
ಬಾಂಗ್ಲಾದೇಶದ ಫತುಲ್ಲಾದ ನಾರಾಯಣ್‌ಗಂಜ್‌ನ ಮಸೀದಿಯಲ್ಲಿ ಏರ್ ಕಂಡೀಷನರ್ ಸ್ಫೋಟಗೊಂಡು 11 ಜನರು ಮೃತಪಟ್ಟಿರುವ ಘಟನೆ ನಡೆದಿದೆ. ಶುಕ್ರವಾರ ರಾತ್ರಿ 9 ಗಂಟೆಯ ವೇಳೆಗೆ ಘಟನೆ ನಡೆದಿದೆ. ಪ್ರಾರ್ಥನೆ ಮಾಡುತ್ತಿದ್ದ 50 ಜನ ಮುಸ್ಲಿಮರು ಗಾಯಗೊಂಡಿದ್ದಾರೆ.
ಧಾಕಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಬನ್ರ್ಸ್ ಯುನಿಟ್‌ನ ಮುಖ್ಯಸ್ಥ ಸಮಂತಾ ಲಾಲ್ ಸೆನ್ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಯಾರನ್ನೂ ಆಸ್ಪತ್ರೆಗೆ ದಾಖಲಿಸಲಾಗಿಲ್ಲ ಎಂದಿದ್ದಾರೆ.
ದೇವದುರ್ಗ: ಆಕಸ್ಮಿಕ ಬೆಂಕಿ, ಹಣ ತರಲು ಹೋಗಿ ವ್ಯಕ್ತಿ ಸಜೀವ ದಹನ
ಟಿಟಾಸ್ ಗ್ಯಾಸ್‌ನ ಪೈಪ್‌ಲೈನ್ ಮಸೀದಿಯ ಕೆಳಭಾಗದಿಂದ ಹಾದು ಹೋಗುತ್ತಿದ್ದು, ಈ ಗ್ಯಾಸ್ ಲೀಕ್ ಆಗಿ ಕೊಠಡಿಯ ಬಾಗಿಲು ಹಾಕಿದ್ದ ಕಾರಣ ಸ್ಫೋಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾ ಭೀಕರ ಕಾಡ್ಗಿಚ್ಚು, ಸಾವಿರಾರು ಮೌಲ್ಯದ ಆಸ್ತಿ ಬೆಂಕಿಗಾಹುತಿ!
ಫ್ಯಾನ್ ಅಥವಾ ಏಸಿ ಆನ್ ಅಥವಾ ಆಫ್ ಮಾಡಲು ಪ್ರಯತ್ನಿಸಿದಾಗ ಅಪಾಯ ಸಂಭವಿಸರಬಹುದೆಂದು ಹೇಳಾಗಿದೆ. ಇಶಾ ಪ್ರಾರ್ಥನೆಯನ್ನು ಕೊನೆಗೊಳಿಸುವ ಸಂದರ್ಭ ಸ್ಫೋಟ ನಡೆದಿದೆ. ಗಾಯಗೊಂಡ ಪ್ರತಿಯೊಬ್ಬರಿಗೂ ಸುಮಾರು 60-70 ಶೇಕಡ ಸುಟ್ಟಗಾಯಗಳಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ