ಲಾಕ್‌ಡೌನ್‌ನಿಂದ ಜನರ ಜೊತೆಗಿನ ಸಂಪರ್ಕಕ್ಕೆ ಸರ್ಕಾರ, ವೈದ್ಯರು, ಅಧಿಕಾರಿಗಳು ಟ್ವಿಟರ್ ತಾಣವನ್ನು ಬಳಸುತ್ತಿದ್ದಾರೆ. ಇದೀಗ ಸರ್ಕಾರ ಹಾಗೂ ಜನರಿಗೆ ಕೊಂಡಿಯಾಗಿ ಟ್ವಿಟರ್ ಕಾರ್ಯನಿರ್ವಹಿಸುತ್ತಿದೆ. ಇದರೊಂದಿಗೆ ಕೊರೋನವೈರಸ್ ಬಗ್ಗೆ ವಿಶ್ವಾಸಾರ್ಹ ಮಾಹಿತಿಯನ್ನು ತಿಳಿಯಲು ಟ್ವಿಟರ್ ಹೊಸ ಪ್ರಯತ್ನ ಮಾಡಿದೆ. ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳ ಜನರಿಗೆ ನೆರವಾಗುವ ಸ್ಪಷ್ಟ ಮಾಹಿತಿಯನ್ನು ಟ್ವಿಟರ್ ನೀಡುತ್ತಿದೆ.
ಬೆಂಗಳೂರು(ಏ.02): ಕೊರೋನಾ ವೈರಸ್ ಹಾನಿಯನ್ನು ತಗ್ಗಿಸಲು ಮತ್ತು ಸಾರ್ವಜನಿಕರೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಸಂಪರ್ಕ ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸಾರ್ವಜನಿಕ ಆರೋಗ್ಯ ಅಧಿಕಾರಿಗಳು, ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಸರ್ಕಾರ ಹಾಗೂ ಜನರಿಗೆ ಕೊಂಡಿಯಾಗಿ , ಸಮಸ್ಯೆಗಳನ್ನು ನಿವಾರಿಸಲು ಸರ್ಕಾರದ ಜೊತೆ ಟ್ವಿಟರ್ ಮುಕ್ತ ಸಂವಹನ ನಡೆಸುತ್ತಿದೆ.
ಕೋವಿಡ್ ಪ್ರತಿಕ್ರಿಯಾ ನಿರ್ವಹಣೆಯ ಕುರಿತು ಹಲವಾರು ಇಲಾಖೆಗಳ ಕೌಶಲಗಳನ್ನು ಚುರುಕುಗೊಳಿಸಲು ನಾವು ಆರೋಗ್ಯ ಹಾಗು ಕುಟುಂಬ ಕಲ್ಯಾಣ ಸಚಿವಾಲಯ, ಹಲವಾರು ರಾಜ್ಯ ಸರ್ಕಾರಗಳೊಂದಿಗೆ ಟ್ವಿಟರ್ ಕಾರ್ಯನಿರ್ವಹಿಸುತ್ತಿದೆ. ಕೋವಿಡ್-ಪ್ರತಿಕ್ರಿಯಾ ಖಾತೆ ಆರಂಭಿಸಿ, ಆಯಾ ರಾಜ್ಯದ ಜನರಿಗೆ ನೆರವು ನೀಡುತ್ತಿದೆ. ಈಗಾಗಲೇ DIPR Karnataka, Maharashtra Control room, Jharkhand COVID Helpline, UP Covid helpline ಟ್ವಿಟರ್ ಖಾತೆಗಳು ಆಯಾ ರಾಜ್ಯ ಸರ್ಕಾರದ ಇಲಾಖೆಗಳ ಅಧೀಕೃತ ಮಾಹಿತಿಯನ್ನು ನೀಡುತ್ತಿದೆ. ಈ ಮೂಲಕ ಜನರಿಗೆ ನೆರವಾಗುತ್ತಿದೆ
ಕೋವಿಡ್-19 ಹುಡುಕಾಟ ಪ್ರಾಂಪ್ಟ್
ಮುಖ್ಯವಾದ ಸಂವಾದಗಳಿಗೆ ತಡೆರಹಿತ ಹಾಗು ವಾಸ್ತವ ಸಮಯ ಪ್ರವೇಶಾವಕಾಶವನ್ನು ಜನರಿಗೆ ಒದಗಿಸುವುದಕ್ಕೆ ಟ್ವಿಟ್ಟರ್ ಬದ್ಧವಾಗಿದೆ. ಜನರು ಕೋವಿಡ್-19 ಸಂಬಂಧಿತ ಸಂವಾದಗಳನ್ನು ಹುಡುಕಿದಾಗ, ಸರ್ಚ್ ಪ್ರಾಂಪ್ಟ್, ರಾಷ್ಟ್ರೀಯ ಆರೋಗ್ಯ ಏಜೆನ್ಸಿಗಳು, ಮತ್ತು ವಿಶ್ವ ಆರೋಗ್ಯ ಸಂಸ್ಥೆ(WHO) ಮೂಲಗಳಿಂದ ಖಚಿತ ಮಾಹಿತಿ ಒದಗಿಸುತ್ತಿದೆ. ಈ ರೀತಿಯ ಸರ್ಚ್ ಪ್ರಾಂಪ್ಟ್ ಉಪಯುಕ್ತ ಮಾಡುವುದಕ್ಕಾಗಿ ಟ್ವಿಟ್ಟರ್ ವಿಶ್ವಾದ್ಯಂತ ದೇಶಗಳಲ್ಲಿರುವ ಸ್ಥಳೀಯ ಏಜೆನ್ಸಿಗಳೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಂಡಿದೆ. ಭಾರತದಲ್ಲಿ, ಸರ್ಚ್ ಪ್ರಾಂಪ್ಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜೊತೆ ಕಾರ್ಯನಿರ್ವಹಿಸುತ್ತಿದೆ.
ಕೋವಿಡ್-19 ಸುತ್ತ ಇರುವ ತಪ್ಪು ಮಾಹಿತಿಯ ವಿರುದ್ಧ ಸಮರ
ಭಾರತ ಸರ್ಕಾರದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಟ್ವಿಟರ್, ಸಾರ್ವಜನಿಕ ಸಂಭಾಷಣೆಗಳ ಸಂರಕ್ಷಣೆಯ ಮೇಲೆ ಗಮನ ಕೇಂದ್ರೀಕರಿಸಿದೆ.. ಜಾಗತಿಕ ಹಾಗು ಸ್ಥಳೀಯ ಸಾರ್ವಜನಿಕ ಆರೋಗ್ಯ ಮಾಹಿತಿಯ ಅಧಿಕೃತ ಮೂಲಗಳ ಮಾಹಿತಿಗಳಿಗೆ ವಿರುದ್ಧವಾಗಿ ಹರಿದು ಬರುವ ಮಾಹಿತಿ, ಸುಳ್ಳು ಮಾಹಿತಿಗಳನ್ನು ನಿಭಾಯಿಸಲು ಟ್ವಿಟರ್ ಸುರಕ್ಷತಾ ನಿಯಮಗಳನ್ನು ಮತ್ತು ಅಪಾಯದ ನಮ್ಮ ಅರ್ಥವಿವರಣೆಯನ್ನು ವಿಸ್ತರಿಸಿದೆ.