ರೈಲು ಹಳಿಯೊಂದರ ಮೇಲೆ ಬಾಲಕರಿಬ್ಬರು ನಡೆದುಕೊಂಡು ಹೋಗುತ್ತಿದ್ದು ಈ ವೇಳೆ ಸಡನ್ ಆಗಿ ರೈಲು ಬಂದಿದ್ದು ಬಾಲಕರು ಪಕ್ಕಕ್ಕೆ ಹೋಗಿ ಕ್ಷಣದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ರೈಲು ಬರುವುದು ತಿಳಿಯದೇ ರೈಲಿನಡಿಗೆ ಸಿಲುಕಿ ಅನೇಕರು ಸಾವನ್ನಪ್ಪಿದ್ದ ಅಥವಾ ರೈಲು ಡಿಕ್ಕಿ ಹೊಡೆಯುವುದಕ್ಕೂ ಮೊದಲು ಕ್ಷಣದಲ್ಲಿ ಅಪಘಾತದಿಂದ ಪಾರಾದ ಅನೇಕ ದೃಶ್ಯಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಅದೇ ರೀತಿ ಈಗ ರೈಲು ಹಳ್ಳಿಯಲ್ಲಿ ಸಾಗುತ್ತಿರುವ ಬಾಲಕರಿಬ್ಬರು ಸಾವಿನ ದವಡೆಯಿಂದ ಕ್ಷಣದಲ್ಲಿ ಪಾರಾದ ವಿಡಿಯೋವೊಂದು ವೈರಲ್ ಆಗಿದೆ.
ವಿಡಿಯೋದಲ್ಲಿ ಕಾಣಿಸುವಂತೆ ಹಿಂದಿನಿಂದ ರೈಲು ಬರುತ್ತಿದ್ದರೆ, ಬಾಲಕರಿಬ್ಬರು ಅದರ ಮುಂಭಾಗದಲ್ಲಿ ರೈಲು ಹಳಿಯ ಮೇಲೆ ನಡೆಯುತ್ತಾ ಸಾಗುತ್ತಿದ್ದಾರೆ. ಈ ವೇಳೆ ರೈಲೊಂದು ದಿಢೀರನೇ ಬಂದಿದ್ದು, ರೈಲು ಇನ್ನೇನು ಡಿಕ್ಕಿ ಹೊಡೆಯಬೇಕೆನ್ನುವಷ್ಟರಲ್ಲಿ ಬಾಲಕರಿಬ್ಬರು ಹಳಿಯಿಂದ ದೂರ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಮೇ 20, ಶುಕ್ರವಾರದಂದು ಟೊರೊಂಟೊದ ಹಂಬರ್ ನದಿಯ ರೈಲು ಸೇತುವೆಯ ಮೇಲೆ ಈ ಘಟನೆ ನಡೆದಿದೆ. ಸೇತುವೆಯ ಮೇಲೆ ಬಾಲಕರ ಗುಂಪೊಂದು ಅನುಮತಿಯಿಲ್ಲದೆ ನಡೆದುಕೊಂಡು ಹೋದಾಗ ಈ ಘಟನೆ ಸಂಭವಿಸಿದೆ. ಈ ತರುಣರಲ್ಲಿ ಒಬ್ಬ ಚಲಿಸುವ ರೈಲಿನ ಮುಂದೆಯೇ ಹಳಿಯಿಂದ ಪಕ್ಕಕ್ಕೆ ಓಡುವುದನ್ನು ಘಟನೆಯ ಸಿಸಿಟಿವಿ ವೀಡಿಯೋ (CCTV video) ತೋರಿಸುತ್ತಿದೆ.
ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಮೆಟ್ರೋಲಿಂಕ್ಸ್ (Metrolinx) ಎಂಬ ಖಾತೆಯಿಂದ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಹೃದಯವನ್ನು ನಿಲ್ಲಿಸುವಂತಹ ಈ ವೀಡಿಯೊ ರೈಲು ಮಾರ್ಗದಲ್ಲಿ ನಡೆದು ಹೋಗುವುದರಿಂದ ಆಗುವ ಅಪಾಯವನ್ನು ತೋರಿಸುತ್ತಿದೆ. ಟೊರೊಂಟೊದಲ್ಲಿ ರೈಲು ಸೇತುವೆಯ ಮೇಲೆ ಸಾವಿನಿಂದ ಕೆಲ ಸೆಕೆಂಡುಗಳ ಅಂತರದಲ್ಲಿ ಯುವಕರು ಪ್ರಯಾಣಿಸಿದ್ದಾರೆ. ರೈಲಿನ ಹಳ್ಳಿಗಳ ಮೇಲೆ ನಡೆಯುವ ವೇಳೆ ಆಗುವ ಅನಾಹುತದ ಬಗ್ಗೆ ನಿಮ್ಮ ಮಕ್ಕಳಿಗೆ ಅರಿವು ಮೂಡಿಸಿ ಎಂದು ಬರೆದು ವಿಡಿಯೋ ಪೋಸ್ಟ್ ಮಾಡಲಾಗಿದೆ.
40 ಗಂಟೆಗಳ ಕಾಲ ನೂರಾರು ರೈಲುಗಳು ರದ್ದು: ಇದಕ್ಕೆಲ್ಲಾ ಕಾರಣ ರಸಗುಲ್ಲಾ!
ಆಪರೇಷನ್ ಲೈಫ್ ಸೇವರ್ ಪ್ರಕಾರ, ರೈಲ್ವೇ ಕ್ರಾಸಿಂಗ್ ಘಟನೆಗಳಲ್ಲಿ ಪ್ರತಿ ವರ್ಷ 100 ಕ್ಕೂ ಹೆಚ್ಚು ಕೆನಡಿಯನ್ನರು ಗಂಭೀರವಾಗಿ ಗಾಯಗೊಂಡಿದ್ದಾರೆ ಅಥವಾ ಸಾಯುತ್ತಾರೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಆದರೆ ಅಧಿಕಾರಿಗಳು ಈ ರೈಲು ಹಳಿಗಳ ಮೇಲೆ ನಡೆದ ತರುಣರ ಗುರುತನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನೀವು ಈ ಯುವಕರನ್ನು ಗುರುತಿಸಿದರೆ, ದಯವಿಟ್ಟು ನಮ್ಮೊಂದಿಗೆ ಸಂಪರ್ಕದಲ್ಲಿರಿ ಎಂದು ಮೆಟ್ರೋಲಿಂಕ್ಸ್ ಗ್ರಾಹಕ ರಕ್ಷಣಾ ಸೇವೆಗಳ ವ್ಯವಸ್ಥಾಪಕ ಸ್ಟೀವ್ ವೀರ್ ಹೇಳಿದ್ದಾರೆ. ನಾವು ಶಿಕ್ಷೆ ನೀಡಲು ಬಯಸುತ್ತಿಲ್ಲ. ಆದರೆ ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಸಹಾಯ ಮಾಡಲು ಮತ್ತು ಅವರು ಎಂದಿಗೂ ಈ ರೀತಿಯ ಅಪಾಯವನ್ನು ತೆಗೆದುಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ಅವರೊಂದಿಗೆ ಮಾತನಾಡಲು ಉತ್ಸುಕರಾಗಿದ್ದೇವೆ ಎಂದು ಅವರು ಬರೆದಿದ್ದಾರೆ.
ಬೇಗ ಬಂದ ರೈಲು: ಪ್ಲಾಟ್‌ಫಾರ್ಮ್‌ನಲ್ಲೇ ಪ್ರಯಾಣಿಕರ ಡಾನ್ಸ್ ವಿಡಿಯೋ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ