ಕೇಂದ್ರದ ವಿರುದ್ಧ ಮತ್ತೆ ಟ್ವಿಟರ್ ತಿಕ್ಕಾಟ, ಸರ್ಕಾರದ ಆದೇಶದ ವಿರುದ್ಧ ನ್ಯಾಯಾಂಗದ ಮೊರೆ!

By Suvarna NewsFirst Published Jul 5, 2022, 4:54 PM IST
Highlights
  • ಮತ್ತೆ ಶುರುವಾಯ್ತು ಟ್ಟಿಟರ್ ಕಿರಿಕ್, ಸರ್ಕಾರ ಸೂಚನೆ ಪಾಲಿಸಲು ನಕಾರ
  • ಕೆಲ ಪೋಸ್ಟ್‌ಗಳ ತೆಗೆದುಹಾಕುವಂತೆ ಸೂಚಿಸಿದ್ದ ಕೇಂದ್ರ ಸರ್ಕಾರ
  • ಸರ್ಕಾರದ ಸೂಚನೆಯನ್ನು ನ್ಯಾಯಾಂಗ ಪರಾಮರ್ಶೆ ಬಯಿಸಿದ ಟ್ವಿಟರ್
     

ನವದೆಹಲಿ(ಜು.05): ಟ್ವಿಟರ್ ಹಾಗೂ ಕೇಂದ್ರ ಸರ್ಕಾರ ನಡುವಿನ ತಿಕ್ಕಾಟ ಮತ್ತೆ ಆರಂಭಗೊಂಡಿದೆ. ಕಳೆದ ವರ್ಷ ಕೇಂದ್ರ ಸರ್ಕಾರ ಸೂಚಿಸಿದ್ದ ಕೆಲ ಪೋಸ್ಟ್‌ಗಳ ತೆಗೆದು ಹಾಕಲು ಟ್ವಿಟರ್ ಹಿಂದೇಟು ಹಾಕಿದೆ. ಇಷ್ಟೇ ಅಲ್ಲ ಈ ಕುರಿತು ನ್ಯಾಯಾಂಗ  ಪರಾಮರ್ಶೆ ಬಯಸಿದೆ.

ಸಾಮಾಜಿಕ ತಾಣದಲ್ಲಿ ಕೆಲ ನಿರ್ಬಂಧಿತ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಆದರೆ ಸರ್ಕಾರದ ಆದೇಶ ರದ್ದುಗೊಳಿಸುವಂತೆ ಟ್ವಿಟರ್ ನ್ಯಾಯಾಂಗದ ಮೊರೆ ಹೋಗಿದೆ. ಸರ್ಕಾರದ ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಟ್ವಿಟರ್ ಆರೋಪಿಸಿದೆ. 

Latest Videos

Google Twitter ಭಾರತ ಬಗ್ಗೆ ನಕಲಿ ಸುದ್ದಿಯಿಂದ ಕೆಟ್ಟ ಹೆಸರು, ಸುಳ್ಳು ಸುದ್ದಿ ತಡೆಯದ ಗೂಗಲ್‌, ಟ್ವೀಟರ್‌ಗೆ ಕೇಂದ್ರ ತರಾಟೆ!

ಕಳೆದ ವರ್ಷದ ಟ್ವಿಟರ್ ಪೋಸ್ಟ್‌ಗಳ ಕುರಿತು ಕೇಂದ್ರ ಖಡಕ್ ಸೂಚನೆ ನೀಡಿತ್ತು. ಪ್ರತ್ಯೇಕ ಸಿಖ್ ರಾಜ್ಯ ಬೆಂಬಲಿಸುವ ಹಲವು ಟ್ವಿಟರ್ ಖಾತೆಗಳು, ಕೃಷಿ ಮಸೂದೆ ಹಾಗೂ ರೈತ ಪ್ರತಿಭಟನೆ ಕುರಿತ ತಪ್ಪು ಮಾಹಿತಿಗಳು, ಕೋವಿಡ್ ಸಾಂಕ್ರಾಮಿಕ ರೋಗವನ್ನು ಸರ್ಕಾರ ನಿರ್ವಹಿಸಿದ ರೀತಿಗೆ ಟೀಕೆ ಸೇರಿದಂತೆ ಕೆಲ ನಿರ್ಬಂಧಿತ ವಿಚಾರಗಳ ಪೋಸ್ಟ್‌ಗಳನ್ನು ಹಾಗೂ ಖಾತೆಗಳನ್ನು ತೆಗೆದು ಹಾಕಲು ಕೇಂದ್ರ ಸರ್ಕಾರ ಸೂಚಿಸಿತ್ತು.

ಕಳೆದ ತಿಂಗಳು ಕೇಂದ್ರ ಐಟಿ ಸಚಿವರು ಟ್ವಿಟರ್‌ಗೆ ವಾರ್ನಿಂಗ್ ನೀಡಿದ್ದರು. ಕೇಂದ್ರದ ಆದೇಶಗಳನ್ನು ಪಾಲಿಸದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದಿದ್ದರು. ಕೇಂದ್ರದ ಆದೇಶ ಪಾಲಿಸುವ ಒತ್ತಡ ಹೆಚ್ಚಾಗುತ್ತಿದ್ದಂತೆ ಟ್ವಿಟರ್ ಕೋರ್ಟ್‌ ಮೊರೆ ಹೋಗಿದೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ಮತ್ತೆ ಸೆಡ್ಡು ಹೊಡೆದಿದೆ.  ಈ ಕುರಿತು ಕೇಂದ್ರ ಐಟಿ ಸಟಿವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಅಧಿಕಾರಿಗಳ ನೇಮಕಕ್ಕೆ ಹೈಡ್ರಾಮ ಮಾಡಿದ್ದ ಟ್ವಿಟರ್
ಹೊಸ ಐಟಿ ನಿಯಮಗಳ ಅನುಸಾರ ಅಧಿಕಾರಿಗಳ ನೇಮಕಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದ ಟ್ವಿಟರ್ ಹಲವು ಕಾರಣ ನೀಡಿತ್ತು. ಅಂದೂ ಕೂಡ ಕೋರ್ಟ್ ಮೊರೆ ಹೋಗಿತ್ತು. ಆದರೆ ಕೇಂದ್ರದ ಖಡಕ್ ಎಚ್ಚರಿಕೆ ಬಳಿಕ   ಟ್ವಿಟರ್‌ ಮುಖ್ಯ ಅನುಸರಣಾ ಅಧಿಕಾರಿ(ಸಿಸಿಒ), ಸ್ಥಾನಿಕ ದೂರು ಪರಿಹಾರ ಅಧಿಕಾರಿ(ಆರ್‌ಜಿಒ) ಹಾಗೂ ನೋಡಲ್‌ ಸಂಪರ್ಕಾಧಿಕಾರಿಯನ್ನು ನೇಮಿಸಿತ್ತು.

ಕೇಂದ್ರ ಸರ್ಕಾರದ ಒತ್ತಡದಿಂದ ತಮ್ಮ ಟ್ವೀಟರ್‌ ಫಾಲೊವರ್ಸ್ ಸಂಖ್ಯೆ ಕುಸಿತ: ರಾಹುಲ್ ಗಾಂಧಿ ಆರೋಪ!

ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಲ್ಲಿಸಿದ ಅಫಿಡವಿಟ್‌ನಲ್ಲಿ ಟ್ವೀಟರ್‌ ಈ ಅಧಿಕಾರಿಗಳನ್ನು ಕಂಪೆನಿಯ ಉದ್ಯೋಗಿಗಳಾಗಿ ನೇಮಿಸಿಕೊಂಡಿದೆ ಎಂದು ಮಾಹಿತಿ ನೀಡಿದೆ.‘ಟ್ವೀಟರ್‌ನ ಅಫಿಡವಿಟ್‌ನಲ್ಲಿ ಉದ್ಯೋಗಿಗಳ ನೇಮಕಾತಿ ಹಾಗೂ ಅವರ ಹುದ್ದೆಯ ಬಗ್ಗೆಯೂ ಮಾಹಿತಿ ನೀಡಿದೆ. 2021, ಆಗಸ್ಟ್‌ 4ರಂದು ಅವರ ಉದ್ಯೋಗ ಆರಂಭವಾಗಿದೆ’ ಎಂದು ತಿಳಿಸಿದೆ.

ಹೊಸ ಐಟಿ ನಿಯಮಗಳ ಅನುಸರಣೆಯ ಬಗ್ಗೆ ಟ್ವೀಟರ್‌ ತೋರಿಸಿದ ಅಫಿಡವಿಟ್‌ಗೆ ಉತ್ತರಿಸುವಂತೆ ಆ.10ರಂದು ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು.ಅಮೆರಿಕ ಮೂಲದ ಮೈಕ್ರೋಬ್ಲಾಗಿಂಗ್‌ ಸೈಟ್‌ ಐಟಿ ನಿಯಮಗಳನ್ನು ಪಾಲಿಸಿಲ್ಲ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾ.ರೇಖಾ ಪಲ್ಲಿ ಅವರು ಅ.5ರಂದು ನಡೆಸಲಿದ್ದಾರೆ.

click me!