
ವಾಷಿಂಗ್ಟನ್(ಏ.18): ಅಮೆರಿಕದ ಇಂಡಿಯಾನಾಪೊಲೀಸ್ ನಗರದ ಫೆಡೆಕ್ಸ್ ಕೊರಿಯರ್ ಕೇಂದ್ರದ ಬಳಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟ8 ಜನರ ಪೈಕಿ ನಾಲ್ವರು ಭಾರತೀಯರು ಮತ್ತು ಸಿಖ್ ಸಮುದಾಯದವರು ಎಂದು ತಿಳಿದುಬಂದಿದೆ.
ಮೃತರನ್ನು ಅಮರ್‌ಜೀತ್ ಜೋಹಲ್ (66), ಜದ್ವಿಂದರ್ ಕೌರ್ (64), ಅಮರ್‌ಜಿತ್ ಸ್ಕೋನ್(48), ಜಸ್ವಿಂದರ್ ಸಿಂಗ್ (68) ಎಂದು ಗುರುತಿಸಲಾಗಿದೆ.
ಇದು ಆ.5, 2012ರ ನಂತರ ಅಮೆರಿಕದಲ್ಲಿ ನಡೆದ ಅತಿ ದೊಡ್ಡ ಸಿಖ್ ಹತ್ಯಾಕಾಂಡವಾಗಿದೆ. ಶೂಟೌಟ್ ನಡೆಸಿದ ದಾಳಿಕೋರ 19 ವರ್ಷದ ಬ್ರಾಂಡನ್ ಸ್ಕಾಟ್ ಹೋಲ್ ಎಂದು ಗುರುತಿಸಲಾಗಿದ್ದು, ಈತ ಗುರುವಾರವೇ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ