ್ಯಾತ ನಟ ದಿಲಿಪ್‌ ಕುಮಾರ್‌ ಅವರ ಪೂರ್ವಜರಿಗೆ ಸೇರಿದ ಮನೆಗೆ ಅದರ ಹಾಲಿ ಮಾಲೀಕ 25 ಕೋಟಿ ರು. ಬೇಡಿಕೆ ಇಟ್ಟಿದ್ದಾರೆ.

ಒಟ್ಟಾರೆ 1087 ಚದರ ಅಡಿ ವ್ಯಾಪ್ತಿಯಲ್ಲಿರುವ ದಿಲಿಪ್‌ ಕುಮಾರ್‌ರ ಪೂರ್ವಜರಿಗೆ ಸೇರಿದ ನಿವಾಸವನ್ನು ಹಾಜಿ ಲಾಲ್‌ ಮೊಹಮ್ಮದ್‌ ಅವರು 2005ರಲ್ಲಿ 51 ಲಕ್ಷ ರು.ಗೆ ಕೊಟ್ಟು ಖರೀದಿಸಿದ್ದರು. ಇದಕ್ಕೆ ಇದೀಗ ಪ್ರಾಂತೀಯ ಸರ್ಕಾರವು 80.56 ಲಕ್ಷ ರು. ಬೆಲೆ ನಿಗದಿ ಮಾಡಿದ್ದು, ಅದನ್ನು ರಾಷ್ಟ್ರೀಯ ಪರಂಪರೆ ಕಟ್ಟಡ ಎಂದು ಘೋಷಣೆ ಮಾಡಿದೆ.

ಆದರೆ ಈ ಆಸ್ತಿಯನ್ನು 16 ವರ್ಷಗಳ ಹಿಂದೆಯೇ 51 ಲಕ್ಷ ರು. ನೀಡಿ ಖರೀದಿಸಿದ್ದೇನೆ. ಆದರೆ ಇದೀಗ ಈ ಆಸ್ತಿಗೆ ಸರ್ಕಾರ ಕೇವಲ 80 ಲಕ್ಷ ರು. ಬೆಲೆ ನಿಗದಿ ಮಾಡಿರುವುದು ಅನ್ಯಾಯ. ಈ ಆಸ್ತಿಗೆ 25 ಕೋಟಿ ರು. ಬೇಡಿಕೆ ಇಡುವುದಾಗಿ ಹಾಜಿ ಲಾಲ್‌ ಮೊಹಮ್ಮದ್‌ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
ಪಾಕಿಸ್ತಾನ ಪುಸ್ತಕ ಮೇಳ: ಸೇಲ್ ಆದ ಪುಸ್ತಕ ಬರೀ 35, ಖಾಲಿಯಾದ ಬಿರಿಯಾನಿ, ಶವರ್ಮಾ ಎಷ್ಟು ಕೇಳಿದ್ರೆ ಗಾಬರಿ ಆಗ್ತೀರಿ