ಕೋವಿಡ್ ನಿರ್ವಹಣೆ ಸಂಬಂಧ ಟೀಕೆ, ಸುಳ್ಳು ಮಾಹಿತಿ ಪ್ರಸಾರವನ್ನು ಒಳಗೊಂಡಿರುವ ಪೋಸ್ಟ್‌ಗಳನ್ನು ಡಿಲೀಟ್ ಮಾಡುವಂತೆ ಕೇಂದ್ರ ಸರ್ಕಾರವು ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಇತರೆ ಸೋಷಿಯಲ್ ಮೀಡಿಯಾ ವೇದಿಕೆಗಳಿಗೆ ಕೇಳಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ತಪ್ಪು ದಾರಿಗೆಳೆಯುವ 100ಕ್ಕೂ ಅಧಿಕ ಪೋಸ್ಟ್‌ಗಳನ್ನು ಈ ಸೋಷಿಯಲ್ ಮೀಡಿಯಾ ವೇದಿಕೆಗಳು ಡಿಲಿಟ್ ಮಾಡಿವೆ ಎಂದು ಹೇಳಲಾಗುತ್ತಿದೆ.
ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿ ಹೆಚ್ಚಾಗುತ್ತಿದ್ದಂತೆ ಟ್ವಿಟರ್, ಫೇಸ್‌ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಕೇಂದ್ರ ಸರಕಾರದ ಕೋವಿಡ್ ನಿರ್ವಹಣೆ ಕುರಿತು ಸಿಕ್ಕಾಪಟ್ಟೆ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲೇ ಕೇಂದ್ರ ಸರಕಾರವು ಕೋವಿಡ್ ನಿರ್ವಹಣೆ, ಸದ್ಯದ ವೈದ್ಯಕೀಯ ಬಿಕ್ಕಟ್ಟು ಕುರಿತು ಅಥವಾ ಸಾಂಕ್ರಾಮಿಕ ಸಂಬಂಧ ಮಾಡಲಾಗುತ್ತಿರುವ ಸುಳ್ಳು ಮಾಹಿತಿಯನ್ನು ಒಳಗೊಂಡ ಪೋಸ್ಟ್‌ಗಳನ್ನು ಅಳಿಸಿ ಹಾಕುವಂತೆ ಕೇಳಿಕೊಂಡಿತ್ತು.
ಏ.29ಕ್ಕೆ ವಿವೋ ವಿ21 5ಜಿ ಸ್ಮಾರ್ಟ್‌ಫೋನ್ ಲಾಂಚ್, 44 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ!
undefined
ಕೇಂದ್ರ ಸರ್ಕಾರದ ಈ ಮನವಿಗೆ ಸ್ಪಂದಿಸಿರುವ ಟ್ವಿಟರ್ ಮತ್ತು ಇತರ ಸಾಮಾಜಿಕ ಜಾಲತಾಣಗಳು 100 ಪೋಸ್ಟ್‌ಗಳು ಮತ್ತು ಯುಆರ್‌ಎಲ್‌ಗಳನ್ನು ತಮ್ಮ ವೇದಿಕೆಗಳಿಂದ ಕಿತ್ತು ಹಾಕಿವೆ. ಸರ್ಕಾರದ ಈ ಕ್ರಮದ ವಿರುದ್ಧ ವ್ಯಾಪಕ ಟೀಕೆಯೂ ವ್ಯಕ್ತವಾಗಿದೆ.
ಭಾರತ ಸರ್ಕಾರದ ಕಾನೂನು ಕೋರಿಕೆಗೆ ಪ್ರತಿಯಾಗಿ ಕ್ರಮ ಕೈಗೊಂಡಿರುವುದಾಗಿ ತನ್ನ ಟ್ವಿಟರ್ ಖಾತೆದಾರರಿಗೆ ತಿಳಿಸಿದೆ. ಆದರೆ ಈ ವಿಷಯದ ಬಗ್ಗೆ ಫೇಸ್‌ಬುಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸರ್ಕಾರದ ಆದೇಶವನ್ನು ಕಂಪನಿಗಳು ಪಾಲಿಸಿವೆ ಎಂದು ಮೂಲಗಳು ತಿಳಿಸಿವೆ. ಆದರೆ, ಯಾವೆಲ್ಲ ಪೋಸ್ಟ್‌ಗಳನ್ನು ಡಿಲಿಟ್ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.
ಕೇಂದ್ರ ಗೃಹ ಸಚಿವಾಲಯದ ಶಿಫಾರಸ್ಸಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯವು, ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಅಡೆತಡೆಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕರಿಗೆ ಅಡ್ಡಿಪಡಿಸುವ ಸಲುವಾಗಿ ಪೋಸ್ಟ್‌ಗಳು ಮತ್ತು ಯುಆರ್‌ಎಲ್‌ಗಳನ್ನು ತೆಗೆದುಹಾಕುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಕೇಳಿಕೊಂಡಿತ್ತು ಎಂದು ಸರ್ಕಾರದಲ್ಲಿನ ಮೂಲಗಳು ತಿಳಿಸಿವೆ.
ಸಾಂಕ್ರಾಮಿಕ ಸಂಬಂಧ ಸಮಾಜದಲ್ಲಿ ಆತಂಕ ಸ್ಥಿತಿಯನ್ನು ನಿರ್ಮಾಣ ಮಾಡುವ ಸಂಬಂಧ ಕೆಲವರು ಈ ಪರಿಸ್ಥಿತಿಯನ್ನು ಬಳಸಿಕೊಂಡು ಸೋಷಿಯಲ್ ಮೀಡಿಯಾಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಾಂಕ್ರಾಮಿಕ ಸಂಬಂಧ ಸುಳ್ಳು, ದಾರಿ ತಪ್ಪಿಸುವ ಮಾಹಿತಿಯನ್ನು ಈ ವೇದಿಕೆಗಳ ಮೂಲಕ ಹರಿ ಬಿಡುತ್ತಿದ್ದಾರೆ. ಸಂಬಂಧವಿಲ್ಲದ, ಹಳೆಯ ಮತ್ತು ಈಗಿನ ಸಂದರ್ಭಕ್ಕೆ ಸಂಬಂಧವಿಲ್ಲದ ಫೋಟೋಗಳು ಅಥವಾ ಚಿತ್ರಿಕೆಗಳು, ಕೋಮು ಸೂಕ್ಷ್ಮ ಪೋಸ್ಟ್‌ಗಳು, ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆಂದು ಸರ್ಕಾರದ ಮೂಲಗಳು ಹೇಳಿಕೊಂಡಿವೆ.
ಲಸಿಕೆ ಕೊರತೆ: ಕೊವಿಶೀಲ್ಡ್‌ಗೆ ಬೇಕಾದ ಕಚ್ಚಾ ವಸ್ತು ಕಳುಹಿಸಲು ಒಪ್ಪಿದ ಅಮೆರಿಕ
ವೈದ್ಯಕೀಯ ಬಿಕ್ಕಟ್ಟನ್ನು ಸರ್ಕಾರ ನಿರ್ವಹಿಸುವುದನ್ನು ಟೀಕಿಸುವ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ವರದಿಗಳು ಸೂಚಿಸಿದ್ದರೂ, ಕೋವಿಡ್-19 ವಿರುದ್ಧದ ಸಾಮೂಹಿಕ ಹೋರಾಟದಲ್ಲಿ ಸರ್ಕಾರವು ಟೀಕೆ ಮತ್ತು ಸಲಹೆಗಳಿಗೆ ಮುಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಮಾನವೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವೂ ಇದೆ ಎಂದು ಮೂಲಗಳು ಹೇಳಿವೆ.
ಕೋರೋನಾ ವೈರಸ್ ಸಾಂಕ್ರಾಮಿಕ ನಿರ್ವಹಣೆಯ ಕುರಿತು ಟೀಕೆ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಟ್ವಿಟರ್ ಕಳೆದ ಒಂದು ತಿಂಗಳಲ್ಲಿ ತೆಗೆದು ಹಾಕಿದೆ ಇಲ್ಲವೇ ಅವುಗಳ ಅಕ್ಸೆಸ್ ಅನ್ನು ನಿರ್ಬಂಧಿಸಿದೆ. ಇತ್ತೀಚೆಗೆ ಛತ್ತೀಸ್‌ಗಢದಲ್ಲಿ ನಡೆದ ಮಾವೋ ದಾಳಿಯ ಕುರಿತು ಫೋಟೋಗಳು ಮತ್ತು ವಿಡಿಯೋಗಳನ್ನು ಕೈ ಬಿಡಲಾಗಿದೆ.
ಕೋವಿಡ್ ನಿರ್ವಹಣೆ ಕುರಿತಾದ ಟೀಕೆ, ತಪ್ಪು ಮಾಹಿತಿ ಹರಡುವುದನ್ನು ತಪ್ಪಿಸಲು ಈಗ ಕೇಂದ್ರ ಸರ್ಕಾರ ಮತ್ತೆ ಅದೇ ಹಾದಿಯನ್ನು ತುಳಿದಿದ್ದು, ಅಂಥ ಪೋಸ್ಟ್‌ಗಳನ್ನು ತೆಗೆದು ಹಾಕುವಂತೆ ಟ್ವಿಟರ್ ಸೇರಿದಂತೆ ಸೋಷಿಯಲ್ ಮೀಡಿಯಾ ವೇದಿಕೆಗಳಿಗೆ ಮನವಿ ಮಾಡಿಕೊಂಡಿದೆ.
'ಕೇಂದ್ರದ ನೀತಿಯಿಂದ ಲಸಿಕೆ ಕಂಪನಿಗಳಿಗೆ 1 ಲಕ್ಷ ಕೋಟಿ ಲಾಭ'
ಈ ಸಂಬಂಧ ಮಾಹಿತಿ ನೀಡಿರುವ ಟ್ವಿಟರ್ ವಕ್ತಾರರು, ಕಾನೂನಾತ್ಮಕ ವಿನಂತಿಯನ್ನು ಟ್ವಿಟರ್ ಪಡೆದುಕೊಂಡಿದೆ. ಟ್ವಿಟರ್ ನಿಯಮ ಮತ್ತು ಸ್ಥಳೀಯ ಕಾನೂನು ಪರವಾಗಿ ಈ ವಿನಂತಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕಂಟೆಂಟ್ ಟ್ವಿಟರ್‌ನ ನಿಯಮಗಳನ್ನು ಉಲ್ಲಂಘಿಸಿದರೆ, ಅಂಥ ಕಂಟೆಂಟ್ ಅನ್ನು ಸೇವೆಯಿಂದ ತೆಗೆದುಹಾಕಲಾಗುತ್ತದೆ. ಒಂದು ನಿರ್ದಿಷ್ಟ ನ್ಯಾಯವ್ಯಾಪ್ತಿಯಲ್ಲಿ ಅದು ಕಾನೂನುಬಾಹಿರವೆಂದು ನಿರ್ಧಾರವಾಗಿದ್ದು, ಆದರೆ ಟ್ವಿಟರ್ ನಿಯಮಗಳನ್ನು ಉಲ್ಲಂಘಿಸದಿದ್ದರೆ ಆಗ ನಾವು ಭಾರತದಲ್ಲಿ ಮಾತ್ರ ಅಂಥ ಕಂಟೆಂಟ್ ಅಕ್ಸೆಸ್ ಅನ್ನು ತಡೆ ಹಿಡಿಯಬಹುದು. ನಾವು ಸ್ವೀಕರಿಸುವ ಕಾನೂನು ವಿನಂತಿಗಳನ್ನು ದ್ವಿ-ವಾರ್ಷಿಕ ಟ್ವಿಟರ್ ಪಾರದರ್ಶಕತೆ ವರದಿಯಲ್ಲಿ ವಿವರಿಸಲಾಗಿದೆ ಮತ್ತು ವಿಷಯವನ್ನು ತಡೆಹಿಡಿಯುವ ವಿನಂತಿಗಳನ್ನು ಪ್ರಕಟಿಸಲಾಗಿದೆ ಎಂದು ಟ್ವಿಟರ್ ವಕ್ತಾರರು ತಿಳಿಸಿದ್ದಾರೆ.