Smartwatch ನಿಂದ ಕರೆ ಮಾಡಿ ಜಿಮ್‌ನಲ್ಲಿ ಜೀವ ಉಳಿಸಿಕೊಂಡ ಮಹಿಳೆ

By Anusha Kb  |  First Published Sep 5, 2022, 12:56 PM IST

ಮಹಿಳೆಯೊಬ್ಬರು ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಉಪಕರಣವೊಂದರಲ್ಲಿ ಸಿಲುಕಿ ಅಪಾಯಕ್ಕೊಳಗಾಗಿದ್ದು, ಈ ವೇಳೆ ಸ್ಮಾರ್ಟ್‌ಫೋನ್‌ ಒಂದು ಅವರ ನೆರವಿಗೆ ಬಂದು ಜೀವ ಉಳಿಸಿದೆ.


ಮಹಿಳೆಯೊಬ್ಬರು ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಉಪಕರಣವೊಂದರಲ್ಲಿ ಸಿಲುಕಿ ಅಪಾಯಕ್ಕೊಳಗಾಗಿದ್ದು, ಈ ವೇಳೆ ಸ್ಮಾರ್ಟ್‌ಫೋನ್‌ ಒಂದು ಅವರ ನೆರವಿಗೆ ಬಂದು ಜೀವ ಉಳಿಸಿದೆ. ಇಂದು ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ನಿನ್ನಯಷ್ಟೇ ಲಂಡನ್‌ನಲ್ಲಿ ಕಳೆದು ಹೋದ ಐಷಾರಾಮಿ ಬೆಂಟ್ಲಿ ಕಾರೊಂದು ಪಾಕಿಸ್ತಾನದಲ್ಲಿ ಪತ್ತೆಯಾಗಿತ್ತು. ಅದರಲ್ಲಿ ಅಳವಡಿಸಿದ ಅತ್ಯಾಧುನಿಕ ಟ್ರಾಕಿಂಗ್‌ ತಂತ್ರಜ್ಞಾನದ ಪರಿಣಾಮ ಅದು ಎಲ್ಲಿದೆ ಎಂಬುದು ಪತ್ತೆಯಾಗಿದ್ದಲ್ಲದೇ, ಖದೀಮರನ್ನು ಸೆರೆ ಹಿಡಿಯಲು ಕೂಡ ಸಹಾಯ ಮಾಡಿತ್ತು ಅದೇ ರೀತಿ ಈಗ ಸ್ಮಾರ್ಟ್‌ವಾಚ್ (Smartwatch) ಒಂದು ಮಹಿಳೆಯೊಬ್ಬರ ಜೀವ ಉಳಿಸಿದೆ. 

ಓಹಿಯೋದ ಮಹಿಳೆ ಕ್ರಿಸ್ಟಿನ್ ಫಾಲ್ಡ್ (Christine Faulds) ಎಂಬುವವರು ಜಿಮ್‌ನ ಉಪಕರಣವೊಂದರಲ್ಲಿ ತಲೆಕೆಳಗಾಗಿ ಸಿಲುಕಿ ಹಾಕಿಕೊಂಡಿದ್ದರು. ಜಿಮ್‌ನಲ್ಲಿ ಕೇಳಿಸುತ್ತಿದ್ದ ಜೋರಾದ ಸಂಗೀತಾದ ಸದ್ದಿನಿಂದಾಗಿ ಮಹಿಳೆ ಸಹಾಯಕ್ಕಾಗಿ ಕರೆದರೂ ಅದು ಯಾರಿಗೂ ಕೇಳಿಸದೇ ಸಹಾಯಕ್ಕೆ ಯಾರೂ ಧಾವಿಸಿಲ್ಲ. ಈ ವೇಳೆ ಅವರು ತಮ್ಮ ಕೈಗೆ ಕಟ್ಟಿದ ಸ್ಮಾರ್ಟ್ ವಾಚ್‌ನಿಂದ 911 ತುರ್ತು ಸಂಖ್ಯೆಗೆ ಕರೆಗೆ ಮಾಡಿ ಸಹಾಯ ಕೇಳಿದ್ದಾರೆ. ಈ ಮೂಲಕ ತಮ್ಮನ್ನು ಅನಾಹುತದಿಂದ ರಕ್ಷಿಸಿಕೊಂಡಿದ್ದಾರೆ. ಈ ಘಟನೆಯೂ ಜಿಮ್‌ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಇದರ ವಿಡಿಯೋವನ್ನು ನಂತರ ಕ್ರಿಸ್ಟಿನ್ ಫಾಲ್ಡ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ವೈರಲ್ ಆಗಿದೆ. ವಿಡಿಯೋದಲ್ಲಿ ಜಿಮ್‌ನ (Gym) ಉಪಕರಣವೊಂದರಲ್ಲಿ ಅವರು ತಲೆಕೆಳಗಾಗಿ ನೇತಾಡುತ್ತಿರುವ ದೃಶ್ಯವಿದೆ. 

Tap to resize

Latest Videos

undefined

ಈ ವಿಡಿಯೋವನ್ನು ಕ್ರಿಸ್ಟಿನ್‌ ತಮ್ಮ ಟಿಕ್‌ಟಾಕ್‌ (TikTok) ಪೇಜ್‌ನಲ್ಲಿ ಕೂಡ ಹಂಚಿಕೊಂಡಿದ್ದು, ಅವರು ಬೆಳಗ್ಗೆ 3 ಗಂಟೆಗೆ ಎದ್ದು ಜಿಮ್ ಮಾಡುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ಅವರು ಬೆನ್ನು ನೋವನ್ನು ನಿವಾರಿಸುವ ದೇಹವನ್ನು ತಲೆಕೆಳಗಾಗಿಸುವ ಜಿಮ್ ಉಪಕರಣವೊಂದನ್ನು ಬಳಸಿದ್ದಾರೆ. ಹೀಗೆ ವ್ಯಾಯಾಮ ಮಾಡುತ್ತಿರುವಾಗಲೇ ಅವರು ಉಪಕರಣಕ್ಕೆ ತಮ್ಮ ತುದಿಗಾಲುಗಳು ಸಿಲುಕಿಕೊಂಡು ಜಾಮ್‌ ಆಗಿರುವುದು ಅರಿವಿಗೆ ಬರುತ್ತದೆ. ಇದರಿಂದ ಅವರಿಗೆ ತಾನು ಆ ಸ್ಥಳದಿಂದ ಚಲಿಸಲು ಸಾಧ್ಯವಿಲ್ಲ ಎಂಬುದರ ಅರಿವಾಗುತ್ತದೆ.

ಈ ವೇಳೆ ಮಹಿಳೆ ಕ್ರಿಸ್ಟಿನ್ ಸಹಾಯಕ್ಕಾಗಿ ಜಿಮ್‌ನಲ್ಲಿರುವ ಮತ್ತೊಬ್ಬ ಜಾಸನ್‌ ಎಂಬ ವ್ಯಕ್ತಿಯನ್ನು ಕರೆಯುತ್ತಿರುವುದನ್ನು ಕೇಳಬಹುದು. ಆದರೆ ಜಿಮ್‌ನಲ್ಲಿ ಚಾಲನೆಯಲ್ಲಿದ್ದ ಜೋರಾದ ಸಂಗೀತದಿಂದಾಗಿ ಆಕೆಯ ಕೂಗು ಜಿಮ್‌ನಲ್ಲಿದ್ದ ಜೇಸನ್ ಸೇರಿದಂತೆ ಯಾರಿಗೂ ಕೇಳಿಸುವುದೇ ಇಲ್ಲ. ಈ ವೇಳೆ ತನ್ನನ್ನು ತಾನೇ ಮೇಲೆತ್ತಲು ಸಾಕಷ್ಟು ಪ್ರಯತ್ನಿಸಿದಳಾದರೂ ಅದು ಕೈಗೂಡಲಿಲ್ಲ. ಹೀಗಾಗಿ ಆಕೆಗೆ ತುರ್ತು ದೂರವಾಣಿ ಸಂಖ್ಯೆಗೆ ಕರೆ ಮಾಡುವುದೊಂದೆ ಉಳಿದ ಆಯ್ಕೆಯಾಗಿತ್ತು. ಐದಾರು ನಿಮಿಷ ಹಾಗೆಯೇ ನೇತಾಡಿದ ಆಕೆ ನಂತರ ತನ್ನ ಸ್ಮಾರ್ಟ್‌ವಾಚ್ ಬಳಸಿ 911 ಸಂಖ್ಯೆಗೆ ಕರೆ ಮಾಡಿದ್ದಾಳೆ.

ವೃದ್ಧರ ಮೇಲೆ ನಿಗಾಕ್ಕೆ ಸ್ಮಾರ್ಟ್‌ ವಾಚ್‌..!

ಹಿರಿಯ ನಾಗರಿಕರು(Older People), ಬುದ್ದಿಮಾಂದ್ಯರು, ಮೆರವಿನ ಕಾಯಿಲೆಯವರು, ಮೂರ್ಛೆ ರೋಗದಿಂದ ಬಳಲುವವರು, ಪಾರ್ಕಿನ್‌ಸನ್‌ ಕಾಯಿಲೆಗಳುಳ್ಳವರು, ಅಪಘಾತಕ್ಕೆ(Accident) ಒಳಗಾದವರ ರಕ್ಷಣೆಗೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ‘ಸ್ಮಾರ್ಟ್‌ ಕವಚ್‌’(Smart Kavach Help on the Rest) ವಾಚ್‌(Watch) ಆವಿಷ್ಕಾರ ಮಾಡಲಾಗಿತ್ತು. ಬೆಂಗಳೂರು(Bengaluru) ಮೂಲದ ಈಜಿಎಂ2ಎಂ ಕಂಪೆನಿ ವಿಶಿಷ್ಟವಾದ ಕೈಗಡಿಯಾರ ಆವಿಷ್ಕರಿಸಿದ್ದು ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಈ ಸ್ಮಾರ್ಟ್ ವಾಚ್‌ನ್ನು ಕಳೆದ ವರ್ಷ ಪ್ರದರ್ಶನ ಮಾಡಲಾಗಿತ್ತು.ಹಿರಿಯ ನಾಗರಿಕರು, ಬುದ್ದಿ ಮಾಂದ್ಯರು, ಮರೆವು ಕಾಯಿಲೆ ಉಳ್ಳಂತಹವರ ಮೇಲೆ ಸಂಬಂಧಿಕರು ಹಾಗೂ ಕುಟುಂಬ ಸದಸ್ಯರು ಸದಾ ಕಣ್ಣಿಡಲು ಸಾಧ್ಯವಿಲ್ಲ. ಹೀಗಾಗಿ ಅಂತಹ ಕೈಗೆ ಸ್ಮಾರ್ಟ್‌ ಕವಚ್‌ ಸಾಧನವನ್ನು ಅಳವಡಿಸಿದರೆ ಅವರು ಚಲನವಲನವನ್ನು ಜಿಪಿಎಸ್‌(GPS) ಮೂಲಕ ಟ್ರ್ಯಾಕ್‌(Track) ಮಾಡಬಹುದು.

ಒಂದು ವೇಳೆ ಆಯ ತಪ್ಪಿ ಬಿದ್ದರೆ ಅಥವಾ ಅಪಘಾತಕ್ಕೆ ಒಳಗಾದರೆ ತಕ್ಷಣ ಸಂಬಂಧಿಕರಿಗೆ (ಮೊದಲೇ ದಾಖಲಿಸಿದ ಸಂಖ್ಯೆಗಳು) ಎಚ್ಚರದ ಸಂದೇಶಗಳು, ಕರೆ, ಸಂದೇಶ ಹಾಗೂ ಇ-ಮೇಲ್‌(E-Mail) ಮೂಲಕ ವಿಚಾರ ರವಾನೆಯಾಗುತ್ತದೆ.

click me!