ಐಐಟಿ ಮದ್ರಾಸ್‌ನಲ್ಲಿ 5G ಕಾಲ್ ಯಶಸ್ವಿಯಾಗಿ ಪರೀಕ್ಷಿಸಿದ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್

Published : May 19, 2022, 11:40 PM IST
ಐಐಟಿ ಮದ್ರಾಸ್‌ನಲ್ಲಿ 5G ಕಾಲ್ ಯಶಸ್ವಿಯಾಗಿ ಪರೀಕ್ಷಿಸಿದ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್

ಸಾರಾಂಶ

ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್  ಗುರುವಾರ ಐಐಟಿ ಮದ್ರಾಸ್‌ನಲ್ಲಿ 5G ಕರೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದಾರೆ

ನವದೆಹಲಿ (ಮೇ 19): ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್  ಗುರುವಾರ ಐಐಟಿ ಮದ್ರಾಸ್‌ನಲ್ಲಿ 5G ಕರೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದಾರೆ. ಈ ವೇಳೆ ಸಂಪೂರ್ಣ ಎಂಡ್ ಟು ಎಂಡ್ ನೆಟ್‌ವರ್ಕ್ ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಸಚಿವ ಅಶ್ವಿನಿ ವೈಷ್ಣವ್ ಅವರು ಗುರುವಾರ ಪರೀಕ್ಷಾ ಕರೆಯ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ ಮತ್ತು ಅದಕ್ಕೆ "ಆತ್ಮನಿರ್ಭರ್ 5G" ಎಂದು ಶೀರ್ಷಿಕೆ ನೀಡಿದ್ದಾರೆ. 

ವೀಡಿಯೊದಲ್ಲಿ, ವೈಷ್ಣವ್ ಸ್ಮಾರ್ಟ್‌ಫೋನ್‌ನಲ್ಲಿ ವೀಡಿಯೊ ಕರೆ ಮಾಡುತ್ತಿರುವುದು ಕಾಣಬಹುದು.  "ಇದು ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಯವರ ಕನಸಿನ ಸಾಕಾರವಾಗಿದೆ. ಭಾರತದಲ್ಲಿ 4G ಮತ್ತು 5G ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಮತ್ತು ಜಗತ್ತಿಗೆ ರವಾನಿಸುವುದು ಅವರ ಕನಸು. ಈ ಸಂಪೂರ್ಣ ತಂತ್ರಜ್ಞಾನಿಂದ ನಾವು ಜಗತ್ತನ್ನು ಗೆಲ್ಲಬೇಕು." ಎಂದು ಅವರು ಟ್ವೀಟ್‌ ಮಾಡಿದ್ದಾರೆ.

 

 

ಭಾರತದಲ್ಲಿ 5G: ಈ ಹಿಂದೆ, ದೂರಸಂಪರ್ಕ ಇಲಾಖೆ (DoT) 2022 ರಲ್ಲಿ ಭಾರತದಲ್ಲಿ 5G ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ದೃಢಪಡಿಸಿತ್ತು. ಆರಂಭದಲ್ಲಿ 13 ಭಾರತೀಯ ನಗರಗಳಲ್ಲಿ 5G ಸೇವೆಗಳು ಲಭ್ಯವಾಗಲಿವೆ ಎಂದು ಬಹಿರಂಗಪಡಿಸಿತು. ನಂತರ ಉಳಿದ ನಗರಗಳಲ್ಲಿ ಜಾರಿಯಾಗಲಿದೆ.

ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಜೂನ್ ಆರಂಭದಲ್ಲಿ ಏರ್‌ವೇವ್ಸ್ ಸೇರಿದಂತೆ 5G ತರಂಗಾಂತರದ ಹರಾಜನ್ನು ಸರ್ಕಾರ ನಡೆಸುವ ನಿರೀಕ್ಷೆಯಿದೆ ಎಂದು ಘೋಷಿಸಿದ್ದಾರೆ. ಹರಾಜಿನ ನಂತರ, ಸರ್ಕಾರವು ಅಂತಿಮವಾಗಿ ಈ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ 13 ನಗರಗಳ ಜನರಿಗೆ 5G ಸೇವೆಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. 

ಈ ಸ್ಥಳಗಳಲ್ಲಿ ಪ್ರಯೋಗಗಳನ್ನು ಮಾಡಿದಂತೆ 5G ನೆಟ್‌ವರ್ಕ್ ಮೊದಲು ಭಾರತದ 13 ಪ್ರಮುಖ ನಗರಗಳಲ್ಲಿ ಮಾತ್ರ ಲಭ್ಯಗೊಳಿಸಲಾಗುವುದು. ಇವುಗಳಲ್ಲಿ ಕೋಲ್ಕತ್ತಾ, ದೆಹಲಿ, ಗುರುಗ್ರಾಮ್, ಚೆನ್ನೈ, ಬೆಂಗಳೂರು, ಪುಣೆ, ಚಂಡೀಗಢ, ಜಾಮ್‌ನಗರ, ಅಹಮದಾಬಾದ್, ಹೈದರಾಬಾದ್, ಲಕ್ನೋ ಮತ್ತು ಗಾಂಧಿ ನಗರ ಸೇರಿವೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?