ಖ್ಯಾತ ಗಾಯಕ ದಲೇರ್ ಮೆಹಂದಿ ತಮ್ಮ ಅಭಿಮಾನಿಗಳನ್ನು ರಂಜಿಸಲು ವರ್ಚುವಲ್ ಪ್ರಪಂಚಕ್ಕೆ ಕಾಲಿಟ್ಟ ಮೊದಲ ಭಾರತೀಯ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರಾರಾಗಲಿದ್ದಾರೆ
Tech Desk: ಬ್ಲಾಕ್‌ಚೈನ್ ಬೆಂಬಲಿತ ವರ್ಚುವಲ್ ಯೂನಿವರ್ಸ್ ಆಗಿರುವ "ಮೆಟಾವರ್ಸ್" ಸ್ಪೇಸ್ ಭಾರತೀಯರಲ್ಲಿ ಹೆಚ್ಚು ಕುತೂಹಲ ಮೂಡಿಸಿದೆ. ಭಾರತವು ಜನವರಿ 26 ರಂದು ತನ್ನ 73 ನೇ ಗಣರಾಜ್ಯೋತ್ಸ ಆಚರಿಸಲು ಸಜ್ಜಾಗುತ್ತಿರುವಾಗ, ಖ್ಯಾತ ಪಂಜಾಬಿ ಗಾಯಕ ದಲೇರ್ ಮೆಹಂದಿ (Daler Mahendi) ಈ ಸಂದರ್ಭದಲ್ಲಿ ಮೆಟಾವರ್ಸ್‌ನಲ್ಲಿ ವಿಶೇಷ ಸಂಗೀತ ಕಾರ್ಯಕ್ರಮವೊಂದನ್ನು ಘೋಷಿಸಿದ್ದಾರೆ. ಇದರೊಂದಿಗೆ 54 ವರ್ಷದ ದಲೇರ್ ಮೆಹಂದಿ ತಮ್ಮ ಅಭಿಮಾನಿಗಳನ್ನು ರಂಜಿಸಲು ವರ್ಚುವಲ್ ಪ್ರಪಂಚಕ್ಕೆ ಕಾಲಿಟ್ಟ ಮೊದಲ ಭಾರತೀಯ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರಾರಾಗಲಿದ್ದಾರೆ. ಅಲ್ಲದೇ ಇದು ಇತರ ಭಾರತೀಯ ಸೆಲೆಬ್ರಿಟಿಗಳಿಗೆ ಮಾದರಿಯಾಗಲಿದೆ.
ಈ ಬಗ್ಗೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ಮುಂಬರುವ ಮೆಟಾವರ್ಸ್ ಕಾರ್ಯಕ್ರಮದ ವೀಡಿಯೊವನ್ನು ಮೆಹಂದಿ ಪೋಸ್ಟ್ ಮಾಡಿದ್ದಾರೆ. ಜತೆಗೆ ಬಳಕೆದಾರರು ಉಚಿತ ಪಾಸ್‌ಗಳನ್ನು ಪಡೆಯಲು ಲಿಂಕನ್ನು ಪೋಸ್ಟ್ ಮಾಡಿದ್ದಾರೆ. ಮೆಹಂದಿ "partynite.metaverse"ನಲ್ಲಿ ವರ್ಚುವಲ್ ಕಾರ್ಯಕ್ರಮ ನೀಡಲಿದ್ದಾರೆ. ಈ ವೆಬ್‌ಸೈಟ್‌ನ ಇನ್ಸ್ಟಾಗ್ರಾಮ್ ಬಯೋ ಪ್ರಕಾರ ಇದರಲ್ಲಿ ಜನರು ಅವತಾರಗಳನ್ನು ರಚಿಸಲು, ಆಟಗಳನ್ನು ಆಡಲು ಮತ್ತು ಎನ್‌ಎಫ್‌ಟಿಗಳನ್ನು ಖರೀದಿಸಲು ಇದು ಅನುಮತಿಸುತ್ತದೆ.
undefined
partynite.metaverseನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಇದು "ಡಿಜಿಟಲ್ ಪ್ಯಾರಲಲ್ ಯೂನಿವರ್ಸ್, ಬ್ಲಾಕ್‌ಚೈನ್‌ನಿಂದ ಚಾಲಿತವಾಗಿದೆ", ಇಲ್ಲಿ ಜನರು ಕಸ್ಟಮೈಸೇಬಲ್ ಅವತಾರಗಳಂತೆ ಸ್ನೇಹಿತರೊಂದಿಗೆ ಹ್ಯಾಂಗ್ ಔಟ್ ಮಾಡಬಹುದು, ಹೊಸ ಜನರನ್ನು ಭೇಟಿ ಮಾಡಬಹುದು ಮತ್ತು ಪಾರ್ಟಿಗಳು ಮತ್ತು ಈವೆಂಟ್‌ಗಳಲ್ಲಿ ಭಾಗವಹಿಸಬಹುದು.
ಎನ್‌ಎಫ್‌ಟಿ ಮಾರಾಟ: ಮೆಟಾವರ್ಸನ್ನು ಹೆಚ್ಚು ಸಂವಾದಾತ್ಮಕವಾಗಿಸುವ ಸಲುವಾಗಿ ಎನ್‌ಎಫ್‌ಟಿ (NFT) ಎಂದು ಕರೆಯಲ್ಪಡುವ ಪ್ಲೇ ಮಾಡಬಹುದಾದ ಡಿಜಿಟಲ್ ಸಂಗ್ರಹಣೆಗಳನ್ನು ಕ್ಲೈಮ್ ಮಾಡಲು, ಪಡೆಯಲು ಮತ್ತು ಮಾರಾಟ ಮಾಡಲು ಪ್ಲಾಟ್‌ಫಾರ್ಮ್ ಜನರಿಗೆ ಅನುಮತಿಸುತ್ತದೆ. ಮೆಹೆಂದಿಯ ವರ್ಚುವಲ್ ಅವತಾರವು ಜನವರಿ 26 ರಂದು 12:00pm IST ಕ್ಕೆ ಪ್ರಾರಂಭವಾಗುವ ಅವರ ಮೆಟಾವರ್ಸ್ ಪ್ರದರ್ಶನದ ಭಾಗವಾಗಿ ಅವರ ಕೆಲವು ಪ್ರಮುಖ ಹಾಡುಗಳನ್ನು ಪ್ರದರ್ಶಿಸಲಿದೆ. ಈ ಸುದ್ದಿ ಟ್ವಿಟರ್‌ನಲ್ಲಿ ದಲೇರ್ ಮೆಹಂದಿ ಅವರ ಅಭಿಮಾನಿಗಳಲ್ಲಿ ಉತ್ಸಾಹಕ್ಕೆ ಕಾರಣವಾಗಿದೆ. ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.
ಈಗಾಗಲೇ ಟ್ರಾವಿಸ್ ಸ್ಕಾಟ್, ಜಸ್ಟಿನ್ ಬೈಬರ್, ಮಾರ್ಷ್ಮೆಲ್ಲೊ ಮತ್ತು ಅರಿಯಾನಾ ಗ್ರಾಂಡೆರಂತಹ ಅಂತರರಾಷ್ಟ್ರೀಯ ಕಲಾವಿದರು ಮೆಟಾವರ್ಸ್ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಈಗ ಮೆಹಂದಿ ಕಾರ್ಯಕ್ರಮದ ಮೂಲಕ ಭಾರತದಲ್ಲಿ ದಿನದಿಂದ ದಿನಕ್ಕೆ ಮೆಟಾವರ್ಸ್ ಸ್ಪೇಸ್ ದೊಡ್ಡದಾಗಿ ಬೆಳೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ.
Hungama NFT: ಮ್ಯೂಸಿಕ್ ಲೇಬಲ್ ಟಿ-ಸೀರೀಸ್ (T-Series) ಸಹ ಈ ವಾರದ ಆರಂಭದಲ್ಲಿ ಹಂಗಾಮಾ ಟಿವಿ (Hungama TV) ಪಾಲುದಾರಿಕೆಯಲ್ಲಿ ಮೆಟಾವರ್ಸ್‌ಗೆ ತನ್ನ ಪ್ರವೇಶವನ್ನು ಘೋಷಿಸಿತ್ತು. ಒಪ್ಪಂದದ ಭಾಗವಾಗಿ, ಟಿ-ಸೀರೀಸ್ ಮಾಲೀಕತ್ವದಲ್ಲಿರುವ ಹೊಸ ಮತ್ತು ಅಸ್ತಿತ್ವದಲ್ಲಿರುವ ಬಾಲಿವುಡ್ ಕಂಟೆಂಟ್‌ಗಳ ವ್ಯಾಪಕ ಕ್ಯಾಟಲಾಗ್‌ನಿಂದ ಹಂಗಾಮಾ ಎನ್‌ಫ್‌ಟಿಗಳನ್ನು ರಚಿಸುತ್ತದೆ. ಈ ತಿಂಗಳ ಆರಂಭದಲ್ಲಿ ತಮಿಳುನಾಡಿನ ದಂಪತಿಗಳು ಕೂಡ ತಮ್ಮ ಹ್ಯಾರಿ ಪಾಟರ್ ಆಧರಿತ ಮದುವೆಯ ಆರತಕ್ಷತೆಯನ್ನು ಮೆಟಾವರ್ಸ್‌ನಲ್ಲಿ ಘೋಷಿಸಿದ್ದರು. ವಧುವಿನ ದಿವಂಗತ ತಂದೆ ಮೆಟಾವರ್ಸ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ, ಅಲ್ಲಿ ಅತಿಥಿಗಳು ನವವಿವಾಹಿತ ದಂಪತಿಗಳೊಂದಿಗೆ ಫೆಬ್ರವರಿಯಲ್ಲಿ ಡಿಜಿಟಲ್ ಅವತಾರಗಳಾಗಿ ಭಾಗವಹಿಸಲಿದ್ದಾರೆ.