Operation Ganga: ಏರ್‌ಲಿಫ್ಟ್‌ ಬಹುತೇಕ ಅಂತ್ಯ: ಉಕ್ರೇನ್‌ನಿಂದ ಈವರೆಗೆ 18,000 ಮಂದಿ ರಕ್ಷಣೆ

Published : Mar 10, 2022, 04:31 AM IST
Operation Ganga: ಏರ್‌ಲಿಫ್ಟ್‌ ಬಹುತೇಕ ಅಂತ್ಯ: ಉಕ್ರೇನ್‌ನಿಂದ ಈವರೆಗೆ 18,000 ಮಂದಿ ರಕ್ಷಣೆ

ಸಾರಾಂಶ

*  ಸುಮಿಯಿಂದ ಸ್ಥಳಾಂತರಿಸಿದ 700 ಜನರು ಇಂದು ತವರಿಗೆ ವಾಪಸ್‌ *  ತಾಯ್ನಾಡಿಗೆ ಮರಳಿದ 621 ಕನ್ನಡಿಗರು *  22 ಮಂದಿಯ ಸುಳಿವಿಲ್ಲ  

ಕೀವ್‌(ಮಾ.10): ಯುದ್ಧಪೀಡಿತ ಉಕ್ರೇನ್‌ನಿಂದ(Ukraine) ಭಾರತೀಯರನ್ನು(Indians) ರಕ್ಷಿಸುವ ‘ಆಪರೇಷನ್‌ ಗಂಗಾ’(Operation Ganga) ಕಾರ್ಯಾಚರಣೆ ಕೊನೆ ಹಂತ ತಲುಪಿದ್ದು, ಬಹುತೇಕ ಅಂತ್ಯದತ್ತ ಸಾಗಿದೆ. ಸುಮಿ ನಗರದಲ್ಲಿ ಸಿಲುಕಿದ್ದ 700 ಭಾರತೀಯರನ್ನು ಕೊನೆಯದಾಗಿ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಇವರೆಲ್ಲರೂ ಗುರುವಾರ ಪೋಲೆಂಡ್‌(Poland) ಮೂಲಕ ಭಾರತಕ್ಕೆ(India) ಹಿಂದಿರುಗಲಿದ್ದಾರೆ. ಈ ಮಧ್ಯೆ ಉಕ್ರೇನ್‌ನಿಂದ ಈವರೆಗೆ 621 ಕನ್ನಡಿಗರು ಕರ್ನಾಟಕಕ್ಕೆ ಮರಳಿದ್ದಾರೆ. 16 ವಿದ್ಯಾರ್ಥಿಗಳು ದೇಶದತ್ತ ಆಗಮಿಸುತ್ತಿದ್ದು, 22 ಮಂದಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಯುದ್ಧ(War) ಆರಂಭವಾದಾಗಿನಿಂದಲೂ ಉಕ್ರೇನ್‌ನಿಂದ ಭಾರತ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಉಕ್ರೇನ್‌ನಲ್ಲಿ ಸಿಲುಕಿದ್ದ ಸುಮಾರು 18 ಸಾವಿರ ಭಾರತೀಯರನ್ನು 12 ದಿನಗಳಲ್ಲಿ ‘ಆಪರೇಷನ್‌ ಗಂಗಾ’ ಮೂಲಕ 87 ವಿಮಾನಗಳಲ್ಲಿ ಭಾರತಕ್ಕೆ ಕರೆತರಲಾಗಿದೆ.

ಯುನಿವರ್ಸಿಟಿಯವರು ನಾವು ಹೆಲ್ಪ್‌ಲೆಸ್, ನಿಮ್ಮ ರಿಸ್ಕ್‌ನಲ್ಲಿ ಹೋಗಿ ಎಂದರು: ವಿದ್ಯಾರ್ಥಿನಿ

ಖಾರ್ಕೀವ್‌, ಕೀವ್‌ ಸೇರಿ ಹಲವು ನಗರಗಳಿಂದ ಭಾರತೀಯರ ರಕ್ಷಣಾ ಕಾರ್ಯ ಬಹುತೇಕ ಮುಗಿದಿತ್ತು. ಆದರೆ ಸುಮಿ ನಗರದಲ್ಲಿ ರಷ್ಯಾ ಹೆಚ್ಚಿನ ಪ್ರಮಾಣದಲ್ಲಿ ಶೆಲ್‌ ದಾಳಿ ನಡೆಸುತ್ತಿದ್ದ ಕಾರಣ ಇಲ್ಲಿಂದ ಜನರನ್ನು ಸ್ಥಳಾಂತರಿಸುವುದು ಕಷ್ಟದ ಕೆಲಸವಾಗಿತ್ತು.

ಈ ನಡುವೆ, ರಷ್ಯಾ ಕೆಲ ಹೊತ್ತು ಕದನವಿರಾಮ ಸಾರಿದ್ದರಿಂದ ಸುಮಿಯಲ್ಲಿ ಸಿಲುಕಿಕೊಂಡಿರುವ ಸುಮಾರು 700 ವಿದ್ಯಾರ್ಥಿಗಳನ್ನು(Students) 13 ಬಸ್‌ಗಳ ಮೂಲಕ ಪೊಲ್ಟಾವಾ ನಗರಕ್ಕೆ ಮಂಗಳವಾರ ಸ್ಥಳಾಂತರಿಸಲಾಗಿತ್ತು. ಒಬ್ಬ ಪಾಕಿಸ್ತಾನಿ ಮಹಿಳೆ, ಒಬ್ಬ ನೇಪಾಳಿ ನಾಗರಿಕ, 13 ಬಾಂಗ್ಲಾದೇಶೀಯರು ಹಾಗೂ ಇಬ್ಬರು ಟ್ಯುನೀಶಿಯನ್ನರನ್ನೂ ಭಾರತ ರಕ್ಷಿಸಿತ್ತು. ‘ಪೊಲ್ಟಾವಾದಿಂದ ಬುಧವಾರ ಅವರನ್ನು ರೈಲುಗಳ ಮೂಲಕ ಪಶ್ಚಿಮ ಉಕ್ರೇನ್‌ನ ಲ್ವೀವ್‌ ನಗರಕ್ಕೆ ಕರೆದೊಯ್ಯಲಾಯಿತು. ಲ್ವೀವ್‌ನಿಂದ ಪೋಲೆಂಡ್‌ಗೆ ತೆರಳಲು ಬಸ್‌ ವ್ಯವಸ್ಥೆ ಮಾಡಲಾಗಿತ್ತು’ ಎಂದು ವಿದ್ಯಾರ್ಥಿಗಳ ಸಂಯೋಜಕ ಅನ್‌ಶಾದ್‌ ಅಲಿ ಹೇಳಿದ್ದಾರೆ.

ರಷ್ಯಾ(Russia0 ನಿರಂತರವಾಗಿ ದಾಳಿ ನಡೆಸುತ್ತಿದ್ದರೂ ಎಲ್ಲಾ ವಿದ್ಯಾರ್ಥಿಗಳನ್ನು 888 ಕಿ.ಮೀ ದೂರದ ನಗರಕ್ಕೆ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಈ ಮೂಲಕ ಸುಮಿಯಲ್ಲಿ ಸಿಲುಕಿಕೊಂಡಿದ್ದ 700 ಭಾರತೀಯರ ಕೊನೆಯ ಗುಂಪನ್ನು ರಕ್ಷಿಸಿದಂತಾಗಿದೆ. ಹೀಗಾಗಿ ಕಾರ್ಯಾಚರಣೆ ಬಹುತೇಕ ಅಂತ್ಯವಾಗಿದೆ ಎಂದು ಹೇಳಲಾಗುತ್ತಿದೆ.

ಪ್ರಧಾನಿ ಮೋದಿಗೆ ಗ್ಲಾ ಪ್ರಧಾನಿ ಸೀನಾ ಥ್ಯಾಂಕ್ಸ್‌

ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನ ಸುಮಿಯಲ್ಲಿ ಸಿಲುಕಿದ್ದ 700 ಭಾರತೀಯರ ಜತೆಗೆ 13 ಬಾಂಗ್ಲಾದೇಶ(Bangladesh) ಪ್ರಜೆಗಳನ್ನೂ ರಕ್ಷಣೆ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದ(Narendra Modi) ಅವರಿಗೆ ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ(Sheikh Hasina) ಧನ್ಯವಾದ ಹೇಳಿದ್ದಾರೆ.

ಕದನ ವಿರಾಮ: ತಗ್ಗಿದ ಬಾಂಬ್‌ ದಾಳಿ

ಕೀವ್‌: ರಷ್ಯಾ ಹಾಗೂ ಉಕ್ರೇನ್‌ ಬುಧವಾರ 12 ಗಂಟೆಗಳ ಕಾಲ ಕದನ ವಿರಾಮ(ceasefire) ಪಾಲನೆ ಮಾಡಿವೆ. ಹೀಗಾಗಿ ಶೆಲ್‌, ಬಾಂಬ್‌ ಹಾಗೂ ಕ್ಷಿಪಣಿ ದಾಳಿಗಳ ಅಬ್ಬರ ತಗ್ಗಿದೆ. ಸಣ್ಣಪುಟ್ಟದಾಳಿ ಹೊರತುಪಡಿಸಿ ದೊಡ್ಡ ರೀತಿಯ ಕದನ ವರದಿಯಾಗಿಲ್ಲ. ಕದನ ವಿರಾಮ ವೇಳೆ ಸಹಸ್ರಾರು ನಾಗರಿಕರನ್ನು ಸ್ಥಳಾಂತರಿಸಲಾಗಿದೆ.

ಪಿಎಂ ಮೋದಿಯ ಎರಡು ಫೋನ್ ಕರೆ, ಉಕ್ರೇನ್‌ನ ಸುಮಿಯಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳೆಲ್ಲಾ ಸೇಫ್!

ಶೆಲ್‌ ದಾಳಿ ನಡುವೆಯೇ 700 ಕಿ.ಮೀ ಡ್ರೈವ್‌ ಮಾಡಿ ಭಾರತೀಯನ ರಕ್ಷಣೆ!

ರಷ್ಯಾ ನಡೆಸಿದ ದಾಳಿಗೆ ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಭಾರತೀಯ ವಿದ್ಯಾರ್ಥಿಯನ್ನು, ಉಕ್ರೇನ್‌ನ ಭಾರತೀಯ ರಾಯಭಾರ ಕಚೇರಿಯ ಚಾಲಕ ಸುರಕ್ಷಿತವಾಗಿ ಪೋಲೆಂಡ್‌ ಗಡಿಗೆ ತಲುಪಿಸಿದ್ದಾನೆ. ರಷ್ಯಾ ನಡೆಸುತ್ತಿದ್ದ ಸತತ ದಾಳಿಯ ನಡುವೆಯೂ ಸುಮಾರು 700 ಕಿ.ಮೀ. ದೂರ ವಾಹನ ಚಾಲನೆ ಮಾಡುವ ಮೂಲಕ ಗಡಿ ತಲುಪಿಸಿದ್ದಾನೆ.

ಹರ್ಜೋತ್‌ ಸಿಂಗ್‌ ಸೋಮವಾರ ಭಾರತೀಯ ವಾಯುಪಡೆ ವಿಮಾನದಲ್ಲಿ ಸುರಕ್ಷಿತವಾಗಿ ಹಿಂಡನ್‌ ವಾಯುನೆಲೆಗೆ ಬಂದು ತಲುಪಿದ್ದಾರೆ. ಕೀವ್‌ನಿಂದ ಪೊಲೆಂಡ್‌ ಗಡಿಗೆ ಸ್ಥಳಾಂತರಿಸುವ ಸಮಯದಲ್ಲಿ ರಾಯಭಾರ ಕಚೇರಿ ಕ್ಷಣ ಕ್ಷಣಕ್ಕೂ ಅಲ್ಲಿನ ಕರಾಳ ಪರಿಸ್ಥಿತಿಯನ್ನು ಕುರಿತು ಸರಣಿ ಟ್ವೀಟ್‌ ಮಾಡಿದೆ. ‘ಹರ್ಜೋತ್‌ ಸಿಂಗ್‌ ಅವರನ್ನು ಪೊಲಂಡ್‌ ಗಡಿಗೆ ತಲುಪಿಸುವ ದೃಷ್ಟಿಯಿಂದ ರಾಯಭಾರ ಕಚೇರಿಯ ಚಾಲಕ ಶೆಲ್‌ ದಾಳಿಯ ನಡುವೆಯೂ 700 ಕಿ.ಮೀ. ದೂರ ಚಾಲನೆ ಮಾಡಿದ್ದಾರೆ’ ಎಂದು ಪ್ರಶಂಸೆ ವ್ಯಕ್ತಪಡಿಸಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ