
ಪೆನ್ಸಿಲ್ವೇನಿಯಾ(ಏ.18): ಶ್ವಾನಗಳು ಅಪಾರ ಗ್ರಹಣ ಶಕ್ತಿ ಸಾಮರ್ಥ್ಯ ಹೊಂದಿವೆ ಎಂಬ ವಿಷಯ ಹೊಸತೇನಲ್ಲ. ಆದರೆ ವಿಶೇಷವೆಂದರೆ ಇದೀಗ ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೋನಾ ಸೋಂಕನ್ನೂ ಶ್ವಾನಗಳು ಅತ್ಯಂತ ನಿಖರವಾಗಿ ಪತ್ತೆ ಮಾಡಬಲ್ಲವು. ಈ ಪ್ರಮಾಣ ಶೇ.96ರಷ್ಟುನಿಖರವಾಗಿ ಇರಬಲ್ಲದು ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಅಮೆರಿಕದ ಪೆನ್ಸಿಲ್ವೇನಿಯಾ ವಿವಿಯ ಪಶು ಔಷಧ ಶಾಲೆಯ ತಜ್ಞರ ತಂಡವೊಂದು ಈ ಕುರಿತು ಸುದೀರ್ಘ ಅಧ್ಯಯನ ನಡೆಸಿ ವರದಿಯೊಂದನ್ನು ‘ಪ್ಲೋಸ್ ಒನ್’ ಎಂಬ ಮ್ಯಾಗಜೈನ್‌ನಲ್ಲಿ ಪ್ರಕಟಿಸಿದೆ. ಈ ವರದಿ ಅನ್ವಯ ಶ್ವಾನಗಳನ್ನು ಅತ್ಯಂತ ವಿಶೇಷವಾಗಿ ತರಬೇತುಗೊಳಿಸಿದರೆ ಅವು ಕೋವಿಡ್ ಸೋಂಕಿತರನ್ನು ಪತ್ತೆಮಾಡುವ ಪ್ರಮಾಣ ಶೇ.96ರಷ್ಟುನಿಖರವಾಗಿರುತ್ತದೆಯಂತೆ.
ಸೋಂಕು ಪತ್ತೆ ಹೇಗೆ?
- ಲ್ಯಾಬ್ರಡಾರ್ ಮತ್ತು ಬೆಲ್ಜಿಯನ್ ಮಲಿನೋಯ್ಸ್ ತಳಿಯ ಶ್ವಾನಗಳಿಂದ ಸೋಂಕು ಪತ್ತೆ
- ಕೋವಿಡ್ ಸೋಂಕಿತರ ಟೀಶರ್ಟ್ ಮೂಸಿ ಸೋಂಕು ಪತ್ತೆಹಚ್ಚಿದ ನಾಯಿಗಳು
- ಕೋವಿಡ್ ಇಲ್ಲದವರ ಟೀಶರ್ಟ್ ನೀಡಿದಾಗ ನೆಗೆಟಿವ್ ಚಿಹ್ನೆ ತೋರಿದವು
- 8 ನಾಯಿಗಳಿಗೆ ಸತತ 3 ವಾರ ತರಬೇತಿ ನೀಡಿ ಕೋವಿಡ್ ಪತ್ತೆಗೆ ನಿಯೋಜನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ