ನವದೆಹಲಿ(ಜೂ.15): ಅರ್ಜಿ ತುಂಬಬೇಕಿಲ್ಲ, ದಾಖಲೆ ನೀಡಬೇಕಿಲ್ಲ, ಪರಿಶೀಲನೆ, ತಪಾಸಣೆ ಯಾವುದೂ ಇಲ್ಲ. ಕೇವಲ 30 ಸೆಕೆಂಡ್ ಸಾಕು, ಸಾಲದ ಮೊತ್ತ ಖಾತೆಗೆ ಜಮೆ ಆಗಿರುತ್ತೆ. ಇದು ವ್ಯಾಟ್ಸ್ಆ್ಯಪ್ ಹೊಸ ಸೇವೆ. ಹೌದು, ಇದು ವ್ಯಾಟ್ಸ್ಆ್ಯಪ್ ಮೆಸೇಂಜರ್ ಆ್ಯಪ್ ತನ್ನ ಬಳಕೆದಾರರಿಗೆ ಕೇವಲ 30 ಸೆಕೆಂಡ್‌ನಲ್ಲಿ ಸಾಲ ನೀಡಲಿದೆ. ಆದರೆ ಈ ಸೌಲಭ್ಯ ವ್ಯಾಟ್ಸ್ಆ್ಯಪ್ ಬ್ಯೂಸಿನೆಸ್ ಬಳಕೆದಾರರಿಗೆ ಮಾತ್ರ ಅನ್ವಯವಾಗಲಿದೆ.
ಹಣಕಾಸು ಸಂಸ್ಥೆ CASHe ಹಾಗೂ ವ್ಯಾಟ್ಸ್ಆ್ಯಪ್ ಜಂಟಿಯಾಗಿ ಈ ಯೋಜನೆ ಜಾರಿ ಮಾಡಿದೆ. ವ್ಯಾಟ್ಸ್ಆ್ಯಪ್ ಸಾಲ ಪಡೆಯಲು ನೀಡಿರುವ ನಂಬರ್‌ಗೆ ಹಾಯ್ ಎಂದು ಮೆಸೇಜ್ ಕಳುಹಿಸಿದರೆ ಸಾಕು, ಸಾಲದ ಮೊತ್ತ ಹಾಗೂ ಕೆಲ ಮಾಹಿತಿ ಮೆಸೇಜ್ ಮಾಡಿದರೆ ಮರುಕ್ಷಣದಲ್ಲೇ ಮೊತ್ತ ಸಿಗಲಿದೆ. ಈ ಸಾಲ ಪಡೆಯಲು ಯಾವುದೇ ಆ್ಯಪ್ ಡೌನ್ಲೋಡ್ ಮಾಡಬೇಕಿಲ್ಲ.
undefined
Whatsapp ನಿಂದ ಮತ್ತೊಂದು ಫೀಚರ್, ಗ್ರೂಪ್ ಸದಸ್ಯರ ಮಿತಿ 512ಕ್ಕೆ ಏರಿಕೆ!
ವ್ಯಾಟ್ಸ್ಆ್ಯಪ್ ಸಾಲ ಪಡೆಯುವುದು ಹೇಗೆ?
ವ್ಯಾಟ್ಸ್ಆ್ಯಪ್ ಬ್ಯೂಸಿನೆಸ್ ಬಳಕೆದಾರರು ಸಾಲ ಪಡೆಯಲು ತಮ್ಮ ಚಾಟ್ ಬಾಕ್ಸ್‌ನಲ್ಲಿ ಹಾಯ್(HI ) ಎಂದು ಟೈಪ್ ಮಾಡಿ 8097553191 ನಂಬರ್‌ಗೆ ಕಳುಹಿಸಬೇಕು. ಮರುಕ್ಷಣದಲ್ಲೇ ಪ್ರತಿಕ್ರಿಯೆ ಬರಲಿದೆ. ಅಲ್ಲಿ ಹೇಳುವ ವಿಧಾನಗಳನ್ನು ಅನುಸರಿಸಿದರೆ 30 ಸೆಕೆಂಡ್‌ಗಳಲ್ಲಿ ಸಾಲದ ಮೊತ್ತ ಖಾತೆಗೆ ಜಮಾ ಆಗಲಿದೆ.
ವ್ಯಾಟ್ಸ್ಆ್ಯಪ್ ಬ್ಯೂಸಿನೆಸ್ ಬಳಕೆದಾರರನ ಖಾತೆಯೆ ಟ್ರಾನ್ಸಾಕ್ಷನ್, ಹಣಕಾಸಿನ ವಹಿವಾಟಿನ ಮೇಲೆ ಸಾಲದ ಮೊತ್ತ ನಿರ್ಧಾವಾಗಲಿದೆ. ಇದು ಎಐ ಚಾಲಿತ ಕ್ರೆಡಿಟ್ ಲೈನ್ ಸೌಲಭ್ಯವಾಗಿದೆ. ಇಷ್ಟೇ ಅಲ್ಲ ಯಾವುದೇ ಸಮಯದಲ್ಲಿ ಸಾಲವನ್ನು ಪಡೆಯಬಹುದು. ಮಧ್ಯ ರಾತ್ರಿ 12 ಗಂಟೆಗೆ ಸಾಲ ಬೇಕು ಎಂದರೆ ಸಾಲ ಪಡೆಯಲು ಮಾಡಬೇಕಾದ ವಿಧಾನ ಅನುಸರಿಸಿದರೆ ಸಾಲ ಸಿಗಲಿದೆ.
KYC, ದಾಖಲೆ ಪರೀಶೀಲನೆ, ಬಳಕೆದಾರ ಹಣಕಾಸು ವಹಿವಾಟು ಸೇರಿದಂತೆ ಎಲ್ಲವೂ AI ಪವರ್ ಮೂಡ್‌ನಲ್ಲಿ ಪರಿಶೀಲನೆಯಾಗಲಿದೆ. ಇವೆಲ್ಲವೂ ಆನ್‌ಲೈನ್ ಮುಖಾಂತರವೇ ನಡೆಯಲಿದೆ. ಬಳಿಕ ಸಾಲದ ಮೊತ್ತ ನಿರ್ಧಾರವಾಗಲಿದೆ. ಬಳಕೆದಾರನಿಗೆ ಸಿಗುವ ಗರಿಷ್ಠ ಸಾಲದ ಮೊತ್ತದ ಮೆಸೆಜ್ ರವಾನೆಯಾಗಲಿದೆ. ಬಳಕೆದಾರನಿಗೆ ಈ ಮೊತ್ತಕ್ಕೆ ಸಮ್ಮತಿಸಿದರೆ ಸಾಲದ ಮೊತ್ತ ಜಮೆ ಆಗಲಿದೆ.
WhatsApp ಹೊಸ ಫೀಚರ್ಸ್: ಯಾರಿಗೂ ಗೊತ್ತಾಗದಂತೆ ಗ್ರೂಪಿನಿಂದ ನಿರ್ಗಮಿಸಬಹುದು!
ವಾಟ್ಸಾಪ್‌ನಲ್ಲಿ ಶೀಘ್ರ ಎಡಿಟ್ ಬಟನ್ ಲಭ್ಯ!
ಟ್ವೀಟರ್‌ಗಿಂತಲೂ ಮೊದಲೇ ವಾಟ್ಸಾಪ್ ತನ್ನ ಬಳಕೆದಾರರಿಗೆ ಎಡಿಟ್ ಬಟನ್ ಒದಗಿಸುವುದಾಗಿ ಘೋಷಣೆ ಮಾಡಿದೆ. ಪ್ರಸ್ತುತ ವಾಟ್ಸಾಪ್‌ನಲ್ಲಿ ಸಂದೇಶ ರವಾನಿಸಿದ ಮೇಲೆ ಅದನ್ನು ಅಳಿಸಿ ಹಾಕಬಹುದೇ ಹೊರತು ತಿದ್ದಲು ಸಾಧ್ಯವಿಲ್ಲ. ಆದರೆ ಎಡಿಟ್ ಬಟನ್ ಒದಗಿಸುವುದರೊಂದಿಗೆ ರವಾನಿಸಿದ ಮೇಲೂ ಸಂದೇಶವನ್ನು ಮತ್ತೆ ಎಡಿಟ್ ಮಾಡುವುದು ಸಾಧ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.
ಕಳೆದ 5 ವರ್ಷಗಳ ಹಿಂದೆಯೇ ಈ ಹಿನ್ನೆಲೆಯಲ್ಲಿ ಕಾರ್ಯವನ್ನು ವಾಟ್ಸಾಪ್ ಆರಂಭಿಸಿದ್ದು, ಎಡಿಟ್ ಬಟನ್ ಈಗಾಗಲೇ ಟೆಸ್ಟಿಂಗ್ ಹಂತದಲ್ಲಿದೆ. ವಾಟ್ಸಾಪ್‌ನಲ್ಲಿ ಸಂದೇಶವನ್ನು ಕಾಪಿ ಮಾಡುವ ಹಾಗೂ ಫಾರ್ವರ್ಡ್ ಮಾಡುವ ಆಯ್ಕೆಯೊಂದಿಗೆ ಮುಂದೆ ಎಡಿಟ್ ಆಯ್ಕೆ ಕೂಡಾ ನೀಡಲಾಗುವುದು. ಇದರೊಂದಿಗೆ ರವಾನಿಸಿದ ಸಂದೇಶದಲ್ಲಿನ ತಪ್ಪುಗಳನ್ನು ಸರಿಪಡಿಸಬಹುದಾಗಿದೆ. ಶೀಘ್ರವೇ ವಾಟ್ಸಾಪ್ ತನ್ನ ಬಳಕೆದಾರರಿಗೆ ಈ ಹೊಸ ಸೌಲಭ್ಯವನ್ನು ಒದಗಿಸಲಿದೆ ಎಂದು ಕಂಪನಿ ತಿಳಿಸಿದೆ.