*ಸಿಂಪಲ್ ಹ್ಯಾಬಿಟ್ ಎಂಬ ಧ್ಯಾನದ ಆಪಲ್ ಒಡತಿಯಿಂದಲೇ ಮತ್ತೊಂದು ಆಪ್
*ಸ್ಲೀಪ್ ರೀಸೆಟ್ ನಿಮ್ಮ ನಿದ್ರಾ ಸಮಸ್ಯೆಗಳನ್ನು ದೂರ ಮಾಡಲು ನೆರವು ಒದಗಿಸುತ್ತದೆ
*ಕಂಪನಿಯು ಇದಕ್ಕಾಗಿ ಹಲವು ವಿವಿಯ ತಜ್ಞರ ಜತೆ ಪಾಲುದಾರಿಕೆ ಹೊಂದಿದೆ.
ಆಧುನಿಕ ಯುದಲ್ಲಿ ಎಲ್ಲರದ್ದೂ ಒತ್ತಡದ ಬದುಕು. ಇಲ್ಲಿ ಯಾವುದೂ ಸಾವಧಾನವಿಲ್ಲ. ಎಲ್ಲವೂ ಅವಸರವಸರ. ಎಲ್ಲವೂ ಫಟಾಫಟ್ ಆಗಿಬಿಡಬೇಕು. ಪರಿಣಾಮ ನಾವೆಲ್ಲರೂ ಧಾವಂತದ ಜೀವನಕ್ಕೆ ಬಿದ್ದಿದ್ದೇವೆ, ಬದುಕಿನ ರೇಸ್‌ನಲ್ಲಿ ಅಗತ್ಯವೋ ಇಲ್ಲವೋ ಒಟ್ಟು ಓಡಲೇಬೇಕು. ಅದರ ಪರಿಣಾಮ ನಮ್ಮ ಆರೋಗ್ಯದ ಮೇಲಾಗುತ್ತದೆ. ಈ ಧಾವಂತದ ಜೀವನದಿಂದಾಗಿ ಅಗತ್ಯವಿರುವಷ್ಟು ಸಮಯ ನಿದ್ದೆಯನ್ನು ಮಾಡಲು ಆಗುವುದಿಲ್ಲ. ಇನ್ನು ಕೆಲವರಿಗೆ ಒತ್ತಡದ ಕಾರಣದಿಂದ ನಿದ್ದೆಯೇ ಬರುವುದಿಲ್ಲ. ಅಂಥವರು ಬಹಳ ಕಷ್ಟಪಡುತ್ತಾರೆ. ಆದರೆ, ಬಹಳಷ್ಟು ನಮ್ಮ ಸಮಸ್ಯೆಗಳಿಗೆ ತಂತ್ರಜ್ಞಾನ ಪರಿಹಾರ ಹುಡುಕುತ್ತದೆ. ಈ ನಿದ್ರಾಹೀನತೆಗೂ ಒಂದು ಪರಿಹಾರವಿದೆ. ಸಿಂಪಲ್ ಹ್ಯಾಬಿಟ್ (Simple Habit) ಎಂಬ ಧ್ಯಾನದ ಆಪ್ ಸಂಸ್ಥಾಪಕ ಯಹಾ ಕಿಮ್ (Yunha Kim) ಅವರು, ನಿಮ್ಮ ನಿದ್ರೆಯನ್ನು ಸುಧಾರಿಸುವ ಸ್ಲೀಪ್ ರಿಸೆಟ್ (Sleep Reset) ಎಂಬ ಹೊಸ ಆಪ್ ಲಾಂಚ್ ಮಾಡಿದ್ದಾರೆ. ಈ ಆಪ್ ನಿಮಗೆ ಸುಖವಾಗಿ ನಿದ್ರೆ ಮಾಡಲು ಅಗತ್ಯವಿರುವ ನೆರವು ಒದಗಿಸುತ್ತದೆ.
ಸ್ಲೀಪ್ ರಿಸೆಟ್ ಆಪ್ ಬಳಕೆದಾರರಿಗೆ ನಿದ್ರಾಹೀನತೆಗಾಗಿ ಅರಿವಿನ ವರ್ತನೆಯ ಚಿಕಿತ್ಸೆ (CBT-I) ನಂತಹ ಸ್ಲೀಪ್ ಕ್ಲಿನಿಕ್‌ಗಳಲ್ಲಿ ಬಳಕೆದಾರರು ಸ್ವೀಕರಿಸುವ ಅದೇ ಚಿಕಿತ್ಸೆಯನ್ನು ಮೊಬೈಲ್ ಸಾಧನಗಳಿಗೆ ತರಲು ಅಪ್ಲಿಕೇಶನ್ ಗುರಿಯನ್ನು ಹೊಂದಿದೆ. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ವೇಳೆ ಈ ಆಪ್ ರೂಪಿಸುವ ಆಲೋಚನೆ ಕಿಮ್ ಅವರಿಗೆ ಹೊಳೆಯತ್ತಂತೆ. ಇತರರು ಅನುಭವಿಸದ ರೀತಿಯಲ್ಲೂ ಅವರಿಗೂ ನಿದ್ರೆಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಕಾಣಿಸಿಕೊಂಡವು. ಇದರಿಂದ ಹೊರ ಬರಲು ಈ ಆಪ್ ರೂಪಿಸಲು ಮುಂದಾದರು. ಸಾಂಕ್ರಾಮಿಕ ಸಮಯದಲ್ಲಿ ನನಗೆ ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡಲು ನಾನು ವಿಭಿನ್ನ ಪರಿಹಾರಗಳ ಬಗ್ಗೆ ಯೋಚಿಸುತ್ತಿದ್ದೆ. ಸ್ಲೀಪಿಂಗ್ ಮಾತ್ರೆಗಳು ಸಹಾಯ ಮಾಡಲಿಲ್ಲ, ಮತ್ತು ನಿದ್ರೆ ಚಿಕಿತ್ಸಾಲಯಗಳು ಆರು ತಿಂಗಳವರೆಗೆ ಕಾಯಬೇಕಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
YouTubeನಲ್ಲಿ ಅಪ್‌ಲೋಡ್ ಮಾಡಿದ ಮೊದಲ ವಿಡಿಯೋ ನೋಡ್ತಿರಾ?
undefined
ಕಿಮ್ ಈ ಹಿಂದೆ ರೂಪಿಸಿದ ಸಿಂಪಲ್ (Simple Habit) ಆಪ್ 50 ಲಕ್ಷ ಬಳಕೆದಾರರನ್ನು ಹೊಂದಿದ್ದು ಮತ್ತು 12.5 ಮಿಲಿಯನ್ ಡಾಲರ್‌ಗಿಂತಲೂ ಅಧಿಕ ನಿಧಿಯನ್ನು ಹೊಂದಿದ್ದು, ಈ ಬಲವೇ ಅವರಿಗೆ ಹೊಸ ಆಪ್ ರೂಪಿಸಲು ಕಾರಣವಾಯಿತು. ನಿದ್ರಾಹೀನತೆಯನ್ನು ಸುಧಾರಿಸಲು ಮಾತ್ರ ರಹಿತವಾದ ಪರಿಹಾರವನ್ನು ಕಂಡುಕೊಳ್ಳಬೇಕಿತ್ತು. ಅದಕ್ಕಾಗಿ ಕಂಪನಿಯು ಯುನಿರ್ವಸಿಟಿ ಆಫ್ ಅರಿಜೋನಾ (University of Arizona), ಯುನಿರ್ವಸಿಟಿ ಆಫ್ ಮಿನ್ನೆಸೋಟಾ (University of Minnesota), ಸ್ಟ್ಯಾನ್‌ಫೋರ್ಡ್ ಯುನಿವರ್ಸಿಟಿ ಸ್ಲೀಪ್ ಮೆಡಿಸಿನ್ ಸೆಂಟರ್ (Stanford University Sleep Medicine Center) ತಜ್ಞರ ಜತೆಗೆ ಪಾಲುದಾರಿಕೆಯನ್ನು ಹೊಂದಿದೆ.
ತಂಡವು 16 ತಿಂಗಳುಗಳಿಂದ ಸಾವಿರಾರು ಬಳಕೆದಾರರೊಂದಿಗೆ ಅಪ್ಲಿಕೇಶನ್ ಅನ್ನು ಪರೀಕ್ಷಿಸುತ್ತಿದೆ ಮತ್ತು ಫಲಿತಾಂಶಗಳು ಅವರಿಗೆ ಉತ್ತೇಜನಕಾರಿಯಾಗಿದೆ. ಪರೀಕ್ಷಾ ಬಳಕೆದಾರರು ಸರಾಸರಿ 88 ನಿಮಿಷಗಳ ನಿದ್ರೆಯ ಹೆಚ್ಚಳವನ್ನು ಕಂಡಿದ್ದಾರೆ ಎಂದು ಸಂಸ್ಥೆಯು ಹೇಳಿಕೊಂಡಿದೆ. ಅವರಿಗೆ ನಿದ್ದೆ ಮಾಡಲು 52% ಕಡಿಮೆ ಸಮಯ ಮತ್ತು ಮಧ್ಯರಾತ್ರಿಯಲ್ಲಿ ಎಚ್ಚರವಾಗಿ ಮಲಗಲು 48% ಕಡಿಮೆ ಸಮಯ ಬೇಕಾಗುತ್ತದೆ.
ಡಿಜಿಟಲ್ ಶಿಕ್ಷಣ ಒದಗಿಸಲು ಒಂದಾದ ಇನ್ಫೋಸಿಸ್- ಹಾರ್ವರ್ಡ್!
"ಸ್ಲೀಪ್ ರೀಸೆಟ್ (Sleep Reset) ಮಾಡುವ ಮೊದಲು, ನಿದ್ರೆಯನ್ನು ಸುಧಾರಿಸಲು ವೈಯಕ್ತೀಕರಿಸಿದ ತಂತ್ರಗಳನ್ನು ಪಡೆಯುವುದು ನಿದ್ರೆಯ ಅಸ್ವಸ್ಥತೆಯೊಂದಿಗೆ ರೋಗನಿರ್ಣಯ ಮಾಡುವ ಅಗತ್ಯವಿದೆ ಮತ್ತು ವೈದ್ಯರನ್ನು ಭೇಟಿ ಮಾಡಲು ಕ್ಲಿನಿಕ್‌ಗೆ ಹೋಗಬೇಕಾಗುತ್ತದೆ. ಈಗ, ಯಾರಾದರೂ ತಮ್ಮ ನಿದ್ರೆಯ ಆರೋಗ್ಯವನ್ನು ಸುಧಾರಿಸಲು ಉಪಕರಣಗಳು ಮತ್ತು ತಂತ್ರಗಳಿಗೆ ಪ್ರವೇಶವನ್ನು ಪಡೆಯಬಹುದು, ” ಎಂದು ಕಂಪನಿಯ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಅರಿಜೋನಾ ವಿಶ್ವವಿದ್ಯಾಲಯದ ನಿದ್ರೆ ಮತ್ತು ಆರೋಗ್ಯ ಸಂಶೋಧನಾ ಕಾರ್ಯಕ್ರಮದ ನಿರ್ದೇಶಕ ಡಾ. ಮೈಕೆಲ್ ಗ್ರ್ಯಾಂಡ್ನರ್ (Dr. Michael Grandner) ಹೇಳಿದ್ದಾರೆ.