ವ್ಯಾಟ್ಸ್ಆ್ಯಪ್ ಕಾಲಕ್ಕೆ ತಕ್ಕಂತೆ ಹೊಸ ಹೊಸ ಫೀಚರ್ಸ್ ಪರಿಚಯಿಸುತ್ತಿದೆ. ಇದರ ಜೊತೆಗೆ ಸುರಕ್ಷತೆ ಕಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದರಲ್ಲಿ ಬಹುದಿನಗಳಿಂದ ವ್ಯಾಟ್ಸ್ಆ್ಯಪ್ ಗ್ರೂಪ್ ಕುರಿತು ಹಲವು ದೂರುಗಳಿಗೆ ಇದೀಗ ವ್ಯಾಟ್ಸ್ಆ್ಯಪ್ ಉತ್ತರ ನೀಡಿದೆ. ವ್ಯಾಟ್ಸ್ಆ್ಯಪ್ ಗ್ರೂಪ್ ಅಡ್ಮಿನ್‌ಗೆ ಹೊಸ ಅಧಿಕಾರ ನೀಡಿದೆ.
ನವದೆಹಲಿ(ಆ.01): ವ್ಯಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಅಡ್ಮಿನ್ ಪದೇ ಪದೇ ಮನವಿ ಮಾಡಿದರೂ ಗ್ರೂಪ್ ಸದಸ್ಯರು ಫಾರ್ವಡ್ ಸಂದೇಶ, ಅನಗತ್ಯ ಸಂದೇಶ ಪೋಸ್ಟ್ ಮಾಡುವುದು ತಪ್ಪುವುದಿಲ್ಲ. ಈ ಕುರಿತು ಹಲವು ದೂರು, ಮನವಿಗಳನ್ನು ವ್ಯಾಟ್ಸ್ಆ್ಯಪ್ ಸ್ವೀಕರಿಸಿದೆ. ಹಲವು ಪ್ರಯೋಗ ಹಾಗೂ ಪರೀಕ್ಷೆಗಳ ಬಳಿಕ ಇದೀಗ ವ್ಯಾಟ್ಸ್ಆ್ಯಪ್ ಗ್ರೂಪ್ ಅಡ್ಮಿನ್‌ಗೆ ಹೊಸ ಅಧಿಕಾರ ನೀಡಿದೆ. ವ್ಯಾಟ್ಸ್ಆ್ಯಪ್ ಗ್ರೂಪ್‌ನಲ್ಲಿನ ಯಾವುದೇ ಸದಸ್ಯರು ಹಾಕಿದ ಮೆಸೇಜ್ ಅಥವಾ ವಿಡಿಯೋ, ಫೋಟೋಗಳನ್ನು ಡಿಲೀಟ್ ಮಾಡಲು ವ್ಯಾಟ್ಸ್ಆ್ಯಪ್ ಗ್ರೂಪ್ ಅಡ್ಮಿನ್‌ಗೆ ಅನುಮತಿ ನೀಡಿದೆ. ಸದ್ಯ ಬೀಟಾ ವರ್ಶನ್‌ನಲ್ಲಿ ವ್ಯಾಟ್ಸ್ಆ್ಯಪ್ ಈ ಫೀಚರ್ಸ್ ನೀಡಿದೆ. ಶೀಘ್ರದಲ್ಲೇ ಎಲ್ಲಾ ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಈ ಫೀಚರ್ಸ್ ಲಭ್ಯವಾಗಲಿದೆ. ಈ ಫೀಚರ್ಸ್ ಆಡ್ಮಿನ್ ಗ್ರೂಪ್‌ನಲ್ಲಿ ಸದಸ್ಯರು ಹಾಕಿದ ಯಾವುದೇ ಮೆಸೇಜ್ ಒತ್ತಿ ಹಿಡಿದಾಗ ಡಿಲೀಟ್ ಆಯ್ಕೆ ಬರಲಿದೆ. ಇಲ್ಲಿ ಸಾಮಾನ್ಯವಾಗಿ ಇರುವ ಡಿಲೀಟ್ ಫಾರ್ ಆಲ್ ಮಾಡಿದರೆ ಸದಸ್ಯರ ಮೆಸೇಜ್ ಗ್ರೂಪ್‌ನಿಂದ ಡಿಲೀಟ್ ಆಗಲಿದೆ. ಇಲ್ಲೀವರೆಗೆ ಯಾರು ಮಸೇಜ್ ಪೋಸ್ಟ್ ಮಾಡುತ್ತಾರೆ ಅವರಿಗೆ ಮಾತ್ರ ಡಿಲೀಟ್ ಮಾಡುವ ಅಧಿಕಾರವಿತ್ತು. ಇನ್ಮುಂದೆ ಗ್ರೂಪ್ ಸದಸ್ಯರ ಮೆಸೇಜ್ ಡಿಲೀಟ್ ಮಾಡುವ ಅನುಮತಿ ಅಡ್ಮಿನ್‌ಗೂ ಇರಲಿದೆ.
WABetaInfo ಪ್ರಕಾರ ಬೀಟಾ ವರ್ಶನ್‌ನಲ್ಲಿ ಹೊಸ ಫೀಚರ್ಸ್ ಈಗಾಗಲೇ ಲಭ್ಯವಿದೆ. ಪರೀಕ್ಷಾರ್ಥದಲ್ಲಿ ಈ ಫೀಚರ್ಸ್ ಯಶಸ್ವಿಯಾಗಿದೆ. ಹೀಗಾಗಿ ಶೀಘ್ರದಲ್ಲೇ ಅಡ್ಮಿನ್ ಅಧಿಕಾರ ಬಳಕೆದಾರರಿಗೆ ಸಿಗಲಿದೆ.
undefined
ವ್ಯಾಟ್ಸ್ಆ್ಯಪ್‌ನಿಂದ ವಿಶೇಷ ಕೂಡುಗೆ ಘೋಷಣೆ, ಯಾವುದೇ ದಾಖಲೆ ಇಲ್ಲದೆ 30 ಸೆಕೆಂಡ್‌ನಲ್ಲಿ ಸಿಗಲಿದೆ ಸಾಲ!
ಇತ್ತೀಚೆಗೆ ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಎಡಿಟ್ ಬಟನ್ ಫೀಚರ್ಸ್ ನೀಡುವುದಾಗಿ ಘೋಷಿಸಿತ್ತು. ಈ ಪಕ್ರಿಯೆ ಪ್ರಗತಿಯಲ್ಲಿದೆ. ಸದ್ಯ ವ್ಯಾಟ್ಸ್ಆ್ಯಪ್ ಬಳಕೆಗಾರರು ಸಂದೇಶ ಕಳುಹಿಸಿದರೆ ಎಡಿಟ್ ಮಾಡಲು ಸಾಧ್ಯವಿಲ್ಲ. ಕೇವಲ ಡಿಲೀಟ್ ಆಯ್ಕೆ ಮಾತ್ರ ಲಭ್ಯವಿದೆ. ಹೀಗಾಗಿ ವ್ಯಾಟ್ಸ್ಆ್ಯಪ್ ಬಳಕೆದಾರ ಕಳುಹಿಸಿದ ಸಂದೇಶ ತಿದ್ದಲು ಅವಕಾಶ ನೀಡಲಿದೆ. ಟೆಸ್ಟಿಂಗ್ ಹಂತದಲ್ಲಿರುವ ಎಡಿಟನ್ ಬಟನ್ ಫೀಚರ್ಸ್ ಮತ್ತೊಂದು ಸುತ್ತಿನ ಪರೀಕ್ಷಾರ್ಥಕ್ಕೆ ಮುಂದಾಗಿದೆ. ಕೆಲ ತಾಂತ್ರಿಕ ದೋಷಗಳು ಕಂಡು ಬಂದ ಹಿನ್ನಲೆಯಲ್ಲಿ ಎಡಿಟ್ ಬಟನ್ ಕೂಡ ಲಭ್ಯವಾಗಲಿದೆ.
ವಾಟ್ಸಾಪ್‌ನಲ್ಲಿ ಏಕಕಾಲಕ್ಕೆ 32 ಜನರಿಗೆ ಕರೆ ಮಾಡಬಹುದು!
ವ್ಯಾಟ್ಸ್ಆ್ಯಪ್ ಈಗಾಗಲೇ ಒಂದೇ ಸಮಯದಲ್ಲಿ 32 ಮಂದಿಗೆ ವಾಯ್ಸ್ ಕರೆ ಮಾಡುವ ಫೀಚರ್ಸ್ ನೀಡಿದೆ. ಇದರ ಜೊತೆಗೆ 2 GB(ಗೀಗಾ ಬೈಟ್) ಗಾತ್ರದ ಫೈಲ್‌ಗಳನ್ನು ರವಾನಿಸಲು ಅವಕಾಶ ನೀಡಿದೆ. ಈ ಹಿಂದೆ ಕೇವಲ 8 ಜನರಿಗೆ ಗ್ರೂಪ್ ಕಾಲ್ ಮಾಡುವ ಅವಕಾಶವಿತ್ತು ಇಷ್ಟೇ ಅಲ್ಲ 1 ಜಿಬಿ ಫೈಲ್ ರವಾನಿಸಲು ಮಾತ್ರ ಅವಕಾಶ ನೀಡಿಲಾಗಿತ್ತು. ಅಳಿಸಿ ಹಾಕಿದ ಸಂಭಾಷಣೆಗಳು ಗ್ರುಪ್‌ನಲ್ಲಿರುವ ಸದಸ್ಯರಿಗೆ ಕಾಣಿಸದಂತೆ ಮಾಡುವ ಹೊಸ ಫೀಚರ್ ಅನ್ನು ಅಳವಡಿಸಲಾಗುವುದು ಹೇಳಿದೆ.
35 ವಾಟ್ಸಾಪ್ ಗ್ರೂಪ್ ನಿಷೇಧ, 10 ಜನರ ಬಂಧನ
ಅಗ್ನಿಪಥ ಯೋಜನೆ ಕುರಿತು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದ ಆರೋಪದ ಮೇಲೇ ಕೇಂದ್ರ ಗೃಹ ಸಚಿವಾಲಯವು 10 ವಾಟ್ಸಾಪ್ ಗ್ರೂಪ್‌ಗಳನ್ನು ನಿಷೇಧಿಸಿದೆ. ಅಲ್ಲದೆ ಸುಳ್ಳು ಸುದ್ದಿ ಹಬ್ಬಿಸಿದ ಮತ್ತು ಹಿಂಸಾತ್ಮಕ ಪ್ರತಿಭಟನೆ ಆಯೋಜಿಸಿದ ಆರೋಪದ ಮೇಲೆ ವಿವಿಧ ರಾಜ್ಯಗಳಲ್ಲಿ 10 ಜನರನ್ನು ಬಂಧಿಸಿದೆ.