Block Chain Technologyಯಲ್ಲಿ ಟೆಕ್‌ ದೈತ್ಯನ ಎಂಟ್ರಿ: Google Payಯಲ್ಲಿ ಶೀಘ್ರದಲ್ಲೇ ಕ್ರಿಪ್ಟೋಕರೆನ್ಸಿ?

Published : Jan 23, 2022, 09:32 AM IST
Block Chain Technologyಯಲ್ಲಿ ಟೆಕ್‌ ದೈತ್ಯನ ಎಂಟ್ರಿ: Google Payಯಲ್ಲಿ ಶೀಘ್ರದಲ್ಲೇ ಕ್ರಿಪ್ಟೋಕರೆನ್ಸಿ?

ಸಾರಾಂಶ

ಗೂಗಲ್ ಹೊಸ ವಿಭಾಗವೊಂದನ್ನು ಸ್ಥಾಪಿಸುತ್ತಿದ್ದು ಅದು ಕಂಪನಿಗೆ ಬ್ಲಾಕ್‌ಚೈನ್ ಬೇಸ್‌ಡ್ ಸೋಲುಷನ್ ನೀಡುವತ್ತ ಗಮನಹರಿಸಲಿದೆ. ಈ ಮೂಲಕ ಗೂಗಲ್‌ ಕೂಡ ಕ್ರಿಪ್ಟೋಕರೆನ್ಸಿಗಳಿಗೆ ಪ್ರವೇಶ ಪಡೆಯಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

Tech Desk: ಪ್ರಪಂಚದಾದ್ಯಂತ ಬ್ಲಾಕ್‌ಚೈನ್ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಈ ಬೆನ್ನಲ್ಲೇ ಟೆಕ್‌ ದೈತ್ಯ ಗೂಗಲ್‌ ಕೂಡ ಬ್ಲಾಕ್‌ಚೈನ್ ತಂತ್ರಜ್ಞಾನ ಅಳವಡಿಸಿಕೊಳ್ಳಲು ಗೂಗಲ್ ಸಜ್ಜಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಕಂಪನಿಯು ಹೊಸ ಘಟಕವನ್ನು ಸ್ಥಾಪಿಸಿದೆ ಎಂದು ವರದಿಯಾಗಿದ್ದು ಇದು ಬ್ಲಾಕ್‌ಚೈನ್ ತಂತ್ರಜ್ಞಾನದ ಕಾರ್ಯಸಾಧ್ಯತೆಯನ್ನು ಪರಿಶೀಲಿಸುತ್ತಿದೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ ಈ ಕ್ರಮದೊಂದಿಗೆ ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿಂಗ್ (Distributed Computing) ಮತ್ತು ಡೇಟಾ ಸಂಗ್ರಹಣೆ ತಂತ್ರಜ್ಞಾನಗಳಲ್ಲಿ ಮುನ್ನಡೆ ಸಾಧಿಸಲು ಗೂಗಲ್ ಸಿದ್ಧವಾಗುತ್ತಿದೆ. 

ಬ್ಲಾಕ್‌ಚೈನ್ ತಂತ್ರಜ್ಞಾನ ಗೂಗಲ್‌ಗೆ  ಅಥವಾ ಮಾರುಕಟ್ಟೆಗೆ ಹೊಸದೇನಲ್ಲ. ತಂತ್ರಜ್ಞಾನ ಸಂಸ್ಥೆಗಳು ತಮ್ಮ ಜಾಗದಲ್ಲಿ ಸೂಕ್ತವೆಂದು ತೋರುವ ಹಲವಾರು ಕಾರ್ಯಗಳಿಗಾಗಿ ಬ್ಲಾಕ್‌ಚೈನನ್ನು ಅಳವಡಿಸಿಕೊಳ್ಳಲು ಸಾಲುಗಟ್ಟಿ ನಿಂತಿವೆ. ಈ ದಿಕ್ಕಿನಲ್ಲಿ ಗೂಗಲ್‌ನ ಕೂಡ ಕಾರ್ಯನರ್ವಹಿಸುತ್ತಿದೆ ಎಂದು  ಬ್ಲೂಮ್‌ಬರ್ಗ್ ವರದಿಯಲ್ಲಿ ಕಂಪನಿಯ ಇಮೇಲ್ ಉಲ್ಲೇಖಿಸಿ ತಿಳಿಸಲಾಗಿದೆ. ಬ್ಲಾಕ್‌ಚೈನ್ ಮತ್ತು ಸಂಬಂಧಿತ ತಂತ್ರಜ್ಞಾನದಲ್ಲಿ ಕೆಲಸ ಮಾಡುವ ಹೊಸ ವಿಭಾಗವನ್ನು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Google London Office ಫೋಟೊಸ್‌ ಹಂಚಿಕೊಂಡ ಸಿಇಓ ಸುಂದರ್‌ ಪಿಚೈ: ಹೇಗಿರಲಿದೆ ನೋಡಿ ಹೊಸ ಕಚೇರಿ!

ಭಾರತೀಯ ಶಿವಕುಮಾರ್ ವೆಂಕಟರಾಮ ನೇಮಕ: ಇಮೇಲ್‌ನ ಪ್ರಕಾರ, "ಬ್ಲಾಕ್‌ಚೈನ್ ಮತ್ತು ಇತರ next-gen ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿಂಗ್ ಮತ್ತು ಡೇಟಾ ಸಂಗ್ರಹಣೆ ತಂತ್ರಜ್ಞಾನಗಳ" ಮೇಲೆ ಕೇಂದ್ರೀಕರಿಸಿದ ಘಟಕವನ್ನು ಗೂಗಲ್ ಸ್ಥಾಪಿಸಿದೆ. ಇದಕ್ಕಾಗಿ ಕಂಪನಿಯು ಕಳೆದ 20 ವರ್ಷಗಳಿಂದ ಗೂಗಲ್‌ನ ಇಂಜಿನಿಯರಿಂಗ್ ಉಪಾಧ್ಯಕ್ಷ ಶಿವಕುಮಾರ್ ವೆಂಕಟರಾಮನ್ (Shivakumar Venkataraman) ಅವರನ್ನು ನೇಮಕ ಮಾಡಿದೆ. ವೆಂಕಟರಾಮನ್ ಈಗ ಘಟಕದ "founding leader" ಆಗಿರುತ್ತಾರೆ.

ಕುತೂಹಲಕಾರಿಯಾಗಿ, ಗೂಗಲ್ ಈ ಘಟಕಕ್ಕೆ ಗೂಗಲ್ ಲ್ಯಾಬ್ಸ್ ಎಂದು ಹೆಸರಿಸಿದೆ, ಇದು ಸುಮಾರು ಒಂದು ದಶಕದ ಹಿಂದೆ ಅಸ್ತಿತ್ವದಲ್ಲಿದೆ. ಈ ಹಿಂದೆ ಗೂಗಲ್ ಲ್ಯಾಬ್ಸ್ ಇನ್ಕ್ಯುಬೇಟರ್ ಆಗಿದ್ದು, ಗೂಗಲ್ ತನ್ನ ಹೊಸ ಯೋಜನೆಗಳ ಸಾರ್ವಜನಿಕ ಪ್ರದರ್ಶನ ಮತ್ತು ಪರೀಕ್ಷೆಯನ್ನು ನಡೆಸಿತ್ತು. ಅದೇ ಹೆಸರಿನೊಂದಿಗೆ ಹೊಸ ಘಟಕವು ವಿಭಿನ್ನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲಿದೆ.

ಗೂಗಲ್‌ ಪೇ  ಮೂಲಕ ಕ್ರಿಪ್ಟೋ ಸೇವೆ:  ಹಿಂದಿನ ಗೂಗಲ್ ಲ್ಯಾಬ್‌ಗಳು ಸಾರ್ವಜನಿಕವಾಗಿದ್ದರೂ, ಇದುದೀರ್ಘಾವ ಧಿಯ ಯೋಜನೆಗಳ ಮೇಲೆ ಕೇಂದ್ರೀಕರಿಸಿದ ಆಂತರಿಕ ಗುಂಪಾಗಿದೆ. ಪ್ರಸ್ತುತ, ಬ್ಲೂಮ್‌ಬರ್ಗ್ ಉಲ್ಲೇಖಿಸಿರುವ ಆಂತರಿಕ ಇಮೇಲ್‌ನ ಪ್ರಕಾರ ಇದು virtual ಮತ್ತು augmented reality ಸುತ್ತ ಗೂಗಲ್‌ ಯೋಜನೆಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಬ್ಲಾಕ್‌ಚೈನ್ ತಂತ್ರಜ್ಞಾನ ಎಂಬ ಪದವನ್ನು ಬಳಸುವುದನ್ನು ಹೊರತುಪಡಿಸಿ, ಬ್ಲಾಕ್‌ಚೈನ್ ತಂತ್ರಜ್ಞಾನದ ಬಳಕೆ ಬಗ್ಗೆ ಗೂಗಲ್‌ನಿಂದ ಯಾವುದೇ ನಿರ್ದಿಷ್ಟ ಉತ್ಪನ್ನ ಅಥವಾ ಸೇವೆಯನ್ನು ಇ ಮೇಲ್‌ನಲ್ಲಿ ತಿಳಿಸಲಾಗಿಲ್ಲ. 

ಇದನ್ನೂ ಓದಿ: Gmail Android Milestone: ಪ್ಲೇ ಸ್ಟೋರ್‌ನಿಂದ ‌10 ಬಿಲಿಯನ್ ಇನ್‌ಸ್ಟಾಲ್ಸ್ ತಲುಪಿದ 4ನೇ ಆ್ಯಪ್!

ತಂತ್ರಜ್ಞಾನದ ವ್ಯಾಪ್ತಿ ಮತ್ತು ಗೂಗಲ್‌ನ ವಿಶಾಲವಾದ ಡಿಜಿಟಲ್ ಉಪಸ್ಥಿತಿಯನ್ನು ಗಮನಿಸಿದರೆ, ಮುಂಬರುವ ಸಮಯದಲ್ಲಿ ಗೂಗಲ್‌ನಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನದ ಉದ್ದೇಶಗಳನ್ನು ಪೂರೈಸುತ್ತದೆ ಎಂದು ನಾವು ಈ ಹಂತದಲ್ಲಿ ಹೇಳಬಹುದು. ಆದರೆ ಯಾವೆಲ್ಲಾ ಸೇವೆಗಳನ್ನು ಗೂಗಲ್‌ ನೀಡಲಿದೆ ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿರಲಿದೆ.  ಇತ್ತೀಚೆಗೆ, ಗೂಗಲ್ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯನ್ನು ಎಚ್ಚರಿಕೆಯಿಂದ ವೀಕ್ಷಿಸುತ್ತಿದೆ ಎಂದು ಬಹಿರಂಗಪಡಿಸಿದೆ. ಹಾಗಾಗಿ ಗೂಗಲ್ ಪಾವತಿ ಪೋರ್ಟಲ್ ಗೂಗಲ್‌ ಪೇ (Google Pay) ಮೂಲಕ ಕ್ರಿಪ್ಟೋ ಸೇವೆಗಳನ್ನು ಒದಗಿಸಬಹುದು ಹೇಳಲಾಗಿದೆ. 

ಈಗಾಗಲೇ ತಿಳಿಸಿದಂತೆ ಗೂಗಲ್‌  ಕೆಲಸ ಪ್ರಾರಂಭಿಸಿದರೆ ಹಲವಾರು ಏಕೀಕರಣಗಳಿಗಾಗಿ ಗೂಗಲ್ ಬ್ಲಾಕ್‌ಚೈನ್ ಅನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಆದರೆ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿರುವ ಹೊಸ ತಂತ್ರಜ್ಞಾನಲ್ಲ. ಹಲವಾರು ಪಾವತಿ ಗೇಟ್‌ವೇಗಳು ಈಗಾಗಲೇ ಕ್ರಿಪ್ಟೋ ಪಾವತಿಗಳನ್ನು ನೀಡುತ್ತಿವೆ. ಗೂಗಲ್‌ ಊಡ ಈ ಮಾರುಕಟ್ಟೆಗೆ ಎಂಟ್ರಿಯಾದ ನಂತರ  ಹೆಚ್ಚು ನವೀನ ಅಪ್ಲಿಕೇಶನ್‌ನಲ್ಲಿಯೂ ಕೆಲಸ ಮಾಡಬಹುದು. ಇದು ಮೆಟಾ ಮತ್ತು ಇತರ ದೇಶಗಳಂತೆಯೇ ತನ್ನದೇ ಆದ ಕ್ರಿಪ್ಟೋಕರೆನ್ಸಿಯನ್ನು ಜಗತ್ತಿಗೆ ತರಲು ಪ್ರಯತ್ನಿಸಬಹುದು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?