ಬೆಂಗಳೂರು(ಜು.05); ಕೇಂದ್ರ ಸರ್ಕಾರ ಹಾಗೂ ಟ್ವಿಟರ್ ನಡುವಿನ ಹೋರಾಟ ಮತ್ತೆ ತಾರಕಕ್ಕೇರಿದೆ. ಕೇಂದ್ರದ ಆದೇಶ ಪಾಲಿಸಲು ಟ್ವಿಟರ್ ನಿರಾಕರಿಸಿದೆ. ಇದೀಗ ಕೇಂದ್ರದ ವಿರುದ್ಧ ಟ್ವಿಟರ್ ಕರ್ನಾಟಕ ಹೈಕೋರ್ಟ್‌ಗೆ ಅರ್ಡಿ ಸಲ್ಲಿಸಿದೆ. ಈ ಮೂಲಕ ಟ್ವಿಟರ್ ಕೇಂದ್ರದ ವಿರುದ್ಧ ಕಾನೂನು ಸಮರ ಸಾರಿದೆ.
ಆಕ್ಷೇಪಾರ್ಹ ಪೋಸ್ಟ್ ಹಾಗೂ ಖಾತೆಗಳನ್ನು ನಿರ್ಬಂಧಿಸಲು ಅತೀ ದೊಡ್ಡ ಸಾಮಾಜಿಕ ಜಾಲತಾಣ ವೇದಿಕೆಯಾಗಿರುವ ಟ್ವಿಟರ್‌ಗೆ ಈಗಾಗಲೇ ಎರಡು ಬಾರಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಎಚ್ಚರಿಕೆ ನೀಡಿದೆ. ಆದರೆ ಆಕ್ಷೇಪಾರ್ಹ ಪೋಸ್ಟ್ ಹಾಗೂ ಖಾತೆಗಳನ್ನು ನಿರ್ಬಂಧಿಸಲು ಟ್ವಿಟರ್ ಮೀನಾಮೇಶ ಎಣಿಸಿತ್ತು. ಇದೀಗ ಅಂತಿಮ ಗಡುವು ಸನಿಹ ಬಂದಂತೆ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
undefined
Govt blocks channels ಸುಳ್ಳು ಹರಡುತ್ತಿದ್ದ ಭಾರತದ 18, ಪಾಕಿಸ್ತಾನದ 4 YouTube ಚಾನೆಲ್ ಬ್ಲಾಕ್!
ನೂತನ ಐಟಿ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಕೇಂದ್ರ ಸರ್ಕಾರ ಕೆಲ ಪೋಸ್ಟ್ ಹಾಗೂ ಖಾತೆಗಳನ್ನು ತೆಗೆದುಹಾಕಲು ಸೂಚಿಸಿತ್ತು. ಇದರಲ್ಲಿ ಪ್ರಮುಖವಾಗಿ ಪ್ರತ್ಯೇಕ ಸಿಖ್ ರಾಷ್ಟ್ರ ಬೆಂಬಲಿಸಿದ ಪೋಸ್ಟ್ ಹಾಗೂ ಹಲವು ಟ್ವಿಟರ್ ಖಾತೆಗಳು, ಕೃಷಿ ಕಾಯ್ದೆ ಹಾಗೂ ರೈತರ ಪ್ರತಿಭಟನೆ ವಿರುದ್ಧ ತಪ್ಪು ಮಾಹಿತಿಗಳ ಪೋಸ್ಟ್, ಕೇಂದ್ರ ಸರ್ಕಾರದ ಕೋವಿಡ್ ನಿರ್ವಹಣೆ ವಿರುದ್ಧದ ಪೋಸ್ಟ್‌ಗಳನ್ನು ತೆಗೆದು ಹಾಕಲು ಕೇಂದ್ರ ಸೂಚಿಸಿತ್ತು.
ಕೇಂದ್ರದ ಆದೇಶ ಪಾಲಿಸುವಂತೆ ಜೂನ್ 27 ರಂದು ಅಂತಿಮ ಎಚ್ಚರಿಕೆ ನೀಡಿತ್ತು. ಆದರೆ ಈ ಎಚ್ಚರಿಕೆ ಕುರಿತು ಮೌನ ವಹಿಸಿದ್ದ ಟ್ವಿಟರ್ ಇದೀಗ ನ್ಯಾಯಾಂಗದ ಮೊರೆ ಹೋಗಿದೆ. ಟ್ವಿಟರ್ ಖಾತೆದಾರರಿಗೆ ನೋಟಿಸ್ ನೀಡದೆ ಖಾತೆ ನಿರ್ಬಂಧಿಸಲು ಸಾಧ್ಯವಿಲ್ಲ. ಇನ್ನು ಕೆಲ ಪಕ್ಷಗಳ ಪೋಸ್ಟ್‌ಗಳನ್ನು ನಿರ್ಬಂಧಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ ಎಂದು ಟ್ವೀಟರ್ ಹೈಕೋರ್ಟ್ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದೆ
ಕೇಂದ್ರ ಸರ್ಕಾರದ ವಿರುದ್ಧ ಟ್ವಿಟರ್ ತಿಕ್ಕಾಟ ಇದೇ ಮೊದಲಲ್ಲ. ನೂತನ ಐಟಿ ನಿಯಮ ಜಾರಿಯಾದಾಗಿನಿಂದ ಕೇಂದ್ರ ಹಾಗೂ ಟ್ವಿಟರ್ ನಡುವಿನ ತಿಕ್ಕಾಟ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳ ದುರುಪಯೋಗ ನಿಯಂತ್ರಣಕ್ಕಾಗಿ ರೂಪಿಸಲಾದ ನೂತನ ಐಟಿ ಕಾಯ್ದೆ ಪ್ರಕಾರ ಟ್ವೀಟರ್ ಸಂಸ್ಥೆ ಮುಖ್ಯ ಅನುಸರಣಾ ಅಧಿಕಾರಿ ಮತ್ತು ಕುಂದುಕೊರತೆಗಳ ನಿವಾರಣೆಗೆ ಅಧಿಕಾರಿಯನ್ನು ನೇಮಕ ಮಾಡದೇ ಕೇಂದ್ರಕ್ಕೆ ಸೆಡ್ಡು ಹೊಡೆದಿತ್ತು. ಆದರೆ ಕೇಂದ್ರದ ಖಡಕ್ ಸೂಚನೆ ಬೆನ್ನಲ್ಲೇ ಕೊನೆಗೂ ನೇಮಕ ಮಾಡಿತ್ತು.
WhatsApp Accounts Ban: ಅಕ್ಟೋಬರ್‌ನಲ್ಲಿ 20 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದ ವಾಟ್ಸಪ್!
ಅಧಿಕಾರಿಗಳ ನೇಮಕ ವಿಚಾರದಲ್ಲೂ ಟ್ವಿಟರ್ ದೆಹಲಿ ಹೈಕೋರ್ಟ್ ಮೊರೆ ಹೋಗಿತ್ತು. ಈ ವೇಳೆ ದೆಹಲಿ ಹೈಕೋರ್ಟ್, ನೂತನ ಐಟಿ ನಿಯಮ ಪಾಲನೆಯ ಕುರಿತು ಪ್ರಮಾಣಪತ್ರ ಸಲ್ಲಿಸಲು ಟ್ವೀಟರ್‌ಗೆ ದೆಹಲಿ ಹೈಕೋರ್ಟ್ ಎರಡು ವಾರಗಳ ಗಡುವು ನೀಡಿತ್ತು. ಒಂದು ವೇಳೆ ಈ ಗಡುವಿನ ಒಳಗಾಗಿ ಪ್ರತಿಕ್ರಿಯೆ ನೀಡದೇ ಹೋದರೆ, ಟ್ವೀಟರ್ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಕೇಂದ್ರ ಸರ್ಕಾರ ಸ್ವತಂತ್ರವಾಗಿದೆ ಎಂದು ಕಡಕ್ ಎಚ್ಚರಿಕೆ ನೀಡಿತ್ತು.