ನೀರಿನ ಬದಲು ನದಿಯಲ್ಲಿ ಉಕ್ಕಿ ಹರಿದ ಹಾಲು: ಪಾತ್ರೆಗಳಲ್ಲಿ ತುಂಬಿ ಕೊಂಡೊಯ್ದ ಜನ!

By Suvarna NewsFirst Published Apr 17, 2021, 5:26 PM IST
Highlights

ನದಿಯಲ್ಲಿ ಹರಿದ ಹಾಲು| ಹಾಲಿನ ಹೊಳೆ ಕಂಡು ಜನರಿಗೆ ಭಾರೀ ಅಚ್ಚರಿ| ಪಾತ್ರೆಗಳಲ್ಲಿ ಹಾಲು ತುಂಬಿ ಕೊಂಡೊಯ್ದ ಜನ

ಬ್ರಿಟನ್(ಏ.17): ನದಿಯಲ್ಲಿ ನೀರು ಉಕ್ಕಿ ಹರಿಯುವುದು ಸಹಜ. ಇದನ್ನು ನಾವೆಲ್ಲರೂ ನೋಡಿರುತ್ತೇವೆ. ಆದರೆ ಎಲ್ಲಾದರೂ ಹಾಲು ಹರಿದು ಬಂದಿರುವುದಿದೆಯೇ? ಹೌದು ಸದ್ಯ ಬ್ರಿಟನ್‌ನ ನದಿಯೊಂದರಲ್ಲಿ ಅಚಾನಕ್ಕಾಗಿ ಹಾಲು ಹರಿಯಲಾರಂಭಿಸಿದೆ. ಇದನ್ನು ಕಂಡ ಜನರೆಲ್ಲರೂ ಬೆಕ್ಕಸ ಬೆರಗಾಗಿದ್ದಾರೆ.

ಏಪ್ರಿಲ್ 156ರಂದು ಇಲ್ಲಿನ ವೇಲ್ಸ್‌ನಲ್ಲಿ ಹರಿಯುವ ದುಲಾಯಿಸ್‌ ನದಿಯ ನೀರು ಬಿಳಿಯಾಗಿದೆ. ನೀರಿನ ಬದಲು ಈ ನದಿಯಲ್ಲಿ ಹಾಲು ಹರಿಯಲಾರಂಭಿಸಿದೆ. ಇದನ್ನು ಕಂಡು ಅಲ್ಲಿನ ಜನರಿಗೆ ಭಾರೀ ಅಚ್ಚರಿಯಾಗಿದೆ. ಆದರೆ ನಿಜಕ್ಕೂ ನಡೆದಿದ್ದೇ ಬೇರೆ.. ಈ ನದಿ ಬದಿಯಲ್ಲೇ ಹಾಲು ತುಂಬಿದ್ದ ಟ್ರಕ್‌ ಒಂದು ಅಪಘಾತದಿಂದಾಗಿ ಪಲ್ಟಿಯಾಗಿದೆ ಹಾಗೂ ಅದರಲ್ಲಿದ್ದ ಹಾಲು ನದಿಯಲ್ಲಿ ಹರಿಯಲಾರಂಭಿಸಿದೆ. ನೋಡುತ್ತಿದ್ದಂತೆಯೇ ನದಿ ಬಿಳಿ ಬಣ್ಣಕ್ಕೆ ತಿರುಗಿದೆ.

When a milk tanker overturns in the river pic.twitter.com/vnyhr5FXBi

— May 🏴󠁧󠁢󠁷󠁬󠁳󠁿 (@MayLewis19)

ನದಿಯಲ್ಲಿ ಹಾಲು ಹರಿಯುತ್ತಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇನ್ನು ಈ ನೀರಿನಲ್ಲಿ ಮಿಶ್ರಿತವಾದ ಹಾಲಿನ ಗುಣಮಟ್ಟ ಹೇಗಿದೆ ಎಂದು ತಿಳಿದು ಬಂದಿಲ್ಲವಾದರೂ, ನದಿಯ ನೀರು ಬಿಳಿ ಬಣ್ಣವಾಗಿದ್ದು ಹಾಲಿನಿಂದ ಎಂಬುವುದು ಖಚಿತ.

ಇನ್ನು ಈ ಹಾಲನ್ನು ಕಂಡ ಅನೇಕ ಮಂದಿ ಮನೆಯಲ್ಲಿದ್ದ ಪಾತ್ರೆಗಳನ್ನು ತಂದು ಹಾಲು ತುಂಬಿಕೊಂಡು ಹೋಗಿದ್ದಾರೆ. ಅನೇಕ ಮಂದಿ ಆರಂಭದಲ್ಲಿ ಇದೊಂದು ಚಮತ್ಕಾರವೆಂದಿದ್ದಾರೆ. ಆದರೆ ವಾಸ್ತವ ವಿಚಾರ ತಿಳಿದಾಗ ಬೆಸ್ತು ಬಿದ್ದಿದ್ದಾರೆ.
 

click me!