ವರ್ಷದೊಳಗೆ 3ನೇ ಬಾರಿ ಟ್ರಂಪ್ ಹತ್ಯೆ ಯತ್ನ: ಶಂಕಿತನ ಫೋಟೋ ಬಿಡುಗಡೆ ಮಾಡಿದ ಟ್ರಂಪ್

Published : Apr 26, 2026, 09:51 AM IST
Trump Releases Photo Of White House shooter

ಸಾರಾಂಶ

ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆದಿದ್ದು, ಇದು ಅವರ ಮೇಲೆ ಕೇವಲ ಒಂದು ವರ್ಷದೊಳಗೆ ನಡೆದ ಮೂರನೇ ಹತ್ಯಾ ಯತ್ನವಾಗಿದೆ. ಈ ಹಿಂದೆ ಜುಲೈ ಮತ್ತು ಸೆಪ್ಟೆಂಬರ್‌ನಲ್ಲಿ ನಡೆದ ದಾಳಿಗಳಿಂದಲೂ ಟ್ರಂಪ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.

ಟ್ರಂಪ್ ಮೇಲೆ ಮತ್ತೆ ಹತ್ಯೆ ಯತ್ನ: ಶ್ವೇತಭವನದಲ್ಲಿ ಗುಂಡಿನ ಸದ್ದು

ಶ್ವೇತಭವನದಲ್ಲಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾಗಿಯಾಗಿದ್ದ ಔತಣಕೂಟದಲ್ಲಿ ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನು ನೆಲಕ್ಕೆ ಬೀಳಿಸಿರುವ ಫೋಟೋವೊಂದನ್ನು ಅವರು ಬಿಡುಗಡೆ ಮಾಡಿದ್ದಾರೆ. ಶಂಕಿತ ಆರೋಪಿಯನ್ನು ಕ್ಯಾಲಿಫೋರ್ನಿಯಾದ ಟೊರೆನ್ಸ್‌ನ 31 ವರ್ಷದ ಕೋಲೆ ಥೋಮಸ್ ಅಲೆನ್ ಎಂದು ಗುರುತಿಸಲಾಗಿದೆ.

ಶನಿವಾರ ರಾತ್ರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ವಾಷಿಂಗ್ಟನ್‌ನ ಶ್ವೇತಭವನದಲ್ಲಿಲ್ಲಿ ನಡೆದ ಮಾಧ್ಯಮ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆದಿತ್ತು. ಕೋಲೆ ಥೋಮಸ್ ಅಲೆನ್ ವಿರುದ್ಧ ಈ ದಾಳಿ ನಡೆಸಿದ ಆರೋಪ ಹೊರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನೂರಾರು ಅತಿಥಿಗಳು ಸೇರಿದ್ದರು. ಹೋಟೆಲ್‌ನ ದೊಡ್ಡ ಹಾಲ್‌ನ ಹೊರಗಿನ ಸ್ಕ್ರೀನಿಂಗ್ ಪ್ರದೇಶದಲ್ಲಿ ಬಂಧೂಕುಧಾರಿಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಗುಂಡಿನ ದಾಳಿಯ ಸದ್ದು ಕೇಳುತ್ತಿದ್ದಂತೆ ಟ್ರಂಪ್ ಅವರನ್ನು ಭದ್ರತಾ ಸಿಬ್ಬಂದಿ ಕೂಡಲೇ ವೇದಿಕೆಯಿಂದ ಕೆಳಗಿಳಿಸಿ ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ದರು. 

ವರ್ಷದಲ್ಲಿ ಮೂರನೇ ಬಾರಿ ಟ್ರಂಪ್ ಹತ್ಯೆಗೆ ಸಂಚು

ಟ್ರಂಪ್ ಮೇಲೆ ಹತ್ಯೆ ಯತ್ನ ಇದೇ ಮೊದಲಲ್ಲ, ಇದು ಟ್ರಂಪ್ ಮೇಲೆ ಒಂದು ವರ್ಷದ ಅವಧಿಯಲ್ಲಿ ನಡೆದಂತಹ ಮೂರನೇ ಹತ್ಯೆ ಯತ್ನವಾಗಿದ್ದು, ಟ್ರಂಪ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಇದಕ್ಕೂ ಮೊದಲು 2024ರ ಜುಲೈ 13ರಂದು ಟ್ರಂಪ್ ಹತ್ಯೆಗೆ ಯತ್ನ ನಡೆದಿತ್ತು.

ಪೆನ್ಸಿಲ್ವೇನಿಯಾದ ಬಟ್ಲರ್ ಬಳಿ ನಡೆದ ಸಮಾವೇಶದಲ್ಲಿಯಲ್ಲಿ ಮಾತನಾಡುತ್ತಿದ್ದಾಗ ಥಾಮಸ್ ಕ್ರೂಕ್ಸ್ ಎಂಬಾತ AR-15-ಶೈಲಿಯ ರೈಫಲ್‌ನಿಂದ ಟ್ರಂಪ್ ಮೇಲೆ ಎಂಟು ಸುತ್ತಿನ ಗುಂಡಿನ ದಾಳಿ ನಡೆಸಿದ ಈ ದಾಳಿಯಲ್ಲಿಯೂ ಟ್ರಂಪ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಟ್ರಂಪ್ ಬಲಕಿವಿಯ ಪಕ್ಕದಲ್ಲಿ ಗುಂಡು ಹಾದು ಹೋಗಿ ಅವರು ಕಿವಿಗೆ ತುಸು ಗಾಯವಾಗಿತ್ತು. ನಂತರ ನೆಲಕ್ಕೆ ಬಿದ್ದ ಅವರನ್ನು ಅಮೆರಿಕಾದ ಸೀಕ್ರೇಟ್ ಸರ್ವೀಸ್ ಏಜೆಂಟ್‌ಗಳು ರಕ್ಷಿಸಿದ್ದರು.

ಇದಾದ ನಂತರ 2024 ರ ಸೆಪ್ಟೆಂಬರ್ 15ರಂದು ಕೂಡ ಟ್ರಂಪ್ ಹತ್ಯೆ ಯತ್ನ ನಡೆದಿತ್ತು. ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಇಂಟರ್ನ್ಯಾಷನಲ್ ಗಾಲ್ಫ್ ಕ್ಲಬ್‌ನಲ್ಲಿ ಟ್ರಂಪ್ ಗಾಲ್ಫ್ ಆಡುತ್ತಿದ್ದಾಗ ಗುಂಡಿನ ದಾಳಿ ನಡೆಸಿ ಅವರನ್ನು ಸಾಯಿಸುವ ಯತ್ನ ನಡೆದಿತ್ತು. ರಯಾನ್ ರೌತ್ ಎಂಬಾತ ಈ ದಾಳಿ ನಡೆಸಿದ್ದ ಆದರೆ ಈ ದಾಳಿಯಲ್ಲೂ ಟ್ರಂಪ್ ಯಾವುದೇ ಹಾನಿ ಇಲ್ಲದೇ ಪಾರಾಗಿದ್ದರು. ಇದರ ನಡುವೆ ಇರಾನ್ ಕೂಡ ಟ್ರಂಪ್ ಹತ್ಯೆಗೆ ಸಂಚು ನಡೆಸಿದೆ ಎಂದು ಅಮೆರಿಕಾದ ಎಫ್‌ಬಿಐ ಆರೋಪಿಸಿದೆ.

ಶಂಕಿತನ ಫೋಟೋ ಬಿಡುಗಡೆ ಮಾಡಿದ ಟ್ರಂಪ್

ನಿನ್ನೆ ರಾತ್ರಿ ನಡೆದ ದಾಳಿಯ ನಂತರ ಅಲ್ಲಿ ಸೇರಿದ ಅತಿಥಿಗಳು ಗುಂಡಿನ ದಾಳಿಯಿಂದ ಭಯಗೊಂಡು ಮೇಜಿನ ಕೆಳಗೆ ಅಡಗಿಕೊಂಡರೆ ಇತ್ತ ರಹಸ್ಯ ಭದ್ರತಾ ಸಿಬ್ಬಂದಿಗಳು ಟ್ರಂಪ್ ಅವರನ್ನು ಗುಂಡಿನ ದಾಳಿ ನಡೆಯುತ್ತಿದ್ದಂತೆ ವೇದಿಕೆಯಿಂದ ಇಳಿಸಿ ಬೇರೆಡೆ ಕರೆದೊಯ್ದು ರಕ್ಷಿಸಿವೆ.

ಶ್ವೇತ ಭವನದಲ್ಲಿ ಗುಂಡಿನ ದಾಳಿ ನಡೆಸಿದ ಶಂಕಿತ ಶೂಟರ್‌ನ ಫೋಟೋ ಈಗ ಬಿಡುಗಡೆ ಆಗಿದ್ದು, ವಾಷಿಂಗ್ಟನ್ ಹಿಲ್ಟನ್‌ನ ಮೆಟ್ಟಿಲುಗಳ ಬಳಿ ಕಾನೂನು ಜಾರಿ ಸಂಸ್ಥೆಗಳು ಆತನನ್ನು ಬಂಧಿಸಿರುವುದನ್ನು ತೋರಿಸುತ್ತಿವೆ. ಸ್ವತಃ ಡೊನಾಲ್ಡ್ ಟ್ರಂಪ್, ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ ಶಂಕಿತ ಶೂಟರ್‌ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಶಂಕಿತ ಶರ್ಟ್ ಇಲ್ಲದೆ ನೆಲಕ್ಕೆ ಮುಖ ಮಾಡಿ ಬಿದ್ದಿರುವುದು ಹಾಗೂ ಆತನ ಕೈಗಳನ್ನು ಬೆನ್ನನಹಿಂದೆ ಕಟ್ಟಿರುವುದನ್ನು ಕಾಣಬಹುದು.

ಇದನ್ನೂ ಓದಿ: ಸಾಲಬಾಧೆ: ಮುದ್ದಿನ ಶ್ವಾನಕ್ಕೆ ವಿಷನೀಡಿ ತಾನು ಸಾವಿಗೆ ಶರಣಾದ 33 ವರ್ಷದ ಪ್ರಾಪರ್ಟಿ ಡೀಲರ್

ಘಟನೆಯ ಬಗ್ಗೆ ವರದಿಗಾರರನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಸೀಕ್ರೆಟ್ ಸರ್ವಿಸ್ ಆರೋಪಿಯನ್ನು ತಡೆಯುವ ಮೊದಲು ಶಂಕಿತನು ಬಹು ಶಸ್ತ್ರಾಸ್ತ್ರಗಳನ್ನು ಹೊಂದಿದ್ದನು. ಒಬ್ಬ ಅಧಿಕಾರಿಗೆ ಗುಂಡು ಹಾರಿಸಲಾಗಿತ್ತು. ಆದರೆ ಗುಂಡು ನಿರೋಧಕ ಜಾಕೆಟ್‌ನಿಂದಾಗಿ ಅವರ ಜೀವಕ್ಕೆ ಅಪಾಯವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಶೀಘ್ರದಲ್ಲೇ ಆರೋಪಿ ವಿರುದ್ಧ ಆರೋಪ ದಾಖಲಿಸಲಾಗುವುದು ಎಂದು ನಾನು ನಿರೀಕ್ಷಿಸುತ್ತೇನೆ ಎಂದರು.

ಇದನ್ನೂ ಓದಿ: 2ನೇ ಮದುವೆಗೂ ನನಗೆ 'ಕನ್ಯೆ'ಯೇ ಬೇಕು ಎಂದ ವಿಚ್ಛೇದಿತ ಐಐಟಿ ಪದವೀಧರನ ಬೇಡಿಕೆಗೆ ಮ್ಯಾಚ್‌ ಮೇಕರ್ ಗರಂ

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇರಾನ್‌-ಅಮೆರಿಕ ಸಂಧಾನ ಮಾತುಕತೆ ರದ್ದು; ಪಾಕಿಸ್ತಾನಕ್ಕೆ ಬೇಡಿಕೆ ಸಲ್ಲಿಸಿ ನಿರ್ಗಮಿಸಿದ ಇರಾನ್
ಶ್ವೇತಭವನದಲ್ಲಿ ಗುಂಡಿನ ಸದ್ದು: ಡೊನಾಲ್ಡ್ ಟ್ರಂಪ್ ಔತಣಕೂಟದಲ್ಲಿ ಫೈರಿಂಗ್? ವಿಡಿಯೋ