ಅಮೆರಿಕ ಅಧ್ಯಕ್ಷ ಯಾರು? ಘೋಷಣೆತಯೊಂದೇ ಬಾಕಿ| ಜೋ ಬಯಡೆನ್ ಗೆಲುವು ನಿಚ್ಛಳ| ಮತ ಎಣಿಕೆ ವೇಳೆ ಬಯಲಾಗುತ್ತಿದೆ ಇಂಟರೆಸ್ಟಿಂಗ್ ವಿಚಾರಗಳು
ವಾಷಿಂಗ್ಟನ್(ಜ.07): ಡೊನಾಲ್ಡ್ ಟ್ರಂಪ್ ತಮ್ಮ ನಾಲ್ಕು ವರ್ಷದ ಅಧಿಕಾರವಧಿಯಲ್ಲಿ 20000 ಕ್ಕೂ ಅಧಿಕ ಸುಳ್ಳು ಹೇಳಿದ್ದಾರೆ. ಫ್ಯಾಕ್ಟ್ ಚೆಕ್ ನಡೆಸುವ ವೆಬ್‌ಸೈಟ್ PolitiFact ಅನ್ವಯ 2016ರಿಂದ ಟ್ರಂಪ್ ಕೊಟ್ಟ ಅರ್ಧಕ್ಕೂ ಅಧಿಕ ಹೇಳಿಕೆಗಳು ಸುಳ್ಳೆನ್ನಲಾಗಿದೆ. ವಾಷಿಂಗ್ಟನ್ ಡೇಟಾಬೇಸ್ ಅನ್ವಯ ಟ್ರಂಪ್ ಹುದ್ದೆಗೇರಿದ ಬಳಿಕ ಭಾರೀ ಪ್ರಮಾಣದಲ್ಲಿ ಸುಳ್ಳು ಹೇಳಿದ್ದಾರೆ.
ಬಲಶಾಲಿ ಅರ್ಥಿಕ ವ್ಯವಸ್ಥೆ(407 ಬಾರಿ)
undefined
ಟ್ರಂಪ್ ತಮ್ಮ ನಾಲ್ಕು ವರ್ಷದ ಅಧಿಕಾರವಧಿಯಲ್ಲಿ ಕನಬಿಷ್ಟ ಪಕ್ಷ 407 ಬಾರಿ ತಾನು ಅತ್ಯಂತ ಬಲಶಾಲಿ ಅರ್ಥವ್ಯವಸ್ಥೆ ನಿರ್ಮಿಸಿದ್ದೇನೆಂದು ಹೇಳಿದ್ದಾರೆ. ಆದರೆ ಐಜನ್‌ಹಾವರ್, ಲಿಂಡನ್ ಬಿ ಜಾನ್ಸನ್ ಹಾಗೂ ಬಿಲ್ ಕ್ಲಿಂಟನ್ ಅವಧಿಯಲ್ಲಿ ಅಮೆರಿಕದ ಆರ್ಥಿಕ ವ್ಯವಸ್ಥೆ ಮತ್ತಷ್ಟು ಬಲಶಾಲಿಯಾಗಿತ್ತು.
ಚುನಾವಣೆ ಅಕ್ರಮ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಟ್ರಂಪ್‌ಗೆ ಮುಖಭಂಗ: ಶ್ವೇತ ಭವನದತ್ತ ಬೈಡೆನ್!
ಮೆಕ್ಸಿಕೋ ಬಾರ್ಡರ್‌ನಲ್ಲಿ ಗೊಡೆ ನಿರ್ಮಿಸುವ ಮಾತು(262 ಬಾರಿ)
ಟ್ರಂಪ್ ತನ್ನ ರಾಷ್ಟ್ರವಾದಿ ವಿಚಾರಕ್ಕೆ ಮತ್ತಷ್ಟು ಬಲ ತುಂಬಲು ತನ್ನ ಕಾರ್ಯಾವಧಿಯ ಆರಂಭದಿಂದಲೇ ಮೆಕಸ್ಇಕೋ ಬಾರ್ಡರ್‌ನಲ್ಲಿ ಅಕ್ರಮ ಪ್ರವಾಸಿಗರನ್ನು ನಿರ್ಬಂಧಿಸುವ ಸಲುವಾಗಿ ಉದ್ದದ ಗೋಡೆ ನಿರ್ಮಿಸುವ ಮಾತುಗಳನ್ನಾಡಿದ್ದರು. ಅನೇಕ ಬಾರಿ ಅವರು ಈ ಗೋಡೆ ಅತೀ ಶೀಘ್ರದಲ್ಲಿ ನಿರ್ಮಿಸುವುದಾಗಿ ಹೇಳಿದ್ದರು. ವಾಸ್ತವವಾಗಿ ಇತ್ತೀಚೆಗಷ್ಟೇ ಇಲ್ಲಿ ಕಾಂಕ್ರೀಟ್ ಗೋಡೆ ನಿರ್ಮಾಣ ಆರಂಭವಾಗುತ್ತಿದೆ.
ಟ್ರಂಪ್ ಭದ್ರಕೋಟೆಯಲ್ಲೂ ಬೈಡೆನ್ ಲೀಡ್, ಅಮೆರಿಕ ಅಧ್ಯಕ್ಷರಾಗೋದು ಬಹುತೇಕ ಖಚಿತ!
ರಷ್ಯಾದೊಂದಿಗೆ ಯಾವುದೇ ಹೊಂದಾಣಿಕೆ ಇಲ್ಲ(236 ಬಾರಿ)
ಡೊನಾಲ್ಡ್ ಟ್ರಂಪ್ ಚುನಾವಣೆ ಆರಂಭವಾದಾಗಿನಿಂದ ಈವರೆಗೂ 2016ರ ಚುನಾವಣೆಯಲ್ಲಿ ರಷ್ಯಾದೊಂದಿಗೆ ಯಾವುದೇ ಡೀಲ್ ನಡೆಸಿಲ್ಲ ಎಂದಿದ್ದಾರೆ. ಆದರೆ ಮುಲ್ಲರ್ ವರದಿಯಲ್ಲಿ ಟ್ರಂಪ್‌ರನ್ನು ಜಯಶಾಲಿಯನ್ನಾಗಿಸಲು ಅವರ ರಷ್ಯಾದ ಮಿತ್ರರು ಹಿಲರಿ ಕ್ಲಿಂಟನ್ ಹೆಸರಿಗೆ ಮಸಿ ಬಳಿಯುವ ತಂತ್ರ ರೂಪಿಸಿದ್ದರೆಂಬ ಆರೋಪ ಕೇಳಿ ಬಂದಿತ್ತು.