New Sensation: ವಾಟ್ಸಾಪ್ ಹಿಂದಿಕ್ಕುವ ‘ಸಿಗ್ನಲ್’

Suvarna News   | Asianet News
Published : Jan 09, 2021, 04:25 PM ISTUpdated : Jan 09, 2021, 04:31 PM IST
New Sensation: ವಾಟ್ಸಾಪ್ ಹಿಂದಿಕ್ಕುವ ‘ಸಿಗ್ನಲ್’

ಸಾರಾಂಶ

ಫೇಸ್‌ಬುಕ್ ಒಡೆತನದ ಮೆಸೆಜಿಂಗ್ ಆಪ್ ವಾಟ್ಸಾಪ್‌ಗೆ ಈಗ ಹೊಸ ತಲೆನೋವು ಶುರುವಾಗಿದೆ. ತನ್ನ ಪ್ರತಿಸ್ಪರ್ಧಿ ಸಿಗ್ನಲ್ ಮ್ಯಾಜಿಕಲ್ ರೀತಿಯಲ್ಲಿ ಹೊಸ ಹೊಸ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಲವು ರಾಷ್ಟ್ರಗಳಲ್ಲಿ ವಾಟ್ಸಾಪ್ ಹಿಂದಿಕ್ಕಿ ಅಗ್ರಸ್ಥಾನಿಯಾಗುವತ್ತ ದಾಪುಗಾಲು ಹಾಕಿದೆ.  

ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೆಜಿಂಗ್ ಆಪ್‌ ಯಾವುದು ಎಂದು ನೀವು ಯಾರಿಗಾದರೂ ಕೇಳಿದರೆ, ಅವರು ಕ್ಷಣಾರ್ಧದಲ್ಲೇ ವಾಟ್ಸಾಪ್ ಎಂದು ಹೇಳುತ್ತಾರೆ. ಅಷ್ಟರ ಮಟ್ಟಿಗೆ ವಾಟ್ಸಾಪ್ ನಮಗೆ ಅನಿವಾರ್ಯ ಅಗತ್ಯವಾಗಿದೆ. ಆದರೆ, ಇದೀಗ ವಾಟ್ಸಾಪ್ ಹಿಂದಿಕ್ಕುವ ‘ಸಿಗ್ನಲ್’ ಏನಾದರೂ ದೊರೆತಿದೆಯಾ?

ಹೌದು, ಜಗತ್ತಿನಲ್ಲೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ ಅನ್ನು ಹಿಂದಿಕ್ಕುವ ಪ್ರಯತ್ನದಲ್ಲಿದೆ ಸಿಗ್ನಲ್ ಎಂಬ ಹೊಸ ಮೆಸೆಜಿಂಗ್ ಆಪ್.

ಲಾವಾದಿಂದ ಜಗತ್ತಿನ ಮೊದಲ ಕಸ್ಟಮೈಸಡ್ ಸ್ಮಾರ್ಟ್‌ಫೋನ್

ಈ ವಾಟ್ಸಾಪ್ ಮೆಸೆಜಿಂಗ್ ಆಪ್‌ ಅನ್ನು ಫೇಸ್‌ಬುಕ್ 2014ರಲ್ಲಿ ಖರೀದಿ ಮಾಡಿತು. ಜಾಗತಿಕವಾಗಿ ವಾಟ್ಸಾಪ್ ತಿಂಗಳಿಗೆ 200 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಎಂಡ್ ಟು ಎಂಡ್ ಎನ್‌ಸಿಕ್ರಿಪ್ಷನ್, ದಿನ ನಿತ್ಯದ ಸಂವಹನದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವುದು ವಾಟ್ಸಾಪ್ ನಿರೀಕ್ಷೆ ಮೀರಿ ಜನಪ್ರಿಯವಾಯಿತು. ತನ್ನ ಸೇವೆಯ ಉತ್ಕೃಷ್ಟತೆಗೆ ವಾಟ್ಸಾಪ್ ಮಾಕ್ಸಿ ಮರ್ಲಿನ್‌ಸ್ಪೈಕ್ ಅವರ ಓಪನ್ ವಿಸ್ಪರ್ ಸಿಸ್ಟಮ್‌ನ ಸಿಗ್ನಲ್ ಎನ್ಸ್‌ಕ್ಪಿಪ್ಟೆಡ್ ಮೆಸೆಜಿಂಗ್ ಪ್ರೊಟೊಕಾಲ್‌ನೊಂದಿಗೆ ಸಂಯೋಜನೆಗೊಂಡಿತ್ತು. ಇದೇ ಪ್ರೊಟೊಕಾಲ್ ಅನ್ನು ಮೈಕ್ರೋಸಾಫ್ಟ್ ಮತ್ತು ಗೂಗಲ್ ಕೂಡ ಬಳಸಿಕೊಂಡಿದ್ದವು. ಯಾಕೆಂದರೆ, ಈ ಪ್ರೊಟೊಕಾಲ್ ಅತ್ಯಂತ ಸುರಕ್ಷಿತ ಎಂಬುದು ಜನಜನಿತ.

ಇದೇ ಅದೇ ಓಪನ್ ವಿಸ್ಪರ್ ಸಿಸ್ಟಮ್ ‘ಸಿಗ್ನಲ್ ಮೆಸೆಂಜರ್ ಎಲ್ಎಲ್ಸಿ’ಯಾಗಿ ಬದಲಾಗಿದ್ದು ಮತ್ತು ಸಿಗ್ನಲ್ ಫೌಂಡೇಷನ್ ಭಾಗವಾಗಿದೆ. ಇದೆಲ್ಲ ಯಾಕೆ ಹೇಳಬೇಕಾಯಿತು ಎಂದರೆ, ವಾಟ್ಸಾಪ್‌ ಬಳಕೆಯಾಗಿದ್ದ ಸುರಕ್ಷತೆಯ ಪ್ರೋಟೊಕಾಲ್ ಸಂಯೋಜನೆಯ ಸಿಗ್ನಲ್ ಇದೀಗ ಅದೇ ವಾಟ್ಸಾಪ್ ಅನ್ನು ಹಿಂದಿಕ್ಕುವ ಪ್ರಯತ್ನದಲ್ಲಿದೆ! ಸಿಗ್ನಲ್ ಮೆಸೆಂಜಿಂಗ್ ಎಂದು ರಿಬ್ರ್ಯಾಂಡಿಂಗ್ ಮಾಡಿದ ಫೌಂಡೇಶನ್, ತನ್ನ ಈ ಆಪ್ ಅನ್ನು ಮತ್ತಷ್ಟು ಸುರಕ್ಷಿತಗೊಳಿಸುವಲ್ಲಿ ಹೆಚ್ಚು ಪ್ರಯತ್ನ ಮಾಡಿತು. ಸಿಗ್ನಲ್ ಫೌಂಡೇಶನ್‌ನ ಪ್ರಮುಖ ಸಿಗ್ನಲ್ ಅಪ್ಲಿಕೇಶನ್ ಸಂಪೂರ್ಣವಾದ ಮತ್ತು ಸುರಕ್ಷಿತ ಸಂವಹನಗಳನ್ನು ತನ್ನದೇ ಆದ ರೀತಿಯಲ್ಲಿ ಬಳಸಲು ಸುಲಭವಾಗಿಸುತ್ತದೆ.
 

ಹೆಚ್ಚಿದ ಹೊಸ ಬಳಕೆದಾರರು
ಇತ್ತೀಚೆಗಷ್ಟೇ ಜಗತ್ತಿನ ನಂಬರ್ 1 ಶ್ರೀಮಂತರಾಗಿರುವ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಸಿಗ್ನಲ್ ಬಳಕೆ ಮಾಡುವಂತೆ ಮಾಡಿದ್ದ ಒಂದು ಟ್ವೀಟ್‌ನಿಂದಾಗಿ ಇಡೀ ಚಿತ್ರಣವೇ ಬದಲಾಗಿದೆ ಹೋಗಿದೆ. ಜೊತೆಗೆ ವಾಟ್ಸಾಪ್ ‌ತರಲು ಹೊರಟಿದ್ದ ಹೊಸ ಪಾಲಿಸಿಯಿಂದ ಜನರು ಸಿಗ್ನಲ್ ಆಪ್‌ನತ್ತ ದಾಂಗುಡಿ ಇಡುತ್ತಿದ್ದಾರೆ. ಹೊಸ ಬಳಕೆದಾರರು ಒಮ್ಮೆಲೇ ಹೆಚ್ಚಾದ್ದರಿಂದ ಸಿಗ್ನಲ್ ಸರ್ವರ್ ಕೂಡ ಡೌನ್ ಆಗಿ ಹೋಗಿತ್ತು. ಲಾಭರಹಿತ ಸಂಸ್ಥೆಯಾಗಿರುವ ಸಿಗ್ನಲ್ ಫೌಂಡೇಷನ್‌ನ ಈ ಆಪ್‌ ಹೆಚ್ಚು ಸುರಕ್ಷಿತವಾಗಿರುವುದರಿಂದ ಬಳಕೆದಾರರು ವಾಟ್ಸಾಪ್ ತೊರೆದು ಸಿಗ್ನಲ್ ಸೇರಿಕೊಳ್ಳುತ್ತಿದ್ದಾರೆ.

ನೋಕಿಯಾ 7.3 ಸ್ಮಾರ್ಟ್‌ಫೋನ್‌ನಲ್ಲಿ ಪವರ್‌‌ಫುಲ್ ಬ್ಯಾಟರಿ

ಸಿಗ್ನಲ್ ಫೌಂಡೇಷನ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು ಜನರು ನೀಡುವ ಕಾಣಿಕೆಯಿಂದಲೇ ಅದು ತನ್ನ ಸಿಗ್ನಲ್ ಆಪ್ ನಿರ್ವಹಿಸುತ್ತದೆ. ಇದೀಗ ಸಿಗ್ನಲ್ ಫೌಂಡೇಷನ್‌ ದೇಣಿಗೆ ಕೂಡ ಹರಿದು ಬರುತ್ತದೆ. ಟ್ವಿಟರ್‌ನಲ್ಲಿ ಸರಣಿ ಟ್ವೀಟ್ ಮಾಡಿರುವ ಸಿಗ್ನಲ್, ಭಾರತವೂ ಸೇರಿದಂತೆ ಎಲ್ಲ ದೇಶಗಳ ಬಳಕೆದಾರರಿಗೆ ಥ್ಯಾಂಕ್ಸ್ ಹೇಳುತ್ತಿದೆ. ಮ್ಯಾಜಿಕಲ್ ರೀತಿಯಲ್ಲಿ ನೋಡ ನೋಡುತ್ತ ಅದು ಬಹುತೇಕ ರಾಷ್ಟ್ರಗಳಲ್ಲಿ ವಾಟ್ಸಾಪ್ ಹಿಂದಿಕ್ಕಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಬಳಕೆದಾರರನ್ನು ಹೊಂದುತ್ತಿದೆ.

ಇತ್ತೀಚೆಗೆ ಅಮೆರಿಕದ ಕ್ಯಾಪಿಟಲ್ ಹಿಲ್ ಮೇಲೆ ಟ್ರಂಪ್ ಬೆಂಬಲಿಗರು ನಡೆಸಿದ ದಾಳಿಯ ಪ್ರಚೋದನೆಗೆ ವಾಟ್ಸಾಪ್ ಮತ್ತು ಫೇಸ್‌ಬುಕ್ ಕೂಡ ಕಾರಣ ಎಂಬುದು ಹಲವರ ಆರೋಪವಾಗಿದೆ. ಪ್ರಚೋದನೆ ಮತ್ತು ದ್ವೇಷದ ಮಾತುಗಳಿಗೆ ಜಾಗಕಲ್ಪಿಸಿದ್ದರಿಂದ ಈ ಹಿಂಸೆ ನಡೆಯುತು ಎಂದು ವಾದಿಸಲಾಗುತ್ತಿದೆ. ಇದೇ ಅಭಿಪ್ರಾಯವನ್ನು ಹೊಂದಿರುವ ಎಲಾನ್ ಮಸ್ಕ್, ಸಿಗ್ನಲ್ ಬಳಸುವಂತೆ ಕರೆ ನೀಡಿದ್ದರು. ಅದರ ಪರಿಣಾಮ ಇದೀಗ ಸಿಗ್ನಲ್ ನಂಬರ್ 1 ಪಟ್ಟದತ್ತ ದಾಪುಗಾಲು ಹಾಕುತ್ತಿದೆ.

ಏರ್‌ಟೆಲ್‌ನ 199 ರೂ. ಪ್ಲ್ಯಾನ್ ಪರಿಷ್ಕರಣೆ, ನಿತ್ಯ 1.5 ಜಿಬಿ ಡೇಟಾ!

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್