ಕನಿಷ್ಠ ಒಂದು ದಶಕದಿಂದ ಕಚ್ಚಾ ಸಸ್ಯಾಹಾರಿ ಆಹಾರವನ್ನು ಮಾತ್ರ ಅನುಸರಿಸುತ್ತಿದ್ದ ವೀಗನ್ ಇನ್ಫ್ಲುಯೆನ್ಸರ್ ಝನ್ನಾ ಸ್ಯಾಮ್ಸೊನೋವಾ ಅವರು ಹಸಿವು, ಬಳಲಿಕೆಯಿಂದ ಮೃತಪಟ್ಟಿದ್ದಾರೆ.
ಮಾಸ್ಕೋ (ಆಗಸ್ಟ್ 1, 2023): 39 ವರ್ಷ ವಯಸ್ಸಿನ ವೀಗನ್ ಇನ್ಫ್ಲುಯೆನ್ಸರ್ ಹಸಿವಿನಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರಷ್ಯಾದ ಪ್ರಜೆ ಝನ್ನಾ ಸ್ಯಾಮ್ಸೊನೋವಾ ಅವರು ಕಚ್ಚಾ ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಿದ್ದರು. ಹಾಗೂ, ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲೂ ಅದರ ಬಗ್ಗೆ ಮಾತ್ರ ಪ್ರಚಾರ ಮಾಡುತ್ತಿದ್ದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಆಗ್ನೇಯ ಏಷ್ಯಾದ ಪ್ರವಾಸದಲ್ಲಿದ್ದ ಮಹಿಳೆ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ, ಚಿಕಿತ್ಸೆ ಫಲಕಾರಿಯಾಗದೆ ಜುಲೈ 21 ರಂದು ನಿಧನರಾಗಿದ್ದಾಳೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ಹೇಳುತ್ತಿವೆ. ಕನಿಷ್ಠ ಒಂದು ದಶಕದಿಂದ ಝನ್ನಾ ಸ್ಯಾಮ್ಸೊನೋವಾ ಕಚ್ಚಾ ಸಸ್ಯಾಹಾರಿ ಆಹಾರವನ್ನು ಮಾತ್ರ ಅನುಸರಿಸುತ್ತಿದ್ದರು ಎಂದು ಆ ಮಹಿಳೆಯ ಇನ್ಸ್ಟಾಗ್ರಾಮ್ ಪೋಸ್ಟ್ ಹೇಳುತ್ತದೆ.
ಇದನ್ನು ಓದಿ: ತೋಳ ಆಗೋದೇ ಈತನ ಬಾಲ್ಯದ ಕನಸು: 20 ಲಕ್ಷ ರೂ. ಖರ್ಚು ಮಾಡಿ ಹೇಗೆ ಕಾಣ್ತಾನೆ ನೋಡಿ..!
ಇನ್ನು, ಈಕೆಯ ಬಗ್ಗೆ ಆಕೆಯ ಗೆಳತಿಯೊಬ್ಬಳು ಮಾತನಾಡಿದ್ದು, ಶ್ರೀಲಂಕಾದಲ್ಲಿ ಆಕೆಯನ್ನು ಕೆಲವು ತಿಂಗಳ ಹಿಂದೆ ನೋಡಿದಾಗಲೇ ಆಕೆ ದಣಿದಿದ್ದಳು, ಆಕೆಯ ಕಾಲುಗಳು ಊದಿಕೊಂಡಿದ್ದವು. ಚಿಕಿತ್ಸೆ ಪಡೆಯಲು ಅವಳನ್ನು ಮನೆಗೆ ಕಳುಹಿಸಲಾಗಿತ್ತು. ಆದರೆ, ಅವಳು ಮತ್ತೆ ಓಡಿಹೋದಳು. ನಾನು ಅವಳನ್ನು ಫುಕೆಟ್‌ನಲ್ಲಿ ನೋಡಿದಾಗ, ನಾನು ಗಾಬರಿಗೊಂಡೆ’’ ಎಂದೂ ಹೇಳಿದ್ದಾರೆ. ಹಾಗೂ, "ನಾನು ಅವಳು ವಾಸಿಸುತ್ತಿದ್ದ ಫ್ಲಾಟ್‌ನ ಒಂದು ಮಹಡಿ ಮೇಲೆ ವಾಸಿಸುತ್ತಿದ್ದೆ ಮತ್ತು ಪ್ರತಿದಿನ ಬೆಳಿಗ್ಗೆ ಅವಳ ನಿರ್ಜೀವ ದೇಹವನ್ನು ಕಂಡು ಭಯಪಡುತ್ತಿದ್ದೆ. ನಾನು ಅವಳಿಗೆ ಚಿಕಿತ್ಸೆ ಪಡೆಯಲು ಮನವೊಲಿಸಿದೆ. ಆದರೆ, ಅವಳು ಹಾಗೆ ಮಾಡಲಿಲ್ಲ’’ ಎಂದೂ ಸ್ನೇಹಿತೆ ಹೇಳಿಕೊಂಡಿದ್ದಾರೆ.
"ಕಾಲರಾ ತರಹದ ಸೋಂಕಿನಿಂದ" ತನ್ನ ಮಗಳು ಸಾವಿಗೀಡಾಗಿದ್ದಾಳೆ ಎಂದು ಝನ್ನಾ ಸ್ಯಾಮ್ಸೊನೋವಾ ಅವರ ತಾಯಿ ಹೇಳಿದರು. ಆದರೂ, ಸಾವಿನ ಅಧಿಕೃತ ಕಾರಣ ಈವರೆಗೆ ಬಹಿರಂಗವಾಗಿಲ್ಲ. ಆಲ್ - ವೀಗನ್ ಡಯಟ್‌ನಿಂದ ಬಳಲಿಕೆ ಮತ್ತು ಅವಳ ದೇಹದ ಮೇಲೆ ಒತ್ತಡ ಉಂಟಾಗಿ ಮೃತಟ್ಟಿರಬಹುದು ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಫಿಟ್‌ನೆಸ್ ಚಾಲೆಂಜ್‌ಗಾಗಿ ಅತಿ ಹೆಚ್ಚು ನೀರು ಕುಡಿದ ಟಿಕ್‌ಟಾಕರ್ ಆಸ್ಪತ್ರೆಗೆ ದಾಖಲು
ಕಳೆದ ಏಳು ವರ್ಷಗಳಿಂದ ಅಕೆ ದೈತ್ಯ, ಸಿಹಿ ಹಲಸು ಮತ್ತು ದುರಿಯನ್ ಎಂಬ ಹಣ್ಣನ್ನು ಮಾತ್ರ ಸೇವಿಸುತ್ತಿದ್ದಳು ಎಂದು ಆಕೆಯ ಆಪ್ತ ಸ್ನೇಹಿತರೊಬ್ಬರು ಹೇಳಿದ್ದಾರೆಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. "ನನ್ನ ದೇಹ ಮತ್ತು ಮನಸ್ಸು ಪ್ರತಿದಿನ ರೂಪಾಂತರಗೊಳ್ಳುವುದನ್ನು ನಾನು ನೋಡುತ್ತೇನೆ," ಎಂದು ಸ್ಯಾಮ್ಸೋನೋವಾ ತನ್ನ ವೀಗನ್ ಆಹಾರ ಪದ್ಧತಿಯ ಬಗ್ಗೆ ಹೇಳಿಕೊಮಡಿದ್ದಳಂತೆ. ಹಾಗೂ, ನಾನು ಹೊಸ ಮನುಷ್ಯಳಾಗೇ ಇರುವುದನ್ನು ಇಷ್ಟಪಡುತ್ತೇನೆ. ಹಳೆಯ ಅಭ್ಯಾಸಗಳಿಗೆ ಎಂದಿಗೂ ಮರಳುವುದಿಲ್ಲ’’ ಎಂದೂ ಝನ್ನಾ ಸ್ಯಾಮ್ಸೊನೋವಾ ಹೇಳಿಕೊಂಡಿದ್ದಳು ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲದೆ, ತನ್ನ ಕಚ್ಚಾ ಆಹಾರದ ಸಿದ್ಧಾಂತವನ್ನು ಹರಡಲು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಝನ್ನಾ ಸ್ಯಾಮ್ಸೊನೋವಾ ಬಳಸಿಕೊಳ್ಳುತ್ತಿದ್ದಳು.
ಇದನ್ನೂ ಓದಿ: ಆಸ್ಟ್ರೇಲಿಯಾ ಬೀಚ್‌ನಲ್ಲಿ ಪತ್ತೆಯಾದ ನಿಗೂಢ ವಸ್ತುವಿನ ರಹಸ್ಯ ಬಹಿರಂಗ: ಭಾರತಕ್ಕೂ ಇದಕ್ಕೂ ಸಂಬಂಧ!
ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಝನ್ನಾ ಡಿ'ಆರ್ಟ್ ಸಾವಿಗೆ ಸಂತಾಪ
ಝನ್ನಾ ಡಿ'ಆರ್ಟ್ ಎಂಬ ಹೆಸರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆಗಳನ್ನು ಬಳಸುತ್ತಿದ್ದ ಮಹಿಳೆಯ ಸಾವಿನ ಸುದ್ದಿ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಘಾತಗೊಳಿಸಿದೆ. ಅಲ್ಲದೆ, ಅವಳಂತೆ ಎಲ್ಲ ವೀಗನ್‌ಗಳು ಆಹಾರ ಬಳಸದಂತೆಯೂ ಅನೇಕ ನೆಟ್ಟಿಗರು ಎಚ್ಚರಿಕೆ ನೀಡಿದ್ದಾರೆ. ಝನ್ನಾ ಡಿ ಆರ್ಟ್ ಅವರ ಸಾವಿನ ಸುದ್ದಿ ಸಾರ್ವಜನಿಕವಾಗಿ ಹರಡುತ್ತಿದ್ದಂತೆ, ಅಂತರ್ಜಾಲವು ಶ್ರದ್ಧಾಂಜಲಿ ಮತ್ತು ಸಂತಾಪ ಸಂದೇಶಗಳಿಂದ ತುಂಬಿದೆ.
ಇದನ್ನೂ ಓದಿ: ಅಬ್ಬಬ್ಬಾ.. ದುಬೈ ಶೇಖ್‌ನ ಈ 46 ಅಡಿ ಎತ್ತರದ ಹಮ್ಮರ್ ನೋಡಿ: ಇದ್ರ ಮುಂದೆ ಇತರ ವಾಹನಗಳು ಕುಬ್ಜವಾಗೇ ಕಾಣ್ಸುತ್ತೆ!