3 ದಿನಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿ ಮೃತಪಟ್ಟ ಮಹಿಳೆ: ಸಹಾಯಕ್ಕೆ ಕಿರುಚಿದ್ರೂ ನೆರವಿಗೆ ಬಾರದ ಜನ!

Published : Aug 01, 2023, 04:53 PM IST
3 ದಿನಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿ ಮೃತಪಟ್ಟ ಮಹಿಳೆ: ಸಹಾಯಕ್ಕೆ ಕಿರುಚಿದ್ರೂ ನೆರವಿಗೆ ಬಾರದ ಜನ!

ಸಾರಾಂಶ

ಓಲ್ಗಾ ಲಿಯೊಂಟಿಯೆವಾ 9 ಅಂತಸ್ತಿನ ಕಟ್ಟಡದ ಮೇಲಿನ ಮಹಡಿಯಿಂದ ಸಹಾಯಕ್ಕಾಗಿ ಕಿರುಚಿದಳು. ಆದರೆ ದುರದೃಷ್ಟವಶಾತ್, ಆಕೆಯ ಹತಾಶ ಮನವಿ ಯಾರಿಗೂ ಕೇಳಲಿಲ್ಲ ಎಂದು ವರದಿಯಾಗಿದೆ. 

ತಾಷ್ಕೆಂಟ್‌ (ಆಗಸ್ಟ್‌ 1, 2023): ಉಜ್ಬೇಕಿಸ್ತಾನ್‌ನ ತಾಷ್ಕೆಂಟ್‌ನ ಅಂಚೆ ಇಲಾಖೆಯಲ್ಲಿ ಕೆಲ ಮಾಡ್ತಿದ್ದ ಮಹಿಳೆ ಓಲ್ಗಾ ಲಿಯೊಂಟಿಯೆವಾ ಲಿಫ್ಟ್‌ನಲ್ಲಿ ಮೂರು ದಿನಗಳವರೆಗೆ ಸಿಕ್ಕಿಬಿದ್ದ ನಂತರ ಶವವಾಗಿ ಪತ್ತೆಯಾಗಿದ್ದಾಳೆ ಎಂದು ತಿಳಿದುಬಂದಿದೆ. ಉಜ್ಬೇಕಿಸ್ತಾನ್‌ನಲ್ಲಿ ಇಂತಹದ್ದೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ಅಲ್ಲದೆ, 3 ದಿನಗಳ ಕಾಲ ಆಕೆಯನ್ನು ರಕ್ಷಿಸಲು ಯಾರೂ ಬರಲಿಲ್ಲ ಎನ್ನುವುದು ಕುತೂಹಲ ಮೂಡಿಸಿದೆ. 

ಓಲ್ಗಾ ಲಿಯೊಂಟಿಯೆವಾ 9 ಅಂತಸ್ತಿನ ಕಟ್ಟಡದ ಮೇಲಿನ ಮಹಡಿಯಿಂದ ಸಹಾಯಕ್ಕಾಗಿ ಕಿರುಚಿದಳು. ಆದರೆ ದುರದೃಷ್ಟವಶಾತ್, ಆಕೆಯ ಹತಾಶ ಮನವಿ ಯಾರಿಗೂ ಕೇಳಲಿಲ್ಲ ಎಂದು ಅಂತಾರಾಷ್ಟ್ರೀಯ ಮಾಧ್ಯಮ ಮಿರರ್‌ ವರದಿ ಮಾಡಿದೆ. ಜುಲೈ 24 ರಂದು ಕೆಲಸ ಮುಗಿಸಿ ಮನೆಗೆ ಬಾರದಿದ್ದಾಗ ಆಕೆ ಕಾಣೆಯಾಗಿದ್ದಾಳೆ ಎಂದು ಆಕೆಯ ಮನೆಯವರು ದೂರು ನೀಡಿದ್ದರು. ಮಹಿಳೆಯ ಪತ್ತೆಗೆ ಮನೆಯವ ಪ್ರಯತ್ನಗಳ ಹೊರತಾಗಿಯೂ, ತೀವ್ರ ಹುಡುಕಾಟದ ನಂತರ ಮರುದಿನ ಲಿಫ್ಟ್‌ನಲ್ಲಿ 32 ವರ್ಷದ ಮೃತದೇಹ ಪತ್ತೆಯಾಗಿದೆ.

ಇದನ್ನು ಓದಿ: ಹಸಿವು, ಬಳಲಿಕೆಯಿಂದ ಮೃತಪಟ್ಟ ವೀಗನ್‌ ಇನ್ಫ್ಲುಯೆನ್ಸರ್‌: ಕಚ್ಚಾ ಆಹಾರ ಮಾತ್ರ ಸೇವಿಸ್ತಿದ್ದ ಮಹಿಳೆ

ಆಕೆ ಆರು ವರ್ಷದ ಮಗಳನ್ನು ಅಗಲಿದ್ದು, ಈಗ ಆ ಬಾಲಕಿ ಸಂಬಂಧಿಕರ ಆಶ್ರಯದಲ್ಲಿದ್ದಾಳೆ ಎಂದು ತಿಳಿದುಬಂದಿದೆ. ಇನ್ನು, ಈ ಘಟನೆಯ ಕುರಿತು ಪ್ರಾಸಿಕ್ಯೂಟರ್ ಕಚೇರಿ ತನಿಖೆಯನ್ನು ಪ್ರಾರಂಭಿಸಿದೆ. ನೋಂದಣಿಯಾಗಿಲ್ಲದಿದ್ದರೂ ಚೀನಾ ನಿರ್ಮಿತ ಈ ಲಿಫ್ಟ್ ಕಾರ್ಯನಿರ್ವಹಿಸುತ್ತಿತ್ತು ಎಂದೂ ತಿಳಿದುಬಂದಿದೆ. ಘಟನೆಯ ದಿನದಂದು ಯಾವುದೇ ವಿದ್ಯುತ್ ಕಡಿತ ಇರಲಿಲ್ಲ ಎಂದು ಪ್ರಾದೇಶಿಕ ಎಲೆಕ್ಟ್ರಿಸಿಟಿ ನೆಟ್ವರ್ಕ್ಸ್ ಎಂಟರ್ಪ್ರೈಸ್ ದೃಢಪಡಿಸಿದೆ. ಆದರೆ, ದುರಂತಕ್ಕೆ ಲಿಫ್ಟ್ ಅಸಮರ್ಪಕ ಕಾರಣ ಎಂದು ನಿವಾಸಿಗಳ ಹೇಳಿಕೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದೂ ತಿಳಿದುಬಂದಿದೆ.

ಇಟಲಿಯಲ್ಲೂ ಲಿಫ್ಟ್‌ನಲ್ಲಿ ಸಿಲುಕಿ ಮೃತಪಟ್ಟಿದ್ದ ಮಹಿಳೆ
ಕಳೆದ ವಾರ ಇಟಲಿಯ ಪಲೆರ್ಮೊದಲ್ಲಿ ಇದೇ ರೀತಿಯ ಘಟನೆ ಸಂಭವಿಸಿದ್ದು, ಅಲ್ಲಿ 61 ವರ್ಷದ ಮಹಿಳೆ ಫ್ರಾನ್ಸೆಸ್ಕಾ ಮಾರ್ಚಿಯೋನ್ ವಿದ್ಯುತ್ ಕಡಿತದ ಸಮಯದಲ್ಲಿ ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡು ಮೃತಪಟ್ಟಿದ್ದರು. ಜುಲೈ 26 ರಂದು ವಿದ್ಯುತ್ ವ್ಯತ್ಯಯ ಸಂಭವಿಸಿದ್ದು, ವಸತಿ ಕಟ್ಟಡವು ಕತ್ತಲೆಯಲ್ಲಿತ್ತು. 

ಇದನ್ನೂ ಓದಿ: ತೋಳ ಆಗೋದೇ ಈತನ ಬಾಲ್ಯದ ಕನಸು: 20 ಲಕ್ಷ ರೂ. ಖರ್ಚು ಮಾಡಿ ಹೇಗೆ ಕಾಣ್ತಾನೆ ನೋಡಿ..!

ತುರ್ತು ಸೇವೆಗಳನ್ನು ಘಟನಾ ಸ್ಥಳಕ್ಕೆ ಕರೆಯಲಾಯಿತು. ಆದರೆ ದುರಂತವೆಂದರೆ, ಎರಡು ಮಹಡಿಗಳ ನಡುವೆ ಸಿಲುಕಿಕೊಂಡಿದ್ದ ಲಿಫ್ಟ್‌ನೊಳಗೆ ಫ್ರಾನ್ಸೆಸ್ಕಾ ಮಾರ್ಚಿಯೋನ್ ಅವರ ಮೃತದೇಹ ಪತ್ತೆಯಾಗಿತ್ತು. ಅಲ್ಲದೆ, ಎರಡು ಮಹಡಿಗಳ ನಡುವೆ ಸಿಲುಕಿದ್ದ ಕಾರಣ ಲಿಫ್ಟ್‌ ಬಾಗಿಲು ತೆರೆದರೂ ಆಕೆಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದೂ ತಿಳಿದುಬಂದಿದೆ. ಈ ಹಿನ್ನೆಲೆ, ಅಪಘಾತಗಳ ನಿಖರವಾದ ಕಾರಣವನ್ನು ನಿರ್ಧರಿಸಲು ಮತ್ತು ಭವಿಷ್ಯದಲ್ಲಿ ಇಂತಹ ದುರಂತಗಳು ಸಂಭವಿಸದಂತೆ ತಡೆಯಲು ಎರಡೂ ಪ್ರಕರಣಗಳನ್ನು ಈಗ ಸಂಪೂರ್ಣವಾಗಿ ತನಿಖೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. 

ಲಿಫ್ಟ್‌ನಲ್ಲಿ ಸಿಲುಕಿ ಅನೇಕ ದುರಂತ, ಅವಘಡಗಳು ಭಾರತದಲ್ಲೂ ನಡೆದಿವೆ. ಜಗತ್ತಿನಾದ್ಯಂತ ಇಂತಹ ಅನೇಕ ಘಟನೆಗಳು ಲಿಫ್ಟ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಜೀವಂತವಾಗಿದ್ದರೂ ಅನೇಕರು ತಮ್ಮ ದೇಹದ ಭಾಗಗಳು ಕಟ್‌ ಆಗಿರುವ ಪ್ರಕರಣಗಳೂ ಬೆಳಕಿಗೆ ಬಂದಿದೆ. 

ಇದನ್ನೂ ಓದಿ: ಆಸ್ಟ್ರೇಲಿಯಾ ಬೀಚ್‌ನಲ್ಲಿ ಪತ್ತೆಯಾದ ನಿಗೂಢ ವಸ್ತುವಿನ ರಹಸ್ಯ ಬಹಿರಂಗ: ಭಾರತಕ್ಕೂ ಇದಕ್ಕೂ ಸಂಬಂಧ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ