ಒಂದೇ ದಿನದಲ್ಲಿ 1000 ರಷ್ಯಾ ಸೈನಿಕರ ಹತ್ಯೆಗೈದ Ukraine..! 8 ತಿಂಗಳಲ್ಲಿ 71,200 ಯೋಧರು ಬಲಿ

By Kannadaprabha News  |  First Published Nov 3, 2022, 8:22 AM IST

ಕಳೆದ 24 ಗಂಟೆ ನಮ್ಮ ಪಾಲಿಗೆ ಅತ್ಯಂತ ಯಶಸ್ಸಿನ ಸಮಯ. ನಾವು ಈ ಅವಧಿಯಲ್ಲಿ 1000ಕ್ಕೂ ಹೆಚ್ಚು ರಷ್ಯಾ ಸೈನಿಕರನ್ನು ಬಲಿಪಡೆದಿದ್ದೇವೆ. ಇದರೊಂದಿಗೆ ಕಳೆದ 8 ತಿಂಗಳಲ್ಲಿ ಯುದ್ಧಕ್ಕೆ ಬಲಿಯಾದ ರಷ್ಯಾ ಯೋಧರ ಸಂಖ್ಯೆ 71,200ಕ್ಕೆ ತಲುಪಿದೆ ಎಂದು ಹೇಳಿದೆ. ಆದರೆ ಯಾವ ಪ್ರದೇಶದಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಸೇನೆ ಮಾಹಿತಿ ನೀಡಿಲ್ಲ.


ಕೀವ್‌: ಸೋಮವಾರವಷ್ಟೇ ಉಕ್ರೇನ್‌ (Ukraine) ರಾಜಧಾನಿ ಕೀವ್‌ (Kyiv), ಖಾರ್ಕೀವ್‌ (Kharkiv) ಸೇರಿದಂತೆ ಹಲವು ನಗರಗಳ ಮೇಲೆ 50ಕ್ಕೂ ಹೆಚ್ಚು ಕ್ಷಿಪಣಿಗಳಿಂದ (Missile) ದಾಳಿ ನಡೆಸಿದ್ದ ರಷ್ಯನ್ನರ (Russia) ಮೇಲೆ ಉಕ್ರೇನಿ ಪಡೆಗಳು ಮುಗಿಬಿದ್ದಿದ್ದು, ಒಂದೇ ದಿನದಲ್ಲಿ 1000ಕ್ಕೂ ಹೆಚ್ಚು ರಷ್ಯಾ ಯೋಧರನ್ನು (Soldiers) ಹತ್ಯೆಗೈದಿವೆ. ಇದು ಉಭಯ ದೇಶಗಳ ನಡುವೆ 8 ತಿಂಗಳ ಹಿಂದೆ ಆರಂಭವಾದ ಯುದ್ಧದಲ್ಲಿ ಒಂದೇ ದಿನ ಸಂಭವಿಸಿದ ಗರಿಷ್ಠ ಸಾವಿನ ಪ್ರಮಾಣವಾಗಿದೆ. ಈ ಕುರಿತು ಮಾಹಿತಿ ನೀಡಿರುವ ಉಕ್ರೇನ್‌ ಸೇನೆ (Ukraine Army) , ಕಳೆದ 24 ಗಂಟೆ ನಮ್ಮ ಪಾಲಿಗೆ ಅತ್ಯಂತ ಯಶಸ್ಸಿನ ಸಮಯ. ನಾವು ಈ ಅವಧಿಯಲ್ಲಿ 1000ಕ್ಕೂ ಹೆಚ್ಚು ರಷ್ಯಾ ಸೈನಿಕರನ್ನು ಬಲಿಪಡೆದಿದ್ದೇವೆ. ಇದರೊಂದಿಗೆ ಕಳೆದ 8 ತಿಂಗಳಲ್ಲಿ ಯುದ್ಧಕ್ಕೆ ಬಲಿಯಾದ ರಷ್ಯಾ ಯೋಧರ ಸಂಖ್ಯೆ 71,200ಕ್ಕೆ ತಲುಪಿದೆ ಎಂದು ಹೇಳಿದೆ. ಆದರೆ ಯಾವ ಪ್ರದೇಶದಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಸೇನೆ ಮಾಹಿತಿ ನೀಡಿಲ್ಲ.

ನಿಶ್ಯಸ್ತ್ರ:
ಯುದ್ಧ ಸುದೀರ್ಘವಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 3 ಲಕ್ಷ ಯೋಧರನ್ನು ಸೇನೆಗೆ ಬಳಸಿಕೊಳ್ಳಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ತಮ್ಮ ಸೇನೆಗೆ ಸೂಚಿಸಿದ್ದರು. ಹೀಗಾಗಿ ಸೇರ್ಪಡೆಯಾದವರನ್ನು ಉಕ್ರೇನ್‌ ದಾಳಿಯಲ್ಲಿ ಮುಂಚೂಣಿ ದಾಳಿಗೆ ಬಳಸಿಕೊಳ್ಳಲಾಗುತ್ತಿದೆ. ಹೀಗೆ ಯುದ್ಧಕ್ಕೆ ಆಗಮಿಸಿದ ರಷ್ಯಾ ಸೈನಿಕರಿಗೆ ಯುದ್ಧದ ಯಾವುದೇ ತರಬೇತಿ ಇಲ್ಲ, ಜೊತೆಗೆ ಅವರಿಗೆ ಸೂಕ್ತ ಶಸ್ತ್ರಾಸ್ತ್ರಗಳನ್ನು ನೀಡಿಲ್ಲ. ಹೀಗೆ ನಿಶ್ಯಸ್ತ್ರರಾಗಿದ್ದ ರಷ್ಯಾ ಯೋಧರ ಮೇಲೆ ಉಕ್ರೇನ್‌ ಸೇನೆ ದಾಳಿ ನಡೆಸಿ ಭೀಕರ ಮಾರಣಹೋಮ ನಡೆಸಿದೆ ಎಂದು ವರದಿಗಳು ತಿಳಿಸಿವೆ.

Tap to resize

Latest Videos

ಇದನ್ನು ಓದಿ: Ukraine ವಿದ್ಯುತ್‌ ಗ್ರಿಡ್‌ಗಳ ಮೇಲೆ ರಷ್ಯಾ ದಾಳಿ: ಕೀವ್‌, ಖಾರ್ಕೀವ್‌ನಲ್ಲಿ ಕಾರ್ಗತ್ತಲು

ಉಕ್ರೇನ್‌ನೊಂದಿಗೆ ಯುದ್ಧದ ಮಧ್ಯೆ ರಷ್ಯಾ ಧಾನ್ಯಗಳನ್ನು ರಫ್ತು ಮಾಡಲು ವಿಶ್ವಸಂಸ್ಥೆಯ ಮಧ್ಯಸ್ಥಿಕೆಯ ಒಪ್ಪಂದದಿಂದ ಹೊರಬಂದಿದೆ. ಜುಲೈನಲ್ಲಿ ವಿಶ್ವಸಂಸ್ಥೆ ಮತ್ತು ಟರ್ಕಿ ಈ ಒಪ್ಪಂದವನ್ನು ಮಧ್ಯಸ್ಥಿಕೆ ವಹಿಸಿತ್ತು. ಕ್ರಿಮಿಯಾದಲ್ಲಿ ರಷ್ಯಾದ ಹಡಗುಗಳ ಮೇಲೆ ದಾಳಿ ಮಾಡಲು ಧಾನ್ಯ ಕಾರಿಡಾರ್ ಅನ್ನು ಉಕ್ರೇನ್‌ ಬಳಸುತ್ತಿದೆ ಎಂದು ಆರೋಪಿಸಿದ ನಂತರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭದ್ರತಾ ಖಾತರಿಗಳನ್ನು ಡಿಮ್ಯಾಂಡ್‌ ಮಾಡಿದ್ದರು.

ಈ ಮಧ್ಯೆ, ರಷ್ಯಾ ಕ್ಷಿಪಣಿ ದಾಳಿ ನಡೆದ ಬಳಿಕ ಉಕ್ರೇನ್‌ನ ಹಲವು ಭಾಗಗಳಲ್ಲಿ ವಿದ್ಯುತ್‌  ಸಂಪರ್ಕ ಕಡಿತಗೊಂಡಿದ್ದವು ಹಾಗೂ ನೀರಿನ ಸರಬರಾಜು ಸಹ ಹಲವೆಡೆ ನಿಂತುಹೋಗಿತ್ತು. ಆದರೀಗ, ನೀರು ಮತ್ತು ವಿದ್ಯುತ್ ಸರಬರಾಜುಗಳನ್ನು ಸಂಪೂರ್ಣವಾಗಿ ಪುನಃಸ್ಥಾಪಿಸಲಾಯಿತು.

ಇದನ್ನೂ ಓದಿ: ವಯಾಗ್ರಾ ಸೇವಿಸಿ ಉಕ್ರೇನಿಗಳ ಮೇಲೆ Russia ಯೋಧರ ರೇಪ್‌!

click me!