Latest Videos

ಕುವೈತ್‌ ಅಗ್ನಿ ದುರಂತ: ಕನ್ನಡಿಗೆ ಸೇರಿ 45 ಭಾರತೀಯರು ಬಲಿ

By Kannadaprabha NewsFirst Published Jun 14, 2024, 6:58 AM IST
Highlights

ಎಲ್ಲಾ ಮೃತ ಭಾರತೀಯರ ಗುರುತು ಪತ್ತೆಯಾಗಿದ್ದು, ಅವರನ್ನು ಹೊತ್ತ ಸಿ130ಜೆ ವಿಶೇಷ ವಿಮಾನ ಶುಕ್ರವಾರ ಕುವೈತ್‌ನಿಂದ ಕೇರಳಕ್ಕೆ ಬಂದಿಳಿಯುವ ಸಾಧ್ಯತೆ ಇದೆ. ಭಾರತದ ವಿದೇಶಾಂಗ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್‌ ಸಿಂಗ್‌ ಬುಧವಾರ ಕುವೈತ್‌ಗೆ ಆಗಮಿಸಿ, ಸಂಕಷ್ಟದಲ್ಲಿ ಸಿಕ್ಕಿದ್ದ ಭಾರತೀಯರಿಗೆ ನೆರವಾಗುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.

ದುಬೈ(ಜೂ.14):  ಬುಧವಾರ ಇಲ್ಲಿ ಸಂಭವಿಸಿದ 6 ಅಂತಸ್ತಿನ ಕಟ್ಟಡದಲ್ಲಿನ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ 49 ಜನರ ಪೈಕಿ 45 ಜನರು ಭಾರತೀಯರು ಎಂದು ದೃಢಪಟ್ಟಿದೆ. ಈ ಪೈಕಿ ಕೇರಳದ 24 ಮತ್ತು ತಮಿಳುನಾಡಿನ 7 ಜನರು ಸೇರಿ ದಕ್ಷಿಣ ಭಾರತೀಯರೇ 31 ಜನರಾಗಿದ್ದಾರೆ.

ಎಲ್ಲಾ ಮೃತ ಭಾರತೀಯರ ಗುರುತು ಪತ್ತೆಯಾಗಿದ್ದು, ಅವರನ್ನು ಹೊತ್ತ ಸಿ130ಜೆ ವಿಶೇಷ ವಿಮಾನ ಶುಕ್ರವಾರ ಕುವೈತ್‌ನಿಂದ ಕೇರಳಕ್ಕೆ ಬಂದಿಳಿಯುವ ಸಾಧ್ಯತೆ ಇದೆ. ಭಾರತದ ವಿದೇಶಾಂಗ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್‌ ಸಿಂಗ್‌ ಬುಧವಾರ ಕುವೈತ್‌ಗೆ ಆಗಮಿಸಿ, ಸಂಕಷ್ಟದಲ್ಲಿ ಸಿಕ್ಕಿದ್ದ ಭಾರತೀಯರಿಗೆ ನೆರವಾಗುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.

ಸೌದಿಯಲ್ಲಿ 195 ಭಾರತೀಯ ಕಾರ್ಮಿಕರಿದ್ದ ಕಟ್ಟಡಕ್ಕೆ ಬೆಂಕಿ, 40 ಸಾವು: ಹೆಲ್ಪ್‌ಲೈನ್ ತೆರೆದ ರಾಯಭಾರಿ ಕಚೇರಿ

ಈ ನಡುವೆ ಅಗ್ನಿ ಅವಘಡದ ಕುರಿತು ಕೂಲಂಕಷ ತನಿಖೆ ನಡೆಸುವುದಾಗಿ ಕುವೈತ್‌ ಸರ್ಕಾರ ಭರವಸೆ ನೀಡಿದೆ. ಅಲ್ಲದೆ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಕುವೈತ್‌ನ ದೊರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
196 ಕಟ್ಟಡ ಕಾರ್ಮಿಕರು ವಾಸಿಸುತ್ತಿದ್ದ ಕಟ್ಟಡದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಅಗ್ನಿ ಅವಘಡದಲ್ಲಿ 49 ಜನರು ಸಾವನ್ನಪ್ಪಿ, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

click me!