American Impostor: 22ರ ಪೋರಿಯಂತೆ ಪೋಸ್‌ ಕೊಟ್ಟ 48ರ ಮಹಿಳೆ: ಕಿರಿಯ ವಯಸ್ಸಿನ ಯುವಕರ ಜತೆ ಲವ್ವಿಡವ್ವಿ!

By Suvarna News  |  First Published Dec 12, 2021, 11:25 AM IST

*22ರ ಹುಡುಗಿಯಂತೆ ಪೋಸ್‌ ಕೋಟ್ಟ 48 ರ ಮಹಿಳೆ
*ವಿಶ್ವ ವಿದ್ಯಾಲಯದಲ್ಲಿ ಎರಡು ವರ್ಷ ಕಳೆದ ಚಾಲಾಕಿ
*ಕಾಲೇಜಿನ ಕಿರಿಯ ವಯಸ್ಸಿನ ಯುವಕರ ಜತೆ ಡೇಟಿಂಗ್‌ 
*ಸುಮಾರು 12 ಲಕ್ಷ ವಿದ್ಯಾರ್ಥಿ ಸಾಲ ಪಡೆದು ವಂಚನೆ!


ಯುಎಸ್‌ಎ(ಡಿ. 12): ಹೆಂಗಸರ ವಯಸ್ಸು ಕೇಳಬಾರದು ಗಂಡಸರ ಸಂಬಳ ಕೇಳಬಾರದು ಎಂಬ ನಾಣ್ಣುಡಿ ಇದೆ. ಗಂಡ್ಮಕ್ಕಳ ಸಂಬಳ ಕೇಳಿದರೆ ಅವರು ಗರಂ ಆಗೋದು ಗ್ಯಾರಂಟಿ. ಇನ್ನು ಹೆಣ್ಮಕ್ಳಿಗೆ ವಯಸ್ಸಿನ ಬಗ್ಗೆ ಕೇಳಿದರೆ ಉತ್ತರ ಸಿಗೋದೂ ಡೌಟ್.‌ ಒಂದು ವೇಳೆ ಮಹಿಳೆಯರು ತಮ್ಮ ವಯಸ್ಸು ಬಹಿರಂಗಪಡಿಸಿದರು ಒಂದಿಷ್ಟು ಕಡಿಮೆ ಹೇಳೋ ಸಾಧ್ಯತೆಗಳೇ ಜಾಸ್ತಿ. ಹೀಗೆ ತನ್ನ 22 ವರ್ಷದ ಮಗಳಂತೆ ಪೋಸ್‌ ಕೊಟ್ಟು ಕಾಲೇಜು ಸೇರಿ ವಿವಾದ ಸೃಷ್ಟಿಸಿರುವ ಮಹಿಳೆ ಈಗ ಪಶ್ಚಾತಾಪ ಪಡುತ್ತಿದ್ದಾರೆ. ತನ್ನ 22 ವರ್ಷದ ಮಗಳ ಹೆಸರಿನಲ್ಲಿ ಕಾಲೇಜು (College) ಸೇರಿದಷ್ಟೇ ಅಲ್ಲದೇ ಯುವಕರ ಜತೆ ಡೇಟಿಂಗ್‌ ಕೂಡ ಮಾಡಿದ್ದಾಳೆ.

ತನ್ನ 22 ವರ್ಷದ ಮಗಳಾಗಿ ವಿಶ್ವವಿದ್ಯಾನಿಲಯ ಸೇರಿಕೊಂಡ ಅಮೆರಿಕಾದ ಲಾರಾ ಓಗ್ಲೆಸ್ಬಿ (Laura Oglesby) ಕಾಲೇಜಿನಲ್ಲಿ ಎರಡು ವರ್ಷಗಳನ್ನು ಕಳೆದಿದ್ದಾರೆ. ಸಾಲದ್ದಕ್ಕೆ ವಿದ್ಯಾರ್ಥಿ ಸಾಲಗಳು (Student Loan), ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಇತರ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಕಾಲೇಜಿನಲ್ಲಿದ್ದ ಇತರ ಚಿಕ್ಕ ವಯಸ್ಸಿನ ಯುವಕರೊಂದಿಗೆ ಡೇಟಿಂಗ್‌ ಕೂಡ ಮಾಡಿರುವ  ಲಾರಾ ಓಗ್ಲೆಸ್ಬಿ ತಮ್ಮ ಮಗಳ ಗುರುತು  ಬಳಸಿಕೊಂಡು ಮಾಡಿದ ವಂಚನೆಯ ಆರೋಪಕ್ಕೆ ಈಗ ತಪ್ಪೊಪ್ಪಿಕೊಂಡಿದ್ದಾರೆ. ಆದರೆ ಎರಡು ವರ್ಷಗಳಲ್ಲಿ ಮಹಿಳೆಯನ್ನು ನೋಡಿದ ಯಾರೋಬ್ಬರಿಗೂ ವಯಸ್ಸಿನ ಸಂದೇಹ ಮೂಡಲಿಲ್ಲ ಎಂಬುದು ಆಶ್ಚರ್ಯಕರವಾಗಿದೆ. 

Tap to resize

Latest Videos

ಮಗಳ ಹೆಸರಲ್ಲಿ ಅರ್ಜಿ ಸಲ್ಲಿಸಿದ್ದಾ ಲಾರಾ!

2016 ರಲ್ಲಿ ತಮ್ಮ ಮಗಳು ಲಾರೆನ್ ಆಶ್ಲೀಗ್ ಹೇಸ್ ಹೆಸರಿನಲ್ಲಿ ಸಾಮಾಜಿಕ ಭದ್ರತಾ ಕಾರ್ಡ್‌ಗಾಗಿ ( social security card) ಅರ್ಜಿ ಸಲ್ಲಿಸಿದ್ದರು.  2017 ರಲ್ಲಿ ಸೌತ್‌ವೆಸ್ಟ್ ಬ್ಯಾಪ್ಟಿಸ್ಟ್ ವಿಶ್ವವಿದ್ಯಾನಿಲಯಕ್ಕೆ ದಾಖಲಾಗಲು ತಮ್ಮ ಮಗಳ ಗುರುತನ್ನು ಬಳಸಿದರು. ಬಳಿಕ ವಿದ್ಯಾರ್ಥಿ ಸಾಲಗಳಿಗೆ ಅರ್ಜಿ ಸಲ್ಲಿಸಿ  ಫೆಡರಲ್ ವಿದ್ಯಾರ್ಥಿ ಸಾಲದಲ್ಲಿ $9,400 (ರೂ. 7.12 ಲಕ್ಷ), ಪೆಲ್ ಗ್ರ್ಯಾಂಟ್ಸ್‌ನಲ್ಲಿ $5,920 (ರೂ. 4.48 ಲಕ್ಷ), ವಿಶ್ವವಿದ್ಯಾನಿಲಯದ ಪುಸ್ತಕದಂಗಡಿಯಲ್ಲಿ ಖರೀದಿಸಿದ ಪುಸ್ತಕಗಳಿಗೆ $337 (ರೂ. 25,500) ಮತ್ತು ಇತರ ಖರ್ಚಿಗಾಗಿ $1,863 (ರೂ. 1.1 ಲಕ್ಷ) ಪಡೆದಿದ್ದಾರೆ.

Illicit Relationship:ಯುವಕನ ಜತೆ 2 ಮಕ್ಕಳ ತಾಯಿ ಲವ್ವಿ-ಡವ್ವಿ, ಊರೆಲ್ಲ ಸುದ್ದಿ

ಮಿಸೌರಿಗೆ (Missouri) ತೆರಳು ಮುನ್ನ ಲಾರಾ ತನ್ನ ಮಗಳೊಂದಿಗೆ ಅರ್ಕಾನ್ಸಾಸ್‌ನಲ್ಲಿ (Arkansas) ವಾಸಿಸುತ್ತಿದ್ದರು.  ಅಲ್ಲಿಗೆ ತೆರಳಿದ ನಂತರ ಮಗಳೊಂದಿಗಿನ ಎಲ್ಲ ಸಂಪರ್ಕವನ್ನು ಲಾರಾ ಕಳೆದುಕೊಂಡಿದ್ದಾರೆ. ಮೌಂಟೇನ್ ವ್ಯೂ ಎಂಬ ಸಣ್ಣ ಪಟ್ಟಣದಲ್ಲಿರುವ ಸ್ಥಳೀಯರು ಲಾರಾ ತನ್ನ ನೈಜ ವಯಸ್ಸಿಗಿಂತ 26 ವರ್ಷ ಚಿಕ್ಕವಳು ಎಂದು ನಂಬಿದ್ದರು. ಅಂದರೆ ಲಾರಾ ಸುಮಾರು 22 - 24 ವಯಸ್ಸಿನವಳು ಎಂದು ಜನರು ಭಾವಿಸಿದ್ದರು. ಜತೆಗೆ ಆಕೆಗೆ ಸ್ಥಳೀಯ ಗ್ರಂಥಾಲಯದಲ್ಲಿ ಕೆಲಸವೂ ಸಿಕ್ಕಿತ್ತು. 2018 ರಲ್ಲಿ ಮಗಳ ಗುರುತನ್ನು ಕದ್ದು ಪರಾರಿಯಾಗಿದ್ದ ಲಾರಾಗಾಗಿ ಬಲೆ ಬೀಸಿದ್ದ ಅರ್ಕಾನ್ಸಾಸ್ ಪೊಲೀಸರು,  ಮಿಸೌರಿಯ ಪೊಲೀಸರನ್ನು  ಸಂಪರ್ಕಿಸಿದಾಗ ಕಳ್ಳತನ ಬೆಳಕಿಗೆ ಬಂದಿತ್ತು.

ಲವ್ವಿ ಡವ್ವಿ ಒಬ್ಬಳ ಜೊತೆ, ಸಂಸಾರ ಇನ್ನೊಬ್ಬಳ ಜೊತೆ; ಕೇಳೋರಿಲ್ಲ ಯುವತಿಯ ವ್ಯಥೆ..!

ಆರಂಭದಲ್ಲಿ ಆರೋಪವನ್ನು ನಿರಾಕರಿಸಿದ್ದ ಲಾರಾ ಓಗ್ಲೆಸ್ಬಿ  ಪುರಾವೆಗಳು ಸಿಕ್ಕ ನಂತರ ಮಾಡಿದ ವಂಚನೆಯ ಬಗ್ಗೆ ಒಪ್ಪಿಕೊಂದ್ದಾರೆ."ಎಲ್ಲರೂ ಅವಳು 22 ವರ್ಷದವಳು ಎಂದು ನಂಬಿದ್ದರು. ಆಕೆಯ ಗೆಳೆಯರಿಗೂ ಸತ್ಯ ಗೊತ್ತಿರಲಿಲ್ಲ." ಎಂದು ಮೌಂಟೇನ್ ವ್ಯೂ ಪೋಲೀಸಸರು ಮಾಹಿತಿ ನೀಡಿದ್ದಾರೆ.  ಮನವಿ ಒಪ್ಪಂದದ ಪ್ರಕಾರ, ಅವಳು ಸೌತ್‌ವೆಸ್ಟ್ ಬ್ಯಾಪ್ಟಿಸ್ಟ್ ವಿಶ್ವವಿದ್ಯಾಲಯಕ್ಕೆ ಮರುಪಾವತಿಯಾಗಿ $17,521 ಪಾವತಿಸಬೇಕು, ಹಾಗೆಯೇ ಮಗಳಿಗೆ ಮರುಪಾವತಿಯನ್ನು ನೀಡಬೇಕು ಎಂದು ತಿಳಿದು ಬಂದಿದೆ. ಈ ವಿಷಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

click me!