ಕೊರೋನಾ ಗೆದ್ದಿದ್ದಕ್ಕೆ ಬೀಯರ್ ಬಾಟಲ್ ಓಪನ್, 103ರ ಅಜ್ಜಿಗೆ ಹೇಳಿ ಚೀಯರ್ಸ್!

By Suvarna News  |  First Published May 29, 2020, 8:26 PM IST

ಕೊರೋನಾ ಗೆದ್ದ  103 ವರ್ಷದ ಅಜ್ಜಿ/ ಅಜ್ಜಿಯ ಆತ್ಮಸ್ಥೈರ್ಯ ಮೆಚ್ಚಲೇಬೇಕು/ ಬೀಯರ್ ಕುಡಿದು ಸಂಭ್ರಮ ಹಂಚಿದ ಅಜ್ಜಿ/ ಅಜ್ಜಿಯ ಕಂಡು ಕೊರೋನಾವೇ ಓಡಿಹೋಯ್ತು


ವಾಷಿಂಗ್ ಟನ್(ಮೇ. 29)  ಆತ್ಮ ಸ್ಥೈರ್ಯವೊಂದಿದ್ದರೆ ಯಾವ ರೋಗಕ್ಕೂ ಹೆದರಬೇಕಾಗಿಲ್ಲ. ಈ ಅಜ್ಜಿ ಅದನ್ನು ಮಾಡಿ ತೋರಿಸಿದ್ದಾರೆ. 103 ವರ್ಷದ ಅಜ್ಜಿ ಕೊರೋನಾ ಮೆಟ್ಟಿ ನಿಂತಿದ್ದಾರೆ. ಕೊನೋನಾದಿಂದ ಗುಣಮುಖವಾದ ಸಂಭ್ರಮವನ್ನು ಬೀಯರ್ ಕುಡಿದು ಹಂಚಿಕೊಂಡಿದ್ದಾರೆ!

ಮ್ಯಾಸಚೂಸೆಟ್ಸ್ ನ ಅಜ್ಜಿಗೆ ಕಳೆದ ತಿಂಗಳು ಕೊರೋನಾ ಸೋಂಕು ದೃಢವಾಗಿತ್ತು. ಅಜ್ಜಿ ಜೆನಿ ಸ್ಟೆಂಜಾ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಲೇ ಕೊವೀಡ್ ವಾರ್ಡ್ ಗೆ ದಾಖಲಾಗಿದ್ದರು. 

Latest Videos

undefined

ಆಕೆ ವಿಷಮ ಸ್ಥಿತಿಯಲ್ಲಿ ಇದ್ದರು ಆಕೆಯ ಆತ್ಮಸ್ಥೈರ್ಯ ಗಟ್ಟಿಯಾಗಿತ್ತು. ಕೊರೋನಾ ಪಾಸಿಟಿವ್ ಇದ್ದರೂ ಪಾಸಿಟಿವ್ ಯೋಚನೆ ಮಾಡುತ್ತಿದ್ದರು. ಅವಳು ಬಿಟ್ಟು ಕೊಡಲು ತಯಾರಿ ಇರಲಿಲ್ಲ ಎಂದು ವೈದ್ಯರು ಹೇಳುತ್ತಾರೆ.

ವಿಶ್ವದ ಮೊದಲ ಕೊರೋನಾ ಮುಕ್ತ ದೇಶ

ಆಕೆಯ ಕುಟುಂಬದವರು ಅಜ್ಜಿಯ ಪರಿಸ್ಥಿತಿ ನೋಡಿ ಗುಡ್ ಬೈ ಹೇಳುವ ಆಲೋಚನೆಯಲ್ಲಿದ್ದರು.  ಆದರೆ ಪವಾಢದ ರೀತಿ ಆಕೆ ಮೇ 13 ರಿಂದ ಚೇತರಿಕೆ ಹಾದಿ ಹಿಡಿಯುತ್ತಾಳೆ. 

ಕೊರೋನಾದಿಂದ ಗೆದ್ದ ಖುಷಿಯನ್ನು ಕೋಲ್ಡ್ ಬೀಯರ್ ಚೀಯರ್ಸ್ ಮಾಡುವುದರ ಮೂಲಕ ಅಜ್ಜಿ ಹಂಚಿಕೊಂಡಿದ್ದಾರೆ. ಅಜ್ಜಿಗೆ ಇಬ್ಬರು ಮಕ್ಕಳು, ಮೂವರು ಮೊಮ್ಮಮ್ಮಕ್ಕಳು, ನಾಲ್ವರು ಮರಿ ಮೊಮ್ಮಕ್ಕಳು, ಮತ್ತು ಮೂವರು ಮರಿ ಮರಿ ಮೊಮ್ಮಕ್ಕಳು ಇದ್ದಾರೆ!


 

click me!