ವಾಟ್ಸಾಪ್‌ನಲ್ಲಿ‌ ಕಳುಹಿಸಿದ ಮೆಸೇಜ್‌ ಎಡಿಟ್‌ ಮಾಡಲು ಶೀಘ್ರದಲ್ಲೇ ಹೊಸ ಫೀಚರ್‌?

By Suvarna NewsFirst Published Jun 1, 2022, 10:51 PM IST
Highlights

WhatsApp Edit Messages Feature: ಆ್ಯಪ್‌ನ ಬೀಟಾ ಆವೃತ್ತಿಯಲ್ಲಿನ ಎಡಿಟ್ ಬಟನನ್ನು  ವಾಟ್ಸಾಪ್ ಪರೀಕ್ಷಿಸುತ್ತಿದೆ. ಪ್ರಸ್ತುತ, ವಾಟ್ಸಾಪ್‌ನಲ್ಲಿ ಮೀಸಲಾದ ಎಡಿಟ್ ಆಯ್ಕೆ ಇಲ್ಲ.

WhatsApp Latest Update: ಕಳೆದ ಕೆಲವು ದಿನಗಳಿಂದ ಮೈಕ್ರೋಬ್ಲಾಗಿಂಗ್‌ ಪ್ಲಾಟ್‌ಫಾರ್ಮ್ ಟ್ವೀಟರ್‌ ಎಡಿಟ್‌ ಬಟನ್‌ ವೈಶಿಷ್ಟ್ಯ ಹೊರತರುತ್ತಿದೆ ಎಂದು ವರದಿಗಳು ತಿಳಿಸಿದ್ದವು. ಆದರೆ ಟ್ವೀಟರ್‌ಗೂ ಮುಂಚೆಯೇ ಮೆಟಾ ಒಡೆತನದ ಮೆಸೇಜಿಂಗ್‌ ಪ್ಲಾಟಫಾರ್ಮ ವಾಟ್ಸಾಪ್‌ ಎಡಿಟ್‌ ಬಟನ್‌ (WhatsApp Edit Messages Feature ) ನೀಡುವ ಸಾಧ್ಯತೆ ಇದೆ. ಮೆಸೇಜಿಂಗ್ ಅಪ್ಲಿಕೇಶನ್ ಆ್ಯಪ್‌ನ ಬೀಟಾ ಆವೃತ್ತಿಯಲ್ಲಿ ಎಡಿಟ್ ಬಟನನ್ನು ಪರೀಕ್ಷಿಸುತ್ತಿದೆ. ಪ್ರಸ್ತುತ, ವಾಟ್ಸಾಪ್‌ನಲ್ಲಿ ಮೀಸಲಾದ ಎಡಿಟ್ ಆಯ್ಕೆ ಇಲ್ಲ. ಒಮ್ಮೆ ಕಳುಹಿಸಿದ ಮೆಸೇಜನ್ನು ಡಿಲೀಟ್ ಮಾತ್ರ ಮಾಡಬಹುದು, ಆದರೆ ,ಎಡಿಟ್‌ ಮಾಡಲು ಸಾಧ್ಯವಿಲ್ಲ. ಆದರೆ ಮುಂಬರುವ ವೈಶಿಷ್ಟ್ಯವನ್ನು ಬಳಸಿ ಮೆಸೇಜ್ ಕಳುಹಿಸಿದ ನಂತರ ಅವುಗಳನ್ನು ಎಡಿಟ್‌ ಮಾಡಲು ಸಾಧ್ಯವಾಗಿಸುತ್ತದೆ.

ಎಲ್ಲಾ ವಾಟ್ಸಾಪ್ ಸಂಬಂಧಿತ ಬೆಳವಣಿಗೆಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ Wabetainfo ಈ ವೈಶಿಷ್ಟ್ಯವನ್ನು ಗುರುತಿಸಿದೆ. ಕಳೆದ ಕೆಲವು ತಿಂಗಳುಗಳಲ್ಲ ನಾವು ಜನರಿಗೆ ಸಂದೇಶ ಕಳುಹಿಸುವ ರೀತಿಯಲ್ಲಿ ವಾಟ್ಸಾಪ್ ಕೆಲವು ದೊಡ್ಡ ಬದಲಾವಣೆಗಳನ್ನು ಮಾಡಿದೆ. ಸಂದೇಶಗಳಿಗೆ ಪ್ರತಿಕ್ರಿಯಿಸಲು ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದ ನಂತರ,  ಈಗ ಸಂದೇಶಗಳನ್ನು ಕಳುಹಿಸಿದ ನಂತರ ಅವುಗಳನ್ನು ಎಡಿಟ್‌ ಮಾಡಲು ಬಳಕೆದಾರರಿಗೆ ಅವಕಾಶ ನೀಡಲಿದೆ.

ವಾಟ್ಸಾಪ್ ಐದು ವರ್ಷಗಳ ಹಿಂದೆ ಈ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿತ್ತು ಆದರೆ ಟ್ವಿಟರ್‌ನಲ್ಲಿ ವರದಿಯಾದ ಕೂಡಲೇ ಅದನ್ನು ಕಂಪನಿ ತಿರಸ್ಕರಿಸಿತ್ತು. ಆದಾಗ್ಯೂ, ಅಂತಿಮವಾಗಿ, ಐದು ವರ್ಷಗಳ ವಿರಾಮದ ನಂತರ, ವಾಟ್ಸಾಪ್ ಮತ್ತೆ ಎಡಿಟ್ ವೈಶಿಷ್ಟ್ಯದಲ್ಲಿ ಕೆಲಸ ಮಾಡಲು ಯೋಚಿಸಿದೆ.

Wabetainfo ವರದಿ: ಪ್ರಸ್ತುತ ಅಭಿವೃದ್ಧಿಪಡಿಸಲಾಗುತ್ತಿರುವ ಎಡಿಟ್ ವೈಶಿಷ್ಟ್ಯದ ಸ್ಕ್ರೀನ್‌ಶಾಟನ್ನು Wabetainfo ಹಂಚಿಕೊಂಡಿದೆ. ನೀವು ಕಳುಹಿಸಿದ ಸಂದೇಶವನ್ನು ನೀವು ಆರಿಸಿದಾಗ ವಾಟ್ಸಾಪ್ ಮೀಸಲಾದ ಎಡಿಟ್ ಆಯ್ಕೆಯನ್ನು ತೋರಿಸುತ್ತದೆ. ಸಂದೇಶಗಳನ್ನು ಕಾಪಿ ಮಾಡಲು ಮತ್ತು ಫಾರ್ವರ್ಡ್ ಮಾಡುವ ಆಯ್ಕೆಗಳ ಜೊತೆಗೆ, ಬಳಕೆದಾರರು ಎಡಿಟ್ ಆಯ್ಕೆಯನ್ನು ಸಹ ಪಡೆಯುತ್ತಾರೆ. 

ಇದನ್ನೂ ಓದಿ: ವಾಟ್ಸಾಪ್‌ನಲ್ಲಿ ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಡೌನ್‌ಲೋಡ್ ಮಾಡೋದು ಹೇಗೆ?

ಎಡಿಟ್ ಬಟನನ್ನು ಆಯ್ಕೆ ಮಾಡಿದ ನಂತರ, ನೀವು ಅದನ್ನು ಕಳುಹಿಸಿದ ನಂತರವೂ ನಿಮ್ಮ ಸಂದೇಶದಲ್ಲಿ ಯಾವುದೇ ಮುದ್ರಣದೋಷ ಅಥವಾ ಕಾಗುಣಿತ ದೋಷವನ್ನು ಸರಿಪಡಿಸಬಹುದು. ಪ್ರಸ್ತುತ ಸೆಟಪ್ ಬಳಕೆದಾರರಿಗೆ ಸಂದೇಶವನ್ನು ಅಳಿಸಲು ಮಾತ್ರ ಅನುಮತಿಸುತ್ತದೆ. ನೀವು ಅದನ್ನು ಕಳುಹಿಸಲು ಅಥವಾ ಎಡಿಟ್‌ ಮಾಡಲು ಸಾಧ್ಯವಿಲ್ಲ.

ಶೀಘ್ರದಲ್ಲೇ ಬಿಡುಗಡೆ?: “ಬಹುಶಃ ಎಡಿಟೆಡ್ ಸಂದೇಶಗಳ ಹಿಂದಿನ ಆವೃತ್ತಿಗಳನ್ನು ಪರಿಶೀಲಿಸಲು ಎಡಿಟ್ ಇತಿಹಾಸ‌ (Edit History) ಇರುವುದಿಲ್ಲ, ಆದರೆ ಈ ವೈಶಿಷ್ಟ್ಯವು ಅಭಿವೃದ್ಧಿಯ ಹಂತದಲ್ಲಿರುವುದರಿಂದ, ವೈಶಿಷ್ಟ್ಯವನ್ನು ಬಿಡುಗಡೆ ಮಾಡುವ ಮೊದಲು ಅವರ ಯೋಜನೆಗಳು ಬದಲಾಗಬಹುದು. ಹೆಚ್ಚುವರಿಯಾಗಿ, ಜನರು ತಮ್ಮ ಸಂದೇಶಗಳನ್ನು ಎಡಿಟ್ ಮಾಡಲು ಅನುಮತಿಸುವ ಸಮಯದ ವಿಂಡೋದ ವಿವರಗಳು ಸದ್ಯಕ್ಕೆ ತಿಳಿದಿಲ್ಲ, ಆದರೆ ಸುದ್ದಿ ಇದ್ದಾಗ ನಾವು ತಕ್ಷಣ ನಿಮಗೆ ತಿಳಿಸುತ್ತೇವೆ ”ಎಂದು Wabetainfo ವರದಿ ಹೇಳಿದೆ.

ಆಂಡ್ರಾಯ್ಡ್‌ಗಾಗಿ ವಾಟ್ಸಾಪ್‌ ಬೀಟಾದಲ್ಲಿ ವೈಶಿಷ್ಟ್ಯವನ್ನು ಪರೀಕ್ಷಿಸಲಾಗುತ್ತಿದೆ ಆದರೆ ಐಓಎಸ್ ಮತ್ತು ಡೆಸ್ಕ್‌ಟಾಪ್‌ಗಾಗಿ ವಾಟ್ಸಾಪ್ ಬೀಟಾಗೆ ಅದೇ ವೈಶಿಷ್ಟ್ಯವನ್ನು  ತರುವಲ್ಲಿ  ವಾಟ್ಸಾಪ್ ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ಹೇಳುತ್ತದೆ ಮತ್ತು ಹೆಚ್ಚಿನ ವಿವರಗಳು ನಂತರ ಲಭ್ಯವಿರುತ್ತವೆ ಎಂದು ಅದು ತಿಳಿಸಿದೆ.

ಇದನ್ನೂ ಓದಿ: WhatsApp Pay ಮೂಲಕ ಪಾವತಿಸಿದರೆ 35 ರೂ. ಕ್ಯಾಶ್‌ಬ್ಯಾಕ್, ಷರತ್ತು ಅನ್ವಯ!

ಆದಾಗ್ಯೂ, ಈ ವೈಶಿಷ್ಟ್ಯವು ಅಭಿವೃದ್ಧಿಯ ಹಂತದಲ್ಲಿರುವುದರಿಂದ, ಸ್ಥಿರವಾದ ನವೀಕರಣಕ್ಕಾಗಿ ವೈಶಿಷ್ಟ್ಯವು ಯಾವಾಗ ಸಿದ್ಧವಾಗಲಿದೆ ಎಂಬುದನ್ನು ಖಚಿತಪಡಿಸಲಾಗುವುದಿಲ್ಲ, ಆದರೆ ವಾಟ್ಸಾಪ್ ಹೆಚ್ಚಿನ ಬೀಟಾ ಬಳಕೆದಾರರಿಗೆ ಶೀಘ್ರದಲ್ಲೇ ಅದನ್ನು ಹೊರತರಬಹುದು.

click me!