ಗಡಿಯಲ್ಲಿನ ಸಂಘರ್ಷಕ್ಕೆ ಭಾರತವೇ ಕಾರಣ ಎಂದ ಚೀನಾ/ ನಾವು ಒಂದಿಂಚೂ ಬಿಟ್ಟುಕೊಡುವುದಿಲ್ಲ/ ಮಾತುಕತೆಗೆ ಸದಾ ಸಿದ್ಧರಿದ್ದೇವೆ/ ಚೀನಾದ ದ್ವಿಮುಖ ನೀತಿ
ನವದೆಹಲಿ/ ಮಾಸ್ಕೋ(ಸೆ. 05) ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾದ ರಕ್ಷಣಾ ಸಚಿವ ವೀ ಫೆಂಗೆ ಮುಖಾಮುಖಿಯಾಗಿದ್ದಾರೆ.
ಲಡಾಕ್ ಗಡಿ ಸಂಘರ್ಷದ ವಿಚಾರ ಬಂದಿದ್ದು ಗಡಿಯಲ್ಲಿ ನಡೆದ ಎಲ್ಲ ಗೊಂದಲಗಳಿಗೆ ಚೀನಾ ಭಾರತವನ್ನೇ ಹೊಣೆ ಮಾಡಿದೆ. ನಾನು ಒಂದಿಂಚು ಜಾಗ ಕಳೆದುಕೊಳ್ಳಲು ಸಿದ್ಧನಿಲ್ಲ ಎಂದಿದೆ.
ಲಡಾಖ್ ನಲ್ಲಿ ನಡೆದ ಇಂಡೋ-ಚೀನಾ ಸೈನಿಕರ ಸಂಘರ್ಷಕ್ಕೆ ಭಾರತೀಯ ಸೈನಿಕರೇ ನೇರಹೊಣೆ ಎಂಬುದು ಚೀನಾದ ವಾದ.
ಮಹತ್ವದ ಬೆಳವಣಿಗೆಯೊಂದರಲ್ಲಿ ರಷ್ಯಾದ ಮಾಸ್ಕೋದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಶೃಂಗಸಭೆ(ಎಸ್‌ಸಿಒ) ರಕ್ಷಣಾ ಸಚಿವರ ಸಭೆಯಲ್ಲಿ ಉಭಯ ನಾಯಕರು ಮುಖಾಮುಖಿಯಾಗಿದ್ದರು.
ಸದ್ಯದ ಪರಿಸ್ಥಿತಿಯಲ್ಲಿ ಎರಡೂ ರಾಷ್ಟ್ರಗಳು ಜವಾವಬ್ದಾರಿಯಿಂದ ನಡೆದುಕೊಳ್ಳಬೇಕಿದೆ. ನಾವು ಮಾತುಕತೆ ಬಾಗಿಲನ್ನು ತೆರೆದಿಟ್ಟಿದ್ದೇವೆ. ಶಾಂತಿ ಸ್ಥಾಪನೆಗೆ ನಮ್ಮ ಮೊದಲ ಆದ್ಯತೆ ಎಂದು ಚೀನಾದ ರಕ್ಷಣಾ ಇಲಾಖೆ ಹೇಳಿದೆ.
ಲಡಾಕ್ ಗಡಿ ಭಾಗ, ಪ್ಯಾಂಗಾಂಗ್ ಪ್ರದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಯುದ್ಧದ ವಾತಾವರಣ ಸೃಷ್ಟಿಗೆ ಕಾರಣವಾಗಿರುವುದೆಂತೂ ಸುಳ್ಳಲ್ಲ. ಒಂದು ಕಡೆ ಚೀನಾ ಮಗುವನ್ನು ಚಿವುಟಿ ತೊಟ್ಟಿಲನ್ನು ತೂಗುತ್ತ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾನು ಶಾಂತಿ ಸ್ಥಾಪನೆಯ ಹರಿಕಾರ ಎಂಬ ಪೋಸು ನೀಡುವಂತಹ ಮಾತುಗಳನ್ನು ಆಡುತ್ತಿದೆ. ಉಭಯ ರಾಷ್ಟ್ರಗಳ ನಾಯಕರು ಮುಖಾಮುಖಿಯಾಗಿದ್ದರೂ ಮುಂದಿನ ಬೆಳವಣಿಗೆ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ