ಲಂಡನ್(ಜೂ.18): ವ್ಯಾಟ್ಸ್ಆ್ಯಪ್ ಬಳಕೆದಾರರೇ ಎಚ್ಚರ. ವ್ಯಾಟ್ಸ್ ಅಪ್ ತನ್ನ ಬಳಕೆದಾರರನ್ನು ರೆಡ್ ಅಲರ್ಟ್‌ನಲ್ಲಿ ಇರಿಸಿದೆ. ಸೈಬರ್ ಅಪರಾಧಿಗಳು ಕೆಲವು ಅಪಾಯಕಾರಿ ಸ್ಕ್ಯಾಮ್ ಸಂದೇಶಗಳನ್ನು ಹರಡುತ್ತಿದ್ದು, ಇದು ಸೂಕ್ಷ್ಮ ವಿವರಗಳನ್ನು ಹಸ್ತಾಂತರಿಸುವಂತೆ ನಿಮ್ಮನ್ನು ಮೋಸಗೊಳಿಸುವ ಅಪಾಯವಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಈ ಎಚ್ಚರಿಕೆಯನ್ನು ಲಂಡನ್‌ನಲ್ಲಿ ನೀಡಲಾಗಿದೆ. ಹೈನೆಕನ್ ಹಾಗೂ ಸ್ಕ್ರೂಫಿಕ್ಸ್ ಅಪ್ಪಂದಿರ ದಿನಾಚರಣೆಗೆ ಭಾರಿ ಮೊತ್ತದ ಗಿಫ್ಟ್ ನೀಡುತ್ತಿದೆ. ಇದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಎಂಬ ಲಿಂಕ್ ವ್ಯಾಟ್ಸ್ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಆದರೆ ಈ ಲಿಂಕ್ ಕ್ಲಿಕ್ ಮಾಡಿದರೆ ಬಳಕೆದಾರರು ಮೋಸ ಹೋಗಲಿದ್ದಾರೆ. ಖಾತೆಯ ಹಣವೂ ಮಾಯವಾಗಲಿದೆ. ಇಷ್ಟೇ ಅಲ್ಲ ಮಹತ್ವದ ಮಾಹಿತಿಗಳು ಸೋರಿಕೆಯಾಗಲಿದೆ. ಹೀಗಾಗಿ ವ್ಯಾಟ್ಸ್ಆ್ಯಪ್ ಎಚ್ಚರಿಕೆ ನೀಡಿದೆ.
undefined
What's App ಗ್ರೂಪ್ ಕಾಲಲ್ಲಿ ಮ್ಯೂಟ್, ಸಂದೇಶ ರವಾನೆ ಫೀಚರ್
ಹೈನೆಕೆನ್ ಬಿಯರ್ ಫೇಕ್ ಟೆಕ್ಸ್ಟ್ ವರದಿಗಳು ಬಂದ ಬೆನ್ನಲ್ಲಿಯೇ ಸ್ವತಃ ಕಂಪನಿ ಕೂಡ ಈ ನಿಟ್ಟಿನಲ್ಲಿ ಸ್ಒಷ್ಟನೆ ನೀಡಿದೆ., "ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರವಾಗುತ್ತಿರುವ ಪ್ರಸ್ತುತ ಫಿಶಿಂಗ್ ಹಗರಣದ ಬಗ್ಗೆ ನಮಗೆ ತಿಳಿದಿದೆ, ಇದನ್ನು ಹೈನೆಕೆನ್ ಅನುಮೋದಿಸಿಲ್ಲ. ನಾವು ಸಂಬಂಧಿತ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇವೆ' ಎಂದು ಹೇಳಿದೆ. ಹೈನೆಕೆನ್‌ನ ಪ್ರತಿನಿಧಿಯೊಬ್ಬರು ಸಂದೇಶವನ್ನು ಕಳುಹಿಸಿದ ವ್ಯಾಟ್ಸ್ ಆಪ್ ಬಳಕೆದಾರರಿಗೆ ತಕ್ಷಣ ಅದನ್ನು ಡಿಲೀಟ್ ಮಾಡುವಂತೆ ಹೇಳಿದ್ದಾರೆ.
ನಕಲಿ ಸ್ಕ್ರೂಫಿಕ್ಸ್ ವಾಟ್ಸಾಪ್ ಪ್ರಚಾರದ ಕುರಿತು ಮಾತನಾಡುವಾಗ ಚಿಲ್ಲರೆ ವ್ಯಾಪಾರದ ದೈತ್ಯ ಕಂಪನಿ ಟ್ವಿಟರ್ ನಲ್ಲಿ ಎಚ್ಚರಿಕೆಯನ್ನು ನೀಡಿದೆ.: "ಸ್ಕ್ರೂಫಿಕ್ಸ್ ಬ್ರ್ಯಾಂಡಿಂಗ್ ಅನ್ನು ಬಳಸಿಕೊಂಡು ವಾಟ್ಸಾಪ್ ಮತ್ತು ಇತರ ಸಾಮಾಜಿಕ ಚಾನೆಲ್‌ಗಳ ಮೂಲಕ ಹರಡುವ ನಕಲಿ ಸಂದೇಶಗಳ ಬಗ್ಗೆ ನಮಗೆ ತಿಳಿದಿದೆ. ನೀವು ಅನುಮಾನಾಸ್ಪದ ಸಂದೇಶವನ್ನು ಸ್ವೀಕರಿಸಿದರೆ, ನೀವು ಸಂದೇಶವನ್ನು ಡಿಲೀಟ್ ಮಾಡಲು ನಾವು ಬಲವಾಗಿ ಸಲಹೆ ನೀಡುತ್ತೇವೆ ಮತ್ತು ದಯವಿಟ್ಟು ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಅಥವಾ ನಿಮ್ಮ ಸಂಪರ್ಕಗಳೊಂದಿಗೆ ಹಂಚಿಕೊಳ್ಳಬೇಡಿ.
ವ್ಯಾಟ್ಸ್ಆ್ಯಪ್‌ನಿಂದ ವಿಶೇಷ ಕೂಡುಗೆ ಘೋಷಣೆ, ಯಾವುದೇ ದಾಖಲೆ ಇಲ್ಲದೆ 30 ಸೆಕೆಂಡ್‌ನಲ್ಲಿ ಸಿಗಲಿದೆ ಸಾಲ!
ಸ್ಪರ್ಧೆಯಲ್ಲಿ ಭಾಗವಹಿಸಲು ವ್ಯಾಟ್ಸ್ ಅಪ್ ಮೂಲಕ ಯಾವುದೇ ವೈಯಕ್ತಿಕ ವಿವರಗಳನ್ನು ಒದಗಿಸಲು ನಾವು ನಮ್ಮ ಗ್ರಾಹಕರನ್ನು ಎಂದಿಗೂ ಕೇಳುವುದಿಲ್ಲ. ನೀವು ವಂಚನೆಗೆ ಬಲಿಯಾಗಿದ್ದೀರಿ ಎಂದು ನೀವು ಭಾವಿಸಿದರೆ, ದಯವಿಟ್ಟು ಆಕ್ಷನ್ ಫ್ರಾಡ್‌ಗೆ ವರದಿ ಮಾಡಿ. ಎಂದು ಹೇಳಿದೆ.